ಒಟ್ಟು 789 ಕಡೆಗಳಲ್ಲಿ , 85 ದಾಸರು , 652 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಲ್ಪ ತಾಳು ಸಂಜೆಯಾಗಲಿ ಶ್ರೀಕೃಷ್ಣ ಕೇಳುಕಂಜಸಖನು ಕಡಲಿಗಿಳಿದು ಮಂಜುಮುಸುಕಲಿಪಹಾದಿ ಬೀದಿಯೆಂಬುದಿಲ್ಲ ಹಗಲುರಾತ್ರಿ ಭೇದವಿಲ್ಲಯಾದವೋತ್ತಮ ಕೇಳುಸೊಲ್ಲ ಬಾಧೆಗೊಳಿಸಬೇಡ ನಲ್ಲ1ಕಂಡು ಜನರು ನಗರೆ ಲಜ್ಜೆ ಭಂಡನೆಯ ಕೈಯ ಪಟ್ಟಿಪಂಢರೀಶ ಪಾಂಡುರಂಗಅಂಡಜವಾಹನಕೇಳು2ನೀರ ಮುಳುಗಿ ಬೆನ್ನ ಮೇಲೆ ಭಾರನೆರಹಿದಂತ ನಿನ್ನಧೀರತನವ ತೋರು ಕಡೆಗೆ ಮಾರಕೇಳಿಯೊಳಗೆ ಕೃಷ್ಣ3ಚಂದ್ರಾತಳಿಗೆ ಬಿಡದೆ ಏಳು ದಿನದೊಳಂದು ರಮಿಸಿದಂತೆಇಂದುಎನ್ನ ಹರುಷಗೊಳಿಸು ಸುಂದರ ಗೋವಿಂದ ದಯದಿ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹರಿದಾಸರಿಗಿನ್ನು ಸರಿಯುಂಟೆ -ನರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹರಿಯ ನಂಬಿದವರಿಗೆ ಕೇಡುಂಟೆ ಮನುಜಾ ? ಪ.ಮಾರಿಯ ಕೈಯಲಿ ನೀರ ಹೊರಿಸುವರು |ಘೋರ ಮಸಣಿಯಿಂದ ಕಸ ಬಳೆಸುವರು ||ಕ್ರೂರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು |ಜವನ ಕೈಯಲಿ ಜಂಗುಳಿ ಕಾಯಿಸುವರು 1ಬೊಮ್ಮ ಬೀರ ಬೇತಾಳ ಜಟ್ಟಿಗರೆಲ್ಲ |ಕರ್ಮದ ಕಡಲೊಳು ಮುಳುಗಿರಲು ||ಒಮ್ಮೆ ಹರಿದಾಸರಪಾದ ಸೋಕಲು ಬೇಗ |ಕರ್ಮದ ಕಡಲಿಂದ ಕಡೆಹಾಯಿಸುವರು 2ಜಕ್ಕಣಿ ಜಲದೇವರು ಮೊದಲಾದ |ಬಿಕ್ಕಾರಿ ದೈವವ ಪೂಜಿಸಲು ||ಲೋಕನಾಯಕಸಿರಿ ಪುರಂದರವಿಠಲನ |ಸಾಕಾರವಾದಂಥಪರಮಭಾಗವತರು3
--------------
ಪುರಂದರದಾಸರು
ಹಿಂದಿಲ್ಲಾ ಇನ್ನು ಮುಂದಿಲ್ಲಾ |ಹಿಂದಿಲ್ಲಾ ಮುಂದಿಲ್ಲಾ | ಒಂದಿನ ಸುಖವಿಲ್ಲಾಪನಂದ ಗೋಪನ ಮುದ್ದು | ಕಂದ ನೀನಲ್ಲದೆ ಅ.ಪಉಡುವರಿವೆ ಇಲ್ಲಾ ಉಂಬರನ್ನವು ಇಲ್ಲ |ನಡೆವರೆ ಮುಂದೆ ದಾರಿಯು ಕಾಣೆನಲ್ಲ ||ಪೊಡವಿ ಪಾಲಕ ಶ್ರೀಕೃಷ್ಣ ನೀನಲ್ಲದೇ |ಬಡವನ ಬಾರೆಂದು ಕರೆದು ಮನ್ನಿಪರಿಲ್ಲ1ಕಾಸು ಕೈಯೊಳಗಿಲ್ಲ | ಆಸೆ ದೇಹದೊಳಿಲ್ಲ ||ದೇಶ ದೇಶವ ಸುತ್ತಿ ಬಳಲಿದೆನಲ್ಲಾ ||ಭಾಸುರಾಂಗನೆ ಶ್ರೀನಿವಾಸ ನೀನಲ್ಲದೇ |ಲೇಸನೆಣಿಸುವರ ಕಾಣೆ ರುಕ್ಮಿಣಿನಲ್ಲ2ಸತಿಸುತರೆನಗಿಲ್ಲ |ಗತಿಮುಂದೆ ಶಿವ ಬಲ್ಲ ||ಹಿತದಿಂದಲಿರಲೊಂದು ಮನೆ ತನಗಿಲ್ಲ ||ಪೃಥವಿ ಪಾಲಕ ಸೀತಾರಾಮ ನೀನಲ್ಲದೇ |ಹಿತವ ಬಯಸುವರ ಕಾಣೆ ಜಗದ ನಲ್ಲ3ತಂದೆ ತಾಯಿಗಳಿಲ್ಲ | ಬಂಧು ಬಳಗವಿಲ್ಲ |ಒಂದು ವಿದ್ಯವ ನಾನು | ಕಲಿತವನಲ್ಲಾ ||ಇಂದಿರೆಯರಸ ಗೋವಿಂದ ನೀನಲ್ಲದೇ |ಬಂದ ಭಾಗ್ಯಗಳೊಂದು ನಿಜವಾದುದಲ್ಲಾ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹೀಗೆ ಮಾಡಬೇಕೋ-ವಿಠಲ ತಂದೆಹೀಗೆ ಮಾಡಬೇಕೋ ಪಹೇಗಾದರು ದುರಿತಗಳೆನ್ನ ಕಾಡದಹಾಗೆ ಮಾಡ ಬೇಕೋ ಅ.ಪಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮಮುಂದೆ ನಾ ತಾಯ ಉದರದಲಿ ಜನಿಸದಹಾಗೆ ಮಡಬೇಕೋ ವಿಠಲ ತಂದೆ 1ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆಹೀನ ಮಾನವರಿಗೆ ನಾನು ಕೈಯಾನದಹಾಗೆ ಮಾಡಬೇಕೋ - ವಿಠಲ ತಂದೆ 2ಕರುಣಿಪುರಂದರವಿಠಲ ತಂದೆನೆರೆನಂಬಿದೆ ನಿನ್ನಶರಣ ರಕ್ಷಕನೆಂಬ ಬಿರುದು ಬೇಕಾದರೆಹೀಗೆ ಮಾಡಬೇಕೋ - ವಿಠಲ ತಂದೆ 3
--------------
ಪುರಂದರದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು