ಒಟ್ಟು 831 ಕಡೆಗಳಲ್ಲಿ , 93 ದಾಸರು , 690 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿದಾಸರ ಸ್ತುತಿ ಆನಂದ ಸಾಗರದ ಸೌಖ್ಯವೇಂ ನುತಿಪೆ ಪ. ಆನಂದ ಶ್ರೀ ಗುರುಗಳತಿ ಕೃಪೆಯೊಳಿತ್ತ ಅ.ಪ. ಗಾನಲೋಲನ ಮಹಿಮೆ ಜ್ಞಾನ ಬೋಧನೆಯಿಂದ ನಾನಾಪ್ರಕಾರದಿಂ ವರ್ಣಿಸುತಲಿ ಮಾನಿನಿಯ ಮನದ ಶೋಕಾಗ್ನಿ ಶಾಂತಿಯಗೈಸಿ ಮಾನಸದಿ ನಲಿವಂತೆ ಮಮತೆಯೊಳು ಪೊರೆದ 1 ರಾಮಚಂದ್ರನ ಮಹಿಮೆ ನೇಮದಿಂದಲಿ ಪಠಿಸೆ ಸೋಮಕಳೆ ಪೌರ್ಣಿಮ ಸ್ಥಿರವಾರದಿ ಕಾಮಧೇನುವು ಎನುತ ಕರೆದು ಮುದವಿತ್ತು 2 ಕಲುಷ ಲಿಂಗದ ಕಳೆಯ ಕಳೆದು ಚಂದ್ರನೊಳಿಟ್ಟು ಅ- ನಿಲ ಭಾರತಿಯರ ವ್ಯಾಪಾರ ತಿಳಿಸಿ ಜಲಜಾಕ್ಷ ಗೋಪಾಲಕೃಷ್ಣವಿಠ್ಠಲ ಮನದಿ ನೆಲಸಿ ಮುಕ್ತಿಯ ಕೊಡುವ ಮಾರ್ಗ ತೋರಿದರು3
--------------
ಅಂಬಾಬಾಯಿ
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿಮನದಂಬೇ ಪರಮ ಕದಂಬೇ ಸುರಪನುತೆ ಮಾಂಗಿರೀಶ ಸೌರಭೇ ಪ ಸಿರಿಮಧುರಭಾಷಿಣೆ ಶ್ರೀಮಣಿ ಸರಸಿಜನೇತ್ರರಮಣೀ ಸುವಾಣಿ ವರ ಭೋಗೀಶವೇಣಿ ಸದ್ಗುಣಿ ಸುರುಚಿರ ಸುಮಪಾಣಿ ಭಾಮಿನಿ 1 ವನಜಭವ ಪೂಜಿತೇ ವಂದಿತೇ ಮನಸಿಜಮಾತೆ ಮಹಿತೇ ವಿನೀತೇ ವೈನತೇಯಾದಿ ಸಂತಾನಕೆ ಜನಗಣನುತೆ | ರಂಗ ಮೋಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಸೆಗೆ ಕರೆಯುವ ಹಾಡು ಇಂದಿರಾ ದೇವಿಯ ರಮಣ ಬಾವೃಂದಾರಕ ಮುನಿ ವಂದ್ಯ ಬಾ ಶೋಭಾನೇ ಪ ಸಿಂಧು ಶಯನ ಗೋವಿಂದ ಸದÀಮಲಾನಂದ ಬಾತಂದೆಯ ಕಂದ ಬಾ ಮಾವನಾ ಕೊಂದ ಬಾ ಗೋಪಿಯಕಂದ ಬಾ ಹಸೆಯ ಜಗುಲಿಗೇ ಅ.ಪ. ಕೃಷ್ಣವೇಣಿಯ ಪಡೆದವನೆ ಬಾಕೃಷ್ಣನ ರಥ ಹೊಡೆದವನೆ ಬಾಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣನೆ ಬಾ ||ಯದುಕುಲ ಶ್ರೇಷ್ಠ ಬಾಸತತ ಸಂತುಷ್ಟನೆ ಬಾಉಡುಪೀಯ ಕೃಷ್ಣ ಬಾ ಹಸೆಯ ಜಗುಲಿಗೇ 1 ನಾಗಾರಿ ಮಧ್ಯಳೆ ಹೊಂತಕಾರಿ ಬಾ ||ಬಲು ದುರಿತಾರಿ ಬಾಬಹು ವೈಯ್ಯಾರಿ ಬಾಸುಂದರ ನಾರೀ ಬಾ ಹಸೆಯ ಜಗುಲಿಗೇ 2 ಮಣಿ ಖಣಿಯೇ ಬಾಸೌಭಾಗ್ಯದ ಪನ್ನಗವೇಣಿ ಬಾ ||ಪರಮ ಕಲ್ಯಾಣಿ ಬಾನಿಗಮಾಭಿಮಾನೀ ಬಾಭಾಗ್ಯದ ನಿಧಿಯೇ ಬಾ ಹಸೆಯ ಜಗುಲಿಗೇ 3 ಸಿರಿ ಮೋಹನ ವಿಠಲನ ಸತಿಯೇ ಬಾವೇದಾವತಿಯೇ ಬಾಬಲು ಪತಿವ್ರತೆಯೇ ಬಾ ಹಸೆಯ ಜಗುಲಿಗೇ 4
--------------
ಮೋಹನದಾಸರು
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು- ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 1 ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು ಸದಮಲ ಜ್ಞಾನ ವದಗಿಸುವದಕೀಗ 2 ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 3
--------------
ಗುರುರಾಮವಿಠಲ
ಹಸೆಗೆ ಬಾರೈರಾಮಾ ಪ ಬಿಸಜಾಪ್ತ ವಂಶಲಲಾಮ ಅ.ಪ ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ನೀಮನವಲಿದನುಗ್ರಹಿಸಿ ಬೇಗದಿ4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
--------------
ಗುರುರಾಮವಿಠಲ
ಹೀನ ಬುದ್ಧಿಯ ಹಿಂದೆ ದೂಡುವ ಪ ಕಲಿಮಲಾಪಹನೆಂದು ಪಾಡುವ ಕಲುಷರಾಶಿಯ ಕಳೆದುಕೊಳ್ಳುವ ಹಲವು ಭವದಲಿ ಬಳಲದಂದದಿ ನಳಿನನಾಭನ ನಂಬಿಕೊಳ್ಳುವ 1 ದೇಹ ಗೇಹ ವ್ಯಾಮೋಹ ಭಾರದಿ ಚೋದಗೊಂಡರೆ ಚಕ್ರಿವೊಲಿವನೆ ನಾಹಮೀಶ್ವರೊ ಎಂದು ತಿಳಿದು ದಾ- ಸೋಹಮೆಂಬ ಸನ್ನಾಹಗೊಳ್ಳುವ 2 ಪಂಕಜಾಪತೇ ಪತಿತ ಪಾವನ ವೆಂಕಟೇಶದಾಸೌಘ ಜೀವನ ಕಿಂಕರಾರ್ತಿಹ ಕರುಣದಿಂದಲಾ- ತಂಕವಿಲ್ಲದೆ ಸ್ವಾಂಕ ಕೊಡುವನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಹೇಮದ ತೊಟ್ಟಿಲ ಭಾಮೆಯರ್ಹೂಡಿ ಕೋಮಲ ಕಾಂಚನಧಾಮವ ಮಾಡಿ ಕಾಮಜನಕನೊಳು ಕಾಮಿತ ಬೇಡಿ ಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1 ಚೆನ್ನಿಗರರಸ ಮೋಹನ್ನ ಸುಶೀಲ ಕನ್ನಡಿ ಕದಪಿನ ಕಮನೀಯ ಬಾಲ ಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲ ನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2 ಕೆಂದಾವರೆಯಂತೆ ಚೆಂದುಳ್ಳ ಚರಣ ಚಂದಿರವದನ ಗೋವಿಂದನ ಶರಣ ಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣ ಕಂದ ಕಂದರ್ಪನ ಸುಂದರಾಭರಣ ಜೊ ಜೋ 3 ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣ ನ್ಯಾಯ ನೀತಿ ಸದುಪಾಯ ಸಂಪನ್ನ ಪ್ರೀಯನೆ ಕರ್ಣಾಂತಾಯತನಯನ ಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ4
--------------
ತುಪಾಕಿ ವೆಂಕಟರಮಣಾಚಾರ್ಯ
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು
ಹೊಂದಿ ಭಜಿಸಿರೆಲೋ ಹರಿನಾಮ ದಯ ಸಿಂಧು ಭಜಕಬಂಧು ಹರಿನಾಮ ಪ ಬಂಧನಿವಾರಣ ಹರಿನಾಮ ಬಹ ಕುಂದು ನಿಂದೆ ದೂರ ಹರಿನಾಮ ಅ.ಪ ವಿಷಯಲಂಪಟಹರ ಹರಿನಾಮ ಮಹ ವ್ಯಸನ ಕಳೆದು ಕಾಯ್ವ ಹರಿನಾಮ ಅಸಮಸೌಖ್ಯಜ್ಞಾನ ಹರಿನಾಮ ಮಾಯಾ ಮುಸುಕು ನಿವಾರಣ ಹರಿನಾಮ 1 ಬೇಡಿದ್ದು ಕೊಡುವುದು ಹರಿನಾಮ ಮಹ ಕೇಡು ತಪ್ಪಿಸುವುದು ಹರಿನಾಮ ಗಾಢಪದವಿನೀಯ್ವ ಹರಿನಾಮ ತಾ ಕೂಡಿ ಅಗಲದಿಹ್ಯ ಹರಿನಾಮ 2 ಗಾನಲೋಲಾನಂದ ಹರಿನಾಮ ಮಹ ದೀನ ದಯಾಪರ ಹರಿನಾಮ ಧ್ಯಾನದಾಯಕ ನಿಜ ಹರಿನಾಮ ಮಮ ಪ್ರಾಣದೊಡೆಯ ಶ್ರೀರಾಮನಾಮ 3
--------------
ರಾಮದಾಸರು
ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು 1ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ2ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ಕøತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ 3
--------------
ಗೋಪಾಲಾರ್ಯರು