ಒಟ್ಟು 58 ಕಡೆಗಳಲ್ಲಿ , 22 ದಾಸರು , 54 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮುದ್ದು ಮೋಹನ್ನ | ವಿಠಲ ಪೊರೆ ಇವನಾ ಪ ನಾಮ ಸಂಸೃತಿ ಇವಗೆ | ಸತತ ನೀನಿತ್ತು ಅ.ಪ. ವೇಣುಲೋಲನ ಮಹಿಮೆ | ಗಾನಮಾಡಲು ಇವಗೆಜ್ಞಾನವಂಕುರಿಸಲ್ಕೆ | ಜ್ಞಾನಿಸಂಗವಕೊಡೊ |ಮಾನನಿಧಿ ಮಧ್ವಾಖ್ಯ | ಸನ್ಮತದಲುದಿಸಿಹನೊ ಮೌನಿಜನ ವೃಂದ ಸ | ನ್ಮಾನ ಮಾಳ್ವವನಾ 1 ಭವವನದಿ ನವಪೋತ | ಶ್ರವಣ ಸಾಧನವಿತ್ತುನವನವ ಸುವಿಶೇಷ | ಮಹಿಮಯುತ ಹರಿಯಾಪ್ರವರ ಗುಣರೂಪಗಳ | ಸ್ತವನ ಮಾಳ್ವಂತೆಸಗಿಪವನಾಂತರಾತ್ಮಕನೆ | ಪಾಲಿಸೊ ಇವನಾ 2 ಕಾಕು ಸಂಗವಕೊಡದೆಮಾಕಳತ್ರನದಾಸ | ಸಂಕುಲದಲಿರಿಸೋವ್ಯಾಕುಲಾರ್ಥಿಕ ಕಳೆಯೆ | ಬೇಕಾದ ವರಗಳನೆನೀ ಕೊಟ್ಟುಕಾಯೊ ಕೃ | ಪಾಕರನೆ ಹರಿಯೇ 3 ತೈಜಸನೆ ನೀನಾಗಿ | ಯೋಜಿಸಿದ ಅಂಕಿತವ ಮಾಜದಲೆ ಇತ್ತಿಹೆನೊ | ನೈಜ ಮಾರ್ಗದಲೀಮಾಜಗಜನ್ಮಾದಿ ನಿ | ವ್ಯಾಕಜ್ಯ ಕಾರುಣಿಕವಾಜಿವದನನೆ ಪೊರೆಯೊ | ವೃಜನಾರ್ಥನೆನಸೀ 4 ಸಂತ ಸಂಗವನಿತ್ತು | ಅಂತರಾತ್ಮಕ ನಿನ್ನಚಿಂತೆಯಲ್ಲಿರುಸುತಲಿ | ಭ್ರಾಂತಿಯಿರದೊಂದುಅಂತ ಗೈಯುವಮಾರ್ಗ | ಕಂತುಪಿತ ನೀನಿತ್ತುಕಾಂತ ಗುರು ಗೋವಿಂದ | ವಿಠಲಾ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಶ್ರೀರಂಗ ಬಾರನೆ ಪ. ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ ಮಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ಅ.ಪ . ಮುನಿಸು ಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆಮನದಿ ಛಲವತೊಟ್ಟನೆ ಮನೆಗೆ ಬಾರದೆ ಬಿಟ್ಟನೆ 1 ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆಪಂಥವ್ಯಾತಕೆ ಕಲಿತನೆ ಕಾಂತೇರÀ ಕೂಡಿ ಮೆರೆದನೆ 2 ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ 3
--------------
ವಾದಿರಾಜ
ಶ್ರೀಹರಿ ಸ್ತುತಿ ಆವಕಡೆಯಿಂದ ಬಂದೆ ವಾಜಿವದನನೆಭಾವಿಸುವ ವಾದಿರಾಜಮುನಿಯ ಕಾಣುತ ಪ. ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ ಅ.ಪ. ಭಕುತಿಕಡಲೆ ಜ್ಞಾನವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ 1 ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ವಾದಿರಾಜಮುನಿಯ ಸಲಹಬಂದೆಯ 2 ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನಭಕ್ತಿಯನ್ನು ನೀಡಬಂದೆಯಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ 3
--------------
ವಾದಿರಾಜ
ಸಂಜೀವ ದೀಪ್ತಿಪೂರ್ಣ ಪ. ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1 ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2 ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3
--------------
ವಾದಿರಾಜ
ಸುಬ್ರಹ್ಮಣ್ಯನೆ ಶುಭ್ರವದನನೆ | ನಿರ್ಭಯವನುರೆ ಮಾಳ್ವನೆ | ಶರಣು ಶರಣು 1 ಕರುಣಿ ನಿತ್ಯಾನಂದನೆ | ಶರಣು 2 ರಾಮನ ತೋಷನೆ | ಶರಣು 3 ಶೋಕ ನಾಶ ಉಮಾ ಕುಮಾರಕ | ಶ್ರೀ ಕುಮಾರ ಗಿರೀಶನೆ | ಶರಣು 4 ದಾಸರಾ ಮನ ತೋಷನೆ 5
--------------
ಬೆಳ್ಳೆ ದಾಸಪ್ಪಯ್ಯ
ಸುಳಾದಿ ಧ್ರುವತಾಳ ಹರಿಪದವ ನೆನೆವಂಗೆ ನರಕದ ಭಯವಿಲ್ಲ ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ ಹರಿಪದವ ನೆನೆವಂಗೆ ವಿಷದ ಭಯವಿಲ್ಲ ಹರಿಪದವ ನೆನೆವಂಗೆ ಭವದ ಭಯವಿಲ್ಲ ಹರಿಪದವ ನೆನೆವಂಗೆ ಜನನದ ಭಯವಿಲ್ಲ ಹರಿಪದವ ನೆನೆವಂಗೆ ಮರಣದ ಭಯವಿಲ್ಲ ಬರಿಯ ಮಾತೇ ಅಲ್ಲ ಅಕುತೋಭಯನೆಂದು ವರದ ಹಯವದನನ ಪದಪದುಮವ ನಂಬು 1 ಮಠ್ಯÀತಾಳ ಧ್ರುವನ ನೋಡು ಸುರಲೋಕದಿ ಭುವಿ ವಿಭೀಷಣನ್ನ ನೋಡಿರೊ ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ 2 ತ್ರಿಪುಟತಾಳ ಹತ್ತಾವತಾರದಿ ಭಕ್ತರ ಭಯಗಳ ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು ಮತ್ತೆ ಮೃತ್ಯುಗಳ ಭೀತÀನೆಂಬುವುದ್ಯಾಕೆ ಹೆತ್ತ ತಾಯಿಯಿಂದ ತತ್ವವ ಕೇಳಯ್ಯ ಕರ್ತೃ ಹಯವದನನೆ ಭಕ್ತರ ಭಯಕ್ಕೆ ಕತ್ತಲೆಗಿನನಂತೆ ಹತ್ತು ಎಂಬುದು ನಂಬು3 ಝಂಪೆತಾಳ ಕರಿಯ ಕಾಯ್ದವನ ಪಾದವ ನಂಬು ಉರಿಯ ನುಂಗಿದವನ ಪಾದವ ನಂಬು ಸಿರಿ ಹಯವದನನೆ ಭಕ್ತರ ಭಯ ಸಂ- ಹರಣನೆಂಬುದಕ್ಕಿನ್ನು ಸಂಶಯವಿಲ್ಲ 4 ರೂಪಕÀತಾಳ ದ್ರೌಪದಿಯ ಭಯ ಪರಿಹರಿಸಿದವನಾರೈ ಆ ಪರೀಕ್ಷಿತನ ಭವಭಂಜನನಾರೈ ತಾಪಸರಿಗಸುರರಿಂದ ಬಂದ ಪರಿಪರಿಯ ಆಪತ್ತುಗಳನೆಲ್ಲ ಖಂಡಿಸಿದನಾರೈ ಶ್ರೀಪತಿ ಹಯವದನನೊಬ್ಬನೆ ತನ್ನವರ ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ 5 ಅಟ್ಟತಾಳ ವಿಷನಿಧಿಯನೊಂದು ದಾಟಿ ವ್ಯಸನಗಳನೆಲ್ಲ ಖಂಡಿಸಿ ಬಿಸಜವನಿತೆಯ ಕಂಡು ಬಂದ ಅಸಮ ಹನುಮನ ನೋಡಯ್ಯ ಕುಸುಮವನು ತರಪೋಗಿ ಅಸುರರ ಕುಸುರಿದರಿದುದ ನೋಡಯ್ಯ ಬಿಸಜಾಕ್ಷ ಹಯವದನ ತನ್ನ ಹೆಸರುಗೊಂಡರೆ ಭಕ್ತರ ವಶÀಕ್ಕಿಪ್ಪುದು ಪಾರ್ಥನ ಯಶವ ಪಸರಿಸಿದ ಅಚ್ಚುತ 6 ಪೂರ್ವಕಾಲದಿ ತೀರದ ಕಥೆಗಳ ನಿ- ವಾರಿಸಿ ಜರಿದುದ ನರರೆಲ್ಲ ಕಾಣರೆ ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ ಈರೇಳು ಲೋಕದೊಳಗೆ ಈ ಹಯವದನನಂತೆ ಶರಣಾಗತಜನರ ಸಲಹುವರುಳ್ಳರೆ 7 ಜತೆ ಸುರಾಸುರಚಕ್ರವರ್ತಿ ಅಸುರಮದಭೇದನ್ನ ಸಿರಿ ಹಯವದನನ್ನ ಚರಣವೆ ಗತಿಯೆನ್ನು
--------------
ವಾದಿರಾಜ
ಹರಿಹರರಿಬ್ಬರು ಒಲಿದು ಮಾತಾಡಲು ಕೊಳವ ಕಂಡಲ್ಲಿ ಎಲೆತೋಟ ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ ಹೆಣ್ಣಿನ ಕಂಡು ಹರ ಮರುಳಾದ ಪ. ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ ಹೊಂಬಾಳೆ ಅಡಿಕೆ ಬನಗಳು ಹೊಂಬಾಳೆ ಅಡಿಕೆ ಬನದೊಳಗಾಡುವ ರಂಭೆಯ ಕಂಡು ಹರ ಮರುಳಾದ 1 ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ ಬೆರಸಿ ಮಲ್ಲಿಗೆಯ ಬನದೊಳು ಬೆರಸಿ ಮಲ್ಲಿಗೆಯ ಬನದೊಳಗಾಡುವ ಸರಸಿಜಾಕ್ಷಿಯ ಕಂಡು ಹರ ಮರುಳಾದ 2 ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ ನಿಲ್ಲದೆ ನುಡಿವೊ ಗಿಳಿಗಳು ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ ಚೆಲುವೆಯ ಕಂಡು ಹರ ಮರುಳಾದ 3 ಸೋಗೆ ನವಿಲುಗಳು ಗಿಳಿಹಿಂಡು ತುರುಗಳು [ಕೋಗಿಲೆ ನಲಿಯೊ ಪಂಸೆಗಳು] [ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ- ಬಗಿಯ ಕಂಡು ಹರ ಮರುಳಾದ 4 ಚೆಲುವ ಚರಣಗಳು ಜಂಘೆ ಜಾನೂರು ಕಟಿ ವಳಿಪಂಙÂ್ತ ಜಠರ ವಕ್ಷಸ್ಥಳವು ವಳಿಪಂಙÂ್ತ ಜಠರ ವಕ್ಷಸ್ಥಳಗಳ ಹೆಣ್ಣಿನ ಸ್ತನವ ವರ್ಣಿಸಲಾರಿಗಳವಲ್ಲ 5 ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು ವೀರಮುದ್ರಿಕೆಯು ಕಿರುಪಿಲ್ಯ ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ ಬಾಲೆಯ ಕಂಡು ಹರ ಮರುಳಾದ 6 ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ ಕೊರಳ ಪದಕ ಹಾರ ಒಲೆಯುತ ಕೊರಳ ಪದಕ ಹಾರ ಒಲೆಯುತ ಹೆಣ್ಣಿನ ಇರವ ವರ್ಣಿಸಲಾರಿಗಳವಲ್ಲ 7 ಹಸಿರು ಕುಪ್ಪಸಗಳು ಮುಂಗೈನಗಗಳು ನಳಿತೋಳುಬಂದಿ ಬಳೆಗಳು ನಳಿತೋಳುಬಂದಿ ಬಳೆಗಳು ಹೆಣ್ಣಿನ ಥಳುಕು ವರ್ಣಿಸಲಾರಿಗಳವಲ್ಲ8 ಹಾರ ಹೀರಾವಳಿ ಕೇಯೂರ ಕಂಕಣ ತೋಳ ಭಾಪುರಿ ಭುಜಕೀರ್ತಿ ತೋಳ ಭಾಪುರಿ ಭುಜಕೀರ್ತಿನಿಟ್ಟಿಹ ಇಂದುಮುಖಿಯ ಕಂಡು ಹರ ಮರುಳಾದ 9 ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು ಕದಪು ಕನ್ನಡಿಯು ಕುಡಿಹುಬ್ಬು ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ ಬೆಳಕÀ ವರ್ಣಿಸೆ ಹರಗಳವಲ್ಲ 10 ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು ಕುರುಳು ಕೂದಲುಗಳು ಕುಂತಲಗಳು ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ ಜಡೆಯ ವರ್ಣಿಸಲಾರಿಗಳವಲ್ಲ 11 ಕುಂಭಕುಚದ ಮೇಲೆ ಗಂಧವ ಪೂಸಿದಳೆ ಅಂದಕೆ ಹಿಡಿದಳೆ ಕಮಲವ ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ ಚಂದ ಬಂದ್ಹರನ ಕಂಗೆಡಿಸಿತು 12 ತÉೂೀರ ಕುಚದ ಮೇಲೆ ಸಾದು ಗಂಧವ ಪೂಸಿ ಆಯಕೆ ಹಿಡಿದಳೆ ಕಮಲವ ಆಯಕೆ ಹಿಡಿದಳೆ ಕಮಲವ ಕಡೆಗಣ್ಣ ಢಾಳ ಬಂದ್ಹರನ ಕಂಗೆಡಿಸಿತು 13 ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ ಹಸ್ತಕಟ್ಟುಗಳು ಹೊಳೆಯುತ ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ ದೃಷ್ಟಿ ಬಂದ್ಹರನ ಕಂಗೆಡಿಸಿತು 14 ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು ತÀನ್ನೊಳಗೆ ತಾನು ನಗುವೋಳು ತÀನ್ನೊಳಗೆ ತಾನು ನಗುವೋಳು ಬೊಮ್ಮನ ಮಗನ ಮರುಳು ಮಾಡಿ ನಡೆದಳು 15 ನೋಡಳು ನುಡಿಯಳು ಹರನ ಕೂಡೆ ಮಾತಾಡಳು ಓಡುತ್ತ ಚೆಂಡ ಹೊಯ್ವಳು ಓಡುತ್ತ ಚೆಂಡ ಹೊಯ್ವವೇಗವ ಕಂಡು ಮೂರುಕಣ್ಣವನು ಮರುಳಾದ 16 ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ ಕರದಿ ತ್ರಿಶೂಲ ಹೊಳೆಯುತ ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ ನುಡಿಸುತ್ತ ಹಿಂದೆ ನಡೆದನು 17 ರೂಢಿಗೊಡೆಯನ ಕೂಡೆ ಆಡುವ ವನಿತೆ ನೋಡೆ ನೀ ಎನ್ನ ಕಡೆಗಣ್ಣ ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ ಕಾಡುತ ಹಿಂದೆ ನಡೆದನು 18 ಪೀತಾಂಬರದ ಮುಂಜೆರಗನು ಕಾಣುತ್ತ ಸೋತೆ ಬಾರೆಂದು ಕರೆದನು ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ ಕಾಂತೆ ಬನದೊಳು ಮರೆಯಾದಳು 19 ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ ಗಂಗೆ ಪೊತ್ತವನ ತಿರುಗಿಸಿದ ಗಂಗೆಪೊತ್ತವನ ತಿರುಗಿಸಿದ ತನ್ನಯ ಮುಂದಣ ಅಂದವೆಲ್ಲ ಇಳುಹಿದ 20 ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು ವಟಪತ್ರ ಶಯನನಾಗಿ ಮಲಗಿದ ವಟಪತ್ರ ಶಯನನಾಗಿ ಮಲಗಿದ ಉಡುಪಿನ ಕೃಷ್ಣನೆಂದ್ಹರನು ತಿಳಿದನು 21 ಭೂಮಿಯನೆಲ್ಲ ಈರಡಿ ಮಾಡಿದ ಆಲದೆಲೆ ಮೇಲೆ ಮಲಗಿದ ಆಲದೆಲೆ ಮೇಲೆ ಮಲಗಿದ ಶ್ರೀಹಯ- ವದನನೆಂದು ಹರ ತಿಳಿದನು 22
--------------
ವಾದಿರಾಜ
ನಡೆದು ಬಾರಯ್ಯ ನೀನು ವೆಂಕಟರಾಯನಡೆದು ಬಾರಯ್ಯ ಭವಕಡಲಿಗೆಕುಂಭಸಂಭವವಿಜಯದಶಮಿ ಆಶ್ವೀಜಮಾಸ ಶುದ್ಧದಲ್ಲಿದಕ್ಷಿಣ ದಿಕ್ಕಿನಲ್ಲಿ ರಾಕ್ಷಸ ಸಮೂಹ ಒಂ-ಅಂಬುಜಾಕ್ಷನೆ ಬಾರೊ ಅಂಬುಜವದನನೆಮನಕೆ ಬಾರಯ್ಯ ಸುಧಾಮನಸಖಹರಿಯೆ ಸೋ-ಪರಿಪರಿಯಿಂದಲಿಕರವಮುಗಿದು ಸ್ತುತಿಸಿ
--------------
ಗೋಪಾಲದಾಸರು
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು