ಒಟ್ಟು 1563 ಕಡೆಗಳಲ್ಲಿ , 111 ದಾಸರು , 1190 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಲವೇನೊ ಫಲವೇನೊ ಫಲವೇನೊ ಮನುಜ ಪ ಫಲವೇನೊ ಬಾಳಿ ಹರಿದಾಸನಾಗದ ಮೇಲೆ ಅ.ಪ. ಆಧಿಕಾರವನು ಮಾಡಿ ಮಧುವೈರಿಯನು ಮರೆತು ಎದುರಿಲ್ಲ ಎನಗೆಂದು ಬಲು ಮದದಿಂದ ಮೆರೆದೆ1 ಬಡವಾರ ಬಡಿಯುತ ಕಡುದುಷ್ಟನಿವನೆನಿಸಿ ಹೆಡಿಗೇಲಿ ಹೊನ್ನ ತಂದು ನಿನ ಮಡದೀಗೆ ಕೊಡಲು 2 ಮಡದಿ ಮಕ್ಕಳು ನಿನ ಹಡೆದ ತಾಯ್ತಂದೆ ಕಡು ಸುಖಪಟ್ಟಾರು ನಿನ ಒಡಗೂಡಿ ಬರುವಾರೆ 3 ಅನುದಿನದÀಲಿ ನೀನು ತನುವ ಪೋಷಿಸುತ ಅನುರಾಗದಿಂದಾಲಿ ನಿನ್ನ ಮನಸಿನಂತಿದ್ದು 4 ನರಜನ್ಮವನು ಕೊಟ್ಟ ರಂಗೇಶವಿಠಲನ ಹರುಷದಿಂ ಪಾಡುವ ಹರಿದಾಸನಾಗದ ಮೇಲೆ 5
--------------
ರಂಗೇಶವಿಠಲದಾಸರು
ಫಲಹಾರವ ಮಾಡೋ ಪದುಮಲೋಚನನೆ| ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ ಕದಳೀ ಕಪಿಥ್ಥಶರ್ಕರ ಮೋದದಿಂದಲೀ| ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1 ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ| ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2 ವಸುಧೆಯೊಳುಳ್ಳ ಸಕಲ ಫಲಸಾರವಾ| ಬಿಸಿಯಾದ ಪಲ್ಗೆನೆಯ ಮಧುಸಹಿತಾ 3 ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ| ಸುರರಿಗಮೃತವೆರೆದಾನಂದ ಕರದಲಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ
ಫುಲ್ಲನಾಭ ನಿಜತತ್ವ ತಿಳಿಸು ನುತಪ್ರೇಮಿ ಅಲ್ಲದ್ದು ಅಹುದೆನಿಸಿ ಕೊಲ್ಲದಿರು ಸ್ವಾಮಿ ಪ ವಿಪಿನವನು ಸೇರಿ ಬಲು ಗುಪಿತದಿಂ ಕುಳಿತು ಮಹ ತಪವನಾಚರಿಸಲು ಸುಪಥ ದೊರಕುವುದೆ ಕಪಿವರದ ನಿನ್ನಡಿಯ ಕೃಪೆಯಿಲ್ಲದಿರೆ ಇನಿತು ಜಪತ¥ವ್ರತನೇಮ ಸುಫಲ ನೀಡುವುದೆ 1 ತ್ಯಾಗಿಯೆಂದೆನಿಸಿ ಬಲು ಭೋಗ ನೀಗುವುದೆ ಭಾಗವತ ಜನಪ್ರಿಯ ನಾಗಶಾಯಿ ತವ ದಯ ವಾಗದಲೆ ನರನ ಭವ ರೋಗ ತೊಲಗುವುದೆ 2 ಇಲ್ಲದದು ಇಲ್ಲೆನಿಸು ಅಲ್ಲದ್ದು ಅಲ್ಲೆನಿಸು ಸಲಿಸೆನ್ನನು ತವ ಬಲ್ಲಿದ ಶರಣರೊಳು ಎಲ್ಲದೇವರೆಲ್ಲ ಲೋಕ ಎಲ್ಲನಿನ್ನೊಳಗಭವ ಇಲ್ಲ ನಿನ್ನ್ಹೊರತು ಅನ್ಯ ಸಿರಿ ನಲ್ಲ ಶ್ರೀರಾಮ 3
--------------
ರಾಮದಾಸರು
ಬಂದನಮ್ಮಾ ಬಂದನಮ್ಮಾ ನಮ್ಮ ರಂಗನು| ಇಂದು ನಮ್ಮ ಪೂರ್ವಾರ್ಜಿತಫಲ ವದಗಿ ಬಂದಿತೆಂದು ಪ ಬಿಸಜಾಸಖ ಶತಕೋಟಕಿ ಸಮತೇಜ ದೊಪ್ಪತಿಹನಖವು| ಅಂದುಗೆ ಗೆಜ್ಜೆಯಿಂದ ಘಲುಘಲುಕೆನುತಾ 1 ಉಟ್ಟ ಪೀತಾಂಬರದ ಮ್ಯಾಲ ವಡ್ಯಾಣವನಿಟ್ಟುಕೊಂಡು| ಕಟ್ಟಿದ ಸು ಕಿಂಕಿಣಿಗಳಿಂದ ಝಣ ಝಣ ಕೆನುತಾ2 ಕರ ಕಡಿಗ ವಂಕಿ ತೋಳ ತಾಯಿತ ಕೇಯೂರವನು| ಕೌಸ್ತುಭ ವನಮಾಲೆಯಿಂದ ಪೊಳವುತಾ 3 ಕುಂಡಲ ಕದಪು ಚಲ್ವಿನಿಂದಾ| ದಾಳಿಂಬ ದಶನಾ ಸುನಶಿಕದೆಸಳು ಕಣ್ಣಿಂದಾ 4 ಸ್ಮರನಾಥನು ಸೋಲಿಪ ಭ್ರೂಲತೆಯು ಫಣಿಯಲ್ಲಿಕ| ಸ್ತೂರಿಯನಿಟ್ಟು ಹರಿಮಯ ಕಿರೀಟಕಾವಳಿಮ್ಯಾಲಿರಿಸಿಕೊಂಡು5 ಪಿಡಿದು ಬಿಂಬಾಧರಕತಂದು| ಪರಿ ಪರಿಯಲೂದುತಾ ಮಹಿಪತಿ ನಂದನ್ನ ಪ್ರೀಯನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನಿದಕೋ ರಂಗ ಬಂದನಿದಕೋ ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ. ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ ಕಂಬು ಕಂಠಾ ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ ನಗಧರನು ನಮ್ಮ ಮನಸೂರೆಗೊಂಬುದಕೇ 1 ಕರದಲಿ ಕಂಕಣವು ಬೆರಳಲ್ಲಿ ಉಂಗುರವು ಕೊರಳಲ್ಲಿ ನವರತÀ್ನ ಮುತ್ತಿನಹಾರಗಳೂ ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು ವರ ವೇಣು ವಯ್ಯಾರದಿಂದ ಊದುತಲೀ 2 ಸುರರ ವಂಚನೆಗೈದು ವರ ಋಷಿಗಳನೆ ಜರಿದು ಸಿರಿಗಗೋಚರನೆನಿಸಿ ಪರಮ ಪುರುಷಾ ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ ಚರಿಯ ತೋರೀ 3 ಇಂದಿರೇಶನು ನಮ್ಮ ವೃಂದಾವನದೊಳಿಪ್ಪ ಮಂದಿಗಳ ಮನ ಸೆಳೆದು ಮಾರಜನಕಾ ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ 4 ಗೋವರ್ಧನೋದ್ಧಾರ ಗೋವಳರ ವಡಗೂಡಿ ಗೋಪಿ ಬಾಲಾ ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ 5
--------------
ಅಂಬಾಬಾಯಿ
ಬಂದಳು ಭಾಗ್ಯನಿಧಿ ಶ್ರೀವರನಿಧಿ ಬಂದಳು ಭಾಗ್ಯನಿಧಿ ಪ. ಅರಿಶಿಣ ಕುಂಕುಮ ಪರಿಮಳ ಗಂಧವು ನಿನಗರ್ಪಿಸುವೆನು ತಾಯೆ ಶ್ರೀವರನಿಧಿ 1 ಜಾಜಿ ಮಲ್ಲಿಗೆ ರೋಜಾ ಸಂಪಿಗೆ ಸೋಜಿಗಮಾಗಿಹ ಸುರಗಿ ಅರ್ಪಿಸುವೆನು 2 ಜರಿಯ ಪೀತಾಂಬರ ಝಗಝಗಿಸುತಲಿ ಜಗದೊಡೆಯನ ರಮಣಿ ಶ್ರೀ ವರಲಕ್ಷ್ಮಿ 3 ಕದಳಿ ಖರ್ಜೂರವೂ ಬದಳಿ ದಾಳಿಂಬವು ಮುದದಿ ತೆಂಗಿನಕಾಯಿ ಫಲವ ಅರ್ಪಿಸುವೆನು 4 ಶುಕ್ರವಾರದಿ ಭಕ್ತರ ಮನೆಯೊಳು ನಿತ್ಯ ಪೂಜೆಯಗೊಳ್ವ ಶ್ರೀ ವರನಿಧಿ 5 ಶ್ರೀ ಶ್ರೀನಿವಾಸನ ಪ್ರೀತಿಯ ಲಕ್ಷ್ಮಿ ನೀ ಕರುಣದಿ ಸಲಹೆ ಶ್ರೀ ವರಲಕ್ಷ್ಮಿ 6
--------------
ಸರಸ್ವತಿ ಬಾಯಿ
ಬಂದಾಳು - ಬಂದಾಳು ಕನ್ನಿಕೆಯಾಗ || ಮೋಹನ್ನ ರೂಪದಿ ಪ ಪತಿ ಸುರವೃಂದ ಪೊರೆಯಲುಮಂದರಧರ ಆನಂದವ ಬೀರುತ ಅ.ಪ. ಪರಿ ಪರಿ ಭಾವದಿ 1 ಘಲು ಘಲ್ಲು ಘಲಿರೆನ್ನಲು ಗೆಜ್ಜೆಯನಾದ | ಅಸುರರಿಗುನ್ಮಾದ |ಕೆಲಸಾರಿ ಕೆಲ ಸಾರೆನ್ನುತಲೀ ನಾದ | ಆಯಿತು ವಿವಾದ ||ಘಳಿಗೆಯೊಳಮೃತದ | ಕಲಶ ಕನ್ನಿಕೆ ಕರತಲದೊಳಗಿರಿಸುತ | ಬಲು ಬಲು ವಂದಿಸೆ 2 ಸಾಲು ಸಾಲಾಗಿ ಕುಳ್ಳಿರಲಾಗ | ಕಣ್ಮುಚ್ಚಿರೆಂದಳಾಗ ಕಾಲಾಲಂದಿಗೆ ಝಣಿ ಝಣಿಸುವ ಸೋಗ | ಹಾಕಿದಳ್ ತಾನಾಗ | ಕೈಲಿ ಕಲಶ ಸೌಟು | ಚಾಲಿಸುತಲಿ ಸುರಪಾಳಯ ಕುಣಿಸುತ | ಜಾಲ ಮಾಡಿದ ಹೆಣ್ಣು3 ದಿವಿಜಾರ ಮಧ್ಯದಿ ರಾಹುವು ತಾನು | ಎತ್ತಲು ತನ ಗೋಣುರವಿಯು ಚಂದ್ರಮರ ಸೂಚನೆಗಳನು | ಅನುಸರಿಸುತ ಪೆಣ್ಣುಹವಣಿಸಿ ಚಕ್ರದಲವನ ಕೊರಳನೂಜವದಿ ಕಡಿಯೆ ಗ್ರಹವೆರಡೇರ್ಪಟ್ಟವು 4 ಸುರರು ಅಸುರರಿಗೇ | ಆದಾವು ಫಲ ಬೇರೊಬ್ಬಬ್ಬರಿಗೆ | ಸ್ವರ್ಯೂಪ್ಯೋಗ್ಯತೆಗೇ ||ವೇದ ವೇದ್ಯ ಗುರು ಗೋವಿಂದ ವಿಠಲನುಸಾಧು ಪೆಣ್ಣು ಸಮ ವೈಷಮ್ಯ ರಹಿತ 5
--------------
ಗುರುಗೋವಿಂದವಿಠಲರು
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ. ಬಂದಿದ್ದನೆ ನಮ್ಮ ಮಂದಿರದೊಳು ಬೆಳ ದಿಂಗಳ ತೆರದೊಳು ಬಂದಿದ್ದನೆ ಅ.ಪ. ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು ಕರ ಕ್ಷಿತಿ ತಳ ವಂದಿತ ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ 1 ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು ವರದ ಮಾಧವನು2 ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ ಸತಿ ತುಳಸಿಯ ಮಾಲಧರನೆ ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು ವಿತತ ವೈಭವದಿಂದ 3 ವರಪ್ರದ ವೆಂಕಟ ವರಗಳ ನೀಡುತ ತನ್ನ ಚರಣ ತೋರುತ ಭಕ್ತರಿಗೆ ಕೇಸರಿ ತೀರ್ಥವ ಕರುಣದಿ ತೋರುತ ಕರಿವರದ ಕೃಷ್ಣ 4 ಪಂಚಾಮೃತದಭಿಷೇಕವ ಕಂಡೆನೆ ಎನ್ನ ಸಂಚಿತಾರ್ಥದ ಪುಣ್ಯದ ಫಲದಿ ಮಿಂಚಿದ ಪಾಪವ ಕಳೆದರತಿಹರುಷದಿ ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ 5 ಕಂಕಣ ಕೈಯೊಳು ಧರಿಸಿಹನೆ ದಿವ್ಯ ಹೇಮ ಶೋಭಿತನೆ ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ ಶಂಕರಾದಿ ಸ್ತುತ ವೆಂಕಟರಮಣನು 6 ಸುರವರÀ ವಂದ್ಯಗೆ ಆರತಿ ಎತ್ತಲು ಕೇಸರಿ ತೀರ್ಥವ ನೀಡಿದನೆ ವರ ಪ್ರಸಾದದ ಮಹಿಮೆಯ ತೋರುತ ಶರಧಿ ಗಂಭೀರನು 7 ಉರುಟಣಿಯ ಮಾಡಿದ ವರಸತಿ ಜತೆಯಲಿ ವರ ಶೇಷಾಚಲನು ತಾನೆ ಹರುಷವ ಬೀರುತ ವರ ಶೇಷನ ಮೇಲೆ ಮೆರೆವ ಶಯನಗೊಂಡು ಹರುಷದಿ 8 ಗಂಧ ಪುಷ್ಪ ತಾಂಬೂಲವಗೊಂಡನೆ ತಂಡ ತಂಡ ಭಕ್ತರ ವಡೆಯ ಉದ್ದಂಡ ಭಕ್ತರಿಗೆ ಉದ್ದಂಡ ವೆಂಕಟ 9 ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ ನೋಟಕರಿಗೆ ಆನಂದ ತೋರಿದನೆ ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ 10 ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ ಕರೆದಾದರಿಸು ಹರಿಗೆ ನಿರುತ ಎಮ್ಮನು ಹಯನೇರಿದನೆ ಭಯಕೃದ್ಭಯ ಹಾರಿ 11
--------------
ಸರಸ್ವತಿ ಬಾಯಿ
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ. ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ. ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1 ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2 ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3 ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4 ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5 ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6 ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7
--------------
ಗೋಪಾಲದಾಸರು
ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು
ಬಂದೊದಗಿತು ಪುಣ್ಯಫಲವು ಮುಚುಕುಂದವರದ ವಾಸುದೇವಾರ್ಯರೊಲವು ಪಸಂಚಿತಾಗಾಮಿಪ್ರಾರಬ್ಧವೆಂಬ ಕಂಚುಕಿಯಾದ ಕರ್ಮದ ಬಹುಬದ್ದದಂಚುಗಾಣುವುದಾವ ಸಿದ್ಧ ಇದು ಕಿಂಚಿದಾದುದು ಗುರುಚರಣರೇಣಿಂದ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೊನೀನೆ ಕರುಣವಿತ್ತುದೇನೊ ನಾನು ಜ್ಞಾನವೆಂತೆಂಬ ಸ್ವರೂಪವನರಿಯೆನೊ 2ಪರಿಹರಿಸಿತು ಜನ್ಮ ಮರಣ ದುಃಖ ದುರವಣೆ ದಹಿಸಿತು ಲಕ್ಷ್ಮಿಯರಮಣತಿರುಪತಿ ವೆಂಕಟರಮಣ ನೀನೆ ಗುರು ವಾಸುದೇವರೂಪಿನಲಿತ್ತೆ ಕರುಣ3ಓಂ ನರನಾರಾಯಣಾತ್ಮಕಾಯ ನಮಃಕಂ||ಭೃಗುವಾರದರ್ಚನೆಯನಿದನಿಗಮಾಗಮವೇದ್ಯ ಗ್ರಹಿಸಿ ಸಿರಿ ಧರಣಿಯು ಸಹಭಗವಂತ ನಿನ್ನ ಭಕ್ತರೊಳಗಲದೆ ನಾನಿಹುದ ಮಾಡು ವೆಂಕಟರಮಣಾ
--------------
ತಿಮ್ಮಪ್ಪದಾಸರು
ಬಂದೊದಗಿತು ಪುಣ್ಯಫಲವೂ ಮುಚುಕುಂದ ವರದ ವಾಸುದೇವಾರ್ಯರೊಲವು ಪಸಂಚಿತಾಗಾ'ು ಪ್ರಾರಬ್ಧವೆಂಬಕಂಚುಕಿಯಾದ ಕರ್ಮದ ಬಹು ಬದ್ಧದಂಚುಗಾಣುವುದಾವ ಸಿದ್ಧ ಇದುಕಿಂಚಿದಾದುದು ಗುರುಚರಣರೇಣಿಂದಾ 1ಏನು ಸುಕೃತವ ಮಾಡಿದೆನೊ ನಿನಗಾನತ ನಾನಾದ ಬಗೆಯು ತಾನೇನೋನೀನೆ ಕರುಣ'ತ್ತುದೇನೋ ನಾನುಜ್ಞಾನವೆಂತೆಂಬ ಸ್ವರೂಪವನರಿಯೆನೊ3ಪರಿಹರಿಸಿತು ಜನ್ಮ ಮರಣ ದು:ಖದುರವಣೆ ದ'ಸಿತು ಲಕ್ಷ್ಮಿಯ ರಮಣತಿರುಪತಿ ವೆಂಕಟರಮಣ ನೀನೆಗುರು ವಾಸುದೇವ ರೂಪಿನಲಿತ್ತೆ ಕರುಣ 3
--------------
ತಿಮ್ಮಪ್ಪದಾಸರು
ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ ಪ ಚಿನ್ನ ಕೃಷ್ಣನ ಚೆನ್ನಾಗಿ ನೆನೆದು ಪ್ರಸನ್ನ ಮಾಡಿರಿ ಅ.ಪ. ಸತಿಯು ಸುತರು ಗತಿಯು ಎಂದು ಕೆಡಲು ಬೇಡಿರಿ ಮಿತಿಯು ಇಲ್ಲ ಮೇರೆಯು ಇಲ್ಲ ಫಲವು ಇಲ್ಲ ಕೇಳಿರಿ ಮತಿಯ ಹರಿಯ ಅಡಿಯಲ್ಲಿಟ್ಟು ಪ್ರೀತಿಮಾಡಿರಿ ಗತಿಯನೀಡಿ ತ್ವರಿತದಿಂದ ಪೊರೆವ ನಿಮ್ಮ ನೊಡಿರಿ 1 ಇಂದು ಕಾಲ ಕಳೆಯ ಬೇಡಿರಿ ಶುಭ ಇಂದೆ ನೆನೆಯಿರಿ ಬಂದು ಯಮನ ಭಟರು ಕರೆದರೆ ಏನು ಮಾಡೋರಿ ಮುಂದೆ ಇಂಥ ಜನ್ಮಬಹುದೆ ಬಂಧ ನೂಕಿರಿ2 ಆಶಪಾಶ ಮೋಸ ಬಲುಕ್ಲೇಶ ತಿಳಿಯಿರಿ ಹೇಸಿಕೆ ಸಂಸಾರವನು ಘಾಸಿಕೆ ನೋಡಿರಿ ವಾಸವೇಶ ಜಯಮುನೀಂದ್ರ ವಾಯುಸ್ಥ ಕೃಷ್ಣ ವಿಠಲನ ದಾಸನಾಗಿ ಗೆಜ್ಜೆಕಟ್ಟಿ ನಿರಾಶೆಯಿಂದ ಭಜಿಸಿರಿ 3
--------------
ಕೃಷ್ಣವಿಠಲದಾಸರು
ಬಪ್ಪ ಶುಭಾಶುಭ ತಪ್ಪದಾದರೆ ನಿನ್ನಿಂ-ದಪ್ಪುದೇನಪ್ಪ ಹರಿ ಪ ಬಂದಾಪತ್ತ ನೀಗುತ್ತಾ | ನಂದ ಪ್ರಾಪ್ತಿಸಲು ಗೋ-ವಿಂದ ನಿನ್ನ ಸೇರ್ವುದು 1 ಮುದ್ದಿನ ವರಲಿಪಿ ತಿದ್ದಿ ಕಾಯ್ದುದರಿಂದ ಹೊದ್ದಿ ನಾನಿದ್ದೆ ನಿನ್ನ 2 ಕೈಯ ಮುಗಿವೆ ಜಗ | ದಯ್ಯ ದಮ್ಮಯ್ಯ ಪಾಲಿಸೈಯ ನೀ ಸೈಯೆನಿಸಿ 3 ಪ್ರಾರಬ್ಧ ಫಲ ಮೀರ | ಬಾರದೆಂಬರಿವಿಂ-ದೂರ ನೀ ತಪ್ಪಿಸುವೆ 4 ವಾಸುದೇವ ರಮೇಶ | ದೋಷ ಕ್ಷಮಿಸಿ ತವ ದಾಸನ ರಕ್ಷಿಸಯ್ಯ 5
--------------
ಅನ್ಯದಾಸರು