ಲಕ್ಷ್ಮೀಪ್ರಿಯ ಕೃಷ್ಣ ಲಕ್ಷ್ಮೀಪ್ರಿಯ ಕೃಷ್ಣ
ಲಕ್ಷ್ಮೀಪ್ರಿಯ ಸತ್ಯಭಾಮಾಪ್ರಿಯ ಪ
ಗೋವಿಂದ ಮುನಿವಂದ್ಯ ದೇವ ಕೇಶವ ಯೋಗಿ
ಭಾವಾಗೋಚರ ಸರ್ವರೂಪ ಶ್ರೀಕೃಷ್ಣ 1
ಪರಮ ಪಾವನ ನಿತ್ಯವರದ ದಾಮೋದರ
ಪದ್ಮನಾಭ 2
ನಾರಾಯಣಾಧೋಕ್ಷಜಾನಂತ ಪರಿಪೂರ್ಣ
ಶ್ರೀ ರಾಘವೋಪೇಂದ್ರ ಸಂಕರ್ಷಣಾಖ್ಯ 3
ಮಾಧವ ಶ್ರೀ ವಿಷ್ಣೊ
ದನುಜಮರ್ದನ ದಿವ್ಯ ರೂಪ ನರಸಿಂಹ 4
ವಾಮನ ಶ್ರೀಧರ ಹೃಷೀಕೇಶ ಶ್ರೀ ಹರೆ
ಕಾಮಿತ ಫಲದ ಜನಾರ್ದನ ರಾಮ 5
ವಾಸುದೇವಾಚ್ಯುತ ವಸುದೇವ ನಂದನ
ವಾಸುಕಿಶಯನ ತ್ರಿವಿಕ್ರಮ ಭೀಮ 6
ಮಧುಸೂದನಾನಂದಘನ ಪುರುಷೋತ್ತಮಬುಧವಂದ್ಯ ತಿರುಪತಿ ವೆಂಕಟರಮಣಾ 7