ಒಟ್ಟು 53 ಕಡೆಗಳಲ್ಲಿ , 24 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪವಾಗಭಿಮಾನಿ ವರಬ್ರಹ್ಮಾಣಿಸುಂದರವೇಣಿ ಸುಚರಿತಾಣಿ ಅ.ಪಜಗದೊಳು ನಿಮ್ಮ ಪೊಗಳುವೆನಮ್ಮಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ 1ಪಾಡುವೆ ಶ್ರುತಿಯ ಬೇಡುವೆ ಮತಿಯಪುರಂದರವಿಠಲನ ಸೋದರ ಸೊಸೆಯೆ2
--------------
ಪುರಂದರದಾಸರು
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆಸಂತೆಯವರ ನಂಬಿದರೆ ಕೆಟ್ಟುಹೊಗುವೆ ಕಾಣೆಪತಂದೆತಾಯಿ ನೆವಗಳಿಂದ ಸಂತೆಗೆ ಬಂದೆಬಂದು ಕೂಡಿದನುಗಂಡಜೋಡಾದೆನು ಎಂದೆಬಂದನೀಗ ಮಗೆನೆಂಬುವನು ಸೊಸೆಯು ಆತನ ಹಿಂದೆಬಂಧುಬಳಗ ಬಹಳಾಯಿತು ನೆರೆದುದು ಸಂತೆಯು ಮುಂದೆ1ಸಂತೆ ಮಾಡಿಕೊಂಡು ಗಂಡನೀಗ ತೆರಳಿದನೆಅಂತು ಸಂತೆಯ ಮಾಡಿ ಮಗನೀಗ ಹೋಗಿಹನುಇದಕು ಮೊದಲೇ ಸೊಸೆಯ ಇಹಲೋಕ ಬಿಟ್ಟಿಹಳುಇಂತು ಸಂತೆಯ ಮಾಡಿ ಬಯಲಿಗೆ ಬಿದ್ದೆನೇ2ದಾರಿಕಾರರೆಲ್ಲ ಸರಿದು ಸಂತೆ ಬಯಲಾಗೆಆರಿಗಾರು ಇಲ್ಲವಾಗಿ ನನ್ನ ಬಿಟ್ಟು ಹೋಗೆಧೀರ ಚಿದಾನಂದಗುರುಕೈಯ ಹಿಡಿದ ಬೇಗನೀರೆ ಅಂಜಬೇಡವೆಂದು ಮುಟ್ಟಿಸಿದ ಮನೆಗೆ3
--------------
ಚಿದಾನಂದ ಅವಧೂತರು
ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿಸಂಸಾರ ಎನಗೊಂದೆ ಅಲ್ಲದೆ ಸಂಸಾರ ಎನಗುಂಟೇನಯ್ಯಪಸತ್ಯವೆಂಬುದೆನ್ನಸತಿಯು ಶಾಂತವೆಂಬುದೆನ್ನಸುತನುಸತ್ಯವೆಂಬುದೆನ್ನ ಸೊಸೆಯು ನಿಜವಿದೀಗಅತ್ಯಧಿಕ ಗುಣಿಯೆಂಬ ಅಗಣಿತದ ಪಿತನಿರಲುಮಿಥ್ಯವಾದ ಸಂಸಾರದಲಿ ಮಗ್ನರಹರೇ1ಬುದ್ಧಿ ಎಂಬುದೆನ್ನಭ್ರಾತೃ ಭಾವನೆ ಎಂಬುದೆನ್ನಭಾವಅದ್ವೈತವೆಂಬ ಅತ್ತೆ ಅಂತಃಕರಣವೆಂಬ ಮಾವಶುದ್ಧಾತ್ಮವೆಂಬ ಬಂಧು ಸಂಬಂಧವೆನಗಿರಲಾಗಿಈ ದ್ವೈತಸಂಸಾರದಲ್ಲಿ ಮಗ್ನರಹರೇ2ಇಂತು ಸಂಸಾರ ಸುಖ ನಿಜದೊಳಗೆನಗಿರಲುಭ್ರಾಂತದಲ್ಲವೆ ನಿಮ್ಮ ಮಾತಿದೆಲ್ಲಚಿಂತಯಕ ಚಿದಾನಂದ ಚಿನ್ಮಯನೆ ತಾ ಬಲ್ಲಅಂತರಂಗದ ಮಾಟಕೆ ಅವನೆ ಸಾಕ್ಷಿ3
--------------
ಚಿದಾನಂದ ಅವಧೂತರು