ವೃಂದಾವನದೊಳು ಶೋಭಿಸುತಿರುವಳು
ಸುಂದರ ಶ್ರೀ ತುಳಸಿ ಪ
ನಂದನಂದನ ಗತಿ ಪ್ರಿಯಳೆಂದೆನಿಸುತ
ಭವ ಬಂಧವ ಬಿಡಿಸುತ ಅ.ಪ
ನಿತ್ಯವು ಪ್ರಾತಃಕಾಲದೊಳೆದ್ದು
ಪವಿತ್ರ ಚಿತ್ತದಲಿ ಭಕ್ತಿಯಲಿ
ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ
ಮತ್ತೆ ನಮಿಪರಘ ಬತ್ತಿಸಿ ಸಲಹುತ 1
ತುಳಸಿ ವೃಂದಾವನ ಮಹಿಮೆಯ ಮನದಲಿ
ನಿಲಿಸಿ ಸೇವಿಸುವ ಸಜ್ಜನರ
ಕಲಿದೋಷಗಳನು ಕಳೆದು ಸತತ ಶ್ರೀ
ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2
ತುಳಸಿ ದಳದಿ ಶ್ರೀ ಕರಿಗಿರೀಶನ
ವಿಲಸಿತ ಪೂಜೆಯ ಮಾಡುವರ
ಸುಲಲಿತ ಸತ್ಪಥದೊಳು ನಡೆಸುತ ನಿ
ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3