ಒಟ್ಟು 85 ಕಡೆಗಳಲ್ಲಿ , 3 ದಾಸರು , 81 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮರಾಮನೇ ಸಾರ್ವಭೌಮ ಪರಮಪುರುಷೋತ್ತಮಾನಂತ ಮಹಿಮ ಧ್ರುವ ಹರ ಹೃದಯ ವಿಶ್ರಾಮ ಸುರಜನರಿಗೆ ಪ್ರೇಮ ಕರುಣ ಸಾಗರ ಸಕಲಾತ್ಮರಾಮ 1 ಸಾರ ಸ್ವಹಿತ ನಾಮ ಖರದೂಷಣಾರಿ ಪೂರಿತ ಕಾಮ 2 ವರದಯದಿ ನಿಸ್ಸೀಮ ಹೊರೆವ ಶರಣರ ನೇಮ ತರಳ ಮಹಿಪತಿ ಸ್ವಾಮಿ ಘನಮಹಿಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೇಯ ಸುಖ ಬೀರುತ ಸದೋದಿತ ಮೂಡಿ ಧ್ರುವ ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1 ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2 ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3 ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲವೆನಗೆ ನೀನೆ ಶ್ರೀಹರಿಯೆ ಧ್ರುವ ತಂದೆತಾಯಿ ಸ್ವಹಿತಾತ್ಮನು ನೀನೆ ಬಂಧು ಬಳಗ ಸರ್ವಾತ್ಮನು ನೀನೆ 1 ದೈವಗುರು ಕುಲಗೋತ್ರನು ನೀನೆ ಕಾವ ಕರುಣ ಸೂತಾಂತ್ರನು ನೀನೆ 2 ದ್ರವ್ಯ ಧನವು ಸಕಲಾಶ್ರಯ ನೀನೆ ದಿವ್ಯಾಲಂಕೃತ ಭೂಷಣ ನೀನೆ 3 ಭಾಸ್ಕರಕೋಟಿ ಸುತೇಜರೂಪನು ನೀನೆ 4 ಮಹಿಪತಿ ಮನೋಹರ ಮೂರ್ತಿಯ ನೀನೆ ಸಾಹ್ಯ ಸಕಲ ಸಾರ್ಥಿಯು ನೀನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ 1 ಕರೆಸುವದಾನಂದ ಹರುಷ ಹರಿಸುವದು ಕಲಿಮಲಕಲುಷ ಪರಿಶೋಷಿಸುವದು ಮಹಾಪಾತಕ ದೋಷ 2 ಸ್ವಹಿತ ಸಾಧನದಸು ಉಪದೇಶ ಬಾಹ್ಯಂತ್ರ ದೋರುವ ಪ್ರಕಾಶ ಮಹಿಪತಿಗಿದೆ ನಿತ್ಯಾನುಭವದುಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ 1 ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ 2 ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ 3 ತುಂಬಿ ತುಳುಕದ ತನಕ 4 ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ 5 ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ 6 ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ7 ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ 8 ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ 9 ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ 10
--------------
ಶಿವರಾಮರು
ಸಜ್ಜನರ ಸಂಗ ಸ್ವಹಿತಕೆ ಸುಖಸನ್ಮತ ಅಮೃತ ಧ್ರುವ ಗಂಗಿಯೊಳು ಮುಳಗಿ ತಾ ಮಿಂದರ್ಹೋಗದು ಪಾಪ ಹಾಂಗೆಂದಿಗಲ್ಲ ಸಜ್ಜನರ ಪ್ರತಾಪ ಕಂಗಳಲಿ ಕಂಡರ್ಹೋಗುವುದು ತಾಪಾಪ ಸಂಗ ಸುಖದಲಿ ಸರ್ವಪುಣ್ಯ ಮೋಪ 1 ಚಂದ್ರ ಶೀತಳದೊಳು ನಿಂದರ್ಹೋಗುದು ತಾಪ ಎಂದೆಂದಿಗ್ಹಾಂಗಲ್ಲ ಸಜ್ಜನ ಸಮೀಪ ಒಂದೆ ಮನದಲಿ ನೆನೆದರ್ಹಿಂಗಿ ಹೋಗುದು ತಾಪ ವಂದಿಸೀದವಾ ಮೂರು ಲೋಕ ತಾಪಾ 2 ಕಲ್ಪತರುವಿಗೆ ಕಲ್ಪಿಸಿದರ್ಹೋಗುದು ದೈನ್ಯ ಒಲಮಿಂದ್ಹಾಗಲ್ಲ ಸದ್ಗುರು ಸುಪುಣ್ಯ ಕಲ್ಪಿಸದೆ ಕುಡುವದಿದು ನೋಡಿ ಘನ ತಾರ್ಕಣ್ಯ ಸಲಹುತೀಹ್ಯ ಮಹಿಪತಿಗಿದೆವೆ ಧನ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ವಿಡಿಯೋ ಮನುಜಾ ಪ ಹರಿಕಥಾ ಶ್ರವಣದಿ ಮನ ಜಡಿಯೋ | ದುರಿತಾಂಕುರ ಕಡಿಯೋ 1 ಘನಗುರುರಾಯನ ಕರುಣವ ಪಡಿಯೋ | ಅನುಭವಾಮೃತ ಕುಡಿಯೋ 2 ಮಹಿಪತಿಸುತ ಪ್ರಭು ನಾಮವ ನುಡಿಯೋ | ಸ್ವಹಿತದಲೀ ನಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಸಂಗದಿಹುದು ನೇಮ ಧ್ರುವ ಸಾಧು ಸಮಾಗಮ ಸಮಾಗಮ ಛೇದಿಸುವದು ಭವಭ್ರಮ 1 ತರಣೋಪಾಯಿದು ಒಂದೆ ಇದು ಒಂದೆ ನಿರ್ಣೈಸದೆ ಮೊದಲಿಂದೆ 2 ಸಾಧನಿದೆ ಸ್ವಹಿತ ಇದೆ ಸ್ವಹಿತ ನವನೀತ 3 ಸರಿ ಈ ಸಾಧನಕಿಲ್ಲ ಸಾಧನಕಿಲ್ಲ ಗುರು ಶರಣಾಗತ ಬಲ್ಲ 4 ಸಾಧನದಿ ಸುವಸ್ತ ಸುವಸ್ತ ಸಾಧಿಸಿತು ಮಹಿಪತಿಗೆ ಸಾಭ್ಯಸ್ತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗವು ಲೇಸು ಸ್ವಹಿತಕೆ ಧ್ರುವ ನೆರಿಲವರನುದಿನ ಬಾಳುದು ಲೇಸು ಸರಸ ಸುಮಾತನೆ ಕೇಳುದು ಲೇಸು 1 ನೋಡಿದವರಾಚರಣೆಯ ಲೇಸು ಮಾಡಿದವರನು ಸರಣಿಯ ಲೇಸು 2 ಮಹಿಪತಿಗಿದೆ ಸುಖದೋರಿತು ಲೇಸು ವಿಹಿತಕ ವಿಹಿತಾಯಿತು ಬಲುಲೇಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವದಾ ಕಾವ ದೈವ ನೀ ಶ್ರೀಹರಿ ಸರ್ವದಾ ಕಾವ ದೈವ ನೀ ಧ್ರುವ ಶರಣಾಗತ ವತ್ಸಲ ಕರುಣಾನಿಧಿ ಅಚಲ 1 ಭಾವಕ ನೀ ಸುಲಭ ಜೀವ ಪ್ರಾಣದೊಲ್ಲಭ 2 ಅನುದಿನ ಸದೋದಿತ 3 ಅನುಕೂಲದ ಸಾಧನಿ ಭಾನುಕೋಟಿ ತೇಜ 4 ಸ್ವಹಿತ ಸುಖದಾಯಕ ಮಹಿಪತಿ ಪ್ರಾಣನಾಯಕ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವರೆಗೆಲ್ಲ್ಯದ ಸ್ವಸುಖ ಧ್ರುವ ಭ್ರಮದೋರುವದೆಲ್ಲ ಅರಿದವಗಾದ ಸಮದೃಷ್ಟಿಯ ನೆಲೆಗೊಂಡವಗಾದ 1 ವಿತ್ತ ವಿಷಯದಾಶಳಿದವಗಾದ ಚಿತ್ತ ಸ್ವಚ್ಛವು ಸ್ಥಿರಗೊಂಡವಗಾದ 2 ಸ್ವಹಿತ ಸಾಧನವು ಸಾಧಿಸಿದವಗಾದ ಮಹಿಪತಿ ಗುರುದಯಪಡೆದವಗಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು