ಸಾಕು ವಿಷಯ ಸುಖ ಲೋಕೇಶ ಜಗ
ದೇಕನಾಥ ಕೊಡು ತವಧ್ಯಾಸ ಪ
ಬೇಕು ನಿನ್ನಪಾದ ಭಯನಾಶ ಭವ
ನತ ಪೋಷಅ.ಪ
ಮಸಣ ಬುದ್ಧಿ ಬೇಗ ಪರಿಹರಿಸು ಜವ
ನಶಿಸಿ ಪೋಗುವ ಮಾಯ ಮೋಹ ಬಿಡಿಸು
ಅಸಮ ಸತ್ಯಪಥದೆನ್ನ ನಡೆಸು ಎನ್ನ
ರಸನೆಯಿಂದ ನಿನ್ನ ನಾಮ ನುಡಿಸು
ಒಸೆದು ನಿನ್ನವರೊಳಗೆನ್ನಾಡಿಸು ನಿನ್ನ
ವಶಿಕಪತ್ರ ಬೇಗ ದಯಪಾಲಿಸು 1
ಚಿತ್ತವಗಲದಂತೆ ಸ್ಥಿರಮಾಡು ನಿಜ
ಭಕ್ತಿ ಕದಲದಂಥ ದೃಢ ನೀಡು
ಸತ್ಯಸಮಾಗಮ ಸತತ ಕೊಡು ದೇವ
ನಿತ್ಯ ನಿರ್ಮಲಮನ ದಯಮಾಡು
ಹತ್ತಿದ ಪಾಪರಾಸಿ ಕಡೆಮಾಡು ನಿನ್ನ
ಭೃತ್ಯನೆಂದೆನ್ನನು ಕಾಪಾಡು2
ನಿನ್ನ ಮರೆಯ ಬಿದ್ದು ಭಜಿಸುವೆನು ನಾ
ನನ್ಯ ದೇವರ ಗುರುತರಿಯೆನು
ನಿನ್ನವನೆಂದೆನಿಸೆನ್ನನು ಕಳಿ
ಭವ ರೋಗವನು
ಎನ್ನಯ್ಯ ಶ್ರೀರಾಮ ನಿನ್ನ ನಂಬಿದೆನು ನೀಡು
ಉನ್ನತ ಮುಕ್ತಿ ಸಾಮ್ರಾಜ್ಯವನು 3