ಜಗಲಿಯ ಹಾಕಿದಳೆ ಬಗಳೆ ಜಗಲಿಯ ಹಾಕಿದಳೆಸೊಗಸೇನ ಹೇಳಲಿ ಶತ್ರುಗಳನೆ ತಂದುಝಗಿ ಝಗಿಸುತ ಎನ್ನಯ ಎದುರಿಗೆ ಕುಳಿತು ಕೊಳ್ಳಲುಪತಲೆಗಳು ಥರದ ಕಲ್ಲು ಒಳ್ಳೊಳ್ಳೆಯ ಎಲುವುಗಳು ಹಾಸುಗಲ್ಲುಬಲಿದ ಮಾಂಸದ ಕೆಸರನೆ ಹಾಕಿ ಮೆತ್ತಿಎಳೆದು ಹೆಣಗಳನು ತಂದು ಭರ್ತಿಯ ತುಂಬುತ1ಮೆದುಳನೆ ಮಲ್ಲವ ಮಾಡಿ ಮೇಲೆಯೆಪದರಂಗಾರವ ಮಾಡಿ ವಿಧವಿಧ ಚಿತ್ರವ ರಕ್ತದಿ ಬರೆದುತಿದಿಯ ಸುಲಿದು ಚರ್ಮವ ಹಾಸಿಗೆ ಹಾಕುತ2ಕತ್ತಿಯ ಹೆಗಲಲಿಟ್ಟು ಎನ್ನಯ ಸುತ್ತಮುತ್ತ ತಿರುಗಾಡುತ ಸತ್ಯ ಚಿದಾನಂದನ ರಾಣಿ ಬಗಳಾಮುಖಿಮತ್ತೆ ದುಷ್ಟರ ಕೊಂದು ವಿಶ್ರಾಂತಿ ಪಡೆಯಲು3
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3