ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರ ನಿನ್ನದೋ ಮಾರಜನಕ ಭಾರ ನಿನ್ನದೊ ಪ ಭಾರ ನಿನ್ನದಯ್ಯ ಸರ್ವ ಸಾರತರದಿ ಕಾಯುವಂಥ ಪಾರಮಹಿಮ ನಿನ್ನ ಚರಣ ವಾರಿಜವೇ ಗತಿ ಎನಗೆ 1 ನಿನ್ನ ಧ್ಯಾನವೆ ಪರುವಕಾಲ ನಿನ್ನ ನಾಮವೆ ಸೌಖ್ಯ ಸಕಲ ನಿನ್ನ ಕೀರ್ತನೆನಗೆ ಸುಫಲ ಪನ್ನಂಗಶಯನ ವೇಣುಗೋಪಾಲ 2 ಕರಿ ಸಂಕಟ ವನ್ನು ನಿರುತ ಗೆಲಿದನಕಟ ನಿನ್ನ ಭಜಿಸಿ ವಿಭೀಷಣ ಪಟ್ಟ ವನ್ನು ಸ್ಥಿರಪಡೆದ ದಿಟ 3 ಜಯ ನಿನ್ನ ಧ್ಯಾನವೆಂದೆ ಜಯ ನಿನ್ನ ಚರಣವೆಂದೆ ಜಯ ನಿಖಿಲ ನಿನ್ನದೆಂದೆ ದಯಪಾಲಿಸು ಶ್ರೀರಾಮ ತಂದೆ 4
--------------
ರಾಮದಾಸರು
ಭಾರತಿ ಗುರುವರ ಗುರುಮಾರುತಿ ಕರುಣಿಸೊ ಸಾರಿದೆ ತವ ಪದ ಸಾರಸವ ಪ ದಾಶರಧಿಗೆ ನಿಜ ದಾಸನೆನಿಸಿ | ಕಮಲಾ ಸನ ಪದವಿಯ ಪೊಂದಿದ್ಯೋ ನೀ ಭೂಸುತೆ ಚೋರನ ಭಾಸುರ ಪುರವ ಹು ಕೀಶ ನಮೋ 1 ಪುನಃ ದ್ವಾಪರದಲಿ ಜನಿಸಿ ಧ ರ್ಮಾನುಜನೆನಿಸಿ | ಭೂಭಾರ ದನುಜರ ರಣದಿ ಹೂಂಕಾರದಿ ಕುಣಿದು ಹರಿ ಮನ ಘನ ಮೆಚ್ಚಿಸಿದ ಭೀಮ ನಮೋ 2 ಶ್ರೀಮದಾನಂದ ಮುನಿ ನಾಮದಿ ಪರಾತ್ವರ ನೇಮದಿ ಭಜಪರ ಕಾಮಿತ ಗರಿಯುವ ಧಾಮ ನಮೋ 3
--------------
ಶಾಮಸುಂದರ ವಿಠಲ
ಭಾರತಿ ದೇವಿಯೆ ಮಾರುತಿ ರಾಣಿಯೆ ಪ. ಮಂದಿ ನಾಲ್ವರನು ಹೊಂದಿಸಿ ಉದರÀದಿಒಂದೆ ರೂಪದಿ ಜನರಿಗೆ ತೋರುವ ಸತಿ1 ಸೀತಾಕಾಂತನ ದೂತನಾಗಿ ಪ್ರ-ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ 2 ದುಷ್ಟ ಕಲಿಯ ಕುಲಕುಟ್ಟಿ ಕೆಡಹಿದ ಭಲಕಟ್ಟಾಳು ಭೀಮನ ಪಟ್ಟದಸತಿಯಳೆ 3 ಮೂರುಏಳುಕುಲ ಮಾಯಿಗಳನು ಗೆದ್ದುಬೋರೆಮರದ ಕೆಳಗಿರುವನ ಸತಿಯಳೆ 4 ಹಗಲಿರುಳೆನ್ನದೆ ಹಯವದನನ ಪದಹೃದಯ ಕಮಲದೊಳು ಭಜಿಪನ ಸತಿಯಳೆ 5
--------------
ವಾದಿರಾಜ
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಭಾರತಿ ಭರತನ ರಮಣಿ ಶಿರಬಾಗುವೆ ತ್ರಿಜಗಜ್ಜನನಿ ಪ. ಭಾರತ ಭಾಗವತಾರ್ಥ ಬೋಧಿನಿ ಶಾರದೇಂದುನಿಭವದನಿ ಅ.ಪ. ಹರಿಗುರುಗಳಲಿ ಸದ್ಭಕ್ತಿ ದೃಢ ಕರುಣಿಸು ಸರಸಿಜನೇತ್ರಿ ಗಿರೀಶಾದಿ ಸರ್ವಸುರೌಘಪ್ರಣೇತ್ರಿ ಶರಣು ಶರಣು ಸುಪವಿತ್ರಿ 1 ಕಾಳಿ ದ್ರೌಪದಿ ಸುನಾಮೆ ನಮ್ಮ ಪಾಲಿಸು ಭೀಮಪ್ರೇಮ ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ ಕಾಲತ್ರಯ ಕೃತಕೃತ್ಯೆ 2
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭಾಗ್ಯವತಿ ಜಯತಿ ಪ. ಸೂರಿಜನೋದ್ಧರೆ ಸುಗುಣಾಲಂಕಾರ ಸಾರಸದಳನೇತ್ರಿ ಜಯತಿ 1 ಚಿತ್ರಚರಿತ್ರೆ ಚಿತ್ಸುಖಗಾತ್ರೆ ಸತಿ ಜಯತಿ 2 ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ- ವನತರ್ಗೆ ನೀನೆ ಗತಿ ಜಯತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಮರುತನ ರಾಣಿ ಶುಭ ವಾಣಿಯಾಗಿರುವಿ ಕಲ್ಯಾಣಿ ನಾರಸಿಂಹನ ಸೊಸೆಯಾದಿ ಸರ್ವ ನಾರಿಯರಿಗೂ ನೀ ಮೇಲಾದಿ ಪ ಭೀಮನು ಶೂದ್ರನೆಂದಿರಲು ನೀನು ಶೂದ್ರೆಯೆಂದೆನಿಸುತಲಿರುವಿ ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ ಪ್ರೇಮವನೇನು ಬಣ್ಣಿಸಲಿ 1 ಜುಟ್ಟನು ಕೈಯೊಳು ಸೆಳೆದ ದುಷ್ಟ ದೈತ್ಯನ ಪಂಥದಿ ಮಥಿಸಿ ಪಟ್ಟದರಸನು ತೋರಿದುದದ್ಭುತವು ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ 2 ರಾಜಧರ್ಮನು ಸುಮ್ಮನಿರಲು ರಾಜನಾಥ ಶ್ರೀಹಯಮುಖ ದಾಸ ರಾಜ ಭೀಮನು ತೋರ್ದ ಶಾಂತತೆಯ ರಾಜೀವಾಕ್ಷ ನಿನ್ನೊಳು ತೋರಿದ ಕರುಣ 3
--------------
ವಿಶ್ವೇಂದ್ರತೀರ್ಥ
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು
ಭಾರತಿದೇವಿ ಭಕ್ತರತಾಯಿಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ. ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ1 ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ 2 ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ 3
--------------
ಗಲಗಲಿಅವ್ವನವರು
ಭಾರತಿದೇವಿ ಭರತನ ರಾಣಿ ಭಾರವು ನಿನ್ನದು ತಾಯೆ ಧಾರುಣಿಯೊಳು ನಿನ್ನಾ ಕೀರುತಿ ಕೇಳಿ ಸಾರಿದೆ ನಿನ್ನನು ಸಾರಭಕುತಿಯನಿತ್ತು ಪಾರುಗಾಣಿಸು ವೈ ಕಾರಿಕಸುರಕರವಾರಿಜ ಪೂಜಿತ ಚಾರುಚರಣಯುಗ ತೋರಿಸಿ ಎನ ಮನೋ- ನೀರಜದಲಿ ನಿಂದು ಮಾರಮಣನ ಪಾದ ಸೇರಿಪ ಭಕ್ತಿಯ ದಾರಿಯನಿತ್ತು ಭವ ದÀೂರನ ಮಾಡೆಂದು ಸಾರಿದೆ ಸಾರಿದೆ ಮಾರಜನಕ ಗುರು ಜಗನ್ನಾಥವಿಠಲನ ತೋರಿಸು ತೋರಿಸು ದೂರಮಾಡದಲೆ
--------------
ಗುರುಜಗನ್ನಾಥದಾಸರು
ಭಾರತಿದೇವಿಯೆ ನಿನ್ನನು ಭಾವದಲಿ ಭಜಿಸುವೆ ಪ್ರಬಲಿಸಮ್ಮಾ ಪ ಮಂದ ಬುದ್ದಿಯಿಂದನಾ ಬಲುಮಾನ ಹೀನನಾಗಿ ಬಾಳಿದೆ ಕೋಮಾಲಾಂಗಿಯೆ 1 ಹತ್ತು ಎಂಟು ಅಂತರದಿ ಜಿಹ್ವದಿ ತಿಳಿವಂತೆನ್ನ ಮಾಡಮ್ಮಾ ಸತ್ಯ ವಾಕ್ಯ ಪ್ರವೀಣೆ ನೀನು ಸಾರುವೆನು ನಾನು 2 ಫಾಲನೇತ್ರಾದಿಗಳಿಲ್ಲಾ ಪರಮ ಮಂಗಳತೋರುವಿ ಬಾಲರಾಮ ಪದಾಬ್ಜ ಭೃಂಗನ ಪಟ್ಟದರಸಿಯೆ 3 ಭಕ್ತಿಯಲಿ ನೀನಿತ್ತರುಂಟು ಭಾದ್ಯರಿದಕಾರು ಕಾಣೆನು ಮುಕ್ತಿ ಮಾರ್ಗವ ತೋರಿಸೆನ್ನನು ಮುಕ್ತನೆನಿಸಮ್ಮಾ 4 ಭೂಮಿಗಧಿಕ ಹೆನ್ನೆಪುರ ಹೆನ್ನೆ ವಿಠಲನ ಪಾದಪದ್ಮವ ಪ್ರೇಮದಿಂದಲಿ ಹೃದಯದಲಿ ಇಟ್ಟು ಪ್ರೀತಿ ತೋರಮ್ಮಾ 5
--------------
ಹೆನ್ನೆರಂಗದಾಸರು
ಭಾರತಿರಮಣ ನಾ ಸಾರುವೆ ಚರಣಾ ಭೂರಿ ಸುಕರುಣಾ ಪ ಮೂರು ಕಾಲದಿ ನಾನಾಮೂರೊಂದು ರೂಪಾ ಮೂರಾರು ಭಕುತಿಲಿ ಸಾರುವೆ ಸುರಪಾ 1 ಮೂರೆರಡಾರಿಂದಲಿ ಮೂರಿಂದ ತಾಪಾ ಮೂರುಮಾಡದಲೆನ್ನಾ ಪೊರೆಯಯ್ಯಾ ಭೂಪಾ 2 ಕುಟಿಲ ದುರ್ವಿಷsÀಯ ಲಂಪಟ ಬಿಡಿಸೀಗಾ ದಿಟ ಗುರುಜಗನ್ನಾಥ ವಿಠಲನ ನಣುಗಾ 3
--------------
ಗುರುಜಗನ್ನಾಥದಾಸರು
ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ
ಭಾರತೀ ದೇವಿ ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ಪ ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1 ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ ಚಿತ್ತಜನಯ್ಯನಾ ಹತ್ತಿರಕೊಯ್ಯೆ 2 ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ ವೆಂಕಟೇಶನ ಪಾದಪಂಕಜ ತೋರಿಸೆ3
--------------
ಉರಗಾದ್ರಿವಾಸವಿಠಲದಾಸರು
ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು