ಒಟ್ಟು 24701 ಕಡೆಗಳಲ್ಲಿ , 138 ದಾಸರು , 9090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಷ ವರ್ಧಂತಿಗಳು (ಆಚಾರ್ಯರ 21ನೇ ವರ್ಷದ ವರ್ಧಂತಿ ಸಮಯ) ನಿನ್ನ ನಂಬಿದೆ ಶರದಿಂದುವದನ ಎನ್ನ ಪಾಲಿಸು ವರಕುಂದರದನ ಮುನ್ನ ಪಾತಕಿಯಾದಜಾಮಿಳನು ತನ್ನ ಚಿಣ್ಣನ ಕರೆದರೆ ಮನ್ನಿಸಿದವನೆಂದು ಪ. ನರ ಧ್ರುವಾಂಬರೀಷ ಪ್ರಹ್ಲಾದ ಮುಖ್ಯರನ- ವರತ ನಿನ್ನನಾಧರಿಸಿದರವರ ಪೊರೆದನೆಂಬೀ ಮದಗರುವ ಭಾರದಲತಿ- ಕಿರಿದಾಗಿಹ ಎನ್ನ ಮರೆವುದುಚಿತವೆ 1 ಹತ್ಯ ಪ್ರಮುಖ ದುಷ್ಕøತ್ಯಗಳಿರಲಿ ನಿತ್ಯ ಪರಧನಾಸಕ್ತನಾಗಿರಲಿ ಭಕ್ತವತ್ಸಲ ನಿನ್ನ ಸ್ಮರಣೆ ಮಾತ್ರದಿ ಪಾಪ ಮುಕ್ತಿದೋರಲು ಪೂರ್ಣಶಕ್ತಿಯಾಗಿಹೆ ಎಂದು 2 ತುರುಗಳೆಣಿಸಿದಂತೆ ಕರುಗಳ ಗುಣವ ಮರೆದಂತೆ ಜನನಿ ತನ್ನಯ ಬಾಲನನುವ ಕರುಣಾಳು ನೀ ಮುನಿಸಿಂದ ಕರುಣಿಸದಿರೆ ಎನ್ನ ಪೊರೆವರಿನ್ಯಾರಿಹರುರಗಾದ್ರಿಯರಸ ಕೇಳ್ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಲ್ಲಭೆ ಬಲು ಸುಲಭೆ ಪ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ 1 ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2 ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು 3 ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ 4 ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ 5
--------------
ವಿಜಯದಾಸ
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು
ವಶವಾಗಿ ಉದ್ಧರಿಸಮ್ಮಾ ಪಾಲನ ಪ ಮತಿಯ ಕೊಡುತಿಪ್ಪ ಎನ್ನ ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ1 ಬುದ್ದ್ಯಾಭಿಮಾನಿ ದೇವಿ ಇಂದ್ರಾದ್ಯ ಸುರರನ್ನ ಕಾಯ್ವಿ ಗಾತ್ರನ ಧನಪತಿ ಮಿತ್ರನಾ 2 ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ ವಿಜಯವಿಠ್ಠಲರೇಯನ ದಾಸದಾಸನ ಕೈಲಾಸವಾಸನ ಜಗಕೆ ವಿಶೇಷನಾ 3
--------------
ವಿಜಯದಾಸ
ವಸುದೇವ ಸುತನ ಶಶಿ ಮುಖವನುತಂದು ತೋರಿಸೆ ಸಖಿ ತಂದು ತೋರಿಸೆ ಪ ಹೊಸಬೆಣ್ಣೆ ಬುತ್ತಿಯ ಪಶುಪಾಲಗಿತ್ತುಪೊಗಳುವೆ ಕೇಳವನ ಚರಿತೆಯ ಅ.ಪ. ಫುಲ್ಲಾಕ್ಷಿ ಇಟ್ಟ ಮನವನು ಅವನಲ್ಲಿ ತೆಗಿಯೆನೆ ಗೋ-ವಲ್ಲಭ ಬೆನ್ನು ಬಾಗಿ ಮೋಹಿಸುತ ಪೋದನೆ 1 ಸಖಿಕೇಳು ಮತಿಯು ಭ್ರಮಿಸಿತು ಅವನಲ್ಲಿ ಅತಿಶಯಸುಖದಿಂದ ಸ್ಮರಿಸುವೆ ಕೇಳವನ ಚರಿತೆಯ 2 ಸುಕೃತ ಇದ್ದರೀತ ನಾ ಸಖೀತಂದು ತೋರೆ ನೋಡುವೆನಾ ಇಂದಿರೇಶನಾ 3
--------------
ಇಂದಿರೇಶರು
ವಸುಮತೀಶ ವಿಠ್ಠಲನೇ ನೀನಿವಗೆ | ಎಸೆವ ಜ್ಞಾನವನಿತ್ತುಹಸನಾಗಿ ಕಾಪಾಡಬೇಕೊ ಹರಿಯೆ ಪ ಕುಸುಮ ಸಂಭವ ಪಿತನೆ | ವಾಸುದೇವನೆ ಕೃಷ್ಣನಸು ನಗೆಯಲೀ ನಿನ್ನ ಉಪಾಸನವ ಕೊಡೊ ಹರಿಯೆ ಅ.ಪ. ತರತಮವು ಪಂಚಭೇದದ ಜ್ಞಾನ | ನಿರತಿಶಯ ಹರಿಭಕ್ತಿಗುರುಭಕ್ತಿಗಳ ಕರುಣಿಸೀ ಕಾಪಾಡಬೇಕೊ ಹರಿಯೇ |ವರ ಪ್ರದಾಯಕ ಸ್ವಾಮಿ ವೈರಾಗ್ಯ ಭಾಗ್ಯಗಳ ನೀನಿವರಿಗಿತ್ತುಕರುಣದಿಂ ಕಾಪಾಡಬೇಕೊ ಹರಿಯೇ 1 ನಿನ್ನ ಮೊರೆ ಹೊಕ್ಕವನ | ಇನ್ನು ಕೈ ಪಿಡಿಯುವುದುನಿನ್ನ ಧರ್ಮವಲ್ಲವೆ ಸ್ವಾಮಿ ರಾಮಚಂದ್ರ |ನನ್ನೆಯಿಂದಲಿ ಇವನ ಪಾಪಗಳ ಪರಿಹರಿಸಿನಿನ್ನ ಪದ ಸೇವಕನ ಮಾಡೊ ವೈಕುಂಠ ಪತಿಯೇ 2 ಖಗವರಧ್ವಜ ದೇವ ಜಗಜ್ಜನ್ಮಾದಿ ಕಾರಣನೆಬಗೆಬಗೆಯ ಮಹಿಮೆಗಳ ತೋರಿ ಕಾಪಾಡೊ ಹರಿಯೇ |ಸುಗುಣ ಮೂರುತಿ ದೇವ ತ್ರಿಗುಣ ವರ್ಜಿತ ಸ್ವಾಮಿಹಗರಣಗಳೀಯದಲೆ ಕಾಪಾಡೊ ಹರಿಯೇ 3 ಇಷ್ಟಮೂರುತಿ ದೇವ ಸೃಷ್ಟ್ಯಾದಿ ಕಾರ್ಯಗಳದೃಷ್ಟಿಯಿಂದಲಿ ಮಾಳ್ಪ ಮಹಮಹಿಮ ಹರಿಯೇ |ಕೃಷ್ಣಮೂರುತಿ ಹೃದಯ ಅಷ್ಟದಳ ಮಧ್ಯದಲಿದೃಷ್ಟಿಗೋಚರನಾಗಿ ಕಾಪಾಡೊ ಹರಿಯೇ 4 ಮೂರ್ತಿ ಹಯ ಮೊಗಾತ್ಮಕನೇ |ವೇದಾಣಿ ವಂದ್ಯ ಗುರುಗೋವಿಂದ ವಿಠ್ಠಲನೇನೀ ದಯದಿ ಕೈ ಪಿಡಿದು ಕಾಪಾಡೊ ಹರಿಯೇ 5
--------------
ಗುರುಗೋವಿಂದವಿಠಲರು
ವಸ್ತು ಒಂದೆ ಅದೆ ಅನಾದಿಯಿಂದ ಸ್ವಸ್ತ ಮಾಡಿಕೊಳ್ಳಿ ಗುರುಮುಖದಿಂದ ಧ್ರುವ ಹೂವಿಲ್ಲದೆ ಫಲವಾಗುವ ಕಾಯಿ ಠಾವಿಲ್ಲದೆ ಮ್ಯಾಲೆ ಮುಚ್ಯಾದೆ ಮಾಯಿ ಭಾವಿಕರಿಗಾದೆವು ಪಾಯಿ ಠಾವಿಕಿ ಮಾಡಿಕೊಬೇಕು ತಾಯಿ 1 ಬೀಜಿಲ್ಲದೆ ಫಲ ನಿಜವಾಗ್ಯದೆ ಮೂಜಗದೊಳು ರಾಜಿಸುತ್ತದೆ ಸೂಜಿಮೊನೆಗಿಂತ ಸಣ್ಣವ್ಯಾಗದೆ ವಾಜಿಹೀನರ ವರ್ಜಿಸುತದೆ 2 ನೋಡೇನೆಂದರೆ ನೋಟಕತೀತ ಹಿಡಿದೇನಂದರೆ ಸಿಕ್ಕದು ಸ್ವಸ್ಥ ಪಡೆದುಕೊಂಡವರಿಗೈದೆ ಆಯಿತ ಮೂಢ ಮಹಿಮತಿ ಗುರು ನಿಜಹಿತ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ ಧ್ರುವ ತೇಜ:ಪುಂಜದ ರೂಪ ಮೂಜಗದೊಳಗಿದು ಅಪರೂಪ ನಿಜ ನಿರ್ವಿಕಲ್ಪ ಸುಜನರ ಹೃದಯಕ ಸದ್ಛನದೀಪ 1 ರೂಪಕ ನೆಲೆಇಲ್ಲ ವ್ಯಾಪಕವಿದು ಜಗದೊಳಗೆಲ್ಲ ಗುಪಿತಜ್ಞಾನಿಯು ಬಲ್ಲ ಜಪತಪಕಿದು ಸಿಲ್ಕುವದಲ್ಲ 2 ಙÁ್ಞನಕ ಸಾಹೀತ ಮುನಿಜನ ಹೃದಯದಿ ಸದೋದಿತ ಧ್ಯಾನಕೆ ಆಯಿತು ಮನಕಾಮನವಿದು ಪೂರಿತ 3 ಮೂರಕೆ ವಿರಹಿತ ಮೂರುಲೋಕವು ವಂದಿತ ಪರಮ ಸಾಯೋಜ್ಯತ ತಾರಕವಸ್ತು ಸಾಕ್ಷಾತ 4 ಬೈಲಿಗೆ ನಿರ್ಬೈಲ ಭಾವಿಕ ಬಲ್ಲನು ಇದರ್ಹೊಯಿಲ ಮಹಿಪತಿಗನುಕೂಲ ಜೀವನ್ಮುಕ್ತಿಗೆ ಇದು ಮೂಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ ಮಣಿ ಎಣಿಸುವದಲ್ಲ ||ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ 1 ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ 2 ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ 3
--------------
ರುಕ್ಮಾಂಗದರು
ವಾಗ್ದೇವಿ ಪ ವಾಗ್ದೇವಿ ಅ.ಪ. ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ 1 ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಾಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ 2 ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ 3
--------------
ಜಗನ್ನಾಥದಾಸರು
ವಾಗ್ದೇವಿ - ನಿಮ್ಮಚರಣ ಕಮಲಂಗಳ ದಯಮಾಡು ದೇವಿ ಪ ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ - ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ 1 ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ - ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ2 ಸನ್ನುತ ರಾಣಿವಾಸೆ 3
--------------
ಕನಕದಾಸ
ವಾಣಿ ವೀಣಾಪಾಣಿ ಬ್ರಹ್ಮನರಾಣಿ ಪಾಹಿ ಕಿಂಕರ ಪಾಪಕÀೃಪಾಣೀ ಪ ಖ್ಯಾತೇ ವೇದಮಾತೇ ನಾಗಭೂಷಣ ಮಾತೇ ಮಾಲಾಪುಸ್ತಕ ಶೋಭಿತಹಸ್ತೇ 1 ಭವ್ಯೇ ಭವ್ಯಕೃತ್ಯೇ ಭವ ಮುಖ್ಯರಿಗಭಯವನಿತ್ತೇ ಮತ್ತೆ ಗಿರಿಜಾದಿಗಳಿಗೆ ನೀನತ್ತೆ 2 ಶುಕ್ಲೇ ಪರಶುಕ್ಲೇ ಶುಕ್ಲಹಂಸದಿ ಮೆರೆದಿರ್ಪೆ ಶುಕ್ಲ ರಾಜೇಶ ಹಯಮುಖ ಭಕ್ತೇ 3
--------------
ವಿಶ್ವೇಂದ್ರತೀರ್ಥ
ವಾಣಿ ಪತಿಸುತ ವಿಠಲ | ದಿನೆಯನು ಪೊರೆಯೊ ಪ ಮಾನನಿಧಿ ತವದಾಸ್ಯ | ಕಾನಮಸಿ ಬೇಡುವಳನೀನಾಗಿ ಕೈ ಪಿಡಿದು | ಕಾಪಾಡೊ ಹರಿಯೇ ಅ.ಪ. ಶುದ್ಧ ಭಾವದ ವೃದ್ಧೆ ಶ್ರದ್ಧೆಯಲಿ ಸೇವಿಪಳುಮಧ್ವ ರಮಣನೆ ದೇವ ಉದ್ಧರಿಸೊ ಇವಳಾ |ಕೃದ್ಧಿಸುವ ಖಳರನ್ನು ಗೆದ್ದು ಸಂಸ್ಕøತಿಯೆಂಬಅಬ್ಧಿಯನೆ ದಾಟಿಸೋ | ಹದ್ದು ವಾಹನನೇ 1 ಭವ ಸಿಂದುವಿಲಿ | ಮಂದಳಾಗಿಹಳನ್ನುಕಂದರ್ಪಪಿತ ಹರಿಯ | ಕುಂದನೆಣಿಸದಲೇನಂದ ಮುನಿ ಮತ ತತ್ವ | ಸಂಧಿಸುತ ಇವಳೀಗೆಅಂದ ವೈರಾಗ್ಯವೆಂಬಾಭರಣ | ತೊಡಿಸೊ 2 ದೇವಾದಿ ದೇವ ಭವದಾವಾಗ್ನಿ ಪರಿಹರಿಸೆತೀವ್ರ ತವನಾಮ ಸ್ಮøತಿ | ಸರ್ವದಾ ಕರುಣಿಸೋ |ಈ ವಿಧದ ಭಿನ್ನಪವ | ನೀವೊಲಿದು ಸಲಿಸೆಂದುಭಾವದಲಿ ಬೇಡ್ವೆ ಗುರು | ಗೋವಿಂದ ವಿಠ್ಠಲಾ 3
--------------
ಗುರುಗೋವಿಂದವಿಠಲರು
ವಾಣಿ ಬಾರೆ ಬೇಗ ವದನದಿ ವಾಣಿ ಬಾರೆ ಬೇಗ ಪ. ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ. ಹೃದಯ ಮಂದಿರದಿಲಿದು ಸುವರ್ಣದ ಪದುಮ ಮಂಟಪಕೆ ಮುದವ ಬೀರುತೆನ್ನ ವದನದಿ ಸೇರುತ ಮುದ ಸುವಾಣಿಯ ಚದುರೆ ನುಡಿಸುವ ಶುಕವಾಣಿ 1 ಮಂಗಳ ಮಹಿಮನ ಅಂಗುಟದಿಂ ಬಂ ದಂಬರದಿಂದುದಿಶಿದಾಮರ ತರಂಗಿಣಿ ಗಂಗಾಸ್ನಾನವ ಮಾಡಿಶಿ ನಿನಗೆ ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ 2 ಭಕ್ತಿಯರಿಶಿಣ ಯುಕ್ತಿಯ ಕುಂಕುಮ ಶಕ್ತಿಯ ಗಂಧವ ಪರಶಕ್ತಿಯ ಪೂವನು ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ 3
--------------
ಸರಸ್ವತಿ ಬಾಯಿ
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು