ಒಟ್ಟು 53 ಕಡೆಗಳಲ್ಲಿ , 22 ದಾಸರು , 49 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದರವೈರಾಗ್ಯವಿದು - ನಮ್ಮ - |ಪದುಮನಾಭನಲ್ಲಿ ಲೇಶಭಕುತಿ ಇಲ್ಲ ಪ.ಉದಯಕಾಲದಲೆದ್ದು ಗಡಗಡ ನಡುಗುತ |ನದಿಯಲಿ ಮಿಂದೆನೆಂದು ಹಿಗ್ಗುತಲಿ ||ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು |ಬದಿಯಲಿದ್ದವರಿಗಾಶ್ಚರ್ಯದೋರುವುದು 1ಕರದಲಿ ಜಪಮಣಿ ಬಾಯಲಿ ಮಂತ್ರವು |ಅರಿವೆಯ ಮುಸುಕನು ಮೋರೆಗೆ ಹಾರೆ ||ಪರಸತಿಯರರೂಪ ಮನದಲಿ ಗುಣಿಸುತ |ಪರಮವೈರಾಗ್ಯಶಾಲಿಯೆನಿಸುವುದು 2ಕಂಚುಗಾರನಾ ಬಿಡಾರದಿಂದಲಿ |ಕಂಚು ಹಿತ್ತಾಳೆಯ ಪ್ರತಿಮೆಯ ನೆರಹಿ ||ಮಿಂಚಬೇಕೆಂದು ಬಹುಜ್ಯೋತಿಗಳನೆಹಚ್ಚಿವಂಚಕತನದಲಿ ಪೂಜೆಯ ಮಾಳ್ಪುದು 3ಬೂಟಕತನದಲಿ ಬಹಳ ಭಕುತಿ ಮಾಡಿ |ಸಾಟಿಯಿಲ್ಲವು - ಎನಗೆಂದೆನಿಸಿ ||ನಾಟಕ ಸ್ತ್ರೀಯಂತೆ ಬಯಲಡಂಬವ ತೋರಿ |ಊಟಕೆ ಸಾಧನೆ ಮಾಡಿಕೊಂಬುದಿದು 4ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ |ಏನಾದುದುಹರಿ ಪ್ರೇರಣೆಯೆಂದು |ಶ್ರೀ ನಿಧಿ ಪುರಂದರವಿಠಲರಾಯನನು |ಕಾಣದೆ ಮಾಡಿದ ಕಾರ್ಯಗಳೆಲ್ಲ 5
--------------
ಪುರಂದರದಾಸರು
ಸಾಧನ ದೇಹವಿದು62-3ಸಾzನ ದೇಹವಿದುಶ್ರೀ ಪದುಮೇಶ ದಯದಿ ಕೊಟ್ಟ ದೇಹವಿದು ಪವಿಹಿತಾವಿಹಿತವು ಈರ್ವಿಧ ಕರ್ಮದಿವಿಹಿತವ ಪಿಡಿದು ಅಕಾಮ್ಯದಿ ಸಮ್ಯಕ್ ಆಚರಿಸಿಅಹಿಪಶಯ್ಯನ ಸನ್ಮಹಿಮೆಗಳರಿತು ವರಾಹನ ದಯದಲಿ ಪರಸುಖ ಪೊಂದಲು 1ಬೇಸರ ತೊರೆದು ಸುಶಾಸ್ತ್ರವನೋದಿಸಾಸಿರ ನಾಮನಭಾಸುರಗುಣಕ್ರಿಯರೂಪಗಳಈಶನ ದಯದಿ ಸದ್ಯೋಚಿಸಿ ಹಿಗ್ಗುತವಾಸುದೇವನೆ ಸರ್ವೇಶನೆಂದರಿಯಲು 2ವಿಷಯೀಕ್ಷಣಗಳು ಕ್ಷಣಸುಖವೀವುವುಶೇಷಗಿರೀಶನೆ ಅಕ್ಷಯಸುಖದನು ಸುಖಮಯನುದೋಷದೂರ ಶ್ರೀ ಲಕ್ಷ್ಮಿಯ ರಮಣನೆಪೋಷಕ ಮನೋಗತ ತಿಮಿರಕೆ ಪೂಷನು 3ತಾರಕಗುರುಉದಾರ ಸುಮನದಲಿದಾರಿಯ ತೋರಿಸಿ ಉದ್ಧರಿಸಲು ಬಹು ದಯದಿವಿಧಾತೃಸಮೀರಸುಮೇಧರು ಚಿಂತಿಪವಾರಿಧಿಶಯ್ಯ ಪರೇಶನು ತೋರುವ 4ಸಪ್ತ ಸುಸ್ಥಾನದಿ ಮರುತಾದಿಗಳೊಡೆಗುಪ್ತನಾಗಿಪ್ಪ ನಿರ್ಲಿಪ್ತ ನಿರಾಮಯ ಶ್ರೀಕಪನುಸುಪ್ತಿಜಾಗೃತ ಸ್ವಪ್ನಾದಿ ಕಾಲದಿ ಕಾಯುವಆಪ್ತ ಸುಹೃದನಿವಗಾರು ಈಡಿಲ್ಲವು 5ಪಂಚ ಸುನಾಡಿಯೋಳ್ ಪಂಚ ಸುವರ್ಣದಿಪಂಚ ಸುರೂಪ ಸ್ವತಂತ್ರನು ಇರುತಿಹ ಶ್ರೀಹರಿಯುವಿರಿಂಚಸಮೀರಸುಮೇಧರು ಬಹು ವಿಧಚಿಂತಿಸಿ ನಮಿಪ ಪ್ರಪಂಚದ ಒಡೆಯನು 6ಪದುಮದ ದಳಗಳು ಐದು ಮೂರುಂಟುಅದರ ಮೂಲದಿ ಇಹ ಸದಮಲ ಲಕ್ಷ್ಮೀಶಬಾಧಿಪ ಕರ್ಮವ ಸುಡುವ ಸಂಕರುಷಣಸದಮಲ ಪೊರೆಯುವ ಒಳಹೊರಗೆ 7ಶ್ರವಣ ಮನನ ಸುಧ್ಯಾನದ ಬಲವುಶ್ರೀಶನೊಳ್ ಭಕುತಿಯು ನಿಶ್ಚಯ ಸಾಧನ ಗುರುಮಯದಿಶ್ರೀಶನ ಮಹಿಮೆಗಳರಿತು ಸದೃಷದಿಸುರತಟಿನಿಯಪೋಲು ಸರಿಪ ಪ್ರೇಮವೆ ಭಕ್ತಿ 8ಮುಕುತಿ ಕೊಡುವ ಜ್ಞಾನ ಭಕುತಿಲಿ ಬರುವುದುಸುಖಮಯ ಶ್ರೀಶನ ದಯವು ಇಲ್ಲದೆ ಇದು ಸಿಕ್ಕದಯ್ಯವಿಕಸಿತಾಬ್ಜಜತಾತಪ್ರಸನ್ನ ಶ್ರೀನಿವಾಸಶ್ರೀಕರ ವ್ಯಾಸ ರಾಮ ಕೃಷ್ಣ ನೃಹರಿ ಕಾಯ್ವ 9
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು