ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶ್ರೀನಿವಾಸ ಚಿದ್ವಿಲಾಸ ಸೇವಕ ಪರಿಪೋಷ ಪ ಕರುಣಾಲವಾಲ ಎಷ್ಟುಪ್ರಾರ್ಥಿಸಲು ನಿನಗೆ ಯಾತಕೆ ದಯಬಾರದು ಕರವ ಪಿಡಿದು ಕಡೆಹಾಯಿಸುವದೆನ್ನ 1 ಶಾಮಲಾಂಗ ಚಕ್ರಪಾಣಿ ಶತಕೋಟಿ ರವಿ ತೇಜ2 ಕರೆಯೆಕರೆಯೆ ಬಿಂಕವೇನು ಶರಣರ ಸುರಧೇನು ಗುರುರಾಮ ವಿಠಲ ನೀನು ಕೋರಿ ನಿನ್ನ ನಂಬಿದೆನು 3
ಶ್ರೀನಿವಾಸ ಜಗನ್ನಿವಾಸ ಪ ದೀನ ರಕ್ಷಕ ನಿಖಿಲ ಮಾನವರಮಾನಾಭಿಮಾನ ದೊಡೆಯನು ನೀನೇಯಲ್ಲದಿಲ್ಲಾ ಅ.ಪ. ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣು ಹೊಕ್ಕೆನನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವಸೀಳಿ ರಕ್ಷಿಸಿದೆ ಗಜವಾ-ದೇವ 1 ಹಿಂದೆ ನಾನಾನ್ನಗಿರಿಯಿಂದ ಬಹದಾರಿಯೊಳು ಸಂದುಗೆಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂದು ಜನಕೆಲ್ಲಿನೀ ಬಂದು ಬೆಳಕನು ತೋರಿ ಮಂದೆಗೂಡಿದೆ ಕೃಷ್ಣಾ 2 ಇಂದು ನಿಜ ಸತಿಯುನೊಂದಳುಬ್ಬಸರೋಗದಿಂದ ಗಾಳಿಯದೀಪದಂದಮಾಗಿ/ ನಂದಿಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲೀಗ ಬಂದು ಸಲಹಿದೆ ತಂದೆ 3 ತುರುಗಾಯ್ವರಸುಗಳನು ಮರಳಿಪಡೆದೆ ನರಪೌತ್ರನನು ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕುರು ವರವಿಭೀಷಣ ತಾಪಸರನುಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರಗಿರಿಯೊಳಗೆ ನೆಲಸಿರುವ ವರದ ವಿಠಲ ರಾಯ 5
ಶ್ರೀನಿವಾಸ ತವಚರಣ ಸರೊರುಹ-ಮಾನತೋಸ್ಮಿ ಸತತಂ ಫಲದಂ ಶುಭಚರಿತಂ ಪ ಸನ್ನುತ ವಾಸುಕಿ ಶ್ರೀಶವಾಸ ಹಿರಣ್ಮಯವಾಸ ಸಮಸ್ತ ವಾಸತರುಣಿಶತ ಬಾಸಸುಮನೋಲ್ಲಾಸ ವಿಜಿತ ರೊಷ ವಾಸರೇಶ ಶತ ಭಾಸುರ ಭೂಷಣ ಭೂಷಿತಾಂಗವಿಶೇಷಕರುಣಮೃದುಭಾಷಣ ಭವಜಲಶೋಷಣ ಪೂಷಣ 1 ಸುರಮಂಡಲಸೇವಿತ ಚಂಡನಿಶಾಚರ ಮಂಡಲ ಖಂಡನ ಪಂಡಿತರಣ ಶೌಂಡ ಪುಂಡರೀಕ ನಯನಾಂಡಜವಾಹನ ಪುಂಡರೀಕಗಿರಿ ಮಂಡನ ಹಿಮಕರಮಂಡಲ ಸನ್ನಿಭಕುಂಡಲಾಭರಣ 2 ನೀಲ ಸುಮಂದರಧಾರಣ ಚತುರುತಲಾಗ್ರವಿ ಮೃಗೇಂದ್ರಾ ವಾರಿಜನಿಲಯಾವರ ಕರುಣಾಕರ ಮಾರಜನಕ ಸುರವಾರವಂದ್ಯಪದ ಸಾರಸುಗುಣ ಪರಿ ಜಲದಿ ಗಂಭೀರ ವ್ಯಾಘ್ರಗಿರಿವರದ ವಿಠಲಹರಿ 3
ಶ್ರೀನಿವಾಸ ತವಚರಣಸರೋರುಹಮಾನತೋಸ್ಮಿ ಸತತಂ ಸಾನುರಾಗ ಮನಸಾ ವಚಸಾ ಶಿರ ಸಾನುಕೂಲಫಲದಂ ಶುಭಚರಿತಂ ಪ ಶ್ರೀಶವಾಸ ಹಿರಣ್ಮಯ ವಾಸ ಸಮಸ್ತಾವಾಸ ತರಣಿಶತ ಭಾಸ ಸುಮನೋಲ್ಲಾಸ ವಿಜಿತರೋಷ ಭೂಷಿತಾಂಗ ವಿಶೇಷ ಕರುಣ ಮೃದು ಭಾಷಣ ಸಜ್ಜನ ಪೋಷಣ ನಿರ್ಜಿತ ದೂಷಣ ಭವಜಲ ಶೋಷಣ ಪೂಷಣ 1 ಪುಂಡರೀಕಾಸನ ಖಂಡಪರಶು ಅ ಖಂಡಲ ಮುಖ ಸುರಮಂಡಲ ಸೇವಿತ ಪಂಡಿತ ರಣಶೌಂಡ ಪುಂಡರೀಕನಯ- ನಾಂಡಜವಾಹನ ಖಂಡಿತಕೇಶ ಕೋ ದಂಡ ಕೃತಾರ್ಚನ ಪುಂಡರೀಕಗಿರಿ ಮಂಡನ ಹಿಮಕರ ಮಂಡಲ ಸನ್ನಿಭಕುಂಡಲಾಭರಣ 2 ವಾರಿದನೀಲಶರೀರ ಧರಾರ ಧೀರ ಸುಮಂದರಧಾರಣ ಚತುರ ಕರಾಗ್ರವಿ ದಾರಿತ ಶೂರ ಹಿರಣ್ಯಕವೀರ ನರಮೃಗೇಂದ್ರಾ ಮಾರಜನಕ ಸುರವಾರ ವಂದ್ಯಪದ ಪರಿ ವ್ಯಾಘ್ರಗಿರಿ ವರದವಿಠಲ ಹರಿ 3
ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ಕಾಣಿಸದೊ ನಿನಗೆನ್ನ ಕಷ್ಟ ಪ. ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ. ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ ಕೃಷ್ಣಮೂರುತಿಯೆ ಕೇಳೊ ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ ಶ್ರೇಷ್ಠ ನೀನೆನಿಸಿಕೊಂಡು ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ ಬಿಟ್ಟು ಬಿಡು ನೀನೀಗಲೆ ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು ಸೊಟ್ಟ ತಿರುಹಿರುವೆ ಮುಖವ ದೇವ 1 ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು ಭಾರ ಪೊತ್ತು ಕೋರೆ ತೆರೆವೆ ಘೋರ ರೂಪವ ತೋರಿ ಈ ರೀತಿ ಬೆದರಿಸುವೆ ದಾರಿ ಎನಗಿನ್ನಾವುದೊ ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ ನಾರಿ ಚೋರನ ವಧಿಸಿದೆ ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ ಏರಿ ಓಡಿದೆ ಕುದುರೆಯ ಜೀಯಾ 2 ಈ ಪರಿಗೈದರೆ ಕಾಪಾಡುವವರ್ಯಾರೊ ಭೂಪರೈವರ ಪೊರೆದನೆ ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ ಪಾಪಿ ಎಂದೆನಬೇಡವೊ ನೀ ಪಾರುಗೊಳಿಸಬೇಕೀಪರಿಯ ಬವಣೆಗಳ ಶ್ರೀಪತಿಯೆ ಶ್ರೀನಿವಾಸ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆಕಾಪಾಡುವವರನರಿಯೆ ದೊರೆಯೆ 3
ಶ್ರೀನಿವಾಸ ನಿನ್ನ ಕರುಣಾ ಏನೆಂದು ಸ್ತುತಿಪೆ ಪ. ಮಾನವರೊಳಗತಿ ಹೀನಬುದ್ಧಿಯಲಿ ಏನೊಂದು ಮಾರ್ಗ ಕಾಣದೆ ಬಹು ಬಳಲಿ ನಾನಾ ಚಿಂತೆಗಳಿಂದ ಧ್ಯಾನಿಪ ಸಮಯದಿ ತಾನಾಗಿ ಕರುಣಿಸಿ ಮಾನ ಪಾಲಿಸಿದಿ 1 ಹುಣಾರುವೆನ್ನನು ನಾನಾ ತರದೊಳು ಮಾನಹಾನಿಯ ಮಾಡಿ ಮರಳಿ ಬಾಧಿಸಲು ತಾನೆಂದು ಪೇಳುವರಿಲ್ಲದಂತಿರಲು ನೀನೆ ಬಂದೊದಗಿ ರಕ್ಷಿಸಿದೆ ಕೃಪಾಳು 2 ತದನಂತರದಲಿ ಕಷ್ಟದ ಬಾಧೆ ಸಹಿಸದೆ ಮದರಾಶಿಯೆಂಬ ಪಟ್ಟಣಕೆ ನಾ ಸರಿದೆ ಸದರವಲ್ಲೆಂದು ತಿಳಿದು ನಿನಗೊದರೆ ವಿಧಿಪಿತ ನೀನಲ್ಯು ಪ್ರೇರಿಸಿ ಪೊರೆದೆ 3 ಸಿರಿವರ ನಿನ್ನಯ ಪರಮ ಮಂಗಳಮೂರ್ತಿ ಹರುಷದಿಂದಲಿ ನೋಡಿ ಬರಲು ನಾನಿಲ್ಲಿ ದೊರೆತನದಲಿ ಮಾನಿತಪದಲ್ಲಿ ಇರಿಸಿ ನಿರಂತರ ಕಾವುದ ಬಲ್ಲಿ4 ಶರಣಾಗತ ರಕ್ಷಾಕರನೆ ಮಂದಿರದ ವರನಾಗಿ ಸಲಹುವ ದೊರೆ ನಿನ್ನ ಬಿರುದ ತರಳ ಬುದ್ಧಿಯೊಳೆಂತು ವರ್ಣಿಪೆ ವರದ ಕರುಣಾ ಸಾಗರ ವೆಂಕಟಾದ್ರಿಯೊಳ್ಮೆರೆದ 5
ಶ್ರೀನಿವಾಸ ನಿನ್ನ ನಂಬಿದ ದಾಸನ ಎನ್ನನು ಕಾಯೋ ಶ್ರೀವಾಸುಕಿಶಯನ ಪ ರೂಪರಹಿತ ಬಹುರೂಪ ಧರಿಸಿಹ ಶ್ರೀಪತಿ ಎನ್ನನು ನೀಪರಿಪಾಲಿಸು 1 ಕಾಲರೂಪ ಬಹುಲೀಲೆಯ ತೋರುವ ಮೂಲಪುರುಷ ಸುರಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸ ಮಸ್ತ ವಸ್ತುವ ಸುವ್ಯಕ್ತ ಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿ ಕಲ್ಪಿತ ಸುರನರ ಕಲ್ಪಭೋಜ ಹರಿ 4 ಖಂಡಪರಶು ಅಖಂಡಲಾದಿ ಸುರ ಪುಂಡರೀಕ ಪದ 5 ಮಂದರಧರ ಗೋವಿಂದ ಮುಕುಂದ ಸ ನಂದನಾದಿ ಮುನಿಬೃಂದ ಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾಧಾರ ಧೀರವರದವಿಠಲ ಹರಿ 7
ಶ್ರೀನಿವಾಸ ನಿನ್ನ ನಂಬಿದ ದಾಸನ ಶ್ರೀನಿವಾಸುಕಿಶಯ ಕಾಯೋ ಯನ್ನನು ಪ ನೀಪರಿಪಾಲಿಸು 1 ಮೂಲಪುರುಷಸುರ ಪಾಲಕ ಶ್ರೀಹರಿ 2 ಶಕ್ತಿಗಳನು ಅವ್ಯಕ್ತದೊಳಿರಿಸಿ ಸಮಸ್ತವಸ್ತುವ ಸುವ್ಯಕ್ತಪಡಿಸಿದ 3 ಕಲ್ಪಕೋಟಿ ನಿನಗಲ್ಪಕಾಲ ಪರಿಕಲ್ಪಿತಸುರನರ ಕಲ್ಪಭೋಜಹರಿ4 ಪುಂಡರೀಕಪದ 5 ಮಂದರಧರ ಗೋವಿಂದ ಮುಕುಂದ ಸನಂದನಾದಿ- ಮುನಿಬೃಂದಸುವಂದಿತ 6 ಸಾರಸುಗುಣ ಪರಿವಾರ ಸಜ್ಜನಾ ಧಾರಧೀರವರದ ವಿಠಲಹರಿ7
ಶ್ರೀನಿವಾಸ ಪಾಹಿಮಾಂ ಸದಾ ಶ್ರಿತಜನಾಮೋದ ಮೌನಿಜನ ಚಾತಕಾಂಭೋದ ಪ ಸಾನುರಾಗ ಯುಗಮುನಿ ಮಾನಿತಾವರಾರವಿಂದ ಭಾನುಕೋಟಿ ತೇಜ ಸಾಮಗಾನಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ ವಂ ದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ ಭೂಷಾ ಸುಪವಿತ್ರ 1 ಸರ್ವಲೋಕಪಾಲಕೇಶ್ವರಸೇವಿತಸುಪರ್ವಗಣಸದ್ಗುಣಾಕಾರ ಶರ್ವ ಸುರಪತಿ ಮುಖ್ಯ ಸರ್ವದೇವವರವರ್ಯ ಸೂರ್ಯ ಪರ್ವತಾಧಿರಾಜ ಧೈರ್ಯ 2 ಸೃಷ್ಟಿ ರಕ್ಷಣಾಂತಕಾರಕ ಸರ್ವಾತ್ಮಕ ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಶ್ರೀಕರ ಶೃಂಗಾರಶೇಖರ ಶ್ರೀಕರಗೃಹ ಶ್ರೀಕರಧಾರಿತ ಮಂದರ ಪಾಕವೈರಿ ಮಣಿನೀಲ ಪಾವನ ಸುಗುಣಶೀಲ ಶೋಕ ಮೋಹ ಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿಪೂರ ವ್ಯಾಘ್ರಾಧ್ರಿವಿಹಾರ ಧೀರ ವರದವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
ಶ್ರೀನಿವಾಸ ಪಾಹಿಮಾಂ ಸದಾ-ಶ್ರಿತಜನಮೋದ ಮೌನಿಜನಜಾತಕಾಂಬೋದ ಪ ಭಾನುಕೋಟಿ ತೇಜ ಸಾಮಗಾನ ಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ-ವಂದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ-ಭೂಷಿಸುಪವಿತ್ರ 1 ಸರ್ವಲೊಕಪಾಲಕೇಶ್ವರ-ಸೇವಿತಸುಪರ್ವಗಣಸದ್ಗುಣಾಕರ ಗರ್ವಿತದೈತ್ಯಾಂಧಃಸೂರ್ಯ-ಪರ್ವತಾಧಿರಾಜಧೈರ್ಯ 2 ಸೃಷ್ಟಿರಕ್ಷಣಾಂತಕಾರಕ-ಸರ್ವಾತ್ಮಕ-ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಧಾರಿತ ಮಂದರ ಪಾಕವೈರಿಮಣಿನೀಲ ಪಾವನ ಸುಗುಣ ಶೀಲ ಶೋಕಮೋಹಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿ ಪೂರವ್ಯಾಘ್ರಾದ್ರಿ ವಿಹಾರಧೀರ ವರದ ವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
ಶ್ರೀನಿವಾಸ ಪೂರಿಸಭಿಲಾಷ ಪ್ರಾಣ ಪಾಲೇಶ ಏನಿದು ಸಾವಕಾಶ ಪ. ಹಿಂದಿನ ಪ್ರಹ್ಲಾದ ಮೈಥಿಳ ಮತ್ತಜಾಮಿಗಳ ಭಾರತ ಕುಂಡಗೋಳ- ಗಾಂದಿನೀಸುತ ಧ್ರುವ ಪಾರ್ಶದಿ ಅಂಬರೀಷಾದಿ ಭಕ್ತರುಗಳಂತೆ ಎಂದೀ ಶ್ರುತಿ ಪುರಾಣಗಳ ಆದರೆ ನನ್ನನು ಬರಿದೆ ಇದು ರೀತಿಯೆ ನಿನಗೆ1 ಬಂದಡಿಗಡಿ ಇಡುತ ಸಾಮಜವಾಹನ ಬೇಡಿದಭೀಷ್ಟ ನೀಡಿದ ಬಳಿಕಾತನು ನುಡಿದ ಒಂದನಾದರು ಮನಕೆ ಅಭಯವನಿತ್ತು ಪೊರೆದೆ ನಾ ಮಾಡಿದಪರಾಧವು ಅತಿ ಸ್ವಲ್ಪವು ಅದಕೆಣೆಯಾಗದಿರಲು ಪಾಲಿಪರ ಕಾಂಬೆನೆಲ್ಲಿ 2 ಪಾರ್ಥಗೆ ಸಾರಥಿಯೆನಿಸುತ ರಥ ನಡಸುತ ಕುರುಸೇನೆಯೊಳಿರುತ ಗಾಂಗೇಯ ನಗುತ ಶೋಣಿತವ ಹರಿಸಲು ನಿಯಮದ ತೊರಿದೆ ಭಕ್ತವತ್ಸಲತೆಯ ತೋರಿದೆ ಸುಖವಾರಿದ ವೆಂಕಟಾದ್ರಿಯೊಳ್ಮೆರೆದೆ 3
ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
ಶ್ರೀನಿವಾಸ ಮೂರುತಿಗೆ ಜಯತು ಮಂಗಳಂ ಶೇಷಾಚಲವಾಸನೀಗೆ ಶುಭಮಂಗಳಂ ಪ ರಂಗಮಾಣಿಕದ ದಿವ್ಯ ಕುಂದಣದ ಕಿರೀಟಕ್ಕೆ ಸುಗಂಧವಾದ ಕರ್ಪೂರ ಕಸ್ತೂರಿ ತಿಲಕಕೆ ಕಂದರ್ಪನ ಬಿಲ್ಲಪೋಲ್ವ ಚಂದವಾದ ಪುಬ್ಬುಗಳಿಗೆ ಮಂದಹಾಸದಿಂದ ನೋಳ್ಪ ಅರವಿಂದನಯನಗಳಿಗೆ 1 ನಾಸಿಕಕೆ ಕರ್ಣಕುಂಡಲಕೆ ಸುವಾಸನೆವುಳ್ಳ ಅಧರಕ್ಕೆ ಆಸುಂದರವಾದ ಶ್ರೀವತ್ಸ ಕೌಸ್ತುಭಮಣಿಗೆ ಲಾಸವಾಸಿ ಪಿತನ ಪಡೆದ ನಾಭಿಯ ಕಮಲಕೆ 2 ಶಂಖ ಚಕ್ರ ನಾಗ ಬಾಪುರಿ ತೋರ್ಪಹಸ್ತಪಾದಗಳಿಗ ಲಂಕಾರವಾದ ಪೀತಾಂಬರದ ವಡ್ಯಾಣದಂದಕ್ಕೆ ಅಂದುಗೆ ಗೆಜ್ಜೆಗಳಿಟ್ಟ ಅಂದವಾದ ಪಾದಗಳಿಗೆ ನಖ ಅಂಗುಷ್ಟದ ಬೆಳಕಿಗೆ 3
ಶ್ರೀನಿವಾಸ ವಾಸವಿಸೂನು ಪ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ1 ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ 2 ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ 3 ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ 4 ಗುಣಪೂರ್ಣ ಐಶ್ವರ್ಯಾನಂತ ಮೋದಾ ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ ಎಣಿಸುವೆ ಷÀಟುಚತು ತ್ರಿಭಿರೂಪಾತ್ಮಾ5 ಪದ್ದುಮ ಶಾಂತಸಿಂಹ ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾ ಸುದೇವ ನಾರಾಯಣ ರೂಪಗಳಿಂದ ಹೃದ್ಗತನಾಗಿ ಒಪ್ಪುವ ಮಹಾಮಹಿಮಾ 6 ಗೋಕುಲನಾಥ ಗೋವಿಂದ ತಿರುಮಲ ಕಾಕೋದರಾದ್ರಿನಿಲಯ ಸ್ವಾಮಿ ಸಿರಿ ವಿಜಯವಿಠ್ಠಲ ಪ ರಾಕು ಈ ರಥದೊಳು ಕುಳ್ಳಿ ವೇಗಸಾಗಿ7
ಶ್ರೀನಿವಾಸ ಶ್ರೀ ವಾಸ ಪ ಭಜಿಸಿದೆ ನಿನ್ನನು, ತ್ಯಜಿಸಿದಿರೆನ್ನನು ಭಜಕಾಮರತರು ಕುಜನ ವಿದೂರ ಅ.ಪ. ತಂದೆ ತಾಯಿನಿಜ ಬಂಧುಸಹೋದರ ನಂದನಾಪ್ತನೀನೆಂದು ನಂಬಿದೆ 1 ನಿನ್ನ ಮರೆತು ಬಹು ಜನ್ಮ ಜನ್ಮದೊಳು ಖಿನ್ನನಾಗಿ ನಿಜವನ್ನೆ ಕಾಣದೆ 2 ಕರುಣದಿಂದ ನಿಜ ಚರಣಸೇವಕರ ಪೊರೆವ ವ್ಯಾಘ್ರಗಿರಿ ವರದವಿಠಲ 3