ಒಟ್ಟು 54 ಕಡೆಗಳಲ್ಲಿ , 2 ದಾಸರು , 50 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಧ್ರುವ ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ 1 ಸ್ವಾಮಿ ನಿಮ್ಮ ಖೂನ ನಿಜಸ್ಥಾನ ಸ್ವಾಮಿ ನಿಮ್ಮ ಙÁ್ಞನ ನಿಜಧ್ಯಾನ 2 ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ 3 ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ 4 ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಲರಿಯದು ಜನ್ಮ ಗುರುಪಾದವರಿಯದೆ ಧ್ರುವ ಬಯಲು ಭಾವಿಸಿ ನಿರ್ಬೈಲ ನೆಲೆಗೊಳ್ಳದೆ ಭಾವಭಕ್ತಿಯ ಕೀಲು ಹೊಯಿಲು ತಿಳಿಯದೆ 1 ರವಿ ಶಶಿಯನೊಡಗೊಡಿ ಶಿವಸುಖವ ತಿಳಿಯದೆ ಸೂತ್ರ ಸೋಹ್ಯ ಹೊಳಿಯದೆ 2 ಆಧಾರವಂ ಬಲಿದು ಆರೇರಿ ಬೇರಿಯದೆ ಮಹಿಪತಿ ನಿನ್ನೊಳು ಗುರುಗತಿ ಅರಿಯದೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಸಗೀಡಾಗದಿರು ಮನವೆ ವಿಷಯವಾಸನೆ ಕೂಡ ಧ್ರುವ ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ ನಿತ್ಯವಾಗಿಹದ ಸತ್ಯ ಸುಪಥ ಕೂಡೊ 1 ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ ಮಣ್ಣೆÀಂದರಿಯದೆ ಕಣ್ಣಗೆಟ್ಟಿರಬ್ಯಾಡ 2 ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ ತಿಳಿದು ನೋಡೊ ಶ್ರೀ ಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿಯಬ್ಯಾಡಿ ಮೌನ ಪಡೆದುಕೊಳ್ಳಿ ಖೂನ ಒಡೆದು ಹೇಳುತಾನೆ ನೋಡಿ ಸದ್ಗುರು ನಿಧಾನ 1 ಅಹಂಭಾವಬಿಟ್ಟು ಸೋಹ್ಯ ಕೇಳಿ ಗುಟ್ಟು ದೇಹ ಅಭಿಮಾನ ಸುಟ್ಟು ಜಯಸಿ ರತಿವಿಟ್ಟು 2 ಮಾಡಿ ಗುರುಭಕ್ತಿ ನೋಡಿ ಗತಿಮುಕ್ತಿ ಕೊಡುವ ಮಹಿಪತಿ ಸ್ವಾಮಿ ಸದ್ಗತಿ ಸುಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು