ಒಟ್ಟು 54 ಕಡೆಗಳಲ್ಲಿ , 31 ದಾಸರು , 49 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1 ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2 ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ 3 ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4 ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
--------------
ವಿಜಯದಾಸ
ಹ್ಯಾಂಗೆ ಉದ್ದರಿಸುವಿ ಎನ್ನ ಕೃಷ್ಣ ಕರುಣ ಸಂಪನ್ನ ಪ ಹೋಗಿ ಹೊಗಿ ವಿಷಯ ಕೂಪದಲ್ಬೀಳ್ವವನಾಅ.ಪ. ದಾಸನು ಎಂದೆನಿಸಿ ಮೆರೆವೆ ಮನದೀ ಲೇಶಾ ಭಕುತಿಯನಾನೊಂದರಿಯೇ ವೇಷಹಾಕಿದೆ ಧನಕೆ ಬರಿದೇ ಆಶೆ ಇಟ್ಟು ಭವದಿ ವಂಚಕನೆನಿಸಿದವನಾ1 ಮಂದಿ ಜನರ ಮುಂದೆ ವೈರಾಗ್ಯನಟನೆ ಮಂದಿರದೊಳು ಬಹು ಕಾಮದ ಭಜನೆ ಬಂಧು ಬಳಗ ಕೂಡೆ ಬಹಳ ಭಕ್ತಿ ಇಂದಿರೇಶನ ಧ್ಯಾನ ದೋಳ್ವಿರಕ್ತಿ2 ಗುರುಹಿರಿಯರ ಜರಿವೊದೆ ಜಪವು ದುರುಳರ ಸಂಗ ದೋಳ್ಮೆರೆವೋದೆ ವ್ರತವು ಪರಿಸರನ ಶಾಸ್ತ್ರದೋಳ್ಮೌನ ನರನಾರಿ ಸ್ತವ ದೋಳ್ಧ್ಯಾನ 3 ವೇದ ಓದಿದೆ ನಾನು ಆದರೇನು ಮೋದತೀರ್ಥರ ಮರ್ಮ ಸಿಗಲಿಲ್ಲವು ಇನ್ನು ವಾದಕ್ಕನುಕೂಲ ವಾಯ್ತದು ಅಷ್ಟೆ ಖೇದ ತೊಲಗದೆ ಮನದಿ ಬಹುಕಷ್ಟಪಟ್ಟೇ 4 ಭುಕ್ತಿ ಪಡೆಯೆ ಕಾಲಕಳೆದೆನಲ್ಲಾ ಯುಕ್ತಿಯಿಂದಲಿ ನೀನು ಒಲಿವೋನು ಅಲ್ಲಾ ಭಕ್ತ ಜನರ ಸಂಗ ನಾ ಪಿಡಿಯಲಿಲ್ಲ ಮುಕ್ತಿಗಾಗುವ ಭಾಗ್ಯ ಎನ್ನಲಿಲ್ಲವಲ್ಲಾ 5 ಸ್ವೋತ್ತುಮರ ನೋಡೆ ಮಾತ್ಯರ್ಯ ಎನಗೇ ವಾತ್ಯಲ್ಯ ತೋರೆನು ಸ್ಧಾವರ ಜನಕೇ ಕುತ್ಸಿತ ಪಾವಡ ಬೀರುವೆ ಜಗಕೆ ತಾತ್ಸಾರ ತೋರುವೆ ಭಕ್ತರ ಗುಣದೀ6 ಈಷಣ ತ್ರಯಗಳ ಬಿಡಲಿಲ್ಲ ಲೇಶಾ ಭಾಷಣದಿ ತೋರ್ಪೆಜ್ಞಾನ ಪ್ರಕಾಶ ಈಶ ನೀನೊಬ್ಬನೆ ಸರಿಯೆಂಬೆ ಹರಿಯೆ ದಾಸನಾಗಿ ಬಾಳ್ವೆ ಬಹು ನೀಚ ಜನಕೆ 7 ನಾನು ನಾನೆಂಬುದು ತುಂಬಿದೆ ಮನದಿ ನೀನು ನಿನ್ನಾಧೀನ ವೆಂತ್ಹೇಳಿ ದೃಢದಿ ಜ್ಞಾನವಿದ್ದರು ಇಲ್ಲ ಎನಚರ್ಯೆ ನೋಡೆ ಮಾನಿನಿಯರ ಬೊಂಬೆ ಗುಣಗಣನೆ ಮಾಡೆ 8 ಮೂರೊಂದು ಹರಿತ್ಯಾಗ ತೊರೆಯಲಿಲ್ಲ ವೈರಿ ಆರರ ಬೇರು ನಾಕೀಳಲಿಲ್ಲ ವೀರ ವೈಷ್ಣವನಾಗಿ ಬಾಳಲಿಲ್ಲಾವಲ್ಲ ಗಾರು ಮನ್ನಿಸದಿರೆ ಗತಿಯೊಬ್ಬರಿಲ್ಲಾ 9 ವ್ರತನೇಮ ಉಪವಾಸ ಸಾಧನೆಯಿಲ್ಲ ರತಿಯಿಂದ ಸಲಹೆಂದು ನಾಕೂಗಲಿಲ್ಲ ಮತಿ ಮತದಿ ಪುಟ್ಟಿದರು ಫಲವಾಗಲಿಲ್ಲ ಗತಿ ನೀನೆ ಕೈ ಪಿಡಿಯೊ ಕೇಳುತ ಸೊಲ್ಲ 10 ಡಂಭಕ ತನದಿಂದ ಬಹುಕಾಲ ಕಳೆದೇ ತುಂಬಿ ಭಕ್ತಿಯ ಬೇಗ ನೀ ಕಾಯೋಮುಂದೆ ಜಂಭಾರಿ ಜಯತೀರ್ಥ ವಾಯ್ವಾಂತರ್ಗತನಾದ ಕಂಬುಕಂಧರಧಾರಿ “ಶ್ರೀ ಕೃಷ್ಣವಿಠಲ” 11
--------------
ಕೃಷ್ಣವಿಠಲದಾಸರು
ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.ಅರ್ಜುನ ಯಾತರ ಭಂಟನೆನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆÉ ಅ.ಪ.ಏನೇನೂ ಧೈರ್ಯವಿಲ್ಲವೊ ಕೃಷ್ಣಗೆಬಲು ಮೀನಿನಂತ ಚಂಚಲವೊ 1ಇಷ್ಟು ಎದೆಗಾರನಲ್ಲವೊ ಪಾರ್ಥಯುದ್ಧ ಬಿಟ್ಟರೆ ನಗುವರಲ್ಲವೊ 2ಸೊಲ್ಲುಸಾಲವ ಕೊಡುವೊನಲ್ಲವೊದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ 3ಹೆಣ್ಣು ಬಾಳ್ವೆ ಬಲು ಹೊಲ್ಲೊಹರಡು ಸಣ್ಣವಲ್ಲವೊ ನಿನಗಲ್ಲವೊ 4ತಲೆದೂಗೊ ಲಕ್ಷಣ ಹೊಲ್ಲವೊಅತಿ ಮಲೆತು ನಡೆವ ಬುದ್ದಿ ಅಲ್ಲವೊ 5ವೇಷಗಾರಿಕೆ ಬಲು ಹೊಲ್ಲವೊವಿಶೇಷ ಪರಾಕ್ರಮ ಅಲ್ಲವೊಅರ್ಜುನ6ಬಿರಿಗಣ್ಣು ಲಕ್ಷಣ ಹೊಲ್ಲವೊದೊಡ್ಡ ಉರಿಮಾರಿಪುರುಷನಲ್ಲವೊ7ಮರುಳುತನ ಬಲು ಹೊಲ್ಲವೊಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ 8ತಿರುಕತನ ಬಲು ಹೊಲ್ಲವೊಅತಿ ಹರಕ ನೀ ಪುರುಷನಲ್ಲವೊ ಕೃಷ್ಣ 9ಚೋರತನದಿಂದ ಬಲು ಕೆಟ್ಯೊನಿನ್ನ ಧೀರತನವ ತೋರಿಸಿ ಬಿಟ್ಯೊ 10ಕೊಡಲಿಗಡುಕತನ ಹೊಲ್ಲವೊಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ 11ಅಹಲ್ಯದೇವಿಯ ಕೆಡಿಸಿದನೆಂದುಬಹು ಭೋಳೆ ಬುದ್ದಿಹೇಳಲೊನಿಂದುಅರ್ಜುನ12ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ 13ವೈರಾಗ್ಯವ ತೋರಿಕೊಂಡೆಲ್ಲೊನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ 14ಪೋರತನವು ಬಲು ಅಲ್ಲವೊ ಕೃಷ್ಣನಿನ್ನ ಜಾರತನವ ಬಿಡಲ್ಲಿವೊ 15ದಾರಿದ್ರ್ಯತನ ಬಲು ಹೊಲ್ಲವೊದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ 16ಅನ್ನವಸ್ತ್ರವು ನಿನಗಿಲ್ಲವೊಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ 17ರಾಜ ಲಕ್ಷಣ ನಿನಗಿಲ್ಲವೊರೂಪಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ18ದ್ವಂದ್ವ ಯುದ್ಧವÀ ಮಾಡಿದವನಲ್ಲವೊಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ 19ಕರೆದರೆ ಯುದ್ಧಕ್ಕೆ ಹ್ಯಾಗೆಂದುನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ 20ಕೃಷ್ಣ ಅರ್ಜುನರ ಈ ಸಂವಾದಸಂತುಷ್ಟ ರಾಮೇಶ ಕೊಡುವಮೋದ21
--------------
ಗಲಗಲಿಅವ್ವನವರು
ಗೋವಿಂದ ಎನ್ನಿರೊ -ಹರಿ ಗೋವಿಂದ ಎನ್ನಿರೊ ||<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವಿಂದನ ನಾಮವ ಮರೆಯೆದಿರಿರೊ ಪ.ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು |ಸಂಭ್ರಮದರಸುಗಳೈದು ಮಂದಿ ||ಡಂಭಕತನದಿಂದ ಕಾಯುವ ಜೀವವ |ನಂಬಿ ನಚ್ಚಿ ಕೆಡಬೇಡಿ ಕಾಣಿರೊ 1ನೆಲೆಯು ಇಲ್ಲದಕಾಯ ಎಲವಿನ ಹಂದರವು |ಬಲಿದು ಸುತ್ತಿದ ಚರ್ಮದ ಹೊದಿಕೆ ||ಮಲಮೂತ್ರಂಗಳು ಕೀವುಗಳು ಕ್ರಿಮಿಗಳು |ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ 2ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ |ಹರಿಯೇ ಸರ್ವೋತ್ತಮನೆಂದೆನ್ನಿರೊ ||ಪುರಂದವಿಠಲನ ಸ್ಮರಣೆಯ ಮಾಡಲು |ದುರಿತಭಯಂಗಳ ಪರಿಹರಿಸುವುದು3
--------------
ಪುರಂದರದಾಸರು