ಒಟ್ಟು 61 ಕಡೆಗಳಲ್ಲಿ , 27 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗದಾಧರ ಪಾಹಿಮಾಂ ಹರೆ ಭೋಗಿಶಯನ ಶೌರೇ ಪ ಯಾಗ ಯೋಗ ಗಮ್ಯ ನೃಹರೆ ತ್ಯಾಗಶೀಲ ಭೋ ಮುರಾರೆ ಅ.ಪ ಮೃತಮಾನವ ಸುಗತಿ ದಾತಾ ಪತಿತಾನತ ದಿವ್ಯ ನೀತ ಹರಣ ಖ್ಯಾತಾ ತಾಪ ಸನ್ನುತ ಚರಿತಾ 1 ಶೃತಿ ಪುರಾಣ ಭರಿತ ವಿದಿತ ರಥಾಂಗ ಮಣಿರಂಜಿತ ವಿನುತ ನಮಿತ ಖ್ಯಾತಮಾಂಗಿರಿ ವರೂಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀವತ್ಸಾಂಕಿತ ಗರುಡ ತುರಂಗ ಕಾವೇರಿ ಜಲ ಪರಿವೃತ ರಂಗ ಪ. ದೇವೋತ್ತಮ ನುತ ಧರಿತ ರಥಾಂಗ ಪಾವನ ಚರಣ ಕೃಪಾಂಗ ಶುಭಾಂಗ ಅ.ಪ. ದೇವಕೀನಂದನ ಜಲದ ನೀಲಾಂಗ ಭಾವಜಪಿತ ದಯಾಜಲಧಿ ತರಂಗ ಶ್ರೀವನಮಾಲಾ ರಿಪುಮದ ಭಂಗ ಲಾವಣ್ಯಾಂಬರ ಕರುಣಾಪಾಂಗ 1 ರಾವಣ ಕುಲ ಸಂಹಾರಕ ರಂಗ ಶ್ರೀವಿಭೀಷಣ ಪೂಜಿತ ರಂಗ ಸನ್ನುತ ರಂಗ ಶ್ರೀವಸುಧಾನ್ವಿತ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು
ಸತ್ಯಸುಧಾರ್ಣವ ನಿತ್ಯಸ್ವಯಂಭುವ ನುತ್ಯಸ್ವಭಾವಗುಣ ರಮಾಧವ ಪ ಭವ ಭಂಜನ ರಾಘವ ಅತ್ಯಂತ ಸುಖವೀವ ದೇವ ಕೃಪಾರ್ಣವ ಅ.ಪ ಪವನನಂದನನುತ ಭುವನಾರಾಜಿತ ಧೃವ ಪರಿಭಾವಿತ ಮುನಿಸೇವಿತ ಕವಿಹೃದಯಾನತ ದಿವಿಜಾರಾಧಿತ ನವಘನಸುಂದರ ವಿಧಿವಿನುತಾ 1 ರಥಾಂಗ ಶ್ರೀಕರ ತುಂಗ ಕೃಪಾಕರ ಧರಣೀಧರಾ ಮಾಂಗಿರಿ ವರನರಸಿಂಗ ಪರಾತ್ಪರ ಅಂಗಜಜನಕ ಭುಜಂಗ ಶೃಂಗಾರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ ಸದ್ಭೋಧಸಾರ ಗರವಾ ಗರವಾಮೃತಾದಾ ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ 1 ಗುರುಪಾದ ಕಾಣದನಕಾದನ ಕಾವನಾಗೀ ಮರದೆನ್ನ ತನ್ನದೆನುತಾದೆನುತಾಂನರಾಗಿ ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ ಪರಮಾರ್ಥವಸ್ತು ವರ ದೇವರ ದೇಶಸಾರಿ 2 ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ ಇಂದು 3 ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ ದೊರವನು ಹೃತ್ಕಮಲದಾಮಲದಾತ್ಮ ಈಶಾ ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು4 ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ ನೆರೆಗಂಗಿ ಪಾದತೀರ್ಥತೀರಥಾಧರಾಶಿ ಗುರು ವಿಶ್ವನಾಥನೆನುವಾನೆನುವಾವನೆಲ್ಲಿ ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ5 ಕಾಣದೆ ಕಂಗಳಲಿತಾ ಲಲಿತಾದ ನೋಟಾ ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ ಪ್ರಾಣವಕಾವ ಗುರುವೀ ಗುರುವೀನ ಪಾಡಿ 6 ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ ತನುಭಾವವನ್ನು ಮರಸೀ ಮೆರಸೀದನೆಂದು ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು 7 ಗುರುಮೂರ್ತಿಗೆಂದನರನೇ ನರನೇವನವನು ಗುರುಭಕ್ತಿ ಗಳ್ಳಕುಶಲಾಕುಶಲಾದವನು ಗುರುನಾಮ ಕೂಗದವನೈದುವನೇ ಗತಿಯಾ ಗುರುಪಾದಪೂಜಿಮರತಾ ಮರತಾವನೀಯಾ 8 ಗುರುಅಷ್ಟಕದ ಮಹಿಮಾ ಮಹಿಮಗೇಬಲಾ ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ ಗುರು ಮಹೀಪತಿ ಕರುಣಾ ಕರುಣ ನುಪಾಡೀ ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ ಪ ಸಾಗಿಬಾರೈಯ ಭವರೋಗದ ವೈದ್ಯನೆ ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು ಭಾಗೀರಥಿಪಿತ ಭಾಗವತರ ಸಂ ಯೋಗರಂಗ ಉರಗಗಿರಿ ವೆಂಕಟ ಅ.ಪ. ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ ರಥಾಂಗಪಾಣಿಯೆ ದಶರಥ ನೃಪಬಾಲ ಪಾರ್ಥಗೆ ಒಲಿದವನ ರಥವ ನಡಿಸಿ ಅತಿ- ರಥ ಮಹರಥರ ವಿರಥರ ಮಾಡಿ ಗೆಲಿಸಿದೆ ಪ್ರಥಮ ದೈವವೆ ಮನ್ಮಥಪಿತ ದೈತ್ಯರ- ಮಥನ ಭಕ್ತರ ಮನೋರಥನೆ ತಾರಾ- ಪಥವರ್ಣನೆ ತವ ಕಥಾಶ್ರವಣದಲಿ ಸು- ಪಥವನು ತೋರಿಸು ಪ್ರಥಮಾಂಗದೊಡೆಯ 1 ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ- ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ- ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ- ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ- ಯಿಲ್ಲವೊ ನೋಡಲು ಸಲ್ಲುವುದೋ ಬಿರು- ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು ವಿಶ್ವ 2 ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ- ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ- ತ್ತುಮ್ಮಾನೇಕ ಗುಣಮಹಿಮ ವಿಭೂಷಿತ ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ ಸಮುಖನಾಗುತ ಸುಮ್ಮನೆ ಬಾ ಬಾ ಸಿರಿ ವಿಜಯವಿಠ್ಠಲ ಅನು- ಪಮ್ಮಚರಿತ ಪರಬೊಮ್ಮ ತಿರುಮಲೇಶ 3
--------------
ವಿಜಯದಾಸ
ಸೇವೇ ಶ್ರೀರಮಣಂ ಸದಾ ಸೇವಕಾರ್ತಿಹರಣಂ ಪ ಪಾವನ ವಾಘ್ರಾಚಲವಿಹರಣಂ ಅ.ಪ ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿಪತ್ರಂ ಖಂಡಪರಶುಕೃತಸನ್ನುತಿಪಾತ್ರಂ ಚಂಡಕಿರಣಶತಸನ್ನಿಭಗಾತ್ರಂ7 1 ಕುಲಿಶಧರಾತ್ಮಜ ಮಿತ್ರಂ ಸುಲಲಿತ ಕರಧೃತ ಗೋತ್ರಂ ಕಲಿತರಥಾಂಗಧರಾಸಿತನುತ್ರಂ ಕಲಿಮಲಖಂಡನ ನಿಜಚಾರಿತ್ರಂ2 ಭಾವಿತಜನ ಮಂದಾರಂ ಭಾವಜಜನಕಮುದಾರಂ ಸೇವಕರಕ್ಷಣ ಧೃತಶರೀರಂ ದೇವಸಮೂಹಾಕಲಿತ ವಿಹಾರಂ3 ಶಂಕರಹೃದಯಧ್ಯೇಯಂ ಕಿಂಕರಜನ ಸಮುದಾಯಂ ನಿಜನಾಮಧೇಯ 4 ಪರಮಪುರುಷಮನವಂದ್ಯಂ ಸರಸಗುಣಾಕರಮಾದ್ಯಂ ವರದವಿಠಲಮಖಿಲಾಗಮಬೋಧ್ಯಂ 5
--------------
ವೆಂಕಟವರದಾರ್ಯರು
ಹೆಮ್ಮೆಯಾ ಬಿಡು ಬಿಡು ಮನುಜಾ ಪ ಬೊಮ್ಮ ದೂರ್ವಾಸಾದಿಗಳೆಲ್ಲಾ | ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ | ನುಡಿಯಲಿ ತಾ ವಾಯು ವಶದಿಂದಲಿ | ತಡಿಯದೆ ಬಹುಮುಖ ಕಮಲಾಸನ ಕಂಡು | ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1 ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು | ಮತ್ಸರಿಸಲು ಅಂಬೃಷಿಯೊಡನೆ | ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ | ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2 ಮೇರು ಗಿರಿಯ ಸಮವಾಗಿ ಸೂರ್ಯನ ರಥಾ | ದಾರಿ ಕಟ್ಟುವೆನೆಂದು ಬೆಳೆಯುತಲಿ | ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ | ಧಾರುಣಿಯೊಳಗೇ ನಾದನೆಂಬುದ ಕೇಳಿ 3 ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ | ಕಕ್ಷದಿ ನಿಲುವ ರರೆನುತಾ | ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ | ದಕ್ಷ ಮನ್ಮಥರೇನಾದರೆಂಬುದ ಕೇಳಿ 4 ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ | ಬಹುತರು ನಮ್ರವೃತ್ತಿಯ ತ್ಯಜಿಸಿ | ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ | ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ24ಪ್ರಥಮ ಅಧ್ಯಾಯಪ್ರಾದುರ್ಭಾವಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನುಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿನೀ ಲಯಾಬ್ಧಿ ಸುಖವ ರಮೆಗಿತ್ತಿಸ್ವರತ1ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನುಗುಣತ್ರಯಮಾನಿಮಾಅನಘಸಂಸ್ತುತಿಸಿಆನಂದಮಯನೀನು ಆನಂದ ಲೀಲೆಯಿಂಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತವಿಧಿಯಪ್ರತಿದಿನದಲ್ಲಿ ಅವತಾರ ಮಾಡಿಸಾಧು ಸಾತ್ವಿಕರಿಗೆಅಭಯಸದ್ಗತಿ ಇತ್ತುಅಧಮ ಅಸುರರ ಸದೆದು ಭೂಭಾರ ಕಳೆದಿ 3ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳುಎಲ್ಲವೂ ಪೂರ್ಣವು ನಿತ್ಯವು ಅಭಿನ್ನಳಾಳುಕನೇ ನಿನ್ನಮಲ ರೂಪವಿಶೇಷವಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4ವೇದ ಉದ್ಧಾರನೇ ಮತ್ಸ್ಯರೂಪನೇ ನಮೋಮಧುಕೈಟಭಹಾರಿ ಹಯಗ್ರೀವ ಶರಣುಮಂಡಲಾದ್ರಿಯ ಪೊತ್ತಕೂರ್ಮಧನ್ವಂತರಿಸುಧೆಸುರರಿಗುಣಸಿದ ಸ್ತ್ರೀರೂಪಪಾಹಿ5ಸುರಪಕ್ಷಅಜಅಜಿತ ಸಿಂಧುಜಾಪತಿ ಧರೋ-ದ್ಧಾರವರಾಹನಮೋ ಪುರುಟಾಕ್ಷಹಾರಿಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದವರಚಕ್ರಧರಾಅಭಯಭೂಧರಶಾಮ6ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವುಹಸ್ತದ್ವಯ ಅಜಾನುದರಾರಿಧರ ಕೋಟಿಆದಿತ್ಯಾಮಿತತೇಜಮಾಲಕ್ಷ್ಮೀಯುತ ವೀರಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇಹಿರಣ್ಯಕಶಿಪುವ ಸೀಳ್ದಿ ಪ್ರಹ್ಲಾದಪಾಲಮೂರಡಿಯ ಕೇಳ್ದ ವಾಮನಬಲಿಬಂಧಕಶರಣು ಶ್ರೀತ್ರಿವಿಕ್ರಮನೇ ಧೂರ್ಜನಕಪಾಹಿ8ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿಕೋಟಿ ಸೂರ್ಯಮಿತೋಜ್ವಲ ಪರಶುರಾಮಸಾಟಿ ಇಲ್ಲದ ಹನುಮತ್ಸೇವ್ಯಸೀತಾರಮಣಪಟ್ಟಾಭಿರಾಮನಮೋ ರಾವಣ ಧ್ವಂಸೀ 9ಭಜಿಸುವೆ ನರಸೇವ್ಯ ನಾರಾಯಣ ವ್ಯಾಸಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶಕುಜನಮೋಹಕ ನಮೋ ಸುರ ಸುಬೋಧಕಬುದ್ಧದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10ಕ್ರೂರ ದೈತ್ಯರ ಭಾರಿಭಾರಧರಿಯಿಂದಿಳಿಸಿದೆವಾರಿಜಾಸನ ಶಿವಾದ್ಯಮರರ ಮೊರೆಕೇಳಿಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯಪರಮಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ11ವಸುದೇವ ದೇವಕೀಸುತನೆಂದು ತೋರಿದವಾಸುದೇವನೇ ನಿನ್ನ ಸುಚರಿತ್ರೆ ಕೇಳೆಶ್ರೀಶ ನಿನ್ನಯ ದಯದಿಕಲುಷಪರಿಹಾರವುಸುಶುಭ ಪಾವನಕರವು ಸರ್ವಭಕ್ತರಿಗೂ 12ಕಲಿಕಲಿಪರಿವಾರ ದೈತ್ಯ ದುರ್ಜನರುಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿಶೀಲ ಹರಿಭಕ್ತರ ಕಂಡು ಸಹಿಸದೇ ಬಹುಬಲಕಾರ್ಯ ವಂಚನೆಯಿಂದ ಪೀಡಿಸಿದರು 13ಎಂಟನೇ ಮಗು ತನ್ನ ಮೃತ್ಯುವಾಗುವುದೆಂದುದುಷ್ಟ ಕಂಸನು ತಂಗಿ ಸಪತಿ ದೇವಕಿಯಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14ಏಳನೇ ಗರ್ಭವು ವ್ಯಾಳದೇವನ ಅಂಶಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟುಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದಸುರರುಸೇವಿಸುವುದಕೆ ನಿನ್ನಿಚ್ಛೆ ದಯದಿಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿಪರಿಪರಿವಿಧದಲ್ಲಿ ಕೃತ ಕೃತ್ಯರಾದರು16ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿಅವತಾರಕ್ಕನುಸರಿಸಿ ಬಂದು ತೆರಳಿದಳುದೇವ ನಿನ್ನ ಕಲಾ ಸಂಯುಕ್ತ ಶೇಷನುಭವಿಸಿದನು ನಿನ್ನಣ್ಣ ಬಲರಾಮನೆಂದು 17ನಿರ್ದೋಷನೀ ಸರ್ವ ಜಗನ್ನಿವಾಸನು ದೇವ-ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗವಿಧಿಭವಾದಿಗಳೆಲ್ಲ ಬಂದು ಸಂಸ್ತುತಿಸಿದರುಸತ್ಯಜ್ಞÕನಾನಂತಗುಣಪೂರ್ಣನಿನ್ನ18ಯಾವನು ಸರ್ವದಾ ಸರ್ವ ಬಹಿರಂತಸ್ಥಯಾವನು ಸರ್ವ ಹೃತ್ ಯೋಮದೊಳು ಇರುವಯಾವನಲ್ಲಿ ಸರ್ವವೂ ಸಮಾಹಿತವೋಅವನೇವೇ ನೀಹರಿವಿಷ್ಣು ಕೃಷ್ಣ ಅವತಾರ19ಪ್ರಾಕೃತಶರೀರ ವಿಕಾರಗಳು ನಿನಗಿಲ್ಲಪ್ರಾಕೃತಕಲಾವಿಲ್ಲ ಭಿನ್ನಾಂಶನಲ್ಲಏಕಪ್ರಕಾರಅಕ್ಷರಪೂರ್ಣಅಜನಿನ್ನಅಜ್ಞಾನದಲಿ ನರರು ಜನಿಸಿದಿ ಎಂಬುವರು 20ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನಕಿರೀಟಕುಂಡಲಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯಕೌಮೋದಕೀ ಸುದರ್ಶನ ಸರೋಜ 21ಉದ್ದಾಮ ಕಾಂಚಂಗದ ಕಂಕಣಾದಿಗಳಪೀತಾಂಬರ ಪಾದನೂಪುರ ಪೂರ್ಣೇಂದುಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟಮೋದಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ22ಈರೂಪವಾಸುದೇವನೋಡಿ ಸ್ತುತಿಸಿದನು ನಿನ್ನಅರಿಯೇ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯುಕಾಣುತ್ತಾ ನರಲೋಕ ವಿಡಂಬನಕ್ಕಾಗಿತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24ದೇವಕಿಯ ಸ್ತುತಿಕೇಳಿಯುಕ್ತ ಮಾತುಗಳಾಡಿದೇವ ನಿನ್ನೀಚ್ಛಾ ಶಕ್ತಿಯಿಂದಲೇವೇಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡುತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲುಆಶ್ಚರ್ಯವಲ್ಲ ನದಿಮಾರ್ಗಬಿಟ್ಟಿದ್ದುಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿವಸುದೇವ ಎತ್ತಿಪೋದನು ಅವಳ ಮಗಳ 26ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯವಸುದೇವ ತಂದು ದೇವಕಿ ಬದಿ ಇಡಲುಪ್ರಸವ ಸುದ್ದಿಯಕೇಳಿಕಂಸ ಆರ್ಭಟದಿಂದಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27ಅಂಬರದಿ ದಿವ್ಯ ರತ್ನಾಭರಣ ಭೂಷಿತೆಕಂಬುಚಕ್ರಾದಿಧರೆ ಅಷ್ಟ ಮಹಾಭುಜೆಯುಅಂಬಾ ಮಹಾದುರ್ಗಾ ಭಗವತೀ ಮಯಾದೇವಿಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28ಕಂಸನ್ನ ಎಚ್ಚರಿಸಿ ಭಗವತಿ ತೆರಳಲುಕಂಸನುಪರಮವಿಸ್ಮಿತನಾಗಿ ಬೇಗವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿಅಸುರ ಮಂತ್ರಿಗಳೊಡೆ ಆಲೋಚಿಸಿದನು 29ನಂದ ಯಶೋದೆಯು ತಮ್ಮ ಶಿಶು ನೀನೆಂದುನಂದ ಆನಂದದಿವಿಪ್ರವೈದಿಕರ ಕರೆದುಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿಚೆಂದದಿ ಅಲಂಕೃತ ಧೇನುಗಳ ಕೊಟ್ಟ 30ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯಬಾಲಲೀಲಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಸಣ್ಣ ಶಿಶುರೂಪ ನೀ ಪೂತನೀ ಶಕಟತೃಣಾವರ್ತರ ಕೊಂದಿ ನಮೋ ಅಮಿತಶೌರಿನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳಕಾಣಿಸಿದಿ ಮಾತೆಗೆ ನಮೋವಿಶ್ವವಿಷ್ಣೋ1ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲಅಗಣಿತಮಹಿಮ ಶ್ರೀ ವಿಷ್ಣು ನೀ ಎಂದುಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆಕಾಕುದುರ್ಮತಿಗಳು ದ್ವೇಷ ಬೆಳೆಸಿದರು2ಕಂಸ ಜರಾಸಂಧ ಕಾಲಯವನ ಕಲಿಯಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನಹಿಂಸಿಸಬೇಕೆಂದು ಆಗಾಗ ಯತ್ನಿಸಲುದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3ವತ್ಸಬಕಅಘಧೇನುಕ ಪ್ರಲಂಬಾರಿಷ್ಟಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿವಸುಮತಿಯ ಸಾಧುಗಳ ಭಯ ನಿವಾರಿಸಿದಿ 4ಬಲವಂತ ರಾಮ ಸಹ ಅಮಿತ ಪೌರುಷ ನೀನುಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿಶೀಲ ಭಕ್ತರಿಹಪರಸುಖ ಒದಗಿಸಿದಿಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀಸಂರಕ್ಷಿಸಿದಿ ವೃಜಗೋಪ ಜನರನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದಸಮ್ಮುದದಿ ನಂದನ್ನ ಕರತಂದಿ ಅಜಿತ 6ನಾಗಪತ್ನೀಯರು ಬಂದು ನಮಸ್ತುಭ್ಯಂಭಗವತೇ ಪೂರುಷಾಯ ಮಹಾತ್ಮನೇ ಎಂದುಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7ಶ್ರೀಧರನೇ ನಿನ್ನಯ ವೇಣುನಾದದ ಸುಧೆಯಮಾಧುರ್ಯ ರಸವನ್ನು ವರ್ಣಿಸಲಶಕ್ಯಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-ವಿಂದ ಮುಖದ ಆನಂದ ಸವಿದು ಸುಖಿಸುವಳು 8ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬಸೊಲ್ಲಿನ ತತ್ವವ ಬಲ್ಲವರೇ ಬಲ್ಲರುಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದುಮುಖ್ಯ ವಾಯು ಅಖನರ್ಮ ಸಮಗಿಲ್ಲಹೊಯ್ಯಿಸೆ ಮಳೆಶಕ್ರನೀ ಲೀಲೆಯಂ ಗೌರಿ ಎತ್ತಿಕಾಯ್ದಿ ಗೋಜನಗಳ ಅನ್ನದ ಅನ್ನಾದ 10ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂರಾಧಾದಿ ಗೋಪಿಗಳ ಅನಂದ ಉಕ್ಕಿಸಿಸ್ವರತಇಂದಿರಾಪತಿ ಗೋವಿಂದ ಗೋ ಕಾಯ್ದ 11ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟುಅದರಂತೆ ಭಕ್ತಿಯಲಿ ಅವರೋಚ್ಯ ಉಂಟುಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿಮಂದಗಮನೆಯರಿಗೆ ರಾಸಕ್ರೀಡೆಯಲಿ 12ನಂದವ್ರಜಗೋಕುಲ ಮಥುರೆ ಬೃಂದಾವನಚಂದ್ರ ಯಮುನೆವನಲತೆ ಪುಷ್ಪ ವೃಕ್ಷಸಿಂಧುದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13ವಿದ್ಯಾಧರ ಸುದರ್ಶನನು ಶಾಪದಿ ಅಹಿಯುನಂದನ್ನ ಕಾಯ್ದಿ ಆ ಅಹಿಯ ಬಾಯಿಂದಪಾದಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿದುರುಳವ್ರಜನ ಶಿರವ ಕತ್ತರಿಸಿ ಬಿಸುಟುವಿಪ್ರನಾರಿಯರ ಅನ್ನ ಉಂಡು ಒಲಿದಂತೆಕ್ಷಿಪ್ರವಾಯಕ ಗೊಲಿದಿ ಮಾಲಾಕಾರನಿಗೂ15ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದುಖಳದುಷ್ಟ ಕಂಸನ್ನ ದ್ವಂಸ ಮಾಡಿದಿಯೋಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿಬಲರಾಮ ಕೃಷ್ಣ ನಮೋಪಾಹಿಸಜ್ಜನರ16ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನುಗುರುವಿನ ಮೃತ ಪುತ್ರನ್ನ ಕರೆತಂದಿಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನುನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17ಈರಾರುಯೋಜನವು ದ್ವಾರಕಾ ದುರ್ಗವುಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆನೀಚ ದುರ್ಮತಿ ಕಾಲಯವನ ಹಿಂಬಾಲಿಸಿಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದುಸುಪವಿತ್ರ ನರನಾರಾಯಣ ಕ್ಷೇತ್ರಯೈದೇಉಪಾಯದಿಂದಲಿ ಮಾಗಧನ ಸಮ್ಮೋಹಿಸಿನೀ ಬಲರಾಮ ಸಹ ಸ್ವಪುರ ಸೇರಿದಿಯೋ 20ವನಜಸಂಭವಪ್ರೇರಿಸಲು ರೇವತರಾಜಅನರ್ತ ದೇಶಾಧಿಪತಿಯು ಶ್ರೀಮಂತತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21ಸುಧಾ ಕಲಶವ ಗರುಡ ಕಿತ್ತಿ ತಂದಂತೆಚೈದ್ಯಮಾಗಧಶಾಲ್ವಾದಿ ಕಡೆಯಿಂದಎತ್ತಿ ತಂದಿ ಸ್ವಯಂವರದಿಂ ಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 22ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 23-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಅಧ್ಯಾಯಕಲ್ಯಾಣ ಸುಧಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪವಿಧರ್ಭ ದೇಶಾಧಿಪತಿ ಭೀಷ್ಮಕರಾಜನುಸದ್ಧರ್ಮನಿಷ್ಟ ಕುಂಡಿನಿಪುರವಾಸಿಐದು ಮಂದಿ ಗಂಡು ಮಕ್ಕಳು ಅವನಿಗೆಮೊದಲನೆಯವನಿಗೆ ರುಗ್ಮಿ ಎಂದು ಹೆಸರು 1ರುಗ್ನಿ ಬಹು ದುಷ್ಟನು ಕೃಷ್ಣ ದ್ವೇಷಿ ಖಳರುಮಾಗಧಾದಿಗಳಲ್ಲಿ ಬಹು ಸ್ನೇಹರುಗ್ಮಿಗೆ ರುಕ್ಮರಥ, ರುಕ್ಮಬಾಹು ಮತ್ತುರುಕ್ಮಕೇಶಿ, ರುಕ್ಮಮಾಲಿ ಅನುಜರು2ಈ ಪುಣ್ಯವಂತ ರಾಜನಿಗೊಂದು ಮಗಳುಂಟುಈ ಪುತ್ರಿ ರುಕ್ಮಿಣಿ ಸ್ಫುರದ್ವಾರಾನನೆಯುಹೇ ಪುರುಷೋತ್ತಮನೇ ನಿನ್ನ ನಿಜಸತಿ ಲಕ್ಷ್ಮೀಅಪ್ರಮೇಯನೇ ನಿನ್ನ ಬಿಟ್ಟಗಲದವಳು 3ಉರುಗುಣಾರ್ಣವ ನಿನ್ನ ಅವತಾರಕನುಸರಿಸಿಶ್ರೀ ರಮಾದೇವಿಯೇ ಪ್ರಾದುರ್ಭವಿಸಿದಳುನರರ ನೋಟಕೆ ರಾಜಪುತ್ರಿಯಂತೆ ಇಹಳುಪುರಟಗರ್ಭನ ತಾಯಿ ಸರ್ವಜಗನ್ಮಾತೆ 4ಈ ಷÉೂೀಡಶ ಕಲಾಯುಕ್ ನಮ್ಮ ತನುವೋಲ್ ಅಲ್ಲಕ್ಲೇಶಸಂತಾಪಾದಿ ವಿಕಾರಗಳು ಇಲ್ಲದೋಷ ದೊರೆ ದುಃಖ ಅಸ್ಪøಷ್ಟೆ ಎಂದೆಂದೂಕೃಷ್ಣ ವಿಷ್ಣೋ ನಿನ್ನಾಧೀನೆ ಎಂದೆಂದೂ 5ಉತ್ತಮ ಮಹಾಪೂರುಷ ಶ್ರೀಕರನೇ ನಿನ್ನಉತ್ತಮ ಕ್ರಿಯಾರೂಪ ಗುಣವಿಶೇಷಗಳನ್ನಸಂತತ ಅಲೋಚಿಸಿ, ಹೊಸ ಹೊಸ ಅತಿಶಯವಸತತ ಕಾಣುತ ತಾ ಸನ್ನುತಿಸಿ ಸುಖಿಸುವಳು 6ವಿಮಲಆನಂದಮಯನಿನ್ನ ಸಹಲಕ್ಷ್ಮೀಬ್ರಹ್ಮರುದ್ರಾದಿ ಸುರರಿಂದ ಸನ್ನುತಳುಅಮಿತೋಚ್ಛ ಭಕ್ತಿಯಿಂ ಸದಾ ನಿನ್ನಸೇವಿಪಳುರಮಾ ಸಿಂಧುಜಾ ಜಾನಕೀಯೇವೇ ಭೈಷ್ಮಿ 7ಸಿರಿದೇವಿ ತಿಳಿದಷ್ಟುಹರಿನಿನ್ನ ತಿಳಿದವರುನರರಲ್ಲಿ ಸುರರಲ್ಲಿ ಯಾರೂನೂ ಇಲ್ಲನರಲೋಕದಲ್ಲಿ ನರರಂತೆ ನಟಿಸುವ ಸಿರಿಯುಅರಿಯಬೇಕೇ ಇತರರಿಂದ ಹೊಸದಾಗಿ 8ಅರಮನೆಗೆ ಬರುವವರು ನಾರದಾದಿಗಳಿಂದಹರಿಮುಕುಂದನೆ ನಿನ್ನರೂಪಗುಣಮಹಿಮೆಹರುಷದಿಂದಲಿ ಚೆನ್ನಾಗಿಕೇಳಿಮನದಲ್ಲಿವರಿಸಿದಳು ಸದಾ ನಿನ್ನ ಪ್ರೇಮದಿ ಭೈಷ್ಮಿ 9ಕೃಷ್ಣನಿಗೆಸಮ ಸದೃಶ ಪುರುಷ ಯಾರೂ ಇಲ್ಲರುಕ್ಮಿಣಿಗೆ ಸಮ ಸದೃಶ ಸ್ತ್ರೀ ಯಾರೂ ಇಲ್ಲಗುರುರೂಪ ಔದಾರ್ಯ ಬುದ್ದಿ ಲಕ್ಷಣಾಶ್ರಯಳುನಿನ್ನ ನಿಜಪತ್ನಿ ರುಕ್ಮಿಣಿ ಎಂದು ನೀ ಅರಿವಿ 10ಮದುವೆ ಮಾಡಲು ರುಕ್ಮಿಣಿಗೆ ಯೋಚಿಸಿನೃಪಬಂಧುಗಳು ಕೃಷ್ಣಗೆ ಕೊಡಲು ಇಚ್ಛೈಸೆಧೂರ್ತರುಗ್ಮಿ ಕೃಷ್ಣ ದ್ವೇಷಿ ತಡೆ ಮಾಡಿದನುಚೈದ್ಯ ಶಿಶುಪಾಲನಿಗೆ ಕೊಡಲು ನೆನೆದು 11ಸುತಗೆ ಕೃಷ್ಣನು ಮಾತ್ರ ವರನೆಂದು ತಿಳಿದರೂಪುತ್ರ ಸ್ನೇಹದಿ ರುಕ್ಮಿಗೆ ಒಡಂಬಟ್ಟ ರಾಜಚೈದ್ಯನಿಗೆ ಕೊಡಲು ಏರ್ಪಾಡು ಮಾಡಲುಆಪ್ತ ದ್ವಿಜವರ್ಯನ ಕರೆದಳು ಭೈಷ್ಮೀ 12ವಿಪ್ರನ ದ್ವಾರ ಸಂದೇಶ ಕಳುಹಿಸಿದಳುಪತ್ರ ಬರೆದಳು ನಿನಗೆ ಸತ್ತತ್ವ ನಿಮಿಡಆ ಬ್ರಾಹ್ಮಣ ಶ್ರೇಷ್ಟ ದ್ವಾರಕಾ ಪುರಿಯೈದುಪರಮಪೂರುಷ ನಿನ್ನ ನೋಡಿದನÀು ಮುದದಿ13ಕಾಂಚನಾಸನದಲ್ಲಿ ಕುಳಿತಿದ್ದ ನೀನುದ್ವಿಜವರ ಶ್ರೇಷ್ಠ ಬರುವುದು ಕಂಡಾಕ್ಷಣದಿತ್ಯಜಿಸಿಆಸನಪೋಗಿ ಎದುರ್ಗೊಂಡು ಕರೆತಂದುಪೂಜಿಸಿದೆಯೋ ಸ್ವಾಮಿ ಬ್ರಹ್ಮಾಂಡದೊಡೆಯ 14ಅಖಂಡೈಕ ಸಾರಾತ್ಮಾ ಸರ್ವರೂಪಾಟಿಭಿನ್ನಅಕಳಂಕ ಉರು ಸರ್ವ ಸಚ್ಛÀಕ್ತಿಪೂರ್ಣಏಕಾತ್ಮ ನೀ ಪೂಜ್ಯ ಪೂಜಕ ನೀಚೋಚ್ಛಗಳಕಾಕುಜನಮೋಹಕ್ಕೆ ಅಲ್ಲಲ್ಲಿ ತೋರ್ವಿ15ಸಜ್ಜನರ ಗತಿಪ್ರದನು ಅವ್ಯಯನು ನೀನುಭೋಜನಾದಿ ಬಹು ಉಪಚಾರ ಮಾಡಿದ್ವಿಜವರ್ಯನ ಹೊಗಳಿ ಸಾಧುಸನ್ಮತಿನೀತಿನಿಜ ಸುಖಪ್ರದಮಾರ್ಗಬೋಧಕ ಮಾತಾಡಿದಿ16ಭೂತ ಸಹೃತ್ತಮ ಸದಾ ಸಂತುಷ್ಟ ಮನಸ್ಸುಳ್ಳಸಾಧು ಆ ಬ್ರಾಹ್ಮಣನು ನಿನಗೆ ಸನ್ನಮಿಸಿಬಂದ ವಿಷಯವ ಪೇಳಿ ಪತ್ರವ ಸಮರ್ಪಿಸಿದವಂದೇ ಆ ಅಕುಟಿಲಗೆ ಭೈಷ್ಮೀ ಕೃಷ್ಣರಿಗೆ 17ಪತ್ರಸಾರಭುವನಸುಂದರ ನಿನ್ನ ಕಲ್ಯಾಣ ಗುಣಗಳಶ್ರವಣ ಮನನವಪರಮಆದರದಿ ಮಾಳ್ಪಜೀವರುಗಳ ಕಾಯಜಾದಿ ತಾಪಂಗಳುದ್ರಾವಿತವು ಆಗುವೆವು ಎಂದು ಕೇಳಿಹೆನು 18ಗುಣಕ್ರಿಯಾರೂಪಸುಶ್ರವಣ ಮನನವ ಮಾಡಿಧ್ಯಾನಿಪರಿಗೆ ನಿನ್ನರೂಪದರ್ಶನವುನಿನ್ನ ಅರಿತ ಭಕ್ತರಿಗೆ ಅವತಾರಾದಿ ದರ್ಶನವುಕಾಣುವವರಿಗೆ ಅಖಿಲಾರ್ಥ ಲಭಿಸುವವು 19ಇವು ಇಂತಹ ನಿನ್ನ ಉನ್ನತ ಮಹಿಮೆಗಳಶ್ರವಣ ಮಾಡಿ ಅಂತರಂಗದಿ ತನ್ನ ಮನಸ್ಧಾವಿಸುತ್ತೇ ನಿನ್ನಲ್ಲೇಅಚ್ಯುತಮುಕುಂದದೇವಿ ರುಕ್ಮಿಣಿ ಹೀಗೆ ಬರೆದಿಹಳು ವಿಭುವೇ 20ಸುಖರೂಪ ಲಕ್ಷ್ಮೀಶವಿಧಿಪಿತಜಗಜನ್ಮಾದಿಕರ್ತಶುಕ್ರ ನಿಷ್ಕಲಅಪ್ರಾಕೃತಅವ್ಯಕ್ತಅಖಂಡೈಕ ಸಾರಾತ್ಮ ಅನಂತೋರು ಸೌಂದರ್ಯನಿಗಮಗ್ಯ ಗಾಯತ್ರಿ ಅಮಾತ್ರ ತ್ರಿಮಾತ್ರ 21ಬೃಹತೀಸಹಸ್ರ ಸ್ವರವ್ಯಂಜನಾಕ್ಷರ ವಾಚ್ಯಅಹರ್ನೇತ್ರು ಭೂಮನ್ನಿತ್ಯನೀ ಸ್ವತಂತ್ರಮಹೈಶ್ವರ್ಯ ಪೂರ್ಣೇಂದ್ರ ಅಶೇಷ ಗುಣಾಧಾರಮಹಾಶಕ್ತಿ ದಿವಃಪರ ಪರಮೇಶ್ವರ - ಸ್ವ 22ನಿನ್ನ ಈ ಕುಲಶೀಲ ವಿದ್ಯಾದಿ ಗುಣರೂಪಅನುಪಮೈಶ್ವರ್ಯದಿ ನಿನಗೆ ನೀನೇತುಲ್ಯನಿನ್ನ ಗುಣಗಳು ಸರ್ವಾಕರ್ಷಕವಾಗಿರುವವುತನ್ನಾತ್ಮ ನಿವೇದನ ಮಾಡಿಯೇ ಎಂದಳು 23ಉನ್ನಾಮ ಉದ್ಧಾಮ ಅಚ್ಯುತನು ನೀನಿತ್ಯಆನಂದಚಿತ್ ತನು ಯದುಪತೇ ಕೃಷ್ಣನೀನೇವೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀ ಭೈಷ್ಮಿ ಸೂಚಿಸಿಹಳು24ರಾಜಪುತ್ರ ಎಂಬ ವಿಡಂಬನಾ ರೀತಿಯಲಿದುರ್ಜನರ ಭಯ ತನಗೆ ಇರುವಂತೆ ಬರೆದುಸೂಚಿಸಿದಳು ತನ್ನ ಅಂಬಿಕಾ ಗುಡಿಯಿಂದಅಚ್ಯುತನೇ ನೀ ಕರಕೊಂಡು ಹೋಗೆಂದು 25ರುಕ್ಮಿಣಿಯಲಿ ನಿನ್ನ ಪ್ರೇಮ ಪ್ರಕಟಿಸುತಬೇಗಸಾರಥಿದಾರುಕನ್ನ ನೀ ಕರೆದುಮೇಘಪುಷ್ಪ, ಶೈಭ್ಯ, ಬಲಾಹಕ ಸುಗ್ರೀವನಾಲ್ಕಶ್ವ ರಥದಲ್ಲಿ ದ್ವಿಜವರ ಸಹ ಕುಳಿತಿ 26ಖಗವೇಗದಿ ರಥದಿ ಏಕ ರಾತ್ರಿಯಲ್ಲೇಪೋಗಿ ಸೇರಿದಿ ಆ ಕುಂಡಿನಾಪುರವಸೊಗಸಾದ ಅಲಂಕಾರ ಪಚ್ಚೆ ತೋರಣಗಳುಪೂಗಿ ಮಾವು ಮೊದಲಾದ ಗೊಂಚಲುಗಳು 27ಎಲ್ಲಿ ನೋಡಿದರಲ್ಲಿ ಕಾಂಚನಾಭರಣದಿಪೊಳೆವ ಪೀತಾಂಬರ ಪಟ್ಟೆ ಉಟ್ಟಿದ್ದಲೋಲಾಯಿತಾಕ್ಷಿಯರು ವಿಪ್ರಜನ ಗುಂಪುಕೋಲಾಹಲವಾಗಿ ಕಂಡಿ ಕುಂಡಿನವ 28ಕಾರಣವು ತಿಳಿದಿದ್ದೆ ಭೀಷ್ಮಕರಾಜನುಪುತ್ರಸ್ನೇಹದಿ ಚೈದ್ಯಶಿಶುಪಾಲನಿಗೆಪುತ್ರಿಯ ಕೊಡಲಿಕ್ಕೆ ಕಾರ್ಯೋನ್ಮುಖನಾಗಿಪಿತೃ ದೇವಾರ್ಚನೆ ವಿಪ್ರಪೂಜೆಯಗೈದ 29ಚೇದಿಪತಿ ದಮಘೋಷ ಪುತ್ರ ಶಿಶುಪಾಲಗೆಮದುವೆಪೂರ್ವದ ಕಾರ್ಯ ತಾನೂ ಮಾಡಿಸಿದಮದುವೆ ಸಂಭ್ರಮಕ್ಕಾಗಿ ಸೈನ್ಯ ಸಹ ಬಂದರುವೈದರ್ಭ ಪೂಜಿಸಿದ ಉಪಚಾರದಿಂದ 30ಮಾಧವನೇ ನಿನ್ನಲ್ಲಿ ಭಯ ದ್ವೇಷ ಕಾರಣದಿಚೈದ್ಯ ಪಕ್ಷೀಯರು ಜರಾಸಂಧ ಸಾಲ್ವದಂತ ವಕ್ರಾದಿಗಳು ಸಹಸ್ರಾರು ಮಂದೀರುಬಂದುತುಂಬಿಎಚ್ಚರಿಕೆಯಲಿ ಇದ್ದರು31ಆ ಪರಿಸ್ಥಿತಿಯಲ್ಲಿ ಕುಂಡಿನಾಪುರಕೆ ನೀಒಬ್ಬನೇ ಪೋದದ್ದುಕೇಳಿಬಲರಾಮಕ್ಷಿಪ್ರದಿ ರಥಾದಿ ಯಾದವಸೈನ್ಯ ಸಹಿತತಾ ಬಂದ ಅಚ್ಯುತನೇ ನಿನ್ನ ಬದಿಗೆ 32ಸರೋರುಹಾಸನನಿಗೂ ಕೋಟಿಗುಣ ಉತ್ತಮಳುಸಿರಿದೇವಿ ರುಕ್ಮಿಣಿ ಭೀಷ್ಮ ಕನ್ಯಾಹರಿಯೇ ನಿನ್ನಾಗಮನ ಆಕಾಂಕ್ಷಿಯಾಗಿ ತಾನಿರೀಕ್ಷಿಸಿದಳು ನಿನ್ನ ಹಾಗೂ ಆ ದ್ವಿಜವರನ್ನ 33ಮೇದಿನಿಸ್ತ್ರೀಯರಿಗೆ ಎಡಗಣ್ಣು ತೊಡೆ ಭುಜಅದುರುವುದುಶುಭಸೂಚಕವೆಂದು ಪೇಳುವರುಸದಾನಿತ್ಯಸುಶುಭ ಮಂಗಳರೂಪಿ ದೇವಿಗೆಅದರಿದವು ಎಂಬುವುದು ಲೌಕಿಕ ದೃಷ್ಟಿ 34ಮುಖದಲ್ಲಿ ಸಂತೋಷ ಪ್ರಕಟಿಸುತ ವಿಪ್ರನುರುಕ್ಮಿಣಿ ಬಳಿ ಬಂದು ಸಮಸ್ತವೂ ಪೇಳೆಶ್ರೀ ಕೃಷ್ಣ ನಿನ್ನನ್ನು ಸಂಸ್ಮರಿಸುತ ಭೈಷ್ಮಿಲೋಕ ರೀತಿಯಲಿ ಆದ್ವಿಜಶ್ರೇಷ್ಠನ್ನ ಪೂಜಿಸಿದಳು35ಕೃಷ್ಣ ಬಲರಾಮರಿಗೆ ಬಿಡಾರವ ಕೊಟ್ಟುಭೀಷ್ಮಕನು ಪೂಜಿಸಿದ ಪುರದ ಸಜ್ಜನರುಕೃಷ್ಣನಿಗೆ ರುಕ್ಮಿಣಿಯೇ ರುಕ್ಮಿಣಿಗೆ ಕೃಷ್ಣನೇಘೋಷಿಸಿದ ರೀತಿ ಸಂತೋಷದಿಂದ 36ಸಂಪ್ರದಾಯವನುಸರಿಸಿ ಭೀಷ್ಮಕನುತನ್ನ ಪುತ್ರಿಯ ಕಾಲುನಡೆಯಲ್ಲಿ ಕರೆಕೊಂಡುಅಂಬಿಕಾಪೂಜೆಯ ಮಾಡಲು ಪೋಗಲುಸಂಭ್ರಮವ ಬಂದಿದ್ದ ರಾಜರು ನೋಡಿದರು 37ಮುಕುಂದ ನಿನ್ನಯ ಪಾದಪಂಕಜವ ಧ್ಯಾನಿಸುತರುಕ್ಮಿಣಿ ಅಂಬಿಕಾಆಲಯವ ಸೇರಿಬಾಗಿನಾದಿಗಳ ಕೊಟ್ಟು ನಿನ್ನ ಸಂಸ್ಮರಿಸುತ್ತರಾಕೇಂದುಮುಖಿ ನಿನ್ನಾಕಾಂಕ್ಷೆಯಿಂ ತಿರುಗಿದಳು38ರಥಗಜತುರಗಪದಾದಿಸೈನ್ಯಗಳುಪ್ರತಿರಹಿತರು ತಾವೆಂಬ ಡಾಂಭಿಕರಾಜರುಅತಿಗೂಢಚಾರ ರಾಜಭೃತ್ಯರು ಅಲ್ಲಲ್ಲಿಇತ್ತ ಅತ್ತ ಎಲ್ಲೂ ಪುರಜನ ಗುಂಪು 39ಮಂದಗಜಗಮನೆಯು ಸ್ವಚ್ಛ ಹಂಸದವೋಲುಚಂದಪಾದವ ಮೆಲ್ಲ ಮೆಲ್ಲನೆ ಇಡುತಸ್ವಯಂವರದಿ ಸಯಂದನದಿ ನೀ ಇರೆ ವಾರೆನೋಟ ನೋಡಿಬಂದಳು ಉದಯಾರ್ಕ ಪದುಮಮುಖ ಮುದದಿ 40ಮಂದಜಭವಾಂಡದಲ್ಲಿ ಎಲ್ಲೆಲ್ಲೂ ಇಲ್ಲದರೂಪಸೌಂದರ್ಯವತಿಯ ಮೋಹದಲ್ಲಿ ನೋಡಿಮಂಧಧೀ ರಾಜರು ಕಾಯದಿ ಮೈಮರೆಯೇಮಂದಜಕರದಿಂದ ನೀ ಎತ್ತಿಕೊಂಡಿ ಭೈಷ್ಮಿಯ41ಗರುಡಧ್ವಜದಿಂದ ಶೋಭಿಸುವ ರಥದಲ್ಲಿಸಿರಿರುಕ್ಮಿಣಿ ಸಹ ಕುಳಿತು ನೀನುಹೊರಟಿ ಸಸೈನ್ಯ ಬಲರಾಮ ಸಹ ಅದುರುಳರ ಕಣ್ಣು ಮುಂದೆಯೇ ಶ್ರೀಧರಾಚ್ಯುತನೇ 42ಹಾಹಾಕಾರದಲಿ ಕೂಗಿ ಆರ್ಭಟಮಾಡಿಮಹಾಸೈನ್ಯ ಸಹ ಜರಾಸಂಧಾದಿ ರಾಜರುಬಹುವಿಧ ಧನುರ್‍ಸ್ತ್ರಯುತ ಹಿಂಬಾಲಿಸಿಕುಹಕರು ಅತಿಘೋರ ಯುದ್ದ ಮಾಡಿದರು 43ಲೀಲೆಯಿಂದಲಿ ನೀನು ಬಲರಾಮ ಯಾದವರುಖಳಜರಾಸಂಧಾದಿಗಳ ಸೈನ್ಯದವರತಲೆ ಕಾಲು ಕತ್ತರಿಸಿ ಛಿನ್ನ ಭಿನ್ನ ಮಾಡೇಪೇಳದೆ ಓಡಿದನು ಜರಾಸುತನು ಸೋತ 44ಧಾಮಘೋಷನಲಿ ಪೋಗಿ ಅವನ್ನ ಆಶ್ವಾಸಿಸಿತಾಮರಳಿ ಪೋದನು ತನ್ನ ಪಟ್ಟಣಕ್ಕೆತಮ್ಮ ತಮ್ಮ ಪುರಿಗಳಿಗೆ ಇತರ ರಾಜರೂ ಪೋಗೇವರ್ಮದಿ ಯುದ್ಧವ ಮುಂದುವರೆಸಿದ ರುಗ್ಮಿ 45ಶಪಥ ಮಾತುಗಳಾಡಿ ಯುದ್ಧ ಮಾಡಿದ ರುಗ್ಮಿಚಾಪಶರಸಾರಥಿಅಶ್ವಗಳ ಕಳಕೊಂಡುಕೋಪೋಚ್ಛದಿ ಖಡ್ಗದಿ ಎತ್ತಿಕೊಂಡು ಬರಲುಶ್ರೀಪ ನೀ ಆ ಖಳನ್ನ ಕಟ್ಟಿಹಾಕಿದೆಯೋ 46ಜಲಜಾಕ್ಷಿ ಭೈಷ್ಮೀ ಪ್ರಾರ್ಥಿಸಲು ನೀ ರುಗ್ಮಿಯಕೊಲ್ಲದೇ ವಿರೂಪ ಮಾತ್ರವ ಮಾಡೇ ಆಗಬಲರಾಮ ವಾದಿಸಿ ಬಿಡುಗಡೆ ಆಗಿ ಆಖಳಓಡಿ ಪೋದನು ಭೋಜಘಟಕ್ಕೆ47ಜಯ ಕೃಷ್ಣ ಶ್ರೀರುಕ್ಮಿಣಿ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರುವಿಪ್ರಮುತ್ತೈದೆಯರುಜಯ ಜಯ ಎನ್ನುತ್ತ ಆನಂದದಿ ಮುಳುಗಿದರು 48ಯದುಪುರಿಯಲ್ಲಿ ಮನೆಮನೆಯಲ್ಲಿ ಮಹೋತ್ಸವವುಮುದದಿ ಅಲಂಕೃತರಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ಜಲ ದೀಪಾವಳಿ ಪೂರ್ಣ ಕುಂಭಗಳುಚೆಂದ ಗೊಂಚಲು ಪುಷ್ಪ ರತ್ನ ತೋರಣಗಳು 49ಸಂಜಯ ಕುರುಕೇಕಯಾದಿ ರಾಜರುಗಳುರಾಜಕನ್ಯೇಯರ ಗಜಗಳ ಒಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆಯ ಪೊಗಳಿದರು ನರನಾರಿಯರೆಲ್ಲಾ 50ಚತುರ್ಮುಖ ಸುವೀರೆ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದ ಸುರರ ಮುನೀಂದ್ರರ ವೇದಮಂತ್ರಗಳಮದುವೆ ಮಹೋತ್ಸವದ ವೈಭವಏನೆಂಬೆ ಜಯ ಜಯ ಜಯತು 51ಪೂರ್ಣ ಜ್ಞÕನಾತ್ಮನೇ ಪೂರ್ಣ ಐಶ್ವರ್ಯಾತ್ಮಪೂರ್ಣ ಪ್ರಭಾನಂದ ತೇಜಸ್ ಶಕ್ತ್ಯಾತ್ಮಆ ನಮಿಪೆ ಅಚ್ಯುತಾನಂದ ಗೋವಿಂದ ವಿಭೋಕೃಷ್ಣ ರುಕ್ಮಿಣೀನಾಥ ಜಗದೇಕವಂದ್ಯ 52ಆದರದಿ ಸುರವೃಂದ ರಾಜರೂ ವಿಪ್ರರೂಯಾದವರುಗಳು ಶ್ರೀ ಕೃಷ್ಣ ರುಕ್ಮಿಣೀನಿತ್ಯಸತಿಪತಿ ಮದುವೆ ನೋಡಿ ಮಹಾನಂದಹೊಂದಿದರು ಸೌಭಾಗ್ಯಪ್ರದ ಇದು ಪಠಿಸೆ 53ಯೋಗೇಶ್ವರ ದೇವ ದೇವ ಶ್ರೀಯಃಪತಿಅನಘಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀ ರಮಾರುಕ್ಮಿಣೀಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 54ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 55-ಇತಿ ಶ್ರೀ ರುಕ್ಮಿಣೀಶ ಕಲ್ಯಾಣ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಿಲ್ವೊದೇಶ್ವರ ಶ್ರೀ ಮದುಮಾವಲ್ಲಭಸಂತತ ಪಾಲಯಮಾಂಪ.ನಾಕಪವಂದ್ಯ ಕೃಪಾಕರ ಪಾಪನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ 1ಭುಜಗಾಭರಣ ಗಜಮದಹರಣಗಜಚರ್ಮಾಂಬರ ಸುಜನವರದ್ವಿಜರವಿ ವೃಷಧ್ವಜಾಸಮಲೋಚನರಜನೀಚರ ತ್ರಿಪುರಜಮಥನ 2ದುರ್ಧರ್ಷಾಂಧಕ ಮದರ್Àಕ ಶಂಭೊನಿರ್ದೋಷ ಶ್ವೇತಾದ್ರಿ ಪ್ರಭೊಸ್ವರ್ಧುನಿಸಹಿತ ಕಪರ್ದಿನ್ ಶಿವಶಿವಊಧ್ರ್ವ ಪಟಾರ್ಚಕವದನಭೋ3ಗರಕಂಧರ ವೃಷಚರ ಅದ್ಭುತ ನಿಕರಪರಿಚರ ಪಾಂಡುರಗಾತ್ರಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರಹರಭವಸುಖಕರ ಮೂರ್ತೆ4ಶಂಕರ ಸುಗುಣಾಲಂಕೃತ ಭಕ್ತಾತಂಕವಿದೂರಕ ಶಂಖ ರಥಾಂಗಾಂಕಿತ ಪ್ರಸನ್ವೆಂಕಟನಾಯಕಕಿಂಕರಜನಪ್ರಿಯ ತ್ವಂ ಕೃಪಯಾ5
--------------
ಪ್ರಸನ್ನವೆಂಕಟದಾಸರು
ಸಾಯುಧ ಚತುರ್ವಿಂಶತಿ ವಿಷ್ಣುರೂಪ ಸ್ತೋತ್ರ46ಬಲದ ಅಜಾನುಕರ ಮೊದಲು ಪ್ರದಕ್ಷಿಣದಿಸಲಿಲಜಾದಿಧರರಮಾಪತೇ ನಮಸ್ತೇ ಪಅರವಿಂದ -ಶಂಖ ಸುದರ್ಶನ ಕೌಮೋದಕೀಧರನಮೋ ಕೇಶವ ಶ್ರೀಶ ಬ್ರಹ್ಮೇಶ 1ದರಾಂಬುಜಗದಾಚಕ್ರಧರಶ್ರೀಶ ನಮೋನಾರಾಯಣ ದೋಷದೂರಗುಣಪೂರ್ಣ 2ಕೌಮೋದಕೀಚಕ್ರದರಕಮಲಹಸ್ತನೇನಮೋಮಾಧವಲಕ್ಷ್ಮೀರಮಣ ಮಾಂಪಾಹಿ3ಚಕ್ರ ಕೌಮೋದಕೀ ಪ್ರಫುಲ್ಲ ಅರವಿಂದಶಂಖ ಧರ ಗೋವಿಂದ ನಮೋ ವೇದವೇದ್ಯ 4ಗದಾಸರೋರುಹಶಂಖಚಕ್ರಧರವಿಷ್ಣೋಮೋದಮಯ ಸರ್ವತ್ರ ಬಹಿರಂತವ್ರ್ಯಾಪ್ತ 5ಸಹಸ್ರಾರ ಶಂಖಾಬ್ಜ ಗದಾಧರ ನಮಸ್ತೇಪಾಹಿಮಧುಸೂಧನ ಮಹಾರ್ಹ ಹಯಶೀರ್ಷ6ಅಂಬುಜಗದಾಚಕ್ರ ಶಂಖೀ ತ್ರಿವಿಕ್ರಮನೆಪುಷ್ಪಜಾರ್ಚಿತ ತ್ರಿಪದ ನಮೋ ವಿಶ್ವರೂಪ 7ಶಂಖಾರಿ ಕೌಮೋದಕೀ ಪದ್ಮ ಹಸ್ತನೇಮಂಗಳ ಸುಸೌಂದರ್ಯ ವಾಮನ ನಮಸ್ತೇ 8ಇಂದೀವರಾರಿಗದಾಶಂಖೀ ನಮಸ್ತೇಶ್ರೀಧರ ಸದಾ ನಮೋ ಶ್ರೀವತ್ಸಪಾಹಿ9ಗದಾ ಚಕ್ರ ಪದ್ಮಧರಾಹಸ್ತಹೃಷಿಕೇಶಇಂದ್ರಿಯ ನಿಯಾಮಕ ದೇವದೇವೇಶ 10ಶಂಖಾಬ್ಜರಿಗದಾಧರಪದ್ಮನಾಭಅಕಳಂಕ ಮಹಿಮ ಜಗಜ್ಜನ್ಮಾದಿಕರ್ತ 11ಕಮಲಧರ ಕೌಮೋದಕೀ ಚಕ್ರೀ ಈಶದಾಮೋದರ ದೇವ ಸುಜ್ಞಾನದಾತ 12ಕೌಮೋದಕೀ ಶಂಖ ಅಬ್ಜಾರಿಪಾಣಿನ್ಮಮ ಪಾಪಹರ ಸಂಕರ್ಷಣ ಜಯೇಶ 13ಗದಾಶಂಖ ಚಕ್ರಾಬ್ಜಹಸ್ತ ಮಾಯೇಶಸದಾ ನಮೋ ಳಾಳುಕ ಡರಿವಾಸುದೇವ14ರಥಾಂಗಕಂಬುಗದಾ ಕಮಲಧರ ಪ್ರದ್ಯುಮ್ನಕೃತಿದೇವಿರಮಣ ನಮೋ ಭಾಸ್ವ ಮದ್ ಹೃದಯೇ 15ರಥಾಂಗಗದಾಕಂಬುಕಮಲಹಸ್ತನಮೋಶಾಂತೀಶ ಅನಿರುದ್ಧ ಶರಣು ಮಾಂಪಾಹಿ16ಅರಿಕಮಲಶಂಖ ಗದಾಧರ ಪುರುಷೋತ್ತಮಕ್ಷರಾ ಕ್ಷರೋತ್ತಮ ಪೂರುಷ ಸ್ವತಂತ್ರ ನಮೋಪಾಹಿ17ಪದ್ಮ ಗದಾ ಶಂಖಾರಿಧರಅಧೋಕ್ಷಜನಮೋಮೋದಮಯ ಕಪಿಲ ಭಾಮನ ಡರಕವಿಶ್ವ18ಚಕ್ರಾಬ್ಜ ಗದಾ ಶಂಖ ಭಕ್ತ ರಕ್ಷಕ ನಮೋಸದಾನಂದ ಚಿನ್ಮಯಅನಘಅವಿಕಾರಿ19ಅಬ್ಜಾರಿ ಶಂಖ ಗದಾಧರ ಜನಾರ್ಧನ ನಮೋಅಜಿತಅಜಸಂಸಾರ ಬಂಧ ಹರ ಸುಖದಾ20ದರಗದಾಅರಿಅಬ್ಜಧರ ಉಪೇಂದ್ರ ನಮೋಇಂದ್ರಾನುಜನೇ ಬ್ರಹ್ಮ ರುದ್ರಾದಿ ವಂದ್ಯ 21ದರಸುದರ್ಶನಕಮಲಕೌಮೋದಕೀ ಪಿಡಿದಹರಿಶ್ರೀಯಃಪತಿಅಭಯವರದನೇ ಶರಣು22ಶಂಖ ಕೌಮೋದಕೀ ಅಬ್ಜಾರಿಧರ ಕೃಷ್ಣಸುಖಜ್ಞಾನ ಚೇಷ್ಟಾರೂಪನಮೋ ಶ್ರೀಶ23ಮಧ್ವ ಹೃದ್ವನಜಸ್ಥ ಚತುರ್ವಿಂಶತಿರೂಪಉದ್ದಾಮ ಪರಮಾರ್ತಹರಿಶ್ರೀಶ ಶರಣು24ಮತ್ಸ್ಯಕೂರ್ಮಕ್ರೋಡನರಸಿಂಹವಟುರೇಣು-ಕಾತ್ಮಜ ಶ್ರೀರಾಮ ಕೃಷ್ಣ ಶಿಶು ಕಲ್ಕಿ 25ಆನಂದಚಿನ್ಮಯ ಅನಂತ ರೂಪನೇ ನಮೋವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ 26
--------------
ಪ್ರಸನ್ನ ಶ್ರೀನಿವಾಸದಾಸರು