ಒಟ್ಟು 21209 ಕಡೆಗಳಲ್ಲಿ , 136 ದಾಸರು , 8951 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಿದ್ದ ಹರಿ ಈಗಿಲ್ಲವೇನು ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1 ಅರಮನೆಕಂಬದಿ ಅರಿಯದಂತಡಗಿ ತಾ ದುರುಳನ ಸದೆಬಡಿದು ತರಳ ಸಲಹಿದ ಬರುವ ಮುನಿಶಾಪವಂ ವರಚಕ್ರದಿಂ ತಡೆದು ಕರುಣದಿ ನೃಪನನ್ನು ಪೊರೆದ ಪರಮಾತ್ಮ 2 ಕರುಣಾಳು ಶ್ರೀರಾಮ ಚರಣದಾಸರ ಮನಕೆ ಕೊರತೆಯ ತರದಂತಿರುವ ಬೆಂಬಿಡದೆ ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3
--------------
ರಾಮದಾಸರು
ಆಗಿನ್ನೆಂಥ ಕವತುಕ ಕಂಡೆ ಅಮ್ಮಿನ ಎಂಥ ಅಂಜಿದೆವೆ ಪ. ಮತ್ತೆ ಎರಗಲು ಹೋದೆನಮ್ಮ ಪಾದ ಕಂಡು ಕಣ್ಣು ಕತ್ತಲೆ ಹೊಯ್ದಾವೆ ಅಮ್ಮಿನ 1 ಪಂಚ ಹಸ್ತ ಕಂಡು ಮನದಲೆ ಚಂಚಲಗೈಯ್ದೆನೆ 2 ಅತ್ಯಂತ ಪ್ರೇಮದಲಿ ದ್ರೌಪತಿ ಹತ್ತು ಹಸ್ತ ಕಂಡು ಮೈಯ ಮರೆತೆನೆ ನಾನು 3 ಬಾರಿ ಬಾರಿಗೆ ಬೆದರಿಬೆಚ್ಚಿ ನಾರಿಯ ನೋಡಿದೆನೆ ನಾನು ಸೂರ್ಯನಂತೆ ಹೊಳೆವೊ ಐದುಮಾರಿ ಕಂಡೆನೆ4 ವಾರ್ತೆಯ ಹೇಳುತಲಿದ್ದೆ ಮಾರುತನ ರಾಣಿ ಭಾರತಿಯು ಆದಳೆ ಅಮ್ಮಿನ್ 5 ವಚನ ಪೇಳುತ ನಿಂತೆನಮ್ಮ ರುಚಿರರೂಪ ಅಡಗಿ ಆಗ ಶಚಿಯು ಆದಳೆ ಆಮ್ಮಿನ್ 6 ಇಂದ್ರನರಸಿ ಅಡಗಿ ಶ್ಯಾಮಲೆ ಬಂದು ನಿಂತಾಳಮ್ಮ ಕ್ಷಣದಿ ಎಂದೂ ಕಾಣದ ಸೋಜಿಗ ಒಂದೊಂದು ಕಂಡೆನೆ ಅಮ್ಮಿನ್7 ಎಂಥ ಬೆಳಕನೆ ತೋರಿಸಿದಳಮ್ಮ ಇಂಥ ಬೆಡಗು ರಾಮೇಶನ ಕಾಂತೆ ಕೇಳಮ್ಮ ಅಮ್ಮಿನ್8
--------------
ಗಲಗಲಿಅವ್ವನವರು
ಆಂಜನೇಯನೆ ಅನಿಲಸುತನೆ ಪ ಸಂಜೀವರಾಯ ಮಂಜುಳ ವಜ್ರಕಾಯ ಅ.ಪ ತಾಮರಸ ಭಾಂಧವ ಕಬಳೀಕೃತ 1 ಧಾಮ ಸುನಾಮ ತಾಮಸ ಕೌರವ ನಿರ್ನಾಮ ಕೃಷ್ಣಪ್ರೇಮ 2 ಗುರುರಾಮ ವಿಠಲ ಕಿಂಕರ ಯತಿವರ ಮಧ್ವಾಭಿಧ ಹರಿನಾನೇ ಯೆಂಬುವರ ಗರ್ವವ ಮುರಿದ 3
--------------
ಗುರುರಾಮವಿಠಲ
ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ ಪ. ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆಅ.ಪ. ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ 1 ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ 2 ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ 3 ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ 4 ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ 5 ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ6
--------------
ವಾದಿರಾಜ
ಆಡಣ್ಣ ನೀನಾಡಣ್ಣ ಅನುಭವದಾಟ ಆಡಣ್ಣ ಪ ರೂಢಿಯೋಳ್ಹರಿಯ ಗಾಢಮಹಿಮೆ ಕೊಂಡಾಡುವರೊಡನಾಟ ಅ.ಪ ಅಳುವರ ಕಂಡರೆ ಅತ್ತಂತೆ ಕಾಣೋ ನಗುವರ ಕಂಡರೆ ನಕ್ಕಂತೆ ಕಾಣೋ ಅಳುವ ನಗುವರಲಿ ಸಿಲುಕಿ ಸಿಲುಕದೆ ನಿ ನ್ನೊಳಗೆ ಮಾಧವನ ತಿಳಿದು ಆನಂದದಿ 1 ಅವರನು ಕಂಡರೆ ಅವರಂತೆ ಇವರನು ಕಂಡರೆ ಇವರಂತೆ ಅವರಿವರಿಗೊಂದೆಸವನೆತೋರಿ ಸಿರಿ ಪಾದ ಮನಭವನದಿಟ್ಟ್ಹಿಗ್ಗುತ 2 ವಾಸನೆ ಪ್ರಥಮ ನಾಶನ ಮಾಡೊ ದಾಸರ ಕಂಡರೆ ಸೇವೆಯ ಮಾಡೋ ಆಶಪಾಶ ನೀಗಿ ಶ್ರೀಶ ಶ್ರೀರಾಮನ ದಾಸನಾಗಿ ನಿಜ ಮುಕ್ತಿಯ ಕೂಡೊ 3
--------------
ರಾಮದಾಸರು
ಆಡಿದ ನಾಟಕವ ಕಿರಾತ ಮದನಗೂಢ ಚಿದಾನಂದನನರಿಯದ ನರ ಮೃಗವ ಪ ಸ್ತ್ರೀಯ ದೇಹವು ಎಂಬ ಅಡವಿಯೊಳಗೆಸ್ತ್ರೀಯ ಹುಬ್ಬೆಂಬ ಸಿಂಗಾಡಿ ತೆಗೆದುಮುಂಗುರುಳುಗಳು ಎಂಬ ಸಿಂಜನಿಯನೆ ಬಿಗಿದುಸ್ತ್ರೀ ದೃಷ್ಟಿಯೆಂದೆಂಬ ಸಿಳೀ ಮುಖವನೆ ಪಿಡಿದು 1 ಸಿರಿತುಳುಕುವ ಅವಯವದ ಸಿಡಿಬಲೆಯನೊಡ್ಡಿಪರಿಯ ತಿಳಿಯದೆ ಬರುವ ಪುರುಷ ಮೃಗವಕರುಣವಿಲ್ಲದೆ ಮಹಾ ಕೋಪದಿಂದಲಿಎರಡು ಗಿರಿಯ ಸಂದಿಯಲಿರಿದು ಇರಿದು ಕೆಡುತಿಹ 2 ಇಂತು ಬೇಟೆಯನಾಡಿ ಎಲ್ಲ ಲೋಕವ ಕೆಡಹಿಚಿಂತೆ ಮಾಡುವ ಚಿದಾನಂದ ಭಕ್ತರ ಮುಂದೆ ಸುಳಿಯಲಿಕಂಜಿಮರೆಯದೆ ಶಿವನ ಗುರುತ ಅಂತಹುದುಇವರನೀಗ ಮುಟ್ಟಬಾರದು ಎಂದು 3
--------------
ಚಿದಾನಂದ ಅವಧೂತರು
ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ ಮಾನವ ಮಾಡದಿರಚ್ಚುತ ನಾನೆಂಬ ಮನವಪ. ಯಾಡಮೂಢನೊಬ್ಬ ಎಲ್ಲಾ ಜಗದೊಳು ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ- ಲಾಡುತಿಹ ನಿರನಿಷ್ಟನೊಬ್ಬ ಗಡ1 ಕಡಲ ಕಡೆದು ಸುಧೆಯ ನೋಡಿ ತ- ನ್ನೊಡಲ ಧಣಿಯಉಂಡವನೊಬ್ಬ ಹೆ- ಣ್ಣುಡಿಗೆಯನ್ನುಟ್ಟು ಅಸುರರ ಬಾಯ ಹೊಡೆದು ಬಡಿಸಿದವನೊಬ್ಬ ಗಡ 2 ಆಡುತಲಬ್ಧಿಯೊಳಡಗಿದದ್ರಿಯ ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು ಮೂಡಿದÀಗ್ನಿಯಿಂದ ಸುಡುವೆಯ3 ಮಂದ ನೀನೊಬ್ಬನೆ ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ ಕೂಡಿದನ ಬಹಳ ಕೋಟಿಧನಂಗಳ ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ 4 ದೃಢವಾಗಿ ನಿನ್ನುಂಗುಟ ನಖದಿಂ ದೊಡಲನಾದರು ಒಡೆಯಲಾಪೆಯ ಮೃಡಪ್ರಿಯ ಹಯವದನನಂತೆ ಮೂಢಜಾತಿಯಾಗಿ ವೇದ ಓದುವೆಯ 5
--------------
ವಾದಿರಾಜ
ಆಡುವ ಬನ್ನಿರಿ ಬಾಲಕರೆ ಪ ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ ಜನನ ಮರಣವÉಂಬ ಚೆಂಡು ಬುಗುರಿಯಿಂ ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ ಜನಸಂಘವೆಂಬುವ ಚಿಳ್ಳೆಕೋಲುಗಳಿಂ ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ 1 ಏಳುತಲೀ ಮುಖ ತೊಳೆದು ನೀವೆಲ್ಲ ಕರ್ಮ ಭಕ್ಷಗಳೆಲ್ಲ ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ ಶೀಲ ಸದ್ಗುಣವುಳ್ಳ ಬಾಲಕರೆಲ್ಲ 2 ಶ್ರವಣ ಮನನವೆಂಬ ಸಾಧನೆಯಿಂದ ಭವಹರ ಗುರುರಾಮ ವಿಠಲ ಮುಕುಂದ 3
--------------
ಗುರುರಾಮವಿಠಲ
ಆಡುವ ಬಾರೋ ಕೃಷ್ಣ ಓಡಿಬಾರೋ ಪ ನಾಡೆ ನಿನ್ನ ನೋಡಬಯಸಿ ಹಾಡುವೆನ್ನ ಕಣ್ಣಮುಂದೆ ಅ.ಪ ಓಡಿಬರುವೆ ನೀನು ಎಂದು ನೋಡಿ ಹಸುಗಳತ್ತ ಇತ್ತ ಬೇಡುತಿಹವು ನಿನ್ನ ಬರವ ಮೋಡಿಯೇಕೆ ಕೊಳಲನೂದಿ 1 ಕರವ ನೀಡಿ ಮಣ್ಣಮೆದ್ದನೆಂದು ತಾಯ ಕಣ್ಗೆ ತೋರ್ದೆ ಜಗವನೆಲ್ಲ 2 ಪೊಂಗಲೀವೆ ಬಾ ಮುಕುಂದ ಹೊಂಗೊಳಲಾನಂದದಿಂದ ತಂಗುವೆ ನಾ ನಿನ್ನ ಪಾದದಿ ಮಾಂಗಿರೀಶ ಮುದ್ದುರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆಡುವನೀಶ್ವರ ಜೀವಪಗಡೆಯ ಕಾಯಆಡುವನವರವರ ಕರ್ಮಾನುಸಾರಆಡಿಯೆ ತನಗೆ ಬೇಸರವಾಗೆ ಕಟ್ಟುವಆಡುವ ವಿವರವ ಹೇಳುವೆ ಕೇಳಿ ಪ ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವುಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯುರೂಪು ನಾನಾ ಬಗೆಯ ಜೀವಕಾಯನೆ ಮಾಡಿಭಾಪು ಭಳಿರೇ ಎಂದು ಕೊಂದು ಹೂಡಾಡುತ 1 ಒಂದಕೊಂದರಬಲ ಒಂದಕೆ ಜೋಡು ಬಲಒಂದು ಜೋಡಿಗೆ ಒಂದು ಜೋಡು ಬಲ ಮಾಡಿಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದುಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ 2 ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟೆಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿಭೂಪ ಚಿದಾನಂದನು ಆದ ಈಶ್ವರ ತಾನುರೂಪು ವಿರೂಪಾದ ನಿದ್ದೆಯಲಿ ಮಲಗುವ 3
--------------
ಚಿದಾನಂದ ಅವಧೂತರು
ಆಡುವರೇಚಕ ಪೂರಕ ನಂದಿಯ | ಜೋಡಿಸಿ ಎರಡನು ಮೆರೆವಸುಷಮ್ನಿಯ | ನಾಡಿಯ ರಥಿಕರ ಹೂಡುತ ಮೆಲ್ಲನೆ | ನಿಜಮನ ಸಾರಥಿಯಾ | ಕೂಡಿಸಿ ಹರುಷಲೇರಿ ನಡೆಸುತ ಸ | ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ | ಮಾಡಿ ವಿಲಾಸದಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಆತ್ಮ ನಿವೇದನೆ ಅನಾಥ ಬಂಧೋ ಆದಿ ಪುರುಷ ಪ. ಅನಾಥ ಬಂಧೋ ಗುಣ ಗಣ ಸಿಂಧೋ ಮನಸಿಜ ಜನಕನೆ ಮರೆಯದಿರೆಂದೂ ಅ.ಪ. ಅನುಚಿತ ಕರ್ಮದ ಬಲೆಯಲಿ ಸಿಕ್ಕಿ ದಿನಗಳ ಕಳೆದನು ಮನೆಯಲ್ಲಿ ತನುವಿನ ಸ್ಥಿತಿಯನು ಪೇಳಲೇನು ಶ್ರೀ- ವನಜ ಭವಾರ್ಚಿತ ಒದಗುವಿ ಸಮಯದಿ 1 ವಿಧಿ ನಿಮಯಗಳನುಸರಿಸದೆ ಕ- ಣ್ಣಿದಿರಲಿ ಕಾಂಬುದ ಗ್ರಹಿಸದೆ ಮಧುಮಥನನೆ ತ್ವತ್ಪರ ಪದ್ಮವ ನಂ- ಬಿದೆ ಕರುಣೋದಧಿ ಕಾಯೊ ಬೇಗದಲಿ 2 ಸರ್ವಭಾರವು ನಿನ್ನ ಮೇಲಿಹುದು ಮ ತ್ತೋರ್ವಗುಂಟೆ ನಿನ್ನಯ ಬಿರುದು ಮರ್ವನೀಯದೆ ಮನದಲ್ಲಿರು ವೆಂಕಟ ಪರ್ವತೇಂದ್ರ ಪೂರ್ಣಾನಂದಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆತ್ಮನ ಕೊಂಬುವರಾರು ಅವರಿಗೆ ಸರಿಯಾರುಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿಪ ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1 ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2 ಮರೆಯ ವೇಷದಂತೆ ಭರಣಿಯ ರಸದಂತೆಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ3 ಕೂಳದ ತಾವರೆಯಂತೆ ಘನ ಮರೆಯ ರವಿಯಂತೆಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4 ಪರಿ ಆತ್ಮನ ನಿಜವತಾ ಪರದೈವವೆಂದರಿವಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5
--------------
ಚಿದಾನಂದ ಅವಧೂತರು
ಆತ್ಮನನು ತಿಳಿಯದುದೇ ಕೇಡು ಅವನ ಜನ್ಮವ ಸುಡುಆತ್ಮನನು ಅರಿಯದುದೆ ಪಾಪ ಅಹುದು ಜನ್ಮನಿರೂಪ ಪ ಸರ್ವಶಾಸ್ತ್ರವನೋದಿ ಸಕಲರೊಳಗೆ ವಾದಿಸರ್ವವನೇಕವ ಕೂಡಿಟ್ಟು ಘನ ಅಹಂಕಾರದಿ ಕೆಟ್ಟು 1 ಕೋಪ ತಾಪವ ಗಳಿಸಿ ಕೊನೆಬನೆ ಅನುಗೊಳಿಸಿವ್ಯಾಪಾರ ಸ್ತ್ರೀಯರ ಚಿಂತೆ ಊರ ಶ್ವಾನನು ಎಂಬಂತೆ 2 ಹಿರಿಯರ ನಿಂದೆಯ ಮಾಡಿ ಹೀನತ್ವದಿ ಹಾಡಿಗುರು ಚಿದಾನಂದ ಕಾಣ ಪಾಪರಾಶಿಯಲಿ ಕೂಡಿ 3
--------------
ಚಿದಾನಂದ ಅವಧೂತರು