ಒಟ್ಟು 8999 ಕಡೆಗಳಲ್ಲಿ , 130 ದಾಸರು , 5039 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ ಮಾಡಿ ದಯವನು ನೋಡೆ ನೀ ಎನ್ನ ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ ಕರವೀರ ವಾಸಿಯೆ ಪ ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ ಮುದದಿ ಮನ್ನಿಸಿ ಕಳುಹುತಿರೆ ಕಂಡು ಒದಗಿ ಬಂದ ಕೋಪದಿಂದ ಯದುನಾಥನ ಎದೆಯಿಳಿದು ಬೇಗನೆ ಕದನ ಮಾಡುತ ಕೊಲ್ಲಾಪುರವನು ಸದನ ಮಾಡಿದೆ ಸುಂದರಾಂಗಿಯೆ 1 ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ ಬೆಟ್ಟದಲಿ ನಿಂತಿದ್ದನೆ ಬಂದು ಪಟ್ಟದರಸಿಯು ನೀನು ಜನಕನ ಪುತ್ರಿಯಾದ ಕಾಲದಲಿ ಕೊಟ್ಟ ವಚನವ ನಡೆಸಿ ಪತಿಗೆ ನೀ ಪತ್ನಿಮಾಡಿದೆ ಪದ್ಮಾವತಿಯ 2 ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು ನಿನ್ನಶಿರ ಶೃಂಗಾರಾಭರಣಗಳು ಅಮ್ಮ ತ್ರಿಜಗದಂಬಾ ನಿನ್ನ ಮುಖ ಒಮ್ಮೆ ನೋಡಲು ಧನ್ಯರಾಗೋರು ಬ್ರಹ್ಮನಪಿತನರಸಿ ಎನಗೆ ನೀ ರಮ್ಮೆಪತಿಪಾದಾಂಘ್ರಿ ತೋರಿಸೆ 3 ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ ನೀ ಅಧ್ಯಕ್ಷಳಾಗಿದ್ದು ಇಕ್ಷುಚಾಪನ ಜನನಿ ಕರವೀರ ಕ್ಷೇತ್ರದಲಿ ಪ್ರತ್ಯಕ್ಷಳಾಗಿ ಮೋಕ್ಷಾಪೇಕ್ಷಿಗಳಾದ ಜನರಿಗೆ ರಕ್ಷಿಸಿ ವರಗಳ ಕೊಡುವ ಮಾತೆಯೆ4 ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ ಪ್ರೇಮದಿಂದಲಿ ಪಾಲಿಸಿ ನೀನು ಶ್ಯಾಮವರ್ಣನ ದಿವ್ಯ ಸಾಸಿರ ನಾಮ ನಾಲಿಗೆಲಿರಲು ನಿಲಿಸಿ ಭೂಮಿಗೊಡೆಯ ಭೀಮೇಶಕೃಷ್ಣನ ಧಾಮದ ದಾರಿಗಳ ತೋರಿಸೆ 5
--------------
ಹರಪನಹಳ್ಳಿಭೀಮವ್ವ
ಭಯವ್ಯಾಕೆ ಭಕ್ತ ಜನಕೆಪ. ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ಅ.ಪ. ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ 1 ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು ಸದಯನು ನೀನೆನುತ ಸದ್ವøತ್ತಿಲುದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ 2 ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ- ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ- ತÀ್ಕøಷ್ಟ ಹಯವದನ ದೊರೆ 3
--------------
ವಾದಿರಾಜ
ಯಾತರಂಚಿಕೆ ಜಗದೊಳಗೆ ಜಗ ನ್ನಾಥ ದಾಸರ ದಯಪಡೆದ ಸುಜನರಿಗೆ ಪ ವಿಧಿ ಮದನಾರಿ ವಂದಿತ ಒ ಪತಿ ಮಧುರಿಫು ಹರಿಕೃತಾ ಪದ ಸರಸಿಜ ಪೊಂದಿದಸುಗುಣರಿಗೆ 1 ನಳಿನ ಜನಕನ ವÀಲಿಸಿ ಹರುಷದಿಂದಲಿ ಥಳ ಥಳ ಪೊಲೆಯುವ ಸ್ತಂಭದಲಿ ಕುಳಿತು ಸೇವಿಸುವರ ಸಲಹುವ ಶ್ರೀ ರಂಗ ವಲಿದ ದಾಸಾರ್ಯರ ಒಲಿಮೆ ಉಳ್ಳವರಿಗೆ 2 ಸಿರಿವರ ಶಾಮಸುಂದರ ಸರ್ವೋತ್ತುಮ ಮರುತಾತ್ಮಜ ಗುರುವರ್ಯಕಿಂದು ಧರಿಯೊಳು ಸಾರಿದ ಸಲ್ಹಾದ ದಾಸರ ಚರಣ ಸರೋರುಹ ನೆರೆನಂಬಿದವರಿಗೆ 3
--------------
ಶಾಮಸುಂದರ ವಿಠಲ
ಯೋಗಿ ಬಂದನೇ ಶಿವಯೋಗಿ |ಭೋಗ ಸುಖವ ತ್ಯಾಗ ಮಾಡಿ | ಆಗಮೋಕ್ತದಿಂದ ನಡಿವ ಪ ಪರ |ಬ್ರಹ್ಮ ತೋರಬೇಕೆಂದು 1 ನಿತ್ಯ ಸುಖವನು ನಿಲಿಸುವಂಥ 2 ಪಾದ | ಹೊಂದಿದವರಿಗೆಲ್ಲರಿಗೆ | ಪರಮಾ- | ನಂದ ಪದವಿಯ ತೋರಿ | ದಯಾಸಿಂಧು ಮತ್ರ್ಯದೊಳಗೆ 3
--------------
ಭಾವತರಕರು
ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ರಾಜೀವ ಲೋಚನ ಹರೇ ಮುರಾರೇ ಮಾಜೀವ ಮೋಹನ ಹರೇ ಮುರಾರೇ ಪ ರಾಜೇಂದ್ರ ನಂದನ ಹರೆ ಮುರಾರೇ ಓ ಜಾನಕೀ ಪ್ರಿಯ ಪಾಹಿ ಖರಾರೇಅ.ಪ ವಾರಾಶಿ ಗಂಭೀರ ಸಾಕೇತಧಾಮ ಮಾರಾರಿ ವಂದಿತ ಲೋಕಾಭಿರಾಮ ಘೋರಾಘಸಂಹಾರ ರಣರಂಗ ಭೀಮ ಶ್ರೀರಾಮ ಜಯರಾಮ ಕಲ್ಯಾಣರಾಮ 1 ಪವನಾತ್ಮಜಾನಂದದಾತಾಪರೇಶ ಭವನಾಶ ಜಗತೀಶ ದೈತೇಯನಾಶ ಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವಾನರ ಶ್ರೇಷ್ಠಗ್ವಂದಿಸು ಪ ಕೇಸರಿ ಸುತನಾದ ಭೂತನುಜಳ ವಾರ್ತೆ ಲೇಸಾಗಿ ತಂದ ಪ್ರಾಣೇಶನ ಪಾದಕ್ಕೆ 1 ಸುಗ್ರೀವನಗ್ರಜನಾಗ್ರ(ಹ)ದಿ ಕೊಲಿಸಿದ ದ- ಶಗ್ರೀವನ ಬಲ ನೆಗ್ಗೊತ್ತಿದ್ವಾನರಗೆ 2 ಭೂಮಿಗೊಡೆಯ ಸೀತಾರಾಮಸೇವಕನಂಘ್ರಿ ಪ್ರೇಮದಿ ಭಜಿಸೋ ಭೀಮೇಶಕೃಷ್ಣನ ಭಕ್ತಗೆ3
--------------
ಹರಪನಹಳ್ಳಿಭೀಮವ್ವ
ವನರುಹಾಕ್ಷೀ ವನಮಾಲಿಂಗೇ ಏನು ಮರುಳಾದೆ ನೀ | ಅನುದಿನ ತನ್ನ ತನುಮನ ವಚನದಿ ನೆನೆವನ ಪುನರಪಿ ಜನುಮಕ ತಾರ್ದವನಾ ಪ ಬಿಡದೇ ವಿಷದಾ ಭರಿತಾದಾಕಾ | ಲೊಡಲಂಗಾ ಮ್ಯಾಲಿಪ್ಪನಾ ವಡಗೋಡಲುಗೊಗ್ಗು ಮೈಯ್ಯವೆ ಗೂಡದು | ಒಡನೋಡ ನುಡುಗಿಪಾ ಒಡಲೋಳು ಚರಣಾ | ವಡಮೂಡಿ ಬಂದ | ಕೋಡಗಲ್ಲೋಲ್ಪಲ್ಲವು | ಘುಡು ಘುಟಿಸುವ ಮಹಾ ಘೋರರೂಪನವ 1 ಸೃಷ್ಟಿಲಿ ಮಾವನುದರೋಳು | ತ್ಕುಂಠವಗ್ನಿಯ ನಿಟ್ಟನು | ಲುಟುಲುಟು ನಡೆದಾಡುತಲಿಹ ಗುಜ್ಜನು | ಥಟನೆಟ ನಿಳಹಿದ ಕಪಿ ಸಂಗತಿರುಗಿದಾ ಮಟಮಟ ಬೆಣ್ಣಿಯ ಕದ್ದುಮೆಲ್ಲುವನಾ2 ದೆಶೆಗಳ್ಗೆ ಪಾರ್ವಕ್ಕಿಯ ಹರುಷಲೇರಿ ಮೆರೆವನಾ | ಸುದತಿ ವೃತವಳಿದನು ಹಿಸದಸುಯವನರ | ತರಿದಿ ನಿರ್ದಯದೀ | ಪಸರಿಸುತಿಹ ಕಾರ್ಮುಗಿಲ ಬಣ್ಣದ| ಲೆಶೆವನು ಮಹೀಪತಿ ನಂದ - ನೊಡಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಗಿರಿಜಾ ಸುತನೆ ಸುರರಾಜ ಪೂಜಿತನೆ ಇಭ ಆನನೆ ದುರಿತಾಪ ಹರನೆ ಫ ಶರಣು ಗಣನಾಯಕನೆ ಮೂಷಿಕ ಸುವಾಹನನೆ ಶರಣು ಪಾಶಾಂಕುಶನೆ ಪರಮ ಪಾವನನೆ ಶರಣು ಶರಣು 1 ಲಿಖಿತದೊಳುವೇದವ ಬರೆದ ಪೂಜೆಯನು ಕೈಗೊಳುತ ಗಜ ಶರಣು ಶರಣು 2
--------------
ಕವಿ ಪರಮದೇವದಾಸರು
ಶೃತಿನಾಥ ಸ್ಮøತಿಯಿತ್ತು ಸತತ ಪೊರೆಯೋಗತಿ ಗೋತ್ರ ನೀನೆಂದು | ಸತತ ತುತಿಸುವೆನೋ ಪ ನಿಚ್ಚ ಸೇವೆಯ ಕೊಳ್ಳೋ 1 ಪತಿ ಸಖನೇ |ನ್ಯೂನಾತಿರೇಕಗಳ | ನೀನಾಗಿ ಮನ್ನಿಸುತಮಾನನಿಧಿ ಗುಣಪೂರ್ಣ | ನೀನೆನ್ನ ಪೊರೆಯೋ 2 ಭಾವದಲಿ ನೀನಿರಲು | ಅವ ಭಯವಿಲ್ಲೆನಗೆಶ್ರೀವರನೆ ಸರ್ವೇಶ | ಸರ್ವಜ್ಞ ಮೂರ್ತೇ |ಕಾವ ಕರುಣಿಯೆ ಗುರು | ಗೋವಿಂದ ವಿಠಲ ಬಾಗೋವತ್ಸ ಧ್ವನಿ ಕೇಳಿ | ಧಾವಿಸುವ ಪರಿಯಂತೆ 3
--------------
ಗುರುಗೋವಿಂದವಿಠಲರು
ಶ್ರೀ ಗಣಪತಿಯ ಪದಾಬ್ಜಕೆ ನಮಿಸಿರಾಗದಿಂದಲಿ ಶಾರದೆಯ ಸ್ಮರಿಸಿನಾಗಭೂಷಣ ಪದಾಬ್ಜಯುಗಕೆ ತಲೆವಾಗಿ ಬಾಲೆಯರಾಶೀರ್ವಾದದ ಪದಗಳರಾಗದಿ ಪಾಡಿ ಪೊಗಳುವೆ 1 ಸಾಲಿ ಸೀರೆಯನುಟ್ಟು ಸರಮುತ್ತ ಕಟ್ಟುಬಾಲಕಿಯರೊಳು ಕಟ್ಟಾಣಿ ನೀನಾಗುಮೇಲೆನೀ ಅಷ್ಟಪುತ್ರರನು ಪಡೆದು ಸುಖಿಬಾಳು ಸ್ತ್ರೀಯರಿಗೆಲ್ಲಾ ದೊರೆಯಾಗಿರುಶ್ರೀ ಮೈಲಾರಲಿಂಗನ ಕೃಪೆಯಿಂದಾ2 ಪಲ್ಲಕ್ಕಿಯ ಸಾನಂದದೊಳೇರುಹಲ್ಲಣಿಸಿದ ಕರಿತುರಗವನೇರುಎಲ್ಲಾಭರಣವನಿಟ್ಟು ಸುಖದಿ ಪ್ರಾಣದೊಲ್ಲಭಸಹಿತ ಸಂತೋಷದೊಳಿರು ಶ್ರೀಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ 3 ಚಂದ್ರಕಸ್ತುರಿಯ ತಿಲಕಗಳನಿಟ್ಟುಚಂದದಿ ಕುಂಕುಮ ರೇಖೆಯನಿಟ್ಟುಇಂದೀವರನೇತ್ರಕೆ ಕಪ್ಪಿಟ್ಟು ಆಚಂದ್ರಾರ್ಕವು ಸುಖಬಾಳು ಶೃಂಗೇರಿಯಚಂದ್ರಮೌಳೀಶನ ಕೃಪೆಯಿಂದಾ4 ಅರಿಶಿನ ಚೂರ್ಣವನು ಲೇಪಿಸುತಪರಿಮಳಗಂಧವ ಪಸರಿಸಿಕೊಳುತಕರಿಯಮಣಿಯ ಮುತ್ತಿನ ಸರಗಳನಿಟ್ಟುಪರಮಸಂತೋಷದೊಳಿರು ಶ್ರೀ ಹಂಪೆಯವಿರೂಪಾಕ್ಷನ ಕೃಪೆಯಿಂದ 5 ಪರಿಮಳಿಸುವ ಪುಷ್ಪಸರಗಳ ಮುಡಿದುಗುರುಹಿರಿಯರ ಆಶೀರ್ವಾದವ ಪಡೆದುಹರುಷದಿ ಪುತ್ರಪೌತ್ರರ ಸಲಹುತ ಪತಿಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯವರ ಸುಬ್ರಹ್ಮಣ್ಯನ ಕೃಪೆಯಿಂದ 6 ಸರಸ್ವತಿಯಂತೆ ವಿದ್ಯಾವಂತೆಯಾಗುಸಿರಿಯಂತೆ ಸೌಭಾಗ್ಯವಂತೆ ನೀನಾಗುಅರುಂಧತಿಯಂತೆ ಪತಿವ್ರತೆಯಾಗುತಪರಮಾನಂದದೊಳಿರು ಶ್ರೀ ಕೆಳದಿಯಪುರದ ರಾಮೇಶನ ಕೃಪೆಯಿಂದ 7
--------------
ಕೆಳದಿ ವೆಂಕಣ್ಣ ಕವಿ
ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು ಲಿಂಗವೆ ಮಾಲಿಂಗವಾಗಿ ತೋರುವುದು ಪ ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ ಆ ಮಹಾ ಸಹಸ್ರನಾಮದೊಳಗತ್ಯದಿಕ ಸೊಮೇಶನೆಂದೆಂಬ ಸ್ವಾಮಿಯನು ಕಂಡು ಸೋಮವಾರದ ದಿವಸ ಸಾಮರುದ್ರವ ಜಪಿಸಿ ನೇಮದಿಂ ಪೂಜಿಸಲು ಕಾಮಿತದ ಫಲವು 1 ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ ಉನ್ನಂತವಾಗಿ ಜಗದೊಳು ಚರಿಸಿತು ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ- ಸನ್ನವಾದನು ಸೋಮನಾಥನೆಂದೆನುತ2 ಪಾದ ಪ್ರತ್ಯಕ್ಷವಾಗಿಯೆ ಸೋಮೇಶನೆಂದೀಗ ತಾ ಮೆರೆದುದು ಭುಕ್ತಿ ಮುಕ್ತಿಯನಿತ್ತು ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3 ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ ಕುಲಿಶ ನೀನು ಜಗದೀಶ 4 ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5 ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6 ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7 ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು ತಿದ್ದಿಟ್ಟಿ ಆಭರಣ ತಿರಿಶೂಲಧರಣ 8 ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು ಹೊಳೆವ ಮುಖತೇಜಗಳು ನಳಿನನೇತ್ರಗಳು ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9 ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ- ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು ವಾಸವಾದೆಯೊ ಜಗದೀಶ ಸೋಮೇಶ 10 ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ ಕಾಲರುದ್ರ ವ್ಯಾಳಭೂಷ ಸರ್ವೇಶ ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ ಬಾಲಕನು ಅಲ್ಲವೇ ಭಕ್ತಸುರಧೇನು 11 ಸಾರಿ ನೋಡಿರೊ ಮೂರು ಲಿಂಗವನು ನೀವೀಗ ಧಾರುಣಿಯಳೊಂದು ಶಿವಲಿಂಗವನು ಬೇಗ ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12 ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13 ನಿನ್ನನೇ ನಂಬಿದೆನು ಉನ್ನತಾನಂತೇಶ ಮನ್ನಿಸಿ ದಯದೋರು ಚಂದ್ರಮೌಳೀಶ ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14
--------------
ವರಹತಿಮ್ಮಪ್ಪ
ಸರ್ವತಂತ್ರ ಸ್ವತಂತ್ರ | ನಿರ್ವಿಕಾರನೆ ದೇವ ಅವ್ವ ಲಕುಮಿಗು ಪ್ರೇರಕ ಪ ದುರ್ವಿಭಾವ್ಯನೆ ಜಗಕೆ | ದರ್ವಿ ಜೀವನ ಕಾವಹವಣೆ ನಿನದಲ್ಲೇ ಸ್ವಾಮಿ ಅ.ಪ. ಕಾಯ ರಕ್ಷಿಸಿದೇ 1 ಕಾಯ ವೈರಿ ಪತಿ ನೀನೆ | ಜಾಯೆಯಿಂದೊಡಗೂಡಿಗೇಯ ಸಂಕರುಷಣನೆ | ಆಯತನ ಪೊರೆದೇ 2 ಸಾಯಮಭಿಧಾನದ | ಸವನ ಮೂರಲಿ ದಿವ್ಯಗಾಯಿತ್ರಿ ದ್ವಯ ಮಾತೃಕಾ |ಆಯತನದೊಳಗಿದ್ದು | ಆದಿತ್ಯ ದೇವಕಿಂಆಯುರ್ಹವಿಷವ ಗೊಳ್ಳುತಾ |ಜೀಯ ನೀ ಪೊರೆಯುತಿರೆ | ಧಾತು ಸಪ್ತಕ ತನುವಧಾರ್ಯವಾಗಿಹುದೊ | ದ್ಯುಮ್ನ |ಗೇಯ ಗುರು ಗೋವಿಂದ | ವಿಠಲನೆ ತವ ಪದಕೆಕಾಯ ಇದನರ್ಪಿಸುವ | ದೇಯ ಕೊಡು ಸತತ 3
--------------
ಗುರುಗೋವಿಂದವಿಠಲರು
ಸರ್ವಾಂತರ್ಯಾಮಿ-ನೀನೇಸರಿ-ಸರ್ವಜ್ಞನು ಸ್ವಾಮೀ ಪ ಸರ್ವಕಾರಣ ಸರ್ವಾಧಾರನು ಸರ್ವಶರಿರೇಕ ಸರ್ವನಿಮಾಯಕ ಅ.ಪ. ಹರಿತನಯನಿಗಂದೂ ಸ್ವಶಕ್ತಿಯ ಹರಿಕೊಡುವನು ಬಂದು ಗುರಿಮಾಡಿದೆ ಹರಿ1 ಕಾಣಿಸುವನು ಎಂದೂ ಸಪ್ರಾಣರಮಾಡಿದೆ 2 ಮರುತನ ಸುತನೆಂದು ಧೃತರಾಷ್ಟ್ರನು ಕರದಪ್ಪುವನೆಂದು ಶರಣನಹರಣವನುಳಹಿದೆ 3 ಪಾಲನ ಖತಿಯೊಳಗೆ ಶರಧಿಯೊಳಾಲಯ ಮಾಡಿದೆ 4 ದುರುಳ ಪುಲಿಯು ಬಂದು ಕರದಖಡುಗದಿಂ-ಹರಿಯನು ಖಂಡಿಸಿ ಶರಣನ ಸಲಹಿದ ವರದವಿಠಲಹರಿ5
--------------
ಸರಗೂರು ವೆಂಕಟವರದಾರ್ಯರು
ಸಾಕು ನರಹರಿ ಭವದ ಬವಣಿಂ ದ್ಯಾಕÉ ಬಳಲಿಸುವೆ ಹರಿ ಹರಿ ಶ್ರೀಕಮಲಾಪತಿ ಶರಣ ಜನರೊಳ- ಗ್ಹಾಕಿ ಪೊರೆಯೆನ್ನ್ಹರಿ ಹರಿ ಪ ದೊರೆಯೆ ನೀನಿರಲನ್ಯರಿಗೆ ಬಾಯಿ ತೆರೆಯಲ್ಯಾಕಿನ್ನ ್ಹರಿ ಹರಿ ಪರಮ ಆಪ್ತ ನೀನಿರಲು ಕಾಣದೆ ಪÀರರಿಗೆ ಆಲ್ಪರಿದ್ದರಿಹರಿ1 ಪುತ್ಥಳಿ ಮನೆಯಲೆ ಇರಲು ಹಿತ್ತಾಳೆ ಬಯಸುವೆನ್ಹರಿಹರಿ ಬಿಟ್ಟು ನಿನ್ನೀಗನ್ಯ ವಿಷಯದಿಂ ದ್ದುಟ್ಟುವುದೆ ಸುಖ ಹರಿಹರಿ 2 ಬೇಡಿದ್ವರಗಳ ಕೊಡುವೊ ಭೀ- ಮೇಶ ಕೃಷ್ಣ ನೀನಿರಲ್ಹರಿಹರಿ ನೋಡಿ ಸುಖಿಸದೆ ಬಿಟ್ಟು ಕನ್ನಡಿ ಗೋಡೆಗಡರುವೆನ್ಹರಿಹರಿ 3
--------------
ಹರಪನಹಳ್ಳಿಭೀಮವ್ವ