ಒಟ್ಟು 102 ಕಡೆಗಳಲ್ಲಿ , 2 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿಂದಾಸ್ತುತಿಗಳು ಎನ್ನ ಕೈಬಿಡುವೆಯೇನೋ ಪ ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು ಭಾರ ನಿನಗಿರೆ ಅ.ಪ ತಾಪಸಿಯಂತೆ ನಿನ್ನ ವಕ್ಷವನೊದ್ದು ತಾಪವನು ತೋರ್ಪಿದೆನೇನೋ ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ ಭೂಪ ಶಿಶುಪಾಲನಂದದೆ ಬೈದೆನೇ [ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1 ಜಾರಚೋರನು ನೀನೆಂದು ಯಶೋದಗೆ ದೂರು ಹೇಳದೆನೇ ಕೌರವನಂತೆ ಕಂಬಕೆ ಕಟ್ಟಿರೆಂದೆನೆ ಸಾರಿದೆನೇನೋ ಸತ್ರಾಜಿತನಂತೆ ಚಾರುರತ್ನವ ಕದ್ದ ಅಪರಾಧಿ ನೀನೆಂದು ಆ ರುಕ್ಮನಂತೆ ನಾರಿಚೋರನೆಂದೆನೆ 2 ಪುರುಹೂತನಂತೆ ನಾನು ಮಳೆಯಕರೆದು ಗಿರಿಯನ್ನು ಹೊರಿಸಿದೆನೇ ಧರಣಿಯ ಬಲಿ[ಯಿಂದ ಬೇಡುತಲಿರುವಾಗ ವರಮುನಿಯಂತೆ ಕಿಂಡಿಯ ಮುಚ್ಚಿದೆನೆ] ನರನಂತೆ ರಥವ ನಡಸೆಂದು ಹೇಳಿದೆನೇನೋ ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನಗೇಕೆ ದಯಬಾರದೋ ಪ ನಿನಗಾಗಿ ಕಾದಿರುವೆ ಮನಸಾರೆ ವಂದಿಸುವೆ ವನಜಾಕ್ಷ ಕರುಣಾಳು ನೀನಲ್ಲವೇ ಅ.ಪ ಮನಸಲ್ಲಿ ಕ್ರಿಯೆಯಲ್ಲಿಯಾವಾಗಲೂ ತನುಧ್ಯಾನ ಮನವೆಲ್ಲ ನಿನಗೆ ಅರ್ಪಿತವಯ್ಯ [ಅನುದಿನವು ಕೈಪಿಡಿಯೋ ಮಾಂಗಿರಿರಂಗಯ್ಯ] 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ನಂಬಿದೆನಯ್ಯ ಚನ್ನಕೇಶವರಾಯ ಇನ್ನಾದಾರೂ ಕೃಪೆಯ ತೋರಿಸಯ್ಯ ಪ ಎನ್ನ ಕರ್ಮದ ಫಲದಿ ಬನ್ನಗೊಂಡಿಹೆನಯ್ಯ ನಿನ್ನ ಚರಣವನೆನಗೆ ಸನ್ನಿಹಿತ ಮಾಡಯ್ಯ ಅ.ಪ ನಡೆವುದೂ ನಿನಗಾಗಿ ನುಡಿವುದೂ ನಿನಗಾಗಿ ಪಡೆವುದೂ ನಿನಗಾಗಿ ಎನ್ನಿಸಯ್ಯ ಕೊಡುವವನು ನೀನಾಗಿ ಪಡೆವವನು ನಾನಾಗಿ ಪೊಡವಿಯಲೆಷ್ಟುದಿನ ಬಾಳ್ವುದಯ್ಯ 1 ಕಲಿಯುಗದಿ ಭಜನೆಯಿಂದಲೆ ಭವವು ಕಳೆವುದೆಂದು ಉಲಿದರೈ ವ್ಯಾಸಾದಿ ಮುನಿವರ್ಯರು ಕಲುಷ ಪೂರಿತನಾಗಿ ಬಲುನೊಂದೆ ಕೈ ಪಿಡಿಯೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕೈಯ ಬಿಡಬೇಡವೋ ನರಹರಿ ಪ ನೀ ಕೈಯ ಬಿಡಬೇಡ ನಾಕೆಟ್ಟರೂ ಬೇಡ ನೀ ಕೊಟ್ಟ ಫಲವಿನ್ನು ಸಾಕೋ ಮಾಂಗಿರಿರಂಗ ಅ.ಪ ನನ್ನ ಕಾಯುವ ಭಾಗ ನಿನ್ನದಾಗಿರಲಯ್ಯ ಇನ್ನಾವುದನು ಕೇಳ್ವುದೆನ್ನ ಭಾವದೊಳಿಲ್ಲ ಸನ್ನುತಾಂಗ ಕೃಷ್ಣ ಪನ್ನಗಶಯನ [ಉನ್ನತದಿ ಸದಾ ಭಜಿಸುವೆನು ನಿನ್ನ] 1 ಆಡುವಾ ನುಡಿಗಳು ನೋಡುವಾ ನೋಟವು ಮಾಡುವ ಕಾರ್ಯವು ನಿನ್ನದಾಗಿರಲು ಮೂಡಿಸು ಮನದಲ್ಲಿ ತವಪಾದಭಕ್ತಿಯ ಜೋಡಿಸಿ ಕೈಗಳ ಮುಗಿವೆನೋ ರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನಾರು ನಾನಾರು ನೀನೆನ್ನೊಳಿರಲು ನಾನಾರು ನೀನಾರು ನಾನಿನ್ನೊಳಿರಲು ಪ ನೀನೇನ ಮಾಡಿಸುವೆ ನಾನದನು ಮಾಡುವೆ ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ ನನ್ನದೇನುಂಟಯ್ಯ ಪನ್ನಗಾಧೀಶಾ ನಿನ್ನವನು ನಾನಯ್ಯ ನನ್ನವನು ನೀನಾದೊ ಡಿನ್ನೇನು ನಾನೀನು ಎನ್ನುವಂತಿಲ್ಲ 1 ಇಂದಿರಾನಂದ ಗೋವಿಂದ ತವಪಾದಾರ ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ ಮುಂದೆನಗೆ ಜನ್ಮಂಗಳೊಂದಾದರೂ ಬೇಡ ತಂದೆ ಮಾಂಗಿರಿರಂಗ ಬಂದುಕಾಯೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೆ ತಾಯಿಯು ನೀನೆ ತಂದೆಯು ನೀನೆ ಬಾಂಧವನು ರಂಗ ಪ ನೀನೆ ನಿತ್ಯನನಾದಿದೇವನು ನೀನೆ ಸತ್ಯಲೋಕೇಶನೀಶನು ಅ.ಪ ಲೋಕಭರಿತ ಅನೇಕಚರಿತ ಲೋಕಪಾಲಕನು ವಿಭವ ಲಯಗಳೇಕಕರ್ತನು ಶ್ರೀಕರಾ ಕೃಪಾಕರಾಸುರ ಭೀಕರಾಂಗನು ಪಿನಾಕಿ ವಿನುತನೂ ಕಳತ್ರನು 1 ನಂದಗೋಪನ ಕಂದ ಕೃಷ್ಣ ನೀನೆಂದು ನಂಬಿದೆನೋ ಮಂದಹಾಸವದನವ ನಾನೆಂದು ನೋಡುವೆನೋ ಸುಂದರಾರವಿಂದ ಪಾದವನೆಂದು ಪೂಜಿಪೆನೋ ತಂದೆ ಮಾಂಗಿರಿರಂಗನೊಲವನೆಂದು ಪಡೆದೇನೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೊಲಿದು ನಿನ್ನ ಸೇವೆಯನು ಕೊಡು ಹರಿಯೇ ಪ ನಾನೊರಲುವಾ ಕೂಗು ಕೇಳಿಸದೆ ದೊರೆಯೇ ಅ.ಪ ಸಂಸಾರ ಸುಖಗಳನು ಅನುಭವಿಸಿ ಸಾಕಾಯ್ತು ಹಿಂಸೆ ಚಿಂತೆಯ ರುಚಿಯ ತಿಳಿದುದಾಯ್ತು ಹಂಸನೀರೊಳಗಿದ್ದು ನೀರರಿಯದಂತಾಯ್ತು ಕಂಸಾರಿ ಸಾಕಿನ್ನು ಭೂಮಿ ಬೇಸರವಾಯ್ತು 1 ಶತಪಾಪಿ ನಾನಾಗಿ ಪತಿತಜನ್ಮವನಾಂತು ವ್ರತ ನೇಮ ನಿಷ್ಠೆಗಳ ಮರೆತು ಕುಳಿತು ಮಿತವಿಲ್ಲದನ್ಯಾಯಕಾರ್ಯದಿಂ ಬಸವಳಿದು ಸತಿಸುತೆಯರಾಟದಲಿ ನಿನ್ನ ಮರೆತೆ2 ಕರುಣಾ ಸಮುದ್ರ ನೀನಲ್ಲವೇ ಹರಿಯೇ ಪೊರೆಯೋ ಮಾಂಗಿರಿರಂಗ ಕರುಣಾಂತರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ 1 ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ2 ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ ಕರುಣಾಪಾಂಗ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ ಕನಕದಾಸನು ಗೆದ್ದ ಇದು ಸರ್ವಸಿದ್ಧ 1 ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ 2 ಸುಲಭನೊ ಮಾಂಗಿರಿಯ ರಂಗ ಜಗದಾನಂದ ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ ಬಲು ಮೆರೆದ ಕೌರವನ ಕುಲವಿನಾಶವ ಗೈದ ಚೆಲುವ ಮಾಂಗಿರಿರಂಗ ಶರಣರಿಗೆ ವರದ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆವವರ ಬಳಿಯಲಿ ನಗುವ ಮಣಿರದನ ಪ ಕುಪಿತನಾಗದೆ ಎನ್ನ ತಾಪವ ಬಿಡಿಸೋ 1 ಸ್ನಾನ ಸಂಧ್ಯೆಗಳಿಂದ ಜ್ಞಾನ ದೊರೆಯಲಿಲ್ಲ ಧ್ಯಾನಭಿಕ್ಷೆಯ ನೀಡೋ ಶ್ರೀನರಸಿಂಹ 2 ಮೂರ್ತಿ ಮಾತಂಗವರದ ನನ್ನ ಭಂಗಪಡಿಸಬೇಡ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮೌಷಧಿ ಸಿಕ್ಕಿತು ಪರಿಪರಿರೋಗ ಪರಿಹಾರಕಿದು ದಕ್ಕಿತು ಪ ಜ್ವರದ ಬೇಗೆಗೆ ದಾಹ ಕರುಳ ಕುಂದಿಸಿಯೆನ್ನ ನರಳಿಸಿದಾಗ ಮಾಂಗಿರಿರಂಗಾ ಎಂದೆಂಬ ಅ.ಪ ಸುರನರೋರಗ ಗರುಡ ಚರಣ ಗುರು ದಿವಾಕರ ಕಿನ್ನರಾಪ್ಸರ ಶರಣಜನ ಕರುಣಾಕರ ಶ್ರೀ ಧರ ಸುಖಂಕರ ಶೌರಿಯೆಂಬಾ1 ಪಿತ್ತವು ತಲೆಗೇರಿತು ಸುತ್ತಲು ಕಣ್ಗೆ ಕತ್ತಲೆ ಮುಸುಕಿದ್ದಿತು ಚಿತ್ತಪಲ್ಲಟಿವಾಗಿ ಮತ್ತನಾಗಿರಲಾಗ ನೆತ್ತಿಯೊಡೆದ ಎನ್ನ ಕುತ್ತಿಗೋಂಕಾರ 2 ಚಿತ್ತ ಮಸ್ತಕ ನೆತ್ತಿಗಳ ಬೆಂಬತ್ತಿ ಮತ್ತತೆಯಿತ್ತ ಪತ್ತದ ಕತ್ತಲೆಯನುತ್ತರಿಸಿದುತ್ತಮ ಚಿತ್ತಜನಪೆತ್ತಚ್ಯುತಾ ಯೆಂಬ 3 ಉಸಿರು ಉಗ್ಗಡಿಪಾಗ ವಸುದೇವ ಸುತಯೆಂಬ 4 ರಸರಸಂಗಳೊಳೆಸೆದು ವಾಸಿಸಿ ಉಸಿರು ಬಸಿರನು ವಸುವಿಲಾಸದೊಳೆಸೆದು ಪೊಸ ಪೊಸ ಎಸಕದಿಂ ಸುಖ ರಸವನೀಯುವ ರಾಮಯೆಂಬಾ 5 ಕರ ನೇತ್ರಗಳು ತಂಪಿಂಪಿನ ಸವಿ ಬಲೆಯೊಳು ಬಿದ್ದುವು ಜವ ನೇಣೆಸೆದಾಗ ಭವದೂರಹರಿ ಯೆಂಬ 6 ಶಿವ ಭವಾಮರಪವನಪಾವಕ ಜವ ಶಶಾಂಕವಾಕರಾನಕ ಶ್ರೀಧರ ಹರೇ ಭವದೂರನೆಂಬಾ 7 ಲಕ್ಷನಾಮಗಳೆಲ್ಲ ಲಕ್ಷಣವಾದ [ತು ರಕ್ಷೆಯೀಯುವಗುಳಿಗೆ] ಮಾತ್ರಾ ಮೋಕ್ಷಸುಖವನಿತ್ತು ರಕ್ಷಿಪುದೆಂಬುದ ದಕ್ಷಸುತೆಗೆ ಫಾಲಾಕ್ಷ ತಾಂ ಪೇಳಿದ 8 ಅಕ್ಷಯಾತ್ರವಿಪಕ್ಷ ರಾಕ್ಷಸ ಶಿಕ್ಷ ಸುಜನರಕ್ಷ ಪ್ರದವ ಅ ಧ್ಯಕ್ಷ ನುತಕಮಲಾಕ್ಷ ಶರಣಕಟಾಕ್ಷ ಲಕ್ಷ್ಮೀಪಕ್ಷ [ಮೂಂಗಿರಿರಂಗ] ಯೆಂಬಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರೇಶ ಜಗದೀಶ ಸುರನರ ಪೋಷಾ ಪ ಶ್ರೀರಂಗಾಧೀಶಾ ಪರಮೇಶ ಅ.ಪ ಗಿರೀಶವಂದಿತ ಕಮಲಾಸನನುತ ಪರಾತ್ಪರಾ ರವಿಶತನಯನ ಧರಾಧರಾರ್ಚಿತ ಮೌನಿಸೇವಿತ ಶೌರೀ ರಮಾವಿನಮಿತ ರಾಮಾ 1 ಗಾನಲೋಲ ಕೃಪಾಲವಾಲ ಸುಶೀಲ ಸದಮಲ ಸಕಲಕಲಾ ಸುವಿಶಾಲ ಮಾನಸ ನಂದ ಗೋಕುಲಬಾಲ ಶ್ರೀವನಮಾಲಾ ಕೋಮಲ 2 ದೀನಪಾಲ ಕುಚೇಲವರದ | ಸುಶೀಲ ವಿಮಲಾ ಸಕಲಬಲ ಸುರಜಾಲಪಾಲ ಖರಕಾಲ ಘನತರಲೀಲ ಮಾಂಗಿರಿರಂಗವಿಠಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನ ಫಾಲಲೋಚನಾ ನಂದೀಶವಾಹನಾ ಪ ಸದನ ಅ.ಪ ನಾಗಭೂಷಣ ದನುಜಹರಣ ದಿವಿಜಶರಣ ಭೂತಗಣ ಭೋಗಿಶಯನ ಸಿರಿಯ ರಮಣ ವಿಮಲಚರಣ ಸೇವೆಯಿತ್ತು 1 ಮದನವೈರಿ ದುರಿತಹಾರಿ ಶಶಿಜಟಾಜೂಟಧಾರಿ ಮ ಮ ದೇವ ಮಾಂಗಿರಿರಂಗ ಚರಣಯುಗವ ತೋರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್