ಒಟ್ಟು 409 ಕಡೆಗಳಲ್ಲಿ , 67 ದಾಸರು , 367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಯ್ಯಾ ಎನ್ನಾ ಪ ಸರಸೀರುಹ ಶತಕಿರಣಾ | ಅರುಣಾಂಬುಜಾಲಯ ರಮಣಾ | ಅರುಣಾನುಜ ಗಮನಾ | ಅರಿದಮನಾ 1 ಕಿನ್ನರ ಸುತ ಚರಣಾ | ಶರಣಾಗತ ಜನಭಯ ಹರಣಾ | ಅರುಣಾದ್ರಿ ನಿಲಯ ಸಖಚಿದ ನಾ 2 ಗುರು ಮಹಿಪತಿ ಸುತ ಪ್ರಭು ಕರುಣಾ | ಹರಿಣಾಂಕ ಕುಲವರ ರನ್ನಾ | ಧರಣಿ ಧರಧರ ದೀನೋದ್ಧರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯಾ ನೀ ಎನ್ನ ರನ್ನಾ | ದಯದಲಿ ಸಂಪನ್ನಾ ಪ ಮಂದರಧರ ದಶಕಂದರ ಹರಿ ಅತಿ- | ಸುಂದರ ಸದ್ಗುಣ ಮಂದಿರ ಈಶಾ | ಕುಂದರದನ ಕಂಬುಕಂದರ ಐದೊಂದು | ಕಂದರ ಪಿತ ಸಖ ಇಂದಿರೆಯರಸಾ 1 ತುಂಗ ವಿಕ್ರಮ ದನುಜಾಂತ ಮದಗಜಕ | ಹರಣ ರಂಗ ನಿಸ್ಸೀಮಾ | ಇಂಗಿತಜನ ಭವಭಂಗ ಕಮಲದಳ | ಕಂಗಳಲೊಪ್ಪುವ ಮಂಗಳ ಮಹಿಮಾ 2 ಅಂಬುಜ ಭವನುತ ಅಂಬುಧಿಜಾನನ | ಅಂಬುಜ ಸುಚಕೋರಾಂಬುಜ ಚರಣ | ಅಂಬುಧಿವಾಸ ವಿಶ್ವಂಭರ ಮಹಿಪತಿ- | ನಂಬಿದ್ದವರಿಗಿಂಬಾಗಿಹೆ ಕೃಷ್ಣಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ ಶರಣರ ದುರಿತಪಹರಣ ಸುಪಾವನ | ಚರಣನೆ ಕೌಸ್ತುಭಾಭರಣ ಹೇಮಾಂಬರಾ | ತರಣಿ ಶತ | ಕಿರಣ ವಿರಾಜಿತ ಕರುಣಾ ಸಿಂಧೋ 1 ವಾರಣಭಯ ನಿವಾರಣ ಸುರಜನ | ತಾರಣ ದೈತ್ಯ ವಿದಾರಣ ಸೃಷ್ಟಿಯೆ | ಕಾರಣ ಚಿತ್ಸುಖ ಪೂರಣ ಮುನಿಜನ | ಪ್ರೇರಣ ಫಣಿಮದ ಹಾರಣ ಧೀರಾ2 ಚಕೋರ ಸು | ಚಂದಿರ ಸ್ಮರಚಿತ ಸುಂದರ ಸದ್ಗುಣ | ಮಂದಿರ ವಿಧಿಹರ ವಂದ್ಯ ಮುಕಂದನೇ | ತಂದೆ ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು ನ್ಯಾಯವೇ ಪೇಳು ಪ. ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ ನೀ ತಿಳಿಯೇಯ ಖಗಕೇತನ ಶುಭದಾ 1 ಮಧುಮಯ ಮೃದುಭಾಷಾ ಮಧುಹರ ಮಧುಕರ ಮುಖಭೂಷಾ ಅಧರೀಕೃತ ತೋಷಾ ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ- ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ 2 ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ ನೂಪುರ ಕಿಂಕಿಣಿಕ್ವಣಿತ ಚರಣ ಲ- ಕ್ಷ್ಮೀ ಪರಿರಂಭಿತ ಪರಮಾನಂದದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾವದು ಎನ್ನನುದಿನಾ ರಂಗಾ| ಕಾವದು ಕಾವದು ಎನ್ನನುದಿನಾ | ಭಾವಿಕ ಜನರ ನಿಧಾನಾ ಪ ಜಲದಲಿ ಕರಿಯಾ ಪಿಡಿದ ಮಕರಿಯಾ | ಸೀಳಿದ ಯಾದವರಾಯಾ | ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ | ಕುಲ ಅರಿನಂದನ ಪ್ರೀಯಾ 1 ರಮಣನೆ ಸಿರಿಯಾ ಲಲನೆಗೆ ಸೀರಿಯಾ | ಸಮಯಕ ನಿತ್ತ ಅನೇಕ | ಕಮನೀಯ ಕಾಯಾ ದೇವ ನೀ ಕಾಯಾ | ಜನಕನೇ ವ್ಯಾಪ್ತ ತ್ರಿಲೋಕಾ 2 ಸರಸಿಜನಯನಾ ಸಾಸಿರ ನಯನಾ | ಸೋದರ ದೇವ ದೇವೇಶಾ | ವರಸದ್ವದನಾ ಈ ರೆರಡೊದ ನಾ | ವಂದಿತ ಚರಣಾ ಶ್ರೀಯೀಶಾ3 ಭಕುತರಬಂಧು ಕೈರವ ಬಂಧು ಶೇಖರಧೇಯ ಮುಕುಂದಾ | ಸಕಲಾಧಾರಾ ದಿನೊದ್ಧಾರಾ | ದೇವಕಿ ದೇವಿಯ ಕಂದಾ4 ಸುಜನರ ಪಕ್ಷಾ ಕುಜನ ವಿಪಕ್ಷಾ | ಶ್ರೀ ವತ್ಸಾಂಕಿತ ದೇವಾ | ಗಜವರ ವರದಾ ಯದುಕುಲ ವರದಾ | ನವಮರ್ಧನ ಜಗಜೀವಾ5 ಕಾಳಿಯ ಸರ್ಪಾ ಮದಹರ ಸರ್ಪಾ| ಶನವಾಹನ ಗೋವಿಂದಾ | ಶ್ರೀ ಲಲನೀಯಾ ಸದ್ಭಾವನೀಯಾ | ಪೂರಿತ ಪರಮಾನಂದಾ6 ಸಿಂಧು ಸಿಂಧು | ವಿಗಾಗಿಹೆ ಕುಂಭಜ ನೀನು | ಹರಣ ರಂಗಾ | ಧೀರನೇ ಭಜಕರ ಧೇನು7 ನವನೀತ ಚೋರಾ ನಿಗಮದ ಚೋರಾಂ | ತಕ ಗೋಕುಲ ವಿಹಾರಾ | ಭವ ಪರಿಹಾರಾ ಕೌಸ್ತುಭಧಾರಾ | ಮಹಿಪತಿಸುತ ಮನೋಹಾರಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೌಸಲ್ಯಾ ಸುಕುಮಾರ ಭಾಸಿತ ಕೋದಂಡಧರ ವಾಸವನುತ ರಣಧೀರ ಭೂಮಿಸುತಾ ಮೋಹಕ 1 ಮುನಿಕೌಶಿಕ ಮಖಪಾಲನ | ಜನಕಸುತಾ ಮನಮೋಹನ ಭವ ಖಂಡನ ಘನದಾನವ ಸತಿಭಂಜನ 2 ಭರತಾರ್ಚಿತ ವರಚರಣ | ಖರದೂಷಣ ಸಂಹರಣ ಮರುತಾತ್ಮಜ ಮಣಿಭೂಷಣ | ಶರಣಾಗತ ಮನತೋಷಣ3 ಲಂಕಾಧಿಪಕುಲನಾಶಕ | ಕಿಂಕರವಾನರಪೋಷಕ ಪಂಕೇರುಹ ಲೋಚನಾಕಳಂಕ [ಶಮನ] ಮಾಂಗಿರಿ ನಾಯಕ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೌಸಲ್ಯಾಗರ್ಭಾಬ್ಧಿಸೋಮಾ ಸ್ವಾ'ು ಕೌಶಿಕ ಮಖಪಾಲ ರಾಮ ಪಆಶಯೇಶಯ ಜನಕ ಪಾಪ'ನಾಶ ತಾಪಸಹೃದಯ ಕಮಲಾವಾಸ ಭದ್ರ ಗರೀಶ ರಘುಕುಲಭೂಷ ದಶ'ಧ ವೇಷಧಾರಿ 1ತೃತಿಯರಾಮಕೋಟಿ ಕೂಡು ಭಕ್ತತತಿಗೆ ಲಭಿಸುವಂತೆಮಾಡುಪತಿತಪಾವನ ಪದ್ಮನಯನ ಶತಧೃತಿ ಶಿವಸೇವ್ಯಚರಣಾಸತತವೂ ತವಸೇವೆಗೆ ಮನ 'ತವತೋರಿಸಿ ಸಲಹೋ ಶೌರಿ 2ಭರತಪೂರ್ವಜ ದೀನಪ್ರೇಮಾ ದನುಜಹರಣಧುರೀಣ ನಿಸ್ಸೀಮಕರಿಧ್ರುವ ಪ್ರಹ್ಲಾದ ಶಬರೀ ನರಸತಿಪರಮಾರ್ಥದಾಯಕನಿರುಪಮಾನದ ರಾಮಕೋಟಿಯಾಚರಣ ಕೀರ್ತಿಯ ನಿಲಿಸು ಧೊರೆಯೆ 3ಧಾರುಣೀ ಚನ್ನಪಟ್ಣೇಶಾ ಲಕ್ಷ್ಮೀನಾರಾಯಣ ಕಾಯೊ ಶ್ರೀಶಾಮಾರಸುಂದರ ರಾಮನಾಮವ ಹಾರವಾಯಾಗಿ ಸಮರ್ಪಿಸಿದೆವುಕೋರಿಕೆ ಸಪ್ತೋತ್ಸವಂಗಳು ಪೂರ್ತಿಮಾಡುವರೆಂದು ನಂಬಿದೆ 4ಗುರುತುಲಸೀರಾಮಸ್ವರೂಪ ನಿಮ್ಮಕರುಣದಿಂದಲಿಸಾರಿಭೂಪಾಜರುಗಿಸಿದಿರೀ ಜಪಾಧ್ವರವನು ಮುರಹರೀಮದ್ದುರಿತ ಹರಣನೆನಿರತಭಕ್ತಿಯ ಕೊಟ್ಟು ಪ್ರಜಗಳುನುದ್ಧರಿಸುವ ಕರ್ತವ್ಯ ನಿನದೇ 5ಭೂ'ುಜನರ ಗರುಡುತುರಗಾ ರಂಗಸ್ವಾ'ುದಾಸೊಲ್ಲಾಸಾ ಈಗಪ್ರೇಮ ತೋರಿಸಬೇಕು ಬೇಡುವೆ ಕಾ'ುತಾರ್ಥದ ಕಲ್ಪಭೂಜಸೋಮಜಿತಮುಖ ಸಕಲ ಸುಗುಣಸ್ತೋಮ ತುಲಸೀದಾಮ ಧರಣಾ * 6* 20-8-1933 ಎಂದು ದಿನಾಂಕ ಇದೆ.(ಈ) ರಂಗಸ್ವಾ'ುದಾಸರನ್ನು ಕುರಿತ ಕೆಲವು ಕೃತಿಗಳು
--------------
ಮಳಿಗೆ ರಂಗಸ್ವಾಮಿದಾಸರು
ಕ್ಷಮಿಸೆನ್ನ ದೋಷಗಳ ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾನಿವಾಸನೆ ಅ.ಪ ಕರಣತ್ರಯದಿಕಾಲಹರಣವಿಲ್ಲದೆ ಪಾಪಾ ಚರಣೆಯಿಂ ದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನಸ ಮೂಢನ ಸುಕೃತವನಾಡಿ ತೋರಿಸಲೇಕೆ 2 ಹರಿಗುರುಹಿರಿಯರ ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ3 ಸರ್ವಸಹಾಧಿಪ ಸರ್ವಚೇತನದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತವೈರಿಯೆ ನಿನ್ನ ಮರೆಹೊಕ್ಕ ಮನುಜಗೆ ದುರಿತ ದುಃಖಗಳುಂಟೆ ವರದವಿಠಲರಾಯ 5
--------------
ವೆಂಕಟವರದಾರ್ಯರು
ಕ್ಷಮಿಸೆನ್ನ ದೋಷಗಳ-ಕ್ಷಿಪ್ರದಿ ಹರಿ ಪ ಕ್ಷಮೆಯನ್ನು ಧರಿಸಿದ ಕಮಲಾ ನಿವಾಸನೆ ಅ.ಪ. ಕರಣ ತ್ರಯದಿ ಕಾಲ-ಹರಣವಿಲ್ಲದೆ ಪಾಪಾ ಚರಣೆಯಿಂದೋಷದ ಭರಣಿಯಾದೆನು ಹರಿ 1 ಮಾಡಬಾರದ ಪಾಪ ಮಾಡುವೆನನುದಿನ ಮೂಢನ ಸುಕೃತವ ನಾಡಿ ತೋರಿಸಲೇಕೆ 2 ಹರಿಗುರುಹಿರಿಯರ-ಜರಿದು ಸಜ್ಜನರನು ತೊರೆದು ದುರ್ಜನರೊಳು ಬೆರೆದು ಪಾಮರನಾದೆ 3 ಸರ್ವಂಸಹಾಧಿಪ ಸರ್ವಚೇತನ ದೀಪ ಸರ್ವಾಪರಾಧವ ನಿರ್ವಹಿಸುವ ಭೂಪ 4 ದುರಿತ ವೈರಿಯೆ ನಿನ್ನ-ಮೊರೆಹೊಕ್ಕಮನುಜಗೆ ದುರಿತದುಃಖಗಳುಂಟೆ-ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ಕ್ಷಿತಿಭಾರ ಹರಣನೇ ಶ್ರೀಜಾನಕೀ ಪತಿಯೇ |ಶಿತಿಕಂಠ ಸಖ ಹರಿಯೇ ಪ ಅತಿ ವಿಮಲನಂತಾರ್ಕ ನಿಭ ಪದಾಗತಿ ವಹನೆ ಪೊರೆ ಶ್ರೀರಾಮಚಂದ್ರಾನೇ ಅ.ಪ. ಪರಮ ಮಂಗಳ ನಾಮ | ಪರಿಹರಿಸಿ ಸಂಸೃತಿಯನಿರುತ ಮಹದಾನಂದ | ಪ್ರದವೆನಿಪುದೋ ||ಮರುತಾಂತರಾತ್ಮ ತವ | ನಾಮ ಸುಧೆ ಸುಖ ಸವಿದುಇರುವಂತೆ ಮಾಡಯ್ಯ | ಕರುಣ ನಿಧಿಯೇ 1 ಕಮಲ ಸಂಭವನಯ್ಯ | ಸುಮನಸರಿಗತಿ ಪ್ರೀಯಕಮಲದಳ ನೇತ್ರನೇ | ಕಾಮಿತ ಪ್ರದನೇ ||ಭ್ರಮ ಮೂರ ಪರಿಹರಿಸೊ | ಕಮಲಾಪ್ತ ಕುಲಜನೇಶಮದಮಾನ್ವಿತನೆನಿಸಿ | ವಿಮಲ ಮತಿ ಈಯೋ 2 ದಶಕಂಠ ಹರ ನಿನ್ನ | ಯಶವನ್ನೆ ಪೊಗಳಲುಶೇಷ ವಿಪ ರುದ್ರಾದಿ | ಗಸದಳವು ಇಹುದೂ |ಕಸರು ಕರ್ಮಾದಿಗಳ | ಕೆಸರು ಕಳೆ ಪ್ರಾರ್ಥಿಸುವೆಅಸಮ ಮಹಿಮನೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಕ್ಷೇತ್ರ ಮೇಲುಕೋಟೆ ಹರಿಯ ಕಂಡೆನು ಗಿರಿಯದೊರೆಯ ಕಂಡೆನು ಪ. ತರಳನನ್ನು ಪೊರೆಯಲೋಸುಗ ನರಮೃಗಾವತಾರನಾದಅ.ಪ. ತಿರುನಾರಾಯಣಪುರದ ಗಿರಿಯ ಶಿಖರದಿ ಚರಣತಲದಿ ತಿರುಕಲ್ಯಾಣಿ ಮೆರೆಯುತಿರಲು ಹರುಷದಿಂದ ಹರಿಯ 1 ದಾಸರಾದರ ಹೃದಯಾ ವಾಸನೆನಿಸುವ ವಿನುತ ಚರಣ ಭಾಸುರಾಂಗ ದೋಷಹರಣ ಹರಿಯ 2 ನಾಗವೈರಿಯ ರೂಪನಾಗೆ ಮೆರೆಯುವ ಯೋಗಪಟ್ಟಿಯಾಂತು ಪರಮ ಯೋಗನಿಷ್ಟೆಯಲ್ಲಿ ಕುಳಿತ ಹರಿಯ 3 ದುಷ್ಟದೈತ್ಯರಂ ಕುಟ್ಟಿ ಕೆಡಹಿದ ಮುಟ್ಟಿಭಜಿಪ ಭಕ್ತರೆಲ್ಲರ ಕಷ್ಟಕಳೆದು ಇಷ್ಟವೀವ ಹರಿಯ 4 ಶೇಷಗಿರಿಯೊಳು ಮತ್ತಾ ಮೇಲುಕೋಟೆಯೊಳ್ ಶೇಷಭೂತರಾಶೇಷ ಭಕ್ತರ ಪೋಷಿಸುತ್ತಿಹ ಸರ್ವೇಶನೀತನೆ ಹರಿಯ 5
--------------
ನಂಜನಗೂಡು ತಿರುಮಲಾಂಬಾ
ಗಜಾನನಾ ಗಜಾನನಾ ಸ್ವಾಮಿ ನಿನ್ನವನಾ ಪಾರ್ವತಿ ನಂದನಪೂರ್ವ ಚರಿತ ಘನ ನಿರ್ವಿಘ್ನ ದಾಯಕ ಗಜಾನನಾ ಮೂಷಕವಾಹನ ದೋಷಕರಿಪುಕುಲ ನಾಶಿಕ ವಿಗ್ರಹಗಜಾನನಾ ಮದನಾರಿ ಮನೋಭವ ರದಸಾಮಲೇಕದಂತದಯ ಸದನಾ ಲಂಬೊದರ ಗಜಾನನಾ ಕರುಣಾಪೂರಿತ ಸರ್ವಾ ಭರಣಾ ಭೂಷಿತ ಭಯ ಹರಣಾ ತ್ರಿ ಜಗನುತ ಗಜಾನನಾ ಹೊಂದಿದ ಶರಣರಿಗೆಂದೆಂದು ವಿದ್ಯಗಳ ತಂದಿದಿರಿಡುತಿಹ ಗಜಾನನಾ ತಂದೆ ಮಹಿಪತಿ ನಂದÀನ ಸಾರಥಿ ಇಂದೆನ್ನನುದ್ಧರಿಸು ಗಜಾನನಾ.
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಣಪತಿ ಸುರಚಕ್ರವರ್ತಿ ಪ. ಮಹಧೃತಿ ಯತಿವರಕೃತಸ್ತುತಿ ಅತಿಶಯ ಭಕುತಿರತಿಗೆ ನೀ ಗತಿ ಅ.ಪ. ಪ್ರಾಣನಾಥ ಲಕ್ಷ್ಮೀನಾರಾಯಣ ಧ್ಯಾನೈಕಪರಮೂರ್ತಿ ಪರಾರ್ಥಸ್ಮøತಿ ದೀನಾರ್ತಿನ ಹರಣ ರವಿಶತದ್ಯುತಿ 1
--------------
ತುಪಾಕಿ ವೆಂಕಟರಮಣಾಚಾರ್ಯ
ಗಣಪತಿ ಸುರಚಕ್ರವರ್ತಿ ಪ. ಮಹಧೃತಿ ಯತಿವರಕೃತಸ್ತುತಿ ಅತಿಶಯ ಭಕುತಿರತಿಗೆ ನೀ ಗತಿ ಅ.ಪ. ಪ್ರಾಣನಾಥ ಲಕ್ಷ್ಮೀನಾರಾಯಣ ಧ್ಯಾನೈಕಪರಮೂರ್ತಿ ಪರಾರ್ಥಸ್ಮøತಿ ದೀನಾರ್ತಿನ ಹರಣ ರವಿಶತದ್ಯುತಿ1
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ