ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಭ ಶುಭ ನಿಧಿಗೆ ಪ ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ. ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1 ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2 ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3 ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4
--------------
ಗುರುತಂದೆವರದಗೋಪಾಲವಿಠಲರು
ಶುಭಫಲಪ್ರದಮೌನಿ ಮಾಂ ಪಾಲಯ ಶುಭಫಲಪ್ರದಮೌನೀಅಭಿನವರಂಗನಾಥ ಪರಕಾಲಧೀಮಣಿ ಪ'ಬುಧಜನಾರ್ಚಿತ 'ಮಲ ಸುಗಣ್ಯಾ ಅಭಿನುತಿಚೇಕೊನು ಆರ್ತಶರಣ್ಯಾ 1ಶಮದಮಶಾಂತಾದಿ ಸದ್ಗುಣಭರಿತ ಸುಮಶರಜಿತಯಾಶ್ರಮತ್ರಯತ್ಯಜಿತ 2ನಿಯತಿಯುಕ್ತ ಬ್ರಂಹತಂತ್ರಕೃಪಾಂಗಾಹಯಮುಖಚರಣಸರೊರುಹಭೃಂಗಾ 3ಸಕಲಾಗಮಶಾಸ್ತ್ರಾರ್ಥ ಪುರಾಣಪ್ರಕಟತ ಪರಿಶ್ರಮಪ್ರತಿಭಪ್ರ'ೀಣಾ 4ಧರಿಶ್ರೀಕೃಷ್ಣ ನೃಪದೇಶಿಕ ಪ್ರಮುಖಪರಮಶೀಲವ್ರತಪತಿತೋದ್ಧಾರಕ 5ಸರ್ವತಂತ್ರಸ್ವಾತಂತ್ರಯತೀಂದ್ರಾಯುರ್ವಿಯಾಮ್ಮುಕ 'ತಕರಸಾಂದ್ರಾ 6ನಿಗಮಾಂಗುರುಪದನಿತ್ಯಾರಾಧಕದ್ವಿಗುಣರ'ತಪರತತ್ವಸ್ಥಾಪಕ 7ಮಂಗಳತರಸತ್ಸಂಗಧುರೀಣಾರಂಗಸ್ವಾ'ುದಾಸಾರ್ಚಿತಚರಣಾ 8
--------------
ಮಳಿಗೆ ರಂಗಸ್ವಾಮಿದಾಸರು
ಶುಭವೀವ ನಿರುತದಲಿ ಮಂದಹಾಸಾ ಪ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ. ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ | ಕಾನÀನವಾಸ ಸುರರ ಖಣಿಯೋ 1 ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ 2 ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ ವರವೀಯುತಿಪ್ಪಾ | ಸಿರಿ ವಿಜಯವಿಠ್ಠಲ ತಿಮ್ಮಪ್ಪಾ 3
--------------
ವಿಜಯದಾಸ
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ಪ ಕರವ ಜೋಡಿಸಿ ಬಿನ್ನೈಪಾ || ದುರಿತ ರಾಶಿ | ಪರಿಹಾರ ಮಾಡಿಸಯ್ಯಾ 1 ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರಿಗಳಿಗೆ ನಿರುತ ಮಾರಕ ನೀನಹುದೋ2 ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ ಯುಗದೊಳು ಬಲವಾಗೋ 3 ಕಾಯ ನಿನ್ನದು ಗುಣನಿ | ಕಾಯ ನಿರ್ದೋಷ ಕಾಯಾ || ಕಾಯಾ ಐದಳಮಾನ | ಕಾಯ್ದ ಕಲಿವೈರಿ | ಕಾಯಜಪಿತನ ದೂತಾ 4 ಪಂಕಜನಾಭನ ಅಂಕದಲ್ಲಿಪ್ಪ ಬಿಂಕವ ತಾಳದಿರೊ | ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ ತ್ಪಂಕದೊಳು ತೋರಿಸೊ 5
--------------
ವಿಜಯದಾಸ
ಶೂರತನವೇನೊ ಬಲು ನಾರಿ ಜನರು ನೀರೊಳಿರಲು ಪ ಸೀರೆಗಳ ಅಪಹರಿಸುತ ಬಲು ಶೌರಿ ಅ.ಪ ಸಾರಸವದನನೆ ಕಾರಣವಿಲ್ಲದೆ ನಾರಿಯರೆಮ್ಮನು ಸೇರಿ ಬಹಳ ಸರಸಗಳನ್ನು ತೋರಿ ಮಾನಸೂರೆಗೆಯ್ಯುವುದು ಭಾರಿ ನಡತೆ ಎಂದರಿತಿರುವಿಯೇನೊ 1 ಮುರಹರನೆ ಈ ಪರಿಯಲಿರುವ ಎಮ್ಮ ಕರಗಳ ಮುಗಿವುದು ತರವೇ ಬಹಳ ಮನ ಜರಿಯುವುದು ಸರಿಯೇ ಇಂತು ಕೋರುತಲಿರುವುದು ಮುರಳೀಧರನೆ ವಸನಗಳನು ಕೊಡೆಲೊ 2 ಬಿಸಜನಯನ ಇದು ಹೊಸ ಪರಿಯಲ್ಲವೆ ರಸಿಕ ಜನರು ಪರಿಹಾಸ ಮಾಡಿ ಮುಸಿ ಮುಸಿ ನಗುವರು ಶ್ರೀಶ ನಿನಗೆ ಪಸುಳೆ ಜನರ ಸಹ ವಾಸವೇ ಪ್ರಸನ್ನವದನ ಕೃಷ್ಣ 3
--------------
ವಿದ್ಯಾಪ್ರಸನ್ನತೀರ್ಥರು
ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ ಕರದಲ್ಲಿ ದಂಡ ಕೋಲು ಕಮಂಡಲನೀವ ಪರಿ ಹೇಗೆ ದಾಸಾನುದಾಸನಲ್ಲ ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1 ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ ನಿನ್ನ ಬಾಲಬ್ರಹ್ಮಚಾರಿಯೆಂದು ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2 ಶೃಂಗಾರಗಳನು ತತ್ವಂಗಳನು ಪೇಳುವಡೆ ಗುಂಗುರುಹಿನೊಳಲ್ಪ ಮನುಜನಲ್ಲ ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3
--------------
ಬೇಲೂರು ವೈಕುಂಠದಾಸರು
ಶೇಷ ಗಿರಿಯ ವಾಸಈಶ ಜಗತ್ರಯ ಪೋಷಕ ಸರ್ವೇಶ ಭಾಸುರ ಕೀರ್ತಿ ಶೇಷ ಎನ್ನ ನೀ ಪೋಷಿಸುವುದು ಈಶ ಪ ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ ಪಕ್ಷಿವಾಹನ ಪರಮಪರುಷ ಅಕ್ಷಯ ಫಲದಾಯಕನಾ ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು ರಕ್ಷಿಸೊ ಸಂಪನ್ನ 1 ವೇಣುನಾದ ವಿನೋದನಾದ ಸುಗಾನಲೋಲ ಹರಿಯೆ ದಾನವಾಂತಕ ದಜನುರಕ್ಷಕ ಸುಜ್ಞಾನಿಗಳ ಧೊರಿಯೆ ಮಾನವಾಧಿ ಪ ಮದನವಿಲಾಸ ಮಾಧವ ಮುಕುಂದಾ ನೀನೆ ದಯಮಾಡಿ ಸಲಹೊ ಆನಂದಾ ನಿಜನಿತ್ಯ ಗೋವಿಂದಾ 2 ವಾರಿಧಿ ಬಂಧಿಸಿ ದೈತ್ಯರ ಬಲವನೆಲ್ಲ ಮುರಿದಾ ಬಲವಂತಾ ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ ಸುಲಭದಿ ಅವನನುಜಗೆ ಪಟ್ಟವನಿತ್ತು ಸತಿಯನೆ ತಂದಾ ಜಲಧಿಶಯನ ಅಹೋಬಲ 'ಹೊನ್ನವಿಠ್ಠಲ’ ಚಲುವ ಸದಾನಂದಾ 3
--------------
ಹೆನ್ನೆರಂಗದಾಸರು
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ಶೇಷ ವಂದ್ಯ ಶಿರಿನಾರಾಯಣ ವಿಠಲ ದಾಸನೆನಿಸೋ ಇವನಾ ಪ ದೋಷ ದೂರ ಸುವಿಶೇಷ ಮಹಿಮ ಬ್ರಹ್ಮೇಶ ವಂದ್ಯ ಚರಣ ಅ.ಪ. ಸಾಧಕ ಜೀವ ಸಮೂಹವ ಸೃಜಿಸುತ್ತಸಾಧನ ಬಗೆ ಬಗೆ ನಿರ್ಮಿಸುತಾ |ಭೋದಕ ವೇದ ವಿಭಾಗವ ಗೈದಾ ಅ-ಗಾಧ ಮಹಿಮ ಪೊರೆಯೊ 1 ಕಾರುಣ್ಯಾಂಬುಧಿ ತಾರತಮ್ಯ ಜ್ಞಾನಮೂರೆರಡಿಹ ಭೇದವನೆ ತಿಳಿಸೊಸಾರಾಸಾರದಿ ಸಾರತಮನು ನೀನೆಂ-ದಾರಧಿಪ ಮತಿ ತಿಳಿಸೋ 2 | ಸೇವ್ಯಸೇವಕ ಭಾವ ತಿಳಿಸುತನಿವ್ರ್ಯಲೀಕ ನೆನಿಸೊ |ಪೂಜ್ಯ ಪೂಜಕನೆ ಮಾಳ್ಪುದೆಲ್ಲ ತವಭವ್ಯ ಪೂಜೆ ಎನಿಸೋ 3 ಗುರ್ವನುಗ್ರಹವೆ ಬಲವೆಂದೆನಿಸುತಸರ್ವಕಾರ್ಯ ನಡೆಸೊ |ದುರ್ವಿಭಾವ್ಯ ಸರ್ವೋತ್ತಮ ಹರಿಸರ್ವೇಷ್ಟ ಪ್ರದ ನೆನಿಸೊ 4 ತಂದೆ ತಾಯಿಯೋಳ್ಬಂಧು ಮಿತ್ರರಲಿಸಂದುಗೊಂದು ತವವ್ಯಾಪ್ತಿ |ಛಂದದರಹಿ ಪೊರೆನಂದಕಂದ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಶೇಷನುತ ಗೋಪ ವಿಠ್ಠಲ | ನೀ ಸಲಹೊ ಇವಳಾ ಪ ವಾಸದೇವನೆ ನಿನ್ನ | ಪ್ರಾರ್ಥಿಸುವೆ ಹರಿಯೇ ಅ.ಪ. ಕನ್ಯೆ ಬಹು ಭಾವುಕಳು | ನಿನ್ನೆಯಿಂ ಪ್ರಾರ್ಥಿಪಳುಘನ್ನ ಹರಿದಾಸ್ಯದಲಿ | ಮುನ್ನಮನವಿರಿಸೀ |ಇನ್ನು ತೈಜಸರೂಪ | ಚೆನ್ನ ಶೇಷನು ಆಗೆಮಾನ್ಯರೂ ಪರಮಗುರೂ | ವನ್ನೆ ಕಂಡಿಹಳೋ 1 ಗುರುತರೂಪಿ ತೈಜಸನು | ವ್ಯಾಸಪೀಠದ ಮುಂದೆಇರುತ ಗುರು ರಾಜರ | ಮಹಿಮೆ ಪೇಳುತಲೀ |ಹರಿಸುತಲಿ ಕನ್ಯೆಗೇ | ಫಲಪುಷ್ಪ ತಾಂಬೂಲದೊರಕಿಸಿಹ ಅದರಿಂದೆ | ಉಪದೇಶವಿತ್ತೇ 2 ಪತಿಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತವಹಿತವೆರಡರಲಿ | ರತಿ ಇಡದೆ ಉಂಬಾ |ಮತಿಯನ್ನೇ ಕರುಣಿಸುತಾ | ಮತಿಮತಾಂವರರಂಘ್ರಿಶತಪತ್ರ ಸೇವೆಯಲಿ | ರತಳು ಎಂದೆನಿಸೊ 3 ಭವ | ಸಾಗರದ ಬತ್ತಿಪುದುಮರುತಾಂತರಾತ್ಮ ಹರಿ | ವೇಣುಗೋಪಾಲಾ 4 ಭಾವ ಮೈದುನಗೊಲಿದ | ಶ್ರೀವರನೆ ಮೈದೋರಿಭಾವುಕಳೆ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ |ಸಾರ್ವಭೌಮನೆ ಹರಿಯೆ | ಕೋವಿದೋತ್ತಂಸ ಗುರುಗೋವಿಂದ ವಿಠ್ಠಲನೆ | ನೀವೊಲಿಯ ಬೇಕೋ 5
--------------
ಗುರುಗೋವಿಂದವಿಠಲರು
ಶೇಷಮೂರುತಿ ಪೋಷಿಸೆನ್ನ ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ ಶ್ವೇತದ್ವೀಪದ ಮಧ್ಯದಲ್ಲಿ ದೇವನರಸಿಯ ಕೂಡುತ್ತಲಿರಲು ಭಕ್ತಿಯಿಂದಲಿ ಕಂಗಳಿಂದ ಬಿಡದೆ ನೋಡುತಲಿಪ್ಪ ಸಮಯ1 ಮಗಳ ಲಜ್ಜೆಯ ಕಂಡು ಪಿತನು ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು ಮಗಳ ಮೇಲಿನ ಪ್ರೀತಿ ಪಿತಗೆ ಯೆಣಿಸಲಾಗದು ಲೋಕದೊಳಗೆ 2 ರಾಜೇಶ ಹಯಮುಖ ಹರಿಗೆ ಮಂಚವೆಂದರೆ ನೀನೆ ಖರೆಯು ರಾಜರಾಜರಿಗಿಂಥ ಮಂಚ ದೊರಕದೆಂದೆಂದಿಗೂ ದೇವ 3
--------------
ವಿಶ್ವೇಂದ್ರತೀರ್ಥ
ಶೇಷವಂದ್ಯ ಹರಿ ವಿಠಲ | ನೀ ಸಲಹೊ ಇವಳಾ ಪ ವಾಸುದೇವನೆ ಕೃಷ್ಣ | ಶ್ರೀಶ ಪುರುಷೋತ್ತಮ ಅ.ಪ. ಸೂಕರ ನೀಚ | ಯೋನಿಗಳಲಿ ಜನಿಸಿಜ್ಞಾನಾನು ಸಂಧಾನ | ಕಾಣದಿದ್ದಾಗ್ಯೂಅನೇಕ ಪೂರ್ವವೆನೆ | ಪುಣ್ಯ ಸಂಚಿತದಿಂದಮಾನವ ಸುಜನ್ಮದೊಳು | ಜನುಮ ಪೊತ್ರಿಹಳೊ 1 ತೈಜಸ ಸೂಚಿ | ವರ ಅಂಕಿತವನಿತ್ತೆಮರುತಾಂತರಾತ್ಮಕನೆ | ಮದ್ಬಿಂಜ ಪೊರೆಯಿವಳಾ 2 ವರಸು ಸೌಭಾಗ್ಯವನೆ | ಪರಿಹರಿಸಿ ದುಷ್ಕರ್ಮನಿರುತ ನಿನ್ನಯ ನಾಮ | ಸ್ಮರಣೆ ಸುಖವಿತ್ತೂಮರುತ ಮತ ತತ್ವಗಳ | ಅರಿವಾಗುವಂತೆಸಗೋಕರಿವರದ ಕಮಲಾಕ್ಷ | ಕಾರುಣ್ಯ ಮಾರ್ತೇ 3 ಪತಿಸುತರು ಹಿತರಲ್ಲಿ | ಕೃತಿರಮಣ ಸುವ್ಯಾಪ್ತಮತಿಇತ್ತು ಪೊರೆ ಇವಳ | ಕ್ಷಿತಿರಮಣ ದೇವಾಮತಿಮತಾಂ ವರರಂಘ್ರಿ | ಹಿತಸೇವೆ ದೊರಕಿಸುತಕೃತ ಕೃತ್ಯಳೆಂದೆನಿಸೊ | ಅತಿ ಚಿತ್ರ ಚರಿತಾ 4 ಕಾವ ಕರುಣಿಯೆ ದೇವ | ಭಾವುಕರ ಪರಿಪಾಲನೀವೊಲಿಯ ದಿನ್ನಿಲ್ಲ | ಆವತ್ರೈ ಜಗದೀನೋವುಸುಖ ದ್ವಂದ್ವಗಳ | ಸಮತೆಯು ಉಂಬಂತೆನಿವೊಲಿಯೊ ದೇವ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷಾಚಲ ಮಂದಿರ-ಇಂದಿರೇಶ ಪ. ಪಾದ ಸ್ಮರಣೆಯಿತ್ತು ಅ.ಪ ಕರಣಕ್ರಿಯಕರ್ಮಂಗಳೆಲ್ಲವು ಜಡವು ಕರ್ಮ ನಿನ್ನ ನಿಯಮನವಿಹುದು ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ ದುರಭಿಮಾನದಿ ನಾ ಭವಕೊಳಗಾದೆನೊ 1 ವಿಷಯಂಗಳೆಲ್ಲ ಜ್ಞಾನಗೋಳಕದಿ ಬಂದು ಎನ್ನ ವಿಷಮಗೊಳಿಸಿತು ಮನ ಅಭಿಮಾನದಿಂದಲಿ ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ ಪೋಷಿಸೊ ನಿರುತ ಕೃಪಾಕರ ಮೂರುತೇ 2 ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ ವಾಸುಕೀಶಯನ ನೀ ಭೂತಾವಾಸ ನೀನಾಗಿರೆ ಮೋಸಹೋದೆನ್ನನು ಪೋಷಿಸಬೇಕಯ್ಯ 3 ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4 ತನುಛಾಯೆ ಕ್ರಿಯೆಯು ತನ್ನ ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5 ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ ಮನೋವಾಕ್ಕಾಯ ಕರ್ಮವನರ್ಪಿಸಲು ಸನ್ಮತಿಯನೆ ಇತ್ತು ಸತತ ಸಲಹಯ್ಯ 6 ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ ಸರ್ವರಂತರ್ಯಾಮಿ ಮಮಕುಲಸ್ವಾಮಿ ಉರಗಾದ್ರಿವಾಸವಿಠಲ ನಿನ್ನಯ ದಿವ್ಯ ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
--------------
ಉರಗಾದ್ರಿವಾಸವಿಠಲದಾಸರು
ಶೇಷಾದ್ರಿ ವಾಸಾ ಪಾಲಿಸೋ | ನಿನ್ನ ಶ್ರೀಪಾದದಾಸ ಜನರೊಳಗಾಡಿಸೊ ಪ ಭವ | ಪಾಶಗಳಳಿಯುತವಾಸಿಸೊ ಮನದಾ | ಕಾಶದೊಳಗೆ ಶ್ರೀಶಾವೃಷ್ಣೀಶ ಸರ್ವೇಶ - ಕೃತ ಖಳಕುಲ ಬಹುನಾಶ ಅ.ಪ. ಮದನ ಕೋಟಿ ಲಾವಣ್ಯಾ | ಶ್ರೀ ಭೂ ವರೇಣ್ಯಾಪದುಮೆ ಮನಮೋಹನಾ |ಮುದ ಮನದಲಿ ಮನದವಕಾಶದಿ ಪೊಳೆಸುರಭೂಜ | ರವಿತೇಜ | ಮಹ ಓಜ ವೈರಾಜಾ 1 ತರುಜಾತಿ ಫಲ ಸುಮನಾ | ಸುರರೀ ಭವನಾಧರಿಸಿ ಮೆರೆವ ಸುಜನಾ |ಗಿರಿಯೊಳು ನೆಲೆಸುತ - ಸುರರ ಸೇವೆ ವಿಸ್ತಾರಗಂಭೀರ ಮನೋಹಾರ - ಕೃತಕ್ರತು ಸಮ ಅಪಾರ 2 ಭಾರತೀಶ ಪ್ರಾಣಾಂತರ್ಗತ | ಕಾಮಿತದಾತಾಸಾರ ಸದ್ಗುಣ ಭರಿತಾ ||ನೀರಜಾಕ್ಷ ಗುರು | ಗೋವಿಂದ ವಿಠಲನೆಮೈದೋರೊ | ಮುದಬೀರೊ | ನಿನಗೆಲ್ಲು ಸರಿಯಾರೋ 3
--------------
ಗುರುಗೋವಿಂದವಿಠಲರು