ಒಟ್ಟು 173 ಕಡೆಗಳಲ್ಲಿ , 24 ದಾಸರು , 56 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸೆಗೆ ಬಾರೈರಾಮಾ ಪ ಬಿಸಜಾಪ್ತ ವಂಶಲಲಾಮ ಅ.ಪ ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ನೀಮನವಲಿದನುಗ್ರಹಿಸಿ ಬೇಗದಿ4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
--------------
ಗುರುರಾಮವಿಠಲ
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ 1 ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್ ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ 2 ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು 3 ಮುದದಿ ನಸು ನಗುತ ಬಲದ ಪದವು ಮುಂದಾಗಿ 4 ಶರಣ ಜನರಭೀಷ್ಟಗಳನು ಸಲಿಸುವಾತನೇ ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ 5
--------------
ಗುರುರಾಮವಿಠಲ
ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ ಭಾಮೇರಿಬ್ಬರಿಗೆ ರಂಗಯ್ಯ ಪ ಬಂದು ರುಕ್ಮಿಣಿ ಭಾಮೇರಿಂದತಿ ಸಂಭ್ರಮ್ಮದಿಂದ ರಂಗಯ್ಯ ಕುಂದಣದ ಹಸೆಮ್ಯಾಲೆ ಕುಳಿತಿರೆ ಚೆಂದದಲಿ ನಗುತ ಚಂದ್ರವದನ ತಾ ಚತುರ್ಭುಜದಿಂದಲಿ ಅಂಗನೆಯರ ಆಲಿಂಗನೆ ಮಾಡುತ 1 ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ ನೋಡಿ ನಗುತ ರಂಗಯ್ಯ ಸಾರಸಮುಖಿ ಸಹಿತ ಸರಸ- ವಾಡುತ ನಾರದರು ನಮ್ಮಿಬ್ಬರ ಕದನಕೆ ಹೂಡಿದರೆ ಹುಚ್ಚಾದಿರೆಂದೆನುತ 2 ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ ಕಮಲ ರಂಗಯ್ಯ ಅರಳು ಮೊಗ್ಗುಗಳು ಝಲ್ಲೆ ಕುಸುಮಗಳು ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ- ಮೇಶ ಕೃಷ್ಣ ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು
ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದುಉರುವ ಮಾರಿಗೆ ಗ್ರಾಸವಾಗಬಹುದುಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದುಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದುಹಸಿದ ಹುಲಿಬಾಯಿ ತುತ್ತಾಗಬಹುದುಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನುಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದುಒಡಲಾಸೆಗೊಲ್ಬುರಾಳಾಗಬಹುದುಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿಬಡವನಾಗಿಯೇ ಬೇಡಿ ಉಣ್ಣಬಹುದು 3
--------------
ಪುರಂದರದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು
ದೊರೆಗಳಿಗೆ ಯದುಪತಿ ಗರವು ಹಮ್ಮನೆ ಬಿಟ್ಟುಬರಬೇಕು ಎಂದು ಹಸೆಮೇಲೆಹಸೆಮೇಲೆ ಹರುಷದಲೆಮುದದಿ ಪಾಂಡವರು ಬರಬೇಕು ಪ.ನೂರು ಸೂರ್ಯನ ಬೆಳಕಿನಥೋರ ಮುತ್ತಿನ ಹಸೆಗೆವೀರಪಾಂಡವರು ಬರಬೇಕುಬರಬೇಕು ಎನುತಲೆನಾರಿ ರುಕ್ಮಿಣಿಯು ಕರೆದಳು 1ಮತ್ತೆ ಸೂರ್ಯನ ಬೆಳಕಿಲಿವಿಸ್ತರಿಸಿದಹಸೆಮ್ಯಾಲೆಚಿತ್ತೈಸಬೇಕು ಐವರುಚಿತ್ತೈಸಬೇಕು ಐವರು ಎನುತಲಿಸತ್ಯಭಾಮೆಯು ಕರೆದಳು 2ಥೋರ ಮುತ್ತಿನ ಹಸೆಗೆಚಾರುರತ್ನವ ರಚಿಸಿವೀರ ಪಾಂಡವರÀ ಕರೆದರುವೀರ ಪಾಂಡವರÀ ಕರೆದರುಆರು ನಾರಿಯರು ಹರುಷದಿ 3ಹದಿನಾರು ಸಾವಿರ ಚದುರೆಯರುಹರುಷದಿ ಅದ್ಬುತವಾಗಿಬೆಳಗೋಹಸೆ ಮೇಲೆಅದ್ಬುತ ಬೆಳಗೊ ಹಸೆಮೇಲೆಮುದದಿ ಪಾಂಡವರ ಕರೆದರು 4ವೀರ ರಾಮೇಶನ ತಂಗಿಯರುಪೋರಬುದ್ಧಿಯಬಿಟ್ಟುನಾರಿಯರು ಬನ್ನಿರಿಹಸೆಮ್ಯಾಲೆಹಸೆಮ್ಯಾಲೆ ಹರುಷದಿನೂರು ನಾರಿಯರು ಕರೆದರು 5
--------------
ಗಲಗಲಿಅವ್ವನವರು
ಬಾರೊ ಬಾರೊ ಕೃಷ್ಣಬಾರೊ ಬಾರಯ್ಯಚಾರುನವರತ್ನದ ಹಸೆಯ ಏರು ಬಾರಯ್ಯಪ.ನಾರುವ ಮೈಯವನೆ ನೀರು ಬಿಟ್ಟು ಬಾರಯ್ಯಭಾರಹೊರೆಸೋದಿಲ್ಲ ಹಸೆಯ ಏರು ಬಾರಯ್ಯಕ್ವಾರಿ ಮಸೆದು ಕೋಪಿಸಬ್ಯಾಡದಾರಿಗಾಲ ಪರಿಯಬ್ಯಾಡಭಾರಕೊಡಲಿ ಧರಿಸಿ ನೀನು ಭೋರಾಡ ಬ್ಯಾಡ1ಮಡದಿಯ ಹಂಬಲದಿ ಅಡವಿ ಹಿಡಿಯ ಬ್ಯಾಡಯ್ಯತುಡುಗತನದಿ ಹಾಲು ಮೊಸರು ಕುಡಿಯ ಬ್ಯಾಡಯ್ಯಒಡವೆ ವಸ್ತ್ರ ಕಾಣೆ ನಿನಗೆ ಹಿಡಿದೇಜಿಎಲ್ಲವೂ ಕೃಷ್ಣಬಡಿವಾರಸಾಕೊನಿನ್ನ ಸಡಗರ ರಂಗಯ್ಯ 2ಅರ್ಥಿಲೆ ಪುರುಷ ರಾಮೇಶ ಮತ್ತೆ ಬಾರಯ್ಯಜಾರವೃತ್ತಿಗಳ ಜರೆದು ಹಸೆಯ ಹತ್ತ ಬಾರಯ್ಯಮಿತ್ರಿ ರುಕ್ಮಿಣಿ ಸತ್ಯಭಾವೆಯರುಮತ್ತೆ ಉಳಿದ ನಾರಿಯರು ಅತ್ಯಂತ ಶೋಭಿಸುತಲೆಮುತ್ತಿನ ಹಸೆಯ ಏರು ಬಾರಯ್ಯ ಕೃಷ್ಣ ಬಾರೊ ಬಾರೊ 3
--------------
ಗಲಗಲಿಅವ್ವನವರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊಪಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು