ಒಟ್ಟು 643 ಕಡೆಗಳಲ್ಲಿ , 75 ದಾಸರು , 379 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1 ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2 ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ಯಾಕೆ ಭವಬಾಧೆ ಇವಗೆ ಪನ್ನಂಗಶಯನನಡಿ ಚೆನ್ನಾಗಿ ಭಜಿಪವಗೆ ಪ ದುರಿತ ದುರ್ಗುಣಗಳನು ತರಿದೊಟ್ಟಿ ನ ಶ್ವರದ ಸಿರಿಯನಾಪೇಕ್ಷಿಸಿದೆ ನಿರುತ ಮಾನಸದಿ ಪರಕೆ ಪರತರವೆನಿಪ ಹರಿಯಂಘ್ರಿ ಎಡೆಬಿಡದೆ ಸ್ಮರಿಸುತ ಮನದೊಳಗೆ ಹರುಷಬರುವವಗೆ 1 ಹೀನಸಂಸಾರದ ನಾನಾ ಸಂಪದವೆಲ್ಲ ಶ್ವಾನನ ಕನಸಿನಂತೇನಿಲ್ಲವೆನುತ ಜ್ಞಾನದೊಳಳವಟ್ಟು ಜಾನಕೀಶನ ಧ್ಯಾನ ಮಾನಸದಿ ಒಲಿಸಿಕೊಂಡಾನಂದಿಸುವವಗೆ 2 ಹೇಸಿಯ ಪ್ರಪಂಚದ್ವಾಸನವನಳುಕಿಸಿ ದಾಸಜನ ಸಂಪದವೆ ಶಾಶ್ವತವೆನುತ ಶ್ರೀಶ ಶ್ರೀರಾಮನ ಸಾಸರನಾಮಗಳ ಧ್ಯಾಸದ್ಹೊಗಳುತ ಸಂತೋಷದಿರುವವಗೆ 3
--------------
ರಾಮದಾಸರು
ಇಷ್ಟು ದಯವುಳ್ಳವನ ಯಾಕೆ ಬರಬೇಡೆಂದಿಇಷ್ಟು ನಿರ್ದಯಳೆ ನೀನು ಪ. ಇನ್ನೆಲ್ಲಿ ಪೋಗಲೆ ರತಿಯಿಲ್ಲದಿದ್ದರೆ ನಿನಗೆ ಪೂಮಾಲೆ ತಾ ಎನೆಸಣ್ಣ ಕಮಲದೆಲೆಯ ಬಣ್ಣದ ಗಿಣಿ ಬರೆದುವ ಸಣ್ಣ ಸೀರೆಯ ಕೊಡುವೆನೆಕಣ್ಣಿಗೆ ಪ್ರಿಯವಾದ ಕಮಲಮಯ ಕುಪ್ಪಸವ ಕರೆದು ಕೈಯಲಿ ಕೊಡುವೆÀನೆಬಿನ್ನಣದಿಂದಲಿ ಬಗೆಬಗೆಯಲಿ ನಿನಗೆ ಬಾಯಮುದ್ದನುವ ಕೊಡುವೆನೆ ಸಖಿಯೆ1 ತಳಿರು ಸುಳಿಗರೆವÀ ರುಮಾಲೆತÀಲೆಯಲ್ಲಿ ಸುತ್ತಿ ಬಾಹನ ಥಳಥಳಿಪ ನ-ವಿಲುಗರಿ ಮುತ್ತಿನ ತುರಾಯವ ಸಿಕ್ಕಿ ತರುಣಿ ನಿಲ್ಲಲಿ ಬಾಹೆನೆ ಸಖಿಯೆ 2 ಉರುಟಾಣೆ ಮುತ್ತುಗಳುಚಿತವಾಗಿವೆ ನಿನ್ನ ಉರುಟು ಕುಚಗಳ ಪಿಡಿವೆನೆಮುದದಿಂದ ನಿನ್ನ ಮುಖ ಕಿರುಬೆವರನೆಒರೆÀಸಿ ಕಸ್ತೂರಿತಿಲಕವನಿಡುವೆನೆಸಿರಿಯರಸ ಹಯವದನ ರಂಗನ ಚರಣವನು ನೆರೆನಂಬಿ ಭಜಿಸು ಸಖಿಯೆ ಸಖಿಯೆ3
--------------
ವಾದಿರಾಜ
ಈ ಧರಣಿಯೊಳ್ ಹದಿನಾರು ಸಾವಿರ ಮಂದಿ ಆಳುತ ದ್ವಾರಕೆಯಲ್ಲಿ ವಿನೋದದಿ ಕುಳಿತಿದ್ದ ಹರಿಯು 1 ಅಂಬುಜೋದ್ಭವನ ಅಂಕದಲುದಿಸಿದ ಸುತ ಚೆಂದ ಚೆಂದ ವೀಣೆ ಪಿಡಿದು ಕಂದರ್ಪಪಿತ (ನಲ್ಲಿಗೆ) ನಲಿನಲಿದಾಡುತ ಬಂದ ನಾರಂದ ಹರುಷದಲಿ2 ಬಂದ ನಾರಂದನ ಕಂಡು ಕಮಲನಾಭ ಚೆಂದದಿಂದಲಿ ಅಘ್ರ್ಯ ಪಾದಪೂಜೆಯ ಮಾಡಿ ನಾ- ರಂದಗೆ ಎರಗಿದನಾಗ3 ದೇವಾಧಿದೇವನೆ ದೇವಲೋಕದಿ ಸುತ್ತಿ ಈ ಪಾರಿಜಾತವ ತಂದೆ ದೇವಿ ರುಕ್ಮಿಣಿಗೀಗ ಮುಡಿಸೆಂದು ನಾರಂದ ಸ್ವಾಮಿಯ ಚರಣಕ್ಕರ್ಪಿಸಿದ 4 ತಕ್ಷಣದಿ ಜಗನ್ಮಾತೆ ಮಾಲಕ್ಷುಮಿ ಸಾಕ್ಷಾತ ಶ್ರೀನಾರಾಯಣನು ವಕ್ಷಸ್ಥಳದಲಿ ಹೊಂದಿರುವ ರುಕ್ಮಿಣಿಯನು ಸ್ತೋತ್ರ ಮಾಡಿದನು ನಾರದನು 5 ಕಡಲಶಯನ ಕಡೆಗಣ್ಣ ನೋಟಗಳಿಂದ ಕಡುಮುದ್ದು ಸುರಿವೊ ರುಕ್ಮಿಣಿಯ ಬಡನಡುವಿನ ಭಾಮಿನಿರನ್ನೆ ಬಾರೆಂದು ತೊಡೆಯ ಮ್ಯಾಲಿಟ್ಟ ಶ್ರೀಕೃಷ್ಣ 6 ದುಂಡುಮಲ್ಲಿಗೆ ಗೊಂಡ್ಯ ಚೌರಿ ರಾಗಟೆ ಜಡೆ- ಅಂಗನೆ ರುಗ್ಮಿಯಾಲಿಂಗನೆ ಮಾಡುತ ರಂಗ ತಾ ಮುಡಿಸಿದ ಸತಿಗೆ 7 ಸರಿಸವತೇರ ಬಿಟ್ಟು ಸುರಪಾರಿಜಾತವ ಗರುವಿಕೆಯಿಂದ ನೀ ಮುಡಿದೆ ಹರದಿ ಸತ್ಯಭಾಮೆ ಕೇಳಿ ಮುನಿದರಿನ್ನು ಅರಿಯೆನು ನಾ ಇದಕೆ ಉಪಾಯ 8 ಗಾಡಿಕಾರನು ಕೃಷ್ಣ ಆಡುವೊ ಮಾತನು ಕೇಳಿ ರುಕ್ಮಿಣಿ ನಗುತಿರಲು ಓಡುತ ಬಂದು ನಾರದ ಸತ್ಯಭಾಮೆ- ಗಲ್ಲದ ವಾರ್ತೆಗಳರುಹಿದನು 9 ಅಲ್ಲಿಂದ ದೇವಲೋಕವ ಸುತ್ತಿ ತಂದೇನೆ ಚೆಲ್ವೆನಗೆ ತಕ್ಕ ಕುಸುಮ ಗೊಲ್ಲ ಕೃಷ್ಣನ ಕೈಯಲ್ಲಿ ಕೊಟ್ಟರೆ ತನ್ನ ನಲ್ಲೆ ರುಕ್ಮಿಣಿಗೆ ಮುಡಿಸಿದನು 10 ಕೇಳುತ ಭಾಮೆ ತಲ್ಲಣಿಸಿ ಕೋಪಗಳಿಂದ ಹೇಮಮಾಣಿಕ್ಯದ್ವಜ್ರಾಭರಣ ಹಾರ ಪದಕ ಕಠಾಣಿಮುತ್ತನೆ ಚೆಲ್ಲಿ ಭೂಮಿಲಿ ಬಿದ್ದೊ ್ಹರಳಿದಳು 11 ಮಲ್ಲಿಗೆ ದವನ ಕ್ಯಾದಿಗೆ ಶಾವಂತಿಗೆ ಬಿಟ್ಟು ಒಲ್ಲೆನೆಂದೊರೆಸಿ ಕಸ್ತೂರಿಯ ವಲ್ಲಭನೊಲ್ಲದೀ ಸೊಗಸ್ಯಾತಕೆನುತಲಿ ಗಲ್ಲದ್ವಿಳ್ಯವನುಗುಳಿದಳು 12 ಸರ್ಪನಂದದಿ ಉಸುರ್ಹಾಕುತ ಭಾಮೆ ತಾ ನೇತ್ರದಿ ಜಲವ ಸುರಿಸುತಲಿ ಸರ್ಪಶಯನನೊಲ್ಲದೀ ದೇಹವ್ಯಾಕೆಂದು ಪಟ್ಟೆ ಮಂಚದಲೊರಗಿದಳು 13 ನಿಂತು ನೋಡುತ ಸತ್ಯಭಾಮೆ ಮಾಡುವೊದು ಇ- ನ್ನೆಂತು ಮಾಡಲಿಯಿದಕೆಂದು ಅಂತರಂಗದಲಿ ಯೋಚನೆ ಮಾಡಿ ನಾರಂದ ಶ್ರೀ- ಕಾಂತನ ಮನೆಮಾರ್ಗ ಹಿಡಿದ 14 ತಿರುಗಿ ಬಂದ್ಹರಿಯ ಮುಂದರುಹಿದ ನಾರಂದ ತೊರೆವೋಳು ತನ್ನ ಪ್ರಾಣವನು ಮರುಗುತ ಸೊರಗಿ ಬಿದ್ದಿರುವೊ ಭಾಮೆಯ ನೋಡಿ ಕರುಣವಿಲ್ಲೇನೊ ಶ್ರೀ ಕೃಷ್ಣ 15 ಮುನಿಯ ಮಾತನು ಕೇಳಿ ಮುಗುಳು ನಗೆಯ ನಕ್ಕು ಪರಿ ಬವಣೆಗೆ ಒಳಗಾದೆ ಧರೆಯ ಒಳಗೆ ಇಬ್ಬರ್ಹೆಂಡರಾಳುವೋರಿನ್ನು ಪರಮ ಮೂರ್ಖರು ಅವರೆಂದ 16 ಹೊದ್ದ ಪೀತಾಂಬರ ಅಲೆಯುತ ಶ್ರೀಕೃಷ್ಣ ಹದ್ದನೇರದೆ ನಡೆಯುತಲಿ ಮುದ್ದು ರುಕ್ಮಿಣಿಯ ಮುಂದಕೆ ಕರೆದ್ಹೇಳದೆ ಎದ್ದು ಬಂದನು ಭಾಮೆಮನೆಗೆ 17 ಅರ್ಕನಂತ್ಹೊಳೆಯುತ ಹೊಕ್ಕ ತನ್ನರಮನೆ ಕಕ್ಕಬಿಕ್ಕ್ಯಾಗಿ ನೋಡುತಲಿ ದಿಕ್ಕು ದಿಕ್ಕಿಗೆ ಬಿದ್ದಾಭರಣವಾರಿಸಿ ರತ್ನ ದೆಕ್ಕಿಲೇ(?) ಬಂದು ತಾ ಕುಳಿತ 18 ಮಿಂಚು ಸೂರ್ಯಗೆ ಮಿಗಿಲಾಗಿದ್ದ ಮುಖ ಬಾಡಿ ಸಂಪಿಗೆ ಸರವ ಈಡ್ಯಾಡಿ ಚಿಂತೆಮಾಡುವರೆ ಚಿನ್ನದ ಗೊಂಬೆ ಏಳೆಂದು ಮಂಚದ ಮ್ಯಾಲೆ ತಾ ಕುಳಿತ 19 ಬೆವರಿದ್ದ ಮುಖವ ಮುಂಜೆರಗಿಲಿಂದೊರೆಸುತ ಹ- ರವಿದ ಹಾರ ಹಾಕುತಲಿ ಪರಮ ಪ್ರೀತಿಲಿ ತನ್ನ ಕರಗಳಿಂದ್ಹಿಡಿದೆತ್ತೆ- ನ್ನರಗಿಳಿ ಏಳೆಂದೆಬ್ಬಿಸಿದ 20 ಸಿಟ್ಟಿಲಿಂದೆದ್ದು ಶ್ರೀ ಕೃಷ್ಣನ ಒಳೆಯಿಕ್ಕೆ ಬಿಟ್ಟವರಾರು ಈಗೆನುತ ದೃಷ್ಟಿ ತೆಗೆದು ಕೋಟಿಸೂರ್ಯ ಪ್ರಕಾಶನ ಇ- ಕ್ಕದ್ಹಾಗೆವೆಯ ನೋಡಿದಳು 21 ಇಷ್ಟು ಕ್ರೋಧಗಳ್ಯಾತಕೀ ಚಾಡಿ ನಾರಂದ ಹಚ್ಚಿ ಹೋದನೆ ಕದನವನು <ಈಔಓಖಿ size=
--------------
ಹರಪನಹಳ್ಳಿಭೀಮವ್ವ
ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ಎಚ್ಚರಿಕೆ ಎಚ್ಚರಿಕೆ ಅಚ್ಚುತ ಮೆಚ್ಚನು ಎಚ್ಚರಿಕೆ ಪ. ಇಚ್ಛಿಸದಿಹ ಸುಖ ಸ್ವಚ್ಛ ಭಕುತಿಯಲಿ ಹರಿ ಇಚ್ಚೆಯಲಿರು ಮನವೆಅ.ಪ. ಹಗಲು ಹಸಿ ಮುಂದಿರುಳು ನಿದ್ರೆ ಹಗೆಯಹುದೆಂದು ಬಗೆಯದೆ ನೀ ಜಗದೊಡೆಯನು ಸಿಗ್ಯಮಿಗೆ ಧ್ಯಾನಿಸದೆ ಅಘ ಪೋಗುವುದೆ ಮನವೆಚ್ಚರಿಕೆ 1 ಯಾಕೆಂತು ನೀ ಪರರ ಯೊಚಿಸುವೆ ನಿನ ಸಾಕುವನ್ಯಾರೆಂದು ಯೋಚಿಸದೆÉ ಆ ಕೈವಲ್ಯಾಧಿಪನೆಂದು ತಿಳಿ ಅ ನೇಕ ರೂಪಿಲಿಹ ಎಚ್ಚರಿಕೆ 2 ಪರಸಖನ ಎನಗೆ ಹರಿಯೆಂದ ತರಳನ ಸಲಹಿತು ನಾರಾಯಣ ನಾಮ ಗರುಡಗಮನ ಶ್ರೀ ಶ್ರೀನಿವಾಸನೆ ನಿರುತ ಮರೆಯದಿರು ಮನವೆಚ್ಚರಿಕೆ 3
--------------
ಸರಸ್ವತಿ ಬಾಯಿ
ಎಂಟು ದಿನವಾಯಿತಲ್ಲೊ ಭಕ್ತ ನೆಂಟನ್ಯಾಕೆ ತಡವು ಮನೆಗೆ ಕರೆಸಯ್ಯ ಕರುಣವಿರಿಸಯ್ಯ ಪ. ಆವಲ್ಲಿ ಪೋದರು ನಿನ್ನ ಸೇವೆ ಮಾಳ್ಪ ಸುಖಕೆ ಸರಿಯಾ ಪಡೆಯದೆ ಎಲ್ಲೂ ತಡೆಯದೆ ಶ್ರೀವಲ್ಲಭ ನಿನ್ನ ಕಾಂ¨ ಭಾವನೆಯಿಂದೆನ್ನ ಮನಸು ತಿರುಗಿತು ಬಹಳ ಕರಗಿತು 1 ಯೋಗಿವರದ ನಿನ್ನ ಮೂರ್ತಿ ಬೇಗದಿಂದ ನೋಳ್ಪೆನೆಂದು ಯೋಚಿಸಿ ಮುಂದೆ ಸೂಚಿಸಿ ನಾಗೂರ ಪಟ್ಟಣವ ಬಿಟ್ಟು ಸಾಗಿ ಬರುವ ಸಮಯದಲ್ಲಿ ಆಶೆಯಾ ಪಾಶ ಸೂಸಿತು 2 ದೋಷಿಯೆಂದು ಗ್ರಹಿಸದೆ ಸ- ರ್ವಾಸೆ ಪೂರಿಸಖಿಳ ಜಗದೀಶನೆ ವೆಂಕಟೇಶನೆ ಶ್ರೀಶ ನಿನ್ನ ಕಡೆಗೆ ಕರೆಸಿ ನಿತ್ಯ ಸೇವೆ ಕೊಳ್ಳಯ್ಯ ಖಜ್ಜಬಿಲ್ಲಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಣಿಸಿಕೊ ನಿನ್ನೊಳಗಣ ದೋಷಗಣವಾಗಣಿಸು ಪರರೊಳಿಪ್ಪ ಶುಭಕರ ಗುಣವಾ ಪಪರರ ಬಾಗಿಲ ಕಾಯ್ದು ಪರಿಪರಿ ನುತಿಗೈದುಕರಗಿಸಿ ಮನವ ಬೋಧಿಸಿ ತತ್ವವಾಪಿರಿದಾಗಿಯವರ 'ತ್ತಾದಿಗಳೊಳು ಮನ'ರಿಸಿ 1ದೊರೆಯದಿರೆ ಪರಸತಿ ಪರಧನ ಪರರನ್ನಪರನಾಗಿ ಪರಿಪರಿಯುಪಚಾರಗೈದವರಪರ[ವಶ]ವ ಪಡೆದಿರುತವರೊಳು ದೋಷವೆರಸಿದ ಗುಣಗಳನರಸಿ ಕೆಡುವೆಯಾಕೆ 2ನಿನ್ನೊಳುದಿಸಿದ ಸದ್ಗುಣ ನಿನ್ನ ಭೂಸಿಯುನ್ನತನೆನಿಸಿಯೆ ರಕ್ಷಿಪುದೂನಿನ್ನೊಳಗಣ ದುರ್ಗುಣ ನಿನ್ನುವ ದೂಸಿಕಣ್ಣುಗೆಡಿಸಿ ಕೊಂದು ಕೂಗುವದದರಿಂದಾ3ಮೂಳ ಹೆಮ್ಮೆಯ ಬಿಡು ತಾಳುಖೂಳವಾದವ ಸುಡು ಹರುಷ ಬಿಡುಶೀಲತನವ ಹೂಡು ಬಾಳುವದನು ನೋಡುನಾಳೆ ತಾನಿರುವದೊ ಬೀಳುವದೋ ಗೂಡು 4ಪರರ ನಿಂದಿಸಿ ದೋಷ ಪಿರಿದಾಗಲಾಯಷ್ಯಕಿರಿದಾಗಿಯೂ ಕರ್ಮ ಸೂಕರ ಜನ್ಮಗೊಡದೆ ತೊಲಗಿ ಪೋಗುವುದರಿಂದಾ 5ವರಜನ್ಮಾಂತರದೆ ಸದ್ಗುಣ ಲೇಶ'ರಲದನೆ ಗಣಿಸುತ 'ಗ್ಗಲುಕರಗಿ ನಿನ್ನಯ ದೋಷ 'ರಿದುಮ್ಮಳವ ಪಡೆದಿರುವೆ ಸುಖ ಮತ್ತೆ ಪರಗತಿ ಪಡೆಯುವೆ 6ಗುರುವಾಸುದೇವಾರ್ಯ ಚರಣದೊಲವ ಪಡೆಯುವರೆಪರಗುಣಗಳ ಗಣಿಸು ಕಂಡ್ಯಾಕರುಣದಿಂ ಚಿಕನಾಗಪುರಪತಿ ವೆಂಕಟಗಿರಿವಾಸ ಸನ್ನಿಧಿ ದೊರೆಯುವದಿದರಿಂದಾ 7
--------------
ತಿಮ್ಮಪ್ಪದಾಸರು
ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ಪ. ಸಣ್ಣ ಕೂಸಿದ್ದಾಗ ಇವನು ಸೂರ್ಯಗೆ ಹಣ್ಣೆಂದುಹಾರಿದ ಗಗನಕ್ಕೆ ತಾನು ಉಡ್ಡೀನ ಗೈದುನೀರಧಿಯ ದಾಟಿದನುಇವನ ಅಂಗದ ಕೋಮಲ ಬಣ್ಣ ವರ್ಣಿಸಲೇನು 1 ಗಂಧಮಾದನ ಗಿರಿ ತಂದು ನೋಡಿ ಗಿರಿ ನಿಂದಲ್ಲೆ ಹಿಂದಕ್ಕೆ ಒಗೆದ ಈಡ್ಯಾಡಿಒಂದೊಂದು ಬೆಡಗವ ನೋಡಿನಮ್ಮ ಇಂದಿರೇಶನು ನಕ್ಕ ಕೌತುಕ ಮಾಡಿ 2 ಹುಟ್ಟಿದಾಗ ಭೀಮ ಒಂದಿಷ್ಟು ಎತ್ತಿಪಟ್ಟನೆ ಬಿದ್ದು ಕೌತುಕ ಮಾಡಿದನೆಷ್ಟುಬೆಟ್ಟಗಳ ಒಡೆದು ಹಿಟ್ಟೆಟ್ಟುಇವನ ಅಂಗದ ಕೋಮಲ ವರ್ಣಿಸಲೆಷ್ಟು3 ಭಿಕ್ಷೆ ಬೇಡಿದನಂತೆ ಕಂಡು ತಾನರಿಯಳು ಕಾಂತೆ ಇಂಥ ದಿಂಡ ಪುರುಷನ ಬೆರೆದಳು ಕಾಂತೆ4 ಘನ್ನಗರಳ ಕುಡಿದನಂತೆ ಅದು ತನ್ನ ದೇಹವ ತಪಿಸುತಲಿದ್ದವರಂತೆಸನ್ಯಾಸ ಇವಗ್ಯಾಕೆ ಕಾಂತೆನಮ್ಮ ಚೆನ್ನ ರಾಮೇಶ ನೋಡಿನಕ್ಕನಂತೆ 5
--------------
ಗಲಗಲಿಅವ್ವನವರು
ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1 ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2 ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3
--------------
ಕೆಳದಿ ವೆಂಕಣ್ಣ ಕವಿ
ಎಂಥಾತ ಗುರುರಾಯನು ಜಗ - ದಂತರ್ನಿಯಾಮಕನು ಪ ಸಂತೋಷದಿಂದಲಿ ಅಂತೇವಾಸಿಗಳ ನಿಂತು ಪಾಲಿಸುತಿಹನು ಅ.ಪ ಚಿಂತೆಯು ಯಾಕೆಂದನು ನಿ - ಶ್ಚಿಂತಿ ಮಾರ್ಗವಿದೆಂದನು ಅಂತರದೊಳು ಶಿರಿಕಾಂತನ ಪದವೇಕಾಂತದಿ ಭಜಿಸೆಂದನು 1 ಯಾತಕೆ ಶ್ರಮವೆಂದನು ನಿನಗೆ ಪಾತಕÀವಿಲ್ಲೆಂದನು ಶಿರಿ ನಾಥನ ಭಜಿಸೆಂದನು 2 ಮಾತು ಮೀರದಿರೆಂದಾನು ಮಾತು ಲಾಲಿಪÀನೆಂದನು 3
--------------
ಗುರುಜಗನ್ನಾಥದಾಸರು
ಎಂದಿಗೋ ಆಗುವುದಕೆ ಈಗ್ಯಾಕೆ ವ್ಯಾಜ್ಯ ಪ ಮುಂದೆ ನೋಡಿ ನಡಿಯದಿರೆ ಮುಕ್ತಿ ಪೂಜ್ಯ ಅ.ಪ ಬ್ರಹ್ಮಗೆ ಜೀವತ್ವ ಯಾವಾಗ ಬಂತು ನಮ್ಮೊಳಗೆ ಗೊತ್ತಿಲ್ಲದ ಭ್ರಾಂತು 1 ಮಾಯಾ ಮಿಥ್ಯ ಸತ್ಯ ನಾವು ನೋಡಿಕ್ಕೊಂಡರೆರಡು ಅಗತ್ಯ 2 ಗುರುರಾಮವಿಠಲ ಇದರ ಕುರುಹಲ್ಲಾ 3
--------------
ಗುರುರಾಮವಿಠಲ
ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ಎಲ್ಯಾದರು ಮಾಡಬೇಕು ಕೆಲಸ ಪ ಅಲ್ಲೇನು ಇಲ್ಲೇನು ಬಲ್ಲಂಥಾವನಾದರೆ ತಾನು ಅ.ಪ ಶರೀರ ಸಂಬಂಧಿಗಳಿಗಾಗಿ | ಮೂರು ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ ಅರೆನಿಮಿಷವಾದರೆ ಬಿಡದೆ 1 ತ್ತರವಾದ ಕಟ್ಟಾಜ್ಞೆ ಅಲ್ಲಿ ನ- ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ 2 ಬಾಲ್ಯ ಯೌವನ ಕೌಮಾರ | ಮುಪ್ಪು ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು3 ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ- ಅಲ್ಪರಿವುದು ಯಾಕೆ 4 ಇಪ್ಪತ್ತು ನಾಲ್ಕು ತತ್ವಗಳಿಂದ | ನ- ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು 5
--------------
ಗುರುರಾಮವಿಠಲ