ಸಾಧುರ ಸಂಗವ ಮಾಡೋ ಪ್ರಾಣಿ |
ಸಾಧುರ ಸಂಗಾ ಮಾಡಲು ಯೋಗಾ |
ಸಾಧಿಸಿ ಬಾಹುದು ನೋಡೋ ಪ್ರಾಣಿ ಪ
ಅತಿ ಬಳಲಿಸುವ ತಾಪತ್ರಯದೊಳಗ |
ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ |
ಮತಿಯುತನಾಗಿ ಭವಖೋರೆ ದಾಟುವ |
ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1
ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ |
ಹಾರನ ಗುಣ ಭರಣೀ ಮಾಡೋ ಪ್ರಾಣೀ |
ಚಾರು ವಿವೇಕದಿ ಸೇವಿಸಿ ಸಾರಾವ |
ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2
ಪರಿ ಜನದಲಿ
ಮನವನು ಸಂಸಾರಲಿಡೋ ಪ್ರಾಣೀ
ತನುಧನ ಬೆರಿಯದೆ ಮಹಿಪತಿಸುತ ಪ್ರಭು
ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3