ಒಟ್ಟು 79 ಕಡೆಗಳಲ್ಲಿ , 16 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕಣ್ಣಾ ಏನು ಬೇಕಣ್ಣಾ ಬಿಡು ಝೋಕಣ್ಣಾ ಜಗ ಸಾಕಣ್ಣಾ ಪ ಆಕಣ್ಣಿನೊಳಗೇನು ಠೀಕಣ್ಣಾ ಇದು ಪಾರ್ವತಿಗುಸುರಿದ ಮೂಕಣ್ಣಾಅ.ಪ ಅಂತವನುತ್ತು ಎಡೆಯಾಡು ನಿ ಶ್ಚಿಂತೆಯೊಳಿಹ ಸತ್ಯಗುರಿನೋಡು ಪಂಥವು ಮಾಡುವ ಯೆಂಟಾರುಮಂದಿಗ ಳಂತೆ ನೀ ಹೊಗದೆ ಚಿಂತಾಮಣಿಯಾಗೂ 1 ಮಂಗಳಪುರಿವಾಸನಾಗುವೆ ನಿಜ ರಂಗಮಂಟಪಕೆ ನೀಹೋಗುವೆ ಜಂಗಮ ಗುರುಜಾಣಾಲಿಂಗ ತುಲಶೀರಾಮಾ ಮಂಗಳಮೂರುತಿ ಹಿಮಗಿರಿವರನಿಹ 2
--------------
ಚನ್ನಪಟ್ಟಣದ ಅಹೋಬಲದಾಸರು
ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ ಶ್ರೀಕರನ ಸರ್ವತ್ರ ಸ್ಮರಿಸುತ ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ ಸಾಕುವನು ಸಕಲೇಷ್ಟದಾಯಕ ಪ. ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು ದಾನ ಧರ್ಮ ಪರೋಪಕಾರ ನಿಜಾನುಪಾಲನವು ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ- ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1 ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ ಮಾಡುವ ರಾಜನಿರುತಿರೆ 2 ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ ತಾಪ ಹೊಂದದೆ ಭೂಪರಂತಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ ವರಶರಸಮರೈಕ ಶೂರ ರಾಮ ಶರಧಿಮದವಿದಾರ ಪ. ಸದಯ ಹೃದಯ ಪದ್ಮಾವತೀಪ್ರಿಯ ಪದ್ಮದಳೇಕ್ಷಣ ವೈದೇಹೀರಮಣಅ.ಪ. ಮಂದರಧರ ಗೋವಿಂದ ಸದಾನಂದ ಮಂದಸ್ಮಿತ ವದನಾರವಿಂದ 1 ನೀಲಮೇಘ ವರಶ್ಯಾಮಶರೀರ ಪಾಲಿತ ಭಕ್ತಜನ ಮಂದಾರ 2 ಕರುಣಾಕರ ರಮಾವರ ಭವದೂರ ವರಶೇಷಗಿರಿವರ ಶ್ರೀಧರ 3
--------------
ನಂಜನಗೂಡು ತಿರುಮಲಾಂಬಾ
ಲಕ್ಷ್ಮೀದೇವಿಯ ಪ್ರಾರ್ಥನೆ ಶ್ರೀನಿವಾಸನ ಕರುಣಾನು ಸಂಸರಣಿ ಜ್ಞಾನ ಭಕ್ತಿಗಳನ್ನು ಪಾಲಿಸಂಭರಣಿ ಪ. ಅಜಭವಾದಿಗಳಿಗೆ ನಿಜಪದದಾಯಿನಿ ವೃಜಿನ ಸಮೂಹ ನಿವಾರಿಣಿ ಕುಜನ ಕುಠಾರಿಣಿ ಕುಂಜರ ಗಮನೆ ಪಾಲು ದಧಿವಾಸನ ಕೂಡಿ ಸದನದಿ ನೆಲೆಗೊಳ್ಳೆ 1 ಆರಿಗೆ ನಿನ್ನ ಕರುಣಾರಸ ದೊರೆವದೊ ನೀರಜಾಲಯೆ ನಿನ್ನ ಸೇರಿಕೊಂಡಿಹ ಎನ್ನ ವೈರಿ ಜನರು ಬೇಗ ಗಾರಾಗದುಳಿವರೆ 2 ನೀನೊಲಿಯಲೂ ಸರ್ವ ಮಾನವರೊಳಗತಿ ಮಾನ ಮಹತ್ವಾದಿ ಸದ್ಗುಣವೂ ತಾನಾಗಿ ಬರುವವಿಂನೇನೆಂದು ನಿನ್ನ ಮಹಿ- ಮಾನು ವರ್ಣನೆ ಮಾಳ್ಪೆ ದೀನ ದಯಾಕಲೆ 3 ಮಂದಿರದೊಳಗೆ ನೀ ನಿಂದು ನಗುತ ನಲಿ ವಂದ ನೋಡುತ ಮಿತ್ರ ಬಂಧುಗಳು ಮಂದರಧರ ತಾನೆ ನಿಂದು ರಕ್ಷಿಸನೆಂದಾ ನಂದ ಪೂರಿತ ಮನದಿಂದ ಸೇರಿರುವರು 4 ಸರಸಿಜನಾಭ ಶ್ರೀಹರಿಯು ನಿನ್ನನ್ನೆ ಮುಂ ದಿರಿಸಿ ಚತುರ್ವಿಧ ಪುರುಷಾರ್ಥವಾ ಕರುಣಿಪೆನೆಂದು ಕಂಠಸರದ ಮಧ್ಯೂರದಲಿ ಧರಿಸಿ ಶೋಭಿಪ ಶೇಷಗಿರಿವರ ಶಿಖರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಿಭವ ಪ್ರಪೂರಣ | ಮಾಂಗಿರಿಮೋಹನಾ ಪ ದಾನವಕುಲಭೀಷಣಾ ಕೃಪಾಕರಾ ಅ.ಪ ಪರತರ ಸುಖದಾತ ಸುಜನಗಣನುತ ಕಾಮಿತ ಸಂದಾತ ಪಾರ್ಥಿವ ರಥಸೂತ ವರದಸ್ವಯಂಜಾತಾ ಶರಣ ಸಂಪ್ರೀತಾ 1 ಮುರಹರ ಮುಚುಕುಂದ ಭಯಹರ ವರದಾ ಶ್ರೀಮುಖ ಸಾನಂದ ಗೋಕುಲ ಮಕರಂದ ಸುರಮುನಿ ಬೃಂದ ನಂದನ ಕಂದ ಸುರುಚಿರ ಕೋವಿದಾ | ಮುರಳೀ ಬೃಹನ್ನಾದ ಪಾಂಡುಸುತಾನಂದ | ಮಾಂಗಿರಿವರದಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ವೈನತೇಯವಾಹನಾಯ ನಿತ್ಯಮಂಗಳಂ ದಾನವಾಬ್ಧಿಶೋಷಿತಾಯ ನಿತ್ಯಮಂಗಳಂ ಪ ಪಾರಿಜಾತಲೋಚನಾಯ ಭವ್ಯಮಂಗಳಂ ನಾರದಾದಿಸೇವಿತಾಯ ಭವ್ಯಮಂಗಳಂ ಅ.ಪ ಶರಣಜನಾನಂದದಾಯ ದಿವ್ಯಮಂಗಳಂ ಪರಮಕೃಪಾಪೂರಿತಾಯ ದಿವ್ಯಮಂಗಳಂ 1 ಪರಮಸುಂದರ ದ್ಯುತಿಧರಾಯ ಸರ್ವಮಂಗಳಂ ದುರಿತದೋಷ ಪರಿಹರಾಯ ಸರ್ವಮಂಗಳಂ 2 ಮೌನಿನಿಕರವಂದಿತಾಯ ನವ್ಯಮಂಗಳಂ ದೀನದಲಿತಪೋಷಣಾಯ ನವ್ಯಮಂಗಳಂ 3 ಜ್ಞಾನ [ಮೋಕ್ಷ]ದಾಯಕಾಯ ಸೇವ್ಯಮಂಗಳಂ ಮಾನಿತ ಮಾಂಗಿರಿವರಾಯ ಸೇವ್ಯಮಂಗಳಂ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶರಣಾಗತನಾದೆನು ಶಂಕರ ನಿನ್ನ ಚರಣವ ಮರೆಹೊಕ್ಕೆನು ಪ. ಕರುಣಿಸೈ ಕರಿವದನಜನಕಾ- ವರಕದಂಬಪೂಜ್ಯ ಗಿರಿವರ- ಶರಸದಾನಂದೈಕವಿಗ್ರಹ ದುರಿತಧ್ವಾಂತವಿದೂರ ದಿನಕರ ಅ.ಪ. ಹಸ್ತಿವಾಹನವಂದಿತ ವಿಧುಮಂಡಲ- ಮಸ್ತಕ ಗುಣನಂದಿತ ಸ್ವಸ್ತಿದಾಯಕ ಸಾವiಗಾನಪ್ರ- ಶಸ್ತ ಪಾವನಚರಿತ ಮುನಿಹೃದ- ಯಸ್ಥಧನಪತಿಮಿತ್ರ ಪರತರ- ವಸ್ತು ಗುರುವರ ಶಾಸ್ತಾವೇಶ್ವರ 1 ಮಂದಾಕಿನೀ ಮಕುಟ ಶಿವ ಶಿವ ನಿತ್ಯಾ- ನಂದಮ್ನಾಯ ಕೂಟ ಚಂದ್ರಸೂರ್ಯಾಗ್ನಿತ್ರಿಲೋಚನ ಸಿಂಧುರಾಸುರಮಥನ ಸ್ಥಿರಚರ- ವಂದಿತಾಂಘ್ರಿಸರೋಜ ಉದಿತಾ- ರ್ಕೇಂದುಶತನಿಭ ನಂದಿವಾಹನ 2 ನೀಲಕಂಧರ ಸುಂದರ ಸದ್ಗುಣವರು- ಣಾಲಯ ಪರಮೇಶ್ವರ ಕಾಲ ಕಪಾಲಧರ ಮುನಿ- ಪಾಲ ಪದ್ಮಜವಂದಿತಾಮಲ- ಲೀಲ ಡಮರು ತ್ರಿಶೂಲಪಾಣಿ ವಿ- ಶಾಲಮತಿವರ ಭಾಳಲೋಚನ 3 ಮಾರಸುಂದರ ಸಂಕರ ಶ್ರೀಲಕ್ಷ್ಮೀ- ನಾರಾಯಣಕಿಂಕರ ಮಾರಹರ ಮಹನೀಯ ಶ್ರುತಿಸ್ಮøತಿ- ಸಾರ ವಿಗತಾಮಯ ಮಹೋನ್ನತ ವೀರ ರಾವಣಮದನಿಭಂಜನ ಪುರಹರ 4
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ | ಜಯ ಹರಿ ವಿಠಲಾ ಪ ರಾಜವದನ ಕರುಣಾಲವಾಲಾ ಅ.ಪ ಪಾತಕ ಪರಿಹಾರ ಗೀತ ಸುಧಾಕರ ಭೀತಿವಿದೂರ ಖ್ಯಾತಿಯ ತಾನರಸುತ ವೇಣುಂಕರ ನೇತಾ ಸಕಲವರದಾತಾ ಮಾಂಗಿರಿವರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸಾಯಿ ಸ್ತುತಿಗಳು ಪಾತಕ ಪರಿಹರ ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ ನುತ್ಯು ದಯಾಕರ ಶಂಕರ ಸುಖಂಕರ ಭೃತ್ಯ ಮನೋರಮ ನಿರ್ಜಿತಕಾಮ ಅ.ಪ ಶಾಂತಸ್ವಭಾವ ಪರಮಪ್ರಭಾವ ದಾಂತ ಕೃಪಾಕರ ಭವಪರಿಹಾರ ಮಂತ್ರಸುಧಾರ್ಣವ ಶೀತಳಭಾವ ಭ್ರಾಂತಿವಿದೂರ ಪುಣ್ಯಶರೀರ 1 ಅಗಣಿತ ಗುಣಗಣ ಸತ್ವ ನಿರೂಪಣ ಜಗದಾನಂದದಾ ವೂದಿ ಪ್ರಸಾದ ನಿಗಮಾಗಮಗಣ ವಿನಮಿತ ಚರಣ ನಗಜಾನಂದದ ಮಾಂಗಿರಿವರದ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀನಿವಾಸ ತವಚರಣ ಸರೊರುಹ-ಮಾನತೋಸ್ಮಿ ಸತತಂ ಫಲದಂ ಶುಭಚರಿತಂ ಪ ಸನ್ನುತ ವಾಸುಕಿ ಶ್ರೀಶವಾಸ ಹಿರಣ್ಮಯವಾಸ ಸಮಸ್ತ ವಾಸತರುಣಿಶತ ಬಾಸಸುಮನೋಲ್ಲಾಸ ವಿಜಿತ ರೊಷ ವಾಸರೇಶ ಶತ ಭಾಸುರ ಭೂಷಣ ಭೂಷಿತಾಂಗವಿಶೇಷಕರುಣಮೃದುಭಾಷಣ ಭವಜಲಶೋಷಣ ಪೂಷಣ 1 ಸುರಮಂಡಲಸೇವಿತ ಚಂಡನಿಶಾಚರ ಮಂಡಲ ಖಂಡನ ಪಂಡಿತರಣ ಶೌಂಡ ಪುಂಡರೀಕ ನಯನಾಂಡಜವಾಹನ ಪುಂಡರೀಕಗಿರಿ ಮಂಡನ ಹಿಮಕರಮಂಡಲ ಸನ್ನಿಭಕುಂಡಲಾಭರಣ 2 ನೀಲ ಸುಮಂದರಧಾರಣ ಚತುರುತಲಾಗ್ರವಿ ಮೃಗೇಂದ್ರಾ ವಾರಿಜನಿಲಯಾವರ ಕರುಣಾಕರ ಮಾರಜನಕ ಸುರವಾರವಂದ್ಯಪದ ಸಾರಸುಗುಣ ಪರಿ ಜಲದಿ ಗಂಭೀರ ವ್ಯಾಘ್ರಗಿರಿವರದ ವಿಠಲಹರಿ 3
--------------
ಸರಗೂರು ವೆಂಕಟವರದಾರ್ಯರು
ಶ್ರೀಲೋಲ ಶ್ರೀನರಸಿಂಹ ಬಲಗೋಂಬೆನು ನಿನ್ನ ಪ. ಸಾರರಹಿತವಹ ಘೋರತರ ಸಂಸಾರದಿ ತೊಳಲುತ ಗಾರುಗೊಂಡಿಹೆನೈ ಶ್ರೀಲೋಲ ಅ.ಪ. ಚಿಣ್ಣನು ತಾ ಬಣ್ಣಿಸಿ ಕರೆಯೆ ಮನಕದ ತಂದು ಅನ್ಯದೈವಗಳ ಮರೆದು ತನ್ನನೆ ನೆನೆವ ಚಿಣ್ಣನಿಗಾಗಿ ಕಂಬದಿ ಬಂದು ಘನ್ನ ರೋಷದಿ ದೈತ್ಯನ ಸೆಳೆದು ಕುನ್ನಿಯ ಮುಡಿಯನು ಪಿಡಿದೆತ್ತಿ ಜಡಿದು ತನ್ನ ತೊಡೆಯೊಳಗಿರಿಸಿ ಖಳನುರ ವನ್ನು ಬಗೆದು ಕರುಳನು ಕೊರಳೊಳು ಧರಿಸಿದ 1 ಘೋರರೂಪಕೆ ನಡುಗುತಲಂದು ಸುರಗಣನಿಂದು ಶರಣೆಂದಾಕಂದನ ಕರೆದು ಪರಮಾದರದಿಂ ಶ್ರೀದೇವಿಯನೊಡಗೊಂಡು ಪರತರಾಭಯ ಹಸ್ತವ ನೀಡಿ ಸರಸದಿ ಕರೆದಾದರಗೂಡಿ ತರಳನೆ ಭಕ್ತಾಗ್ರೇ ಸರ ನೆನ್ನಿಸಿ ನೆರೆಸುಖಿಸೆಂದೊದವಿದ 2 ಚಾರು ಚರಿತ ಪ್ರಹ್ಲಾದನ ಆಲಿಸಿ ನಲವಿಂ ಸಾರಿತನ್ನನೇ ನೆನೆವರನೆಂದೆಂದು ಕೋರಿಕೆಗಳ ಸಲ್ಲಿಸಿ ಸಲಹುವನೆಂದು ಸಾರೆಬಂದಿಹೆ ನಿನ್ನೆಡೆಗಿಂದು ಸಾರಸಾಕ್ಷನೆ ನೀ ಕೃಪೆದೋರೆಂದು ಕೋರಿಭಜಿಪೆ ಶ್ರೀಶೇಷಗಿರಿವರ ದಯಾಸಿಂಧು 3
--------------
ನಂಜನಗೂಡು ತಿರುಮಲಾಂಬಾ
ಶ್ರೀವರನೆ ಬಾ ಮುಕುಂದ ಮಾಧವ ಕಾವರನ್ಯರು ಇಲ್ಲ ಗೋವಿಂದ ಕೇಶವ ಪ ವೇದವಿದಿತ ಹರಿ ಸಾದರ ಮುರವೈರಿ ಮೇದಿನೀಪತಿ ಕೋದಂಡ ಸುವಿಹಾರಿ1 ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ 2 ಮಂಗಳ ಸುವಿಲಾಸ ಶೃಂಗಾರ ಭಾನುಭಾಸ ಮಾಂಗಿರಿವರವಾಸ ರಂಗೇಶ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್