ಒಟ್ಟು 104 ಕಡೆಗಳಲ್ಲಿ , 49 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣ ಗುರು ಜಯ ವಿಠಲ ಕಾಪಾಡು ಇವಳ ಪ ಪ್ರಣತಾರ್ತಿ ಹರನೆಂದು ಭಿನ್ನವಿಪೆ ಸತತಾ ಅ.ಪ. ಪತಿವ್ರತಾಮಣಿ ಎನಿಸಿ ಪತಿಸೇವೆಯೊಳುನಿರತೆಸತತ ಸದ್ಭಕ್ತಿ ಶ್ರೀ ಹರಿಗುರುಗಳಲ್ಲೀ |ಅತಿಶಯದಿ ಮಾಡುತಲಿ ವಿಹಿತವನು ತೊರೆಯದಲೆಕೃತಕಾರ್ಯಳಾಗಿಹಳ ಸತಿಯ ಸಲಹುವುದೂ 1 ತೈಜಸ ದಯಾಪಯೋನಿಧಿ ಹರಿಯೆಆ ಪರಿಮಳಾರ್ಯ ಯತಿರೂಪವನೆ ಕೊಂಡುಕೈ ಪಿಡಿದು ಕಾಯ್ವೆನೆಂಬಭಯ ಹಸ್ತವ ತೋರಿರೂಪವನು ಮರೆಮಾಡ್ಡೆ ಬೃಂದಾವನಾಂತ 2 ಮೋಚಕೇಚ್ಛೆಯೊಳ್ಸವ್ಯ ಸಾಚಿಗೇ ಅತಿಪ್ರೀಯಖೇಚರೋತ್ತಮ ಪ್ರಾಣಗೊಪ್ಪಿಸುತ ಇವಳಾನೀಚೋಚ್ಚತರತಮ ಜ್ಞಾನ ಸ್ಥಿರಪಡಿಸುತ್ತಪ್ರಾಚೀನ ದುಷ್ಕರ್ಮ ಪರಿಹರಿಸೊ ಹರಿಯೇ 3 ಪ್ರಣತಜನ ಪರಿಪಾಲಎನುತ ಭಿನ್ನೈಸುವೆನೊ ವೇಣುಗೋಪಾಲ 4 ಬದಿಗ ನೀನಾಗಿರಲು ಭಯವೇನೊ ಬುಧವಂದ್ಯವದಗಿ ಹೃದ್ಗುಹದೊಳಗೆ ತೋರಿತವ ರೂಪಮುದದಿಂದ ಕಳೆ ಇವಳನಾದಿ ರೋಗವನೆಂಬೆಇದನೇವೆ ಸಲಿಸೊ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಬಂಟ ಪ ಕನಕಕಶಿಪು ತನಯ ತನ್ನ ಜನಕನ ಹಿಂಸೆ ತಡೆಯದೆಲೆ ದನುಜಹರನೆ ರಕ್ಷಿಸೆನಲು ಕ್ಷಣದಿ ಬಂದು ಸಲಹಿದೈಯ್ಯಾ 1 ನಾರಿ ದ್ರುಪದನಂದನೆಯಳ ಸೀರೆ ಖಳನು ಸೆಳೆಯುತಿರಲು ವಾರಿಜಾಕ್ಷ ನಿನ್ನ ಸ್ಮರಿಸೆ ಯಾರು ಅರಿಯದಂತೆ ಬಂದೆ 2 ದಾಸಜನರ ಸಕಲ ಪಾಪ- ರಾಸಿಗಳನು ದಹಿಸೆ ಪೊರೆವೆ ಶ್ರೀಶ ನಿನ್ನ ಭಜಿಸಿದರೆ ರಂ- ಗೇಶವಿಠಲರೇಯ ನೀನು 3
--------------
ರಂಗೇಶವಿಠಲದಾಸರು
ಬಂದನೇಳೆ ದೇವಿ ರಂಗ ಮನೆಗೇ| ಇಂದು ಮುಖಿ ನಿನ್ನ ಮನದಾ ನಂದ ಕೊಡಲು ಪ ಭಾಗವತ ರೊಡಗೂಡಿ| ಭಕ್ತಿರಂಗದೊಳಾಡಿ ಸುಖವ ಸೂರ್ಯಾಡಿ 1 ಗರುಡವಾಹನ ಪರಾಕೆಂಬ ಶೃತಿ ಭಟರು| ಮೂರಾರು ಸಾಲ ಪಂಜಿನ ಬೆಳಗಿನಿಂದ 2 ಸಕಲ ಸುಂದರ ರಾಶಿಯೆ ಎನಿಪ ಮೋಹನರೂಪ| ಅಕಳಂತಕ ಬ್ರಹ್ಮಾದಿ ಸುರರೊಡೆಯಾ 3 ದುರಿತ ಹರನೆಂಬ| ಬಿರದ ಜಾಂಗಟೆ ಶಂಖ ಕೌಸಾಳರವದಿ 4 ತನ್ನ ಭೃತ್ಯರ, ಭೃತ ಭೃತ್ಯನ ಕರೆದು| ಮನ್ನಿಸುವ ಮಹಿಪತಿ ಸುತಪ್ರಾಣ ಪದಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಲ್ಲವರೆ ಬಲ್ಲರು ಎಲ್ಲವರು ಅರಿಯರುಪುಲ್ಲಲೋಚನ ಪರಬ್ರಹ್ಮನೆಂಬುದನು ಪ ಅಜಜ್ಞಾನಾಧಿಕ ಬಲ್ಲ ಅನ್ನಲಸ್ನೇಹಿತ ಬಲ್ಲಗಜ ಚರ್ಮಾಂಬರ ಬಲ್ಲ ಗರುಡ ಬಲ್ಲಭುಜಗೇಶ್ವರ ಬಲ್ಲ ಭೂರಿಲೋಚನ ಬಲ್ಲತ್ರಿಜಗದಧಿಪತಿ ತ್ರಿವಿಕ್ರಮನೆಂಬುದನು1 ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲಮಕರಕುಂಡಲಧರ ಪರಾತ್ಪರನೆಂಬುದನು 2 ಚಕ್ರಧರ ಕರ್ಮಹರನೆಂಬುದನು 3 ವಿದೇಹ ಬಲ್ಲಶಶಿಮಿತ್ರನೇತ್ರ ಸರ್ವೋತ್ತಮನೆಂಬುದನು 4 ವಾಗಿನಿಂದಕ್ರೂರ ಬಲ್ಲ ವಚನಿ ಶೌನಕ ಬಲ್ಲಯೋಗಿ ಕಪಿಲ ಬಲ್ಲ ಭೃಗು ಬಲ್ಲನುತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲಕಾಗಿನೆಲೆಯಾದಿಕೇಶವ ಕೈವಲ್ಯನೆಂಬುದನು 5
--------------
ಕನಕದಾಸ
ಬಾರಯ್ಯ ಎನ್ನ ಮನ ಮಂದಿರಕೆ ಪ ಬೇರೊಂದು ಯೋಚನೆ ಮಾಡದೆ ಸಿರಿಪತಿಅ.ಪ ಸೋನೆ ಸೊರಗುವುದೆವಾರ ವಾರಕೆ ಮೇಘವಾರಿಯ ಕರೆದರೆಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ1 ತಾಮಸ ಬುದ್ಧಿಯೆಂಬಿಯ ನಿನ್ನಶ್ರೀಮೂರ್ತಿ ಹೊಳೆದರೆ ತಮವಡಗದೆಶ್ರೀ ಮನೋಹರನೆ ಭಾನು ಉದಿಸಿದರೆತಾಮಸವಡಗದೆ ಜಗದೊಳು ಕೃಷ್ಣ 2 ನಾ ದೋಷಿ ಕಠಿಣನೆಂತೆಂಬೆಯ ನಿನ್ನಪಾದಪದುಮ ಪಾಪಹರವಲ್ಲವೆಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳುನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ 3
--------------
ವ್ಯಾಸರಾಯರು
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡುಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನು 1 ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ2 ಆಪವಿರಲು ಚಂದ್ರನು ಬಂದ ತೆರನಂತೆಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿಉಪಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ3
--------------
ಚಿದಾನಂದ ಅವಧೂತರು
ಬ್ರಹ್ಮದೇವರು ಪರಮೇಷ್ಠಿ ನಿನ್ನನಾ ಸ್ಮರಿಸುವೆನನುದಿನ ಕರುಣದಿಂದ ಅಭಯವಿತ್ತು ಕಾಯೊ ಎಂದೆ ನಾ ಪ ಸೃಷ್ಟಿ ಕರ್ತನೆ ಜಗಕೆ ವಸಿಷ್ಠನಯ್ಯನೆ ಶ್ರೇಷ್ಠ ಮದ್ಯಮಾಧಮರಿಗಭೀಷ್ಟ ಕೊಡುವನೆ 1 ಹಿರಣ್ಯಗರ್ಭನೆ ಸುರಾಸುರೇಶನೆ ಸರಸ್ವತಿ ಮನೋಹರನೆ ದಯಾ ಸಮುದ್ರನೆ 2 ಗುರುರಾಮವಿಠಲನಾ ನೆರೆ ನಂಬಿದವರನಾ ಪರಮ ಸುಖದೊಳಿಟ್ಟು ಮುಕ್ತಿ ಪಥವ ತೋರ್ಪನಾ 3
--------------
ಗುರುರಾಮವಿಠಲ
ಭಕ್ತನಲ್ಲವೇ ನಾನು ಹರಿ ಪ ಭಕ್ತನಾದ ಬಳಿಕ ವಿಷಯಸಕ್ತನಾಗೋದುಚಿತವೇ ಅ.ಪ. ಶಕ್ತಿಹೀನನಾದ ಮನವು ಬಯಸುತಿಪ್ಪ ಬಯಕೆ ಪೂರೈಸು ಗುರುವೇ 1 ಪರ ಕಾಮಿನಿಯಳ ನೆನೆವೆ ಕೇಳೋಬಿನ್ನಪ ಕಾಮಹರನೆ 2 ರಾಮನಾಮ ಸುಖದ ಸವಿಯು ಮರೆತೆನೊ ಶಾಮಕಂಧರ ತಂದೆವರದಗೋಪಾಲವಿಠ್ಠಲನಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಭಕ್ತವತ್ಸಲ ಭವಭಯ ಹರನೆ ಭಕ್ತಿ ಮುಕ್ತಿದ ಪರಿಪಾಲಿಸು ಧೀರನೆ ಪ. ಪ್ರತಿದಿನ ಉದಯಾರಂಭಿಸಿ ನಾ ಮಾಡುವ ಪಾಪ ತತಿಗಳನೆಲ್ಲವ ಭಸಿತಗೈಸಿ ಪತಿತಪಾವನ ಪರಮಾತ್ಮನ ರೂಪ ಶ್ರೀ- ಪಾದ ಸಂಸ್ಮøತಿಯಿತ್ತು ಕರುಣಿಸು 1 ವರದೇಶ ನಿನ್ನಯ ಚರಣಾರವಿಂದವ ಶರಣೆಂದು ನಂಬಿದ ನರರಿಗಿನ್ನು ಪುರುಷಾರ್ಥಗಳ ಸೇರಿ ಬರುವರಾಶ್ಚರಿಯವೆ ಕರಿರಾಜಗೊಲಿದ ಶ್ರೀಕರಮೂರ್ತಿ ದಯವಾಗು 2 ಘೋರ ಸಂಸೃತಿ ಪಾರಾವಾರ ದಾಟಿಸಲು ಬೇರಾರಿಲ್ಲ ನಿಜ ದಾಸೋದ್ಧಾರ ಹರೆ ವಾರಿಜಾಂಬಕ ವೆಂಕಟಾಚಲನಾಯಕ ಗಾರುಮಾಡದೆ ಬೇಗ ಬಾರೋ ಹೃತ್ಕಮಲದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭವ ಹರಣ ನತ ಶರಣ ಪ ಲೀಲಾ ವಿನೋದದಲಿ ಮೂಜಗವ ಸೃಜಿಸಿ ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ ಕಾಲಕಾಲಾರ್ಚಿತನೆ ಕಲುಷಹರನೆಂದು ನೀಲಾಹಿವೇಣಿಯರು ನಿನ್ನ ತೂಗುವರು 1 ಶೇಷ ಪರಿಯಂಕದಲಿ ಶ್ರೀ ಸಮೇತದಲಿ ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ ಭಾಷಾಪತಿಯ ಪಡದೆ ನಾಭಿ ಕಮಲದಲಿ ಪೋಷಿಸುವೆ ಜೀವರನು ಸರ್ವಕಾಲದಲಿ 2 ಶ್ರೀರಾಮ ಮಾಧವಾಶ್ರಿತಜನೋದ್ಧಾರಾ ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ 3
--------------
ಗುರುರಾಮವಿಠಲ
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ವೈರಿ ಉರಿಮಾರಿ ಪ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ 1 ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2 ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3 ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4 ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ 5
--------------
ವಿಜಯದಾಸ
ಭೂತರಾಜರು ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ. ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ. ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ 1 ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ 2 ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ 3
--------------
ಸಿರಿಗುರುತಂದೆವರದವಿಠಲರು
ಮಂದಿರವೆಲ್ಲೆ ಹೇ ಲಲನೆ ಬಂಧನವೆಲ್ಲೆ ಪ ಅಂದು ಬಯಸಿದೆ ಇಂದು ಬಂದು ಪೇಳಿದಾ 1 ಸೃಷ್ಟಿಗೊಡೆಯಾ ಶಿಷ್ಟವಿಜಯಾ ನಿಷ್ಠೆಯನ್ನೇ ಪೂರೈಸಿ ಕಷ್ಟಹರನೆಂಬ ಬಿರುದನು ಆಂತು ಶ್ರೇಷ್ಠ ದೂತನ ಕಳುಹಿಕೊಟ್ಟನು 2 ಜ್ಞಾನ ಬುದ್ಧಿಯನಿತ್ತು ಶ್ರೀ ಪವಮಾನಪಿತ ನರಸಿಂಹವಿಠಲನು ಕೊಟ್ಟು ಸಲಹುವಾ 3
--------------
ನರಸಿಂಹವಿಠಲರು
ಮನಕಧೀಶನೆನಿಪ ಗುರುವರಾ | ನಿನ್ನ ಪಾದನೆನೆವೆ ಕಳೆಯೊ ಮಲಿನ ಸತ್ವರಾ ಪ ಅನಿಲ ಸುತನು ಎನಿಸಿ ನೀನು | ಅನಿಲ ನೆನಿಸಿ ಪಾಪತೂಲಘನ ಸುಮೇರುವನ್ನೇ ದಹಿಸೊ | ಅನಲ ಈಕ್ಷಣಾನೆ ಶಿವನೆ ಅ.ಪ. ಅನುದಿನ ಪಾದ | ವನಜ ಭಜಿಪ ಶರಣರೀಗೆತೃಣವು ತೆರನು ಪಾಪ ನಿ5iÀು | ಎಣಿಸಿ ಪೊರೆವುದುಚಿತ5É್ಲ 1 ಗೌರಿಧವನೆ ವಿಷಯ ಮೋಹನ | ಕಳೆದು ವೇಗಸೂರಿ ಜನರ ಸಂಗ ಮಾಡುವ ||ಸಾರ ಮನವವಿತ್ತು ಸಲಹೊ | ಕ್ರೂರಿ ಜನರ ದೂರಮಾಡೊಘೋರಾಘೋರ ರೂಪಿ ಹರನೆ | ಮಾರಪಿತನ ಸಖನೆ ರುದ್ರ 2 ಶುಕ ವಿಭೂತಿ 3
--------------
ಗುರುಗೋವಿಂದವಿಠಲರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ