ಒಟ್ಟು 52 ಕಡೆಗಳಲ್ಲಿ , 26 ದಾಸರು , 50 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಾರೆ ಕಂಡೆನಚ್ಯುತನ-ಕಂಚಿಪುಣ್ಯ ಕೋಟಿ ಕರಿರಾಜವರದನ ಪವರಮಣಿ ಮುಕುಟಮಸ್ತಕನ ಸುರ-ವರಸನಕಾದಿ ವಂದಿತ ಪಾದಯುಗನ ||ತರುಣಿ ಲಕ್ಷ್ಮೀ ಮನೋಹರನ-ಪೀತಾಂಬರದುಡಿಗೆಯಲಿ ರಂಜಿಸುವ ವಿಗ್ರಹನ 1ಕಸ್ತೂರಿ ಪೆರೆನೊಸಲವನ ತೋರಮುತ್ತಿನ ಹಾರ ಪದಕವ ಧರಿಸಿದನ ||ಎತ್ತಿದಭಯ ಹಸ್ತದವನ ತನ್ನಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2ನೀಲಮೇಘಶ್ಯಾಮಲನ ದೇವಲೋಲಮಕರಕುಂಡಲಧರಿಸಿಹನ ||ಮೂಲೋಕದೊಳಗೆ ಚೆನ್ನಿಗನ ಕಮಲಾಲಯಾಪತಿ ವೈಕುಂಠವಲ್ಲಭನ 3ಭಾನುಕೋಟಿ ತೇಜದವನಭವಕಾನನರಾಶಿಗೆಹವ್ಯವಾಹನನ ||ದಾನವರೆದೆಯ ತಲ್ಲಣನ ಮುನಿಮಾನಸೆಹಂಸನೆಂದೆನಿಸಿ ಮೆರೆವನ4ತುಂಗಚತುರ್ಭುಜದವನಶುಭಮಂಗಳ ರೇಖೆ ಅಂಗಾಲಲೊಪ್ಪುವನ ||ಶೃಂಗಾರ ಹಾರ ಕಂಧರನ ದೇವಗಂಗೆಯ ಪಿತಪುರಂದರವಿಠಲನ5
--------------
ಪುರಂದರದಾಸರು
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ
ತಲ್ಲಣಿಸದಿರು ಕಂಡ್ಯ ತಾಳು ಮನವೆ ಸ್ವಾಮಿನಿಲ್ಲದಲೆ ರಕ್ಷಿಸುವಸಂದೇಹಬೇಡಪಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆಕಟ್ಟೆ ಕಟ್ಟುತ ನೀರ ಹೊಯ್ವರಾರುಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆಕೊಟ್ಟು ರಕ್ಷಿಸುವನು ಇದಕೆಸಂದೇಹಬೇಡ1ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆಅಡಿಗಡಿಗೆ ಆಹಾರವಿತ್ತವರದಾರುಪಡೆದ ಜನಿನಿಯಂತೆ ಸಾರಥಿಯಾಗಿ ತಾಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ 2ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆಅಲ್ಲಿ ಹೋಗಿ ಆಹಾರವಿತ್ತವರದಾರುಬಲ್ಲಿದನು ಪುರಂದರವಿಠಲರಾಯನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ 3
--------------
ಪುರಂದರದಾಸರು
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡುಪ.ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
--------------
ಪುರಂದರದಾಸರು