ಒಟ್ಟು 252 ಕಡೆಗಳಲ್ಲಿ , 64 ದಾಸರು , 201 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಗೋವಿಂದ ಕೃಷ್ಣ ಹರಿ ಪ ಗೋವಿಂದ ಮುಕುಂದ ಗೋಪಾಲಕೃಷ್ಣ ಅ.ಪ ಕಡೆಗಣ್ಣಿಲಿಂದೊಮ್ಮೆ ನೋಡೋ ನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋ ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ 1 ಮಕ್ಕಳಿಗೊಡೆಯ ನೀನಾಗಿ ಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ2 ಹೃದಯ ಕಮಲದೊಳಗೆನ್ನ ನಿನ್ನಪದಕಮಲವನೀ ದಯೆಗೈಯೊ ಮುನ್ನಚದುರಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಕೃಷ್ಣ 3
--------------
ವ್ಯಾಸರಾಯರು
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ. ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1 ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2 ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
--------------
ವೀರನಾರಾಯಣ
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ಜಯ ಜಯಾ ಶ್ರೀ ವೆಂಕಟೇಶ ಜೀಯ ಪ ಜಯ ಶ್ರೀ ವೆಂಕಟೇಶಜೀಯ ನೀನೆ ಭಯಪ್ರದಾಯಕನಯ್ಯ ||ಆಹಾ|| ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ ಕಾಯೊ ಎನ್ನೊಡೆಯನೆ ವೇಂಕಟರಾಯ ಅ.ಪ ಮಂಕುಮಾನವನಾದ ಎನ್ನ ಮನದ ಡೊಂಕು ತಿದ್ದಿದಿ ಸ್ವಪನವನ್ನ ನಿನ್ನ ಅಂಕಿತದಂತೆ ನುಡಿಸೆನ್ನ ಇನ್ನು ಮಂಕುಹರಿಸಿದೆ ಪ್ರಸನ್ನ ||ಆಹಾ|| ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ ಕಿಂಕರ ಕಿಂಕರ ಕಿಂಕರನೆನಿಸಿದೆ 1 ಹಿಂದನೇಕ ಪರಿಯಿಂದ ಮನ ಬಂದಂತೆ ನುಡಿಸಿದ್ದರಿಂದ ತಂದೆ ಮುದ್ದು ಮೋಹನ ವಿಠ್ಠಲಾನಂದ ಪೊಂದಿ ಸಂದೇಹ ಹರಿಸಿದ ಚಂದ ||ಆಹಾ|| ಇಂದು ಮುಂದು ಎಂದೆಂದಿಗೂ ನೀ ಭವ ಬಂಧ ಹರಿಸಿ ಕಾಯಬೇಕು ಇಂದಿರೆರಮಣ2 ತ್ವರಿತಾದಿ ದಯಮಾಡೋ ಹರಿಯೆ ನೀನೆ ನಿರುತ ಎನ್ನಯ ಕುಲದ ದೊರೆಯೇ ಭಕ್ತ ಪರಿಪಾಲ ಮೋಕ್ಷದ ಹರಿಯೇ ನಿನ್ನ ಹೊರತು ರಕ್ಷಕರ ನಾನರಿಯೆ ||ಆಹಾ|| ಪರಮಕರುಣಿ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸವಿಠಲ ಜಗದೀಶನೆ 3
--------------
ಉರಗಾದ್ರಿವಾಸವಿಠಲದಾಸರು
ಜೀವವು ತಲ್ಲಣಿಸುವುದು ಪ ದೇವರ ಪೂಜೆಯಿಂದು ಮಾಡೋದಿಲ್ಲ ನೀವೆಲೆಯ ಹಾಕಿ ಕರೆದರೆ ನಾ ಸಿದ್ಧ ಅ.ಪ ಜಣುಗಿ ಜಣುಗಿ ಕಾಲಕಳೆಯುವುದಲ್ಲ 1 ಮುಸುಕನಿಟ್ಟುಕೊಂಡು ಮಲಗಿದ್ದರಿನ್ನು 2 ಕುಟ್ಟಿ ಬೀಸೋರಿಲ್ಲ ಅಟ್ಟುಂಬೋದೆ ಭಾರ ಇಷ್ಟು ನುಡಿದುದಕೆ ಸಿಟ್ಟು ಬಹುಪೂರ 3 ಹತ್ತುಗಂಟೆಯಾಯ್ತು ಹೊತ್ತು ಬಹಳ ಹೋಯ್ತು ಬತ್ತಿ ಹಚ್ಚಿ ಒಲೆಯ ಹೊತ್ತಿಡ ಬಾರದೆ 4 ಬಿಸಜಾಕ್ಷಾಗುರುರಾಮ ವಿಠಲನಾಣೆ ಬ್ಯಾಡ 5
--------------
ಗುರುರಾಮವಿಠಲ
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ ಚಿದ್ಬಯಲಿನೊಳು ಹೃದಯ ತೊಟ್ಟಿಲ ಮಾಡಿಬದ್ಧ ವೇದಾಂತದ ನೇಣ ಬಿಗಿದುಸದ್ಭಾವವೆಂಬ ಹಾಸಿಗೆಯ ಹಾಸಿಶುದ್ಧಾತ್ಮನನು ಭಾವದಿ ತಂದು ನೀಡಿ 1 ಅದ್ವೈತವೆಂಬ ಆಭರಣ ತೊಡಿಸಿಸಿದ್ಧ ಭೂಮಿಕೆ ಎಂಬ ಅಡವನಿಡಿಸಿಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ 2 ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿಮೊತ್ತವಹ ದಶನಾದ ಭೇರಿಯರವ ಹಚ್ಚಿಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿನಿತ್ಯಾತ್ಮನನು ನೋಡಿ ಹರುಷ ತುಂಬುತಲಿ 3 ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡುನಿಸ್ಸಂಗನಹ ಆತ್ಮ ಶಿಶುವನೊಡತಂದುಸುಸ್ವರದ ನಾದದಲಿ ಜೋಗುಳವ ಪಾಡುತಲಿ 4 ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲಜೋ ಜೋ ವಿಷಯ ಸ್ತಂಭನ ಎನ್ನಿ ನರರೆಲ್ಲ5 ಜೋ ಜೋ ಯಮನಿಯಮಾಸನ ಅರುಹಿದವನೆಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ 6 ಜೋ ಜೋ ಪರಮಾರೂಢನೆ ಪರಮೇಶಜೋ ಜೋ ಪರಮ ಪರೇಶನೆ ಪಂಡಿತಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ 7 ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋಭಕ್ತರ ಭಂಡಾರಿ ಭಾಗ್ಯನೆ ಜೋ ಜೋ 8 ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿಅಚಲ ಸಮಾಧಿಯೆ ಆದ ಯೋಗನಿದ್ರೆಯಲಿಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ 9
--------------
ಚಿದಾನಂದ ಅವಧೂತರು
ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಪ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 1 ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 2 ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1 ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2 ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3 ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4 ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5
--------------
ಚಿದಾನಂದ ಅವಧೂತರು
ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ ನೀನೆದಯಾನಿಧಿ ನಾನು ಅಪರಾದಿ ಖೂನದೋರೋ ಹಾದಿ ಸ್ಥಾನ ನಿಜಾನಾದಿ 1 ಅನಾಥನೆಂದು ನೋಡಿ ಸನಾಥನೆನ್ನಮಾಡಿ ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ2 ಹೇಳಲಾರೆ ಬಹಳಾ ಕೇಳೋನೀದಯಾಳಾ ತಾಳಿಯನ್ನ ತೋಲಾಬಾಲವಿಶ್ವಷಾಲಾ 3 ಸೇವಿ ಇದೇನಮ್ಮ ಭಾವಿಸುದು ನಿಮ್ಮ ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ 4 ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಪ್ಪೆಣಿಸುವರೇನೋ | ತಾಮರದಳಾಕ್ಷ ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ 1 ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ ಅಂತರದಿ ನಿನ್ನೊಮ್ಮೆ ನೆನೆದನೇ ನೋ ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ 2 ನಾಮಾಡಿದಪರಾಧ ನೀಕ್ಷಮಿಸದಿದ್ದರೆ ಯಾರು ಪೊರೆವರೊ ಎನ್ನ ವಾರಿಜಾಕ್ಷ ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ ಇನ್ನೇನು ಮಾಡಿದರು ಮಾಡೋ ನೀನು 3
--------------
ಓರಬಾಯಿ ಲಕ್ಷ್ಮೀದೇವಮ್ಮ
ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ. ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ 1 ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ 2 ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ 3 ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ 4 ಹೇಸಿ ವಿಷಯ ನಂಬೋದಿಲ್ಲೆ ಸೀಸ ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ 5
--------------
ಐಹೊಳೆ ವೆಂಕಟೇಶ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ತ್ರಾಹಿ ತಾರಕಬ್ರಹ್ಮ ಸಾಯೋಜ್ಯತ ತ್ರಾಹಿ ಅನಾಥ ಬಂಧು ಸಾಕ್ಷಾತ ತ್ರಾಹಿ ದೀನಾನಾಥ ತ್ರಾಹಿ ತ್ರಾಹಿ 1 ಮಾಡಲರಿಯೆ ನಾನಿಮ್ಮ ನಿಜಸ್ತುತಿ ಹಿಡಿಯಲರಿಯೆ ದೃಢ ಸದ್ಭಕ್ತಿ ಪೊಡವಿಯೊಳು ನಾ ಮೂಢಮಂದಮತಿ ಕೂಡಿಕೊಂಬೊ ದಯಮಾಡೋ ಶ್ರೀಪತಿ 2 ಮೊದಲಿಗಾಡುವ ಬಾಲಕವೃತ್ತಿ ತೊದಲುನುಡಿ ತಾಯಿಗತಿ ಪ್ರೀತಿ ಇದೆ ಪರಿಯಲೊಪ್ಪಿಸಿಕೊಂಬ ಸ್ತುತಿ ಮೇದಿನಿಯೊಳು ನಿಮ್ಮ ಖ್ಯಾತಿ 3 ಆಡಿಸಿದಂತೆ ಆಡುವೆ ನಾ ನುಡಿ ನಡೆಸಿಕೊಂಬುದು ಸನ್ಮತ ಮಾಡಿ ಕೊಡುವಂತೆ ಮಾನ್ಯ ಸಂತರೊಡಗುಡಿ ಮಾಡೊ ದಯ ನಿಮ್ಮಭಯನೀಡಿ 4 ತ್ರಾಹಿ ತ್ರಾಹಿಯೆಂಬೆ ತನು ಮನರ್ಪಿಸಿ ತ್ರಾಹಿಯೆಂಬೆ ಶಿರಸಾಷ್ಟಾಂಗ ನಮಿಸಿ ಕಾಯೊ ಮಹಿಪತಿಯ ಕರುಣಿಸಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಯ ಮಾಡೋ ಗುರುವೇ ದಯ ಮಾಡೋ ಪ ದಯ ಮಾಡೋ ಗುರುವೇ ನಿನಗೆದುರಾರೀ ಧರೆಯೊಳಗೆ ಸದಮಲ ಮೂರುತೀ ಶ್ರೀ ರಾಗವೇಂದ್ರಾ ಅ.ಪ ಭಕ್ತರ ಪೊರೆಯಬೇಕೆಂಬೀಕಾರಣದಿಂದ ಸಿದ್ಧ ಹಸ್ತಾನಾಗಿ ಬಂದು ನಿಂತಿರುವೇ ಕಂಡ ಕಂಡಾ ದೈವಂಗಳ ಪೂಜಿಸಿ ಪರಿಪರಿಸ್ತುತಿಸುತ ಬಳಲಿ ಬೆಂಡಾದೆನೈ ಸದ್ಗುರುವೇ 1 ಭಕ್ತಿಯಾ ಲಿಟ್ಟು ಮಾಡಿದಪರಾಧಂಗಳ ಒಂದೆಣಿಸಾದೆ ಎನ್ನನು ಮನಿಸು ಪ್ರಭುವೇ 2 ಶ್ರೀ ರಾಘವೇಣದ್ರಾ ದಾರಿಯಕಾಣೆ ಸಂತೈಸು ಜೀಯಾ 3 ಧೊರೆ ರಾಘವೇಂದ್ರಾ ಕಾಯೋ ಶ್ರೀ ಗುರು ರಾಘವೇಣದ್ರಾ 4
--------------
ರಾಧಾಬಾಯಿ
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು 1 ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ 2 ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ 3
--------------
ಶ್ರೀಶಪ್ರಾಣೇಶವಿಠಲರು
ದಯಮಾಡೋ ದಯಮಾಡೋ ಪ ಭಯಕರ ಸುಮಹ -ದ್ಭಯಹರ ಯತಿವರ ಅ.ಪ ಮೋಕ್ಷದ ಕರುಣ - ಕಟಾಕ್ಷದಿ ಎನ್ನನು ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1 ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ - ನಾಕ್ಷದಿ ತವಪದ ಲಕ್ಷಿಸುವಂತೆ 2 ಸತ್ಯಾಭಿದ - ನಪ - ಮೃತ್ಯುಹರಿಸಿ ಮುದ ವಿತ್ತು ಪಾಲಿಸಿದ - ಉತ್ತಮ ಎನಗೇ 3 ಬಲ್ಲಿದತರ ಮಹ - ಪ್ರಲ್ಹಾದ ನಿನ್ನೊಳು ನಿಲ್ಲಿಸು ಎನಮನ - ಎಲ್ಲಿ ಚಲಿಸದಂತೆ 4 ದಾತಗುರು ಜಗನ್ನಾಥ ವಿಠಲನ ದೂತಾಗ್ರಣಿ ಸು - ಖೇತರ ಕಳೆದು 5
--------------
ಗುರುಜಗನ್ನಾಥದಾಸರು