ಒಟ್ಟು 1080 ಕಡೆಗಳಲ್ಲಿ , 104 ದಾಸರು , 883 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದನನಯ್ಯಾ ಮೋಹನ್ನರಾಯಾ ನೀ ಬಾರೋ |ಹದನದಿಂದ ಹೇಳಿದಳು ಮದಗಜಗಾಮಿನಿ ಪ ಕಾಣದೆ ನಿಲ್ಲಲಾರಳು | ಕನಸನಾದರೂ ಕಾಣಳು |ಗಾಢ ನಿದ್ರೆಯನರಿಯಳು | ಬೆಳಗಾದರೂ ಮರೆಯಳು 1 ನಿನ್ನ ಮೊನ್ನ ಬರದೆ ಹೋಗಿ | ಭಿನ್ನನುಸರದೆ ಬೆರಗಿ |ಸೊನ್ನೆಗಳ ಮಿತವೆಂದು | ಎನ್ನ ಕೂಡನಾಡಿದಳು 2 ಆವ ಮೋಹದ ಮಡದಿ | ನಿನ್ನಗಲಿಸಿದ್ದಾಳು |ರುಕ್ಮಭೂಷಾ ಆವಳಾಣಿಗಳ | ನಿನಗೆ ಹಾಕಿ ಹಿಡಿದಾಳು 3
--------------
ರುಕ್ಮಾಂಗದರು
ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ ನಂಬಿದೆನೋ ಕಡುದಯಾನಿಧೆ ಬಡಕುಚೇಲನ ಪಿಡಿಯವಲಿಗೆ ಒಲಿದು ಪೊರೆದೆ1 ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ ಕೊಡಲು ನಿನಗೆ ಸರ್ವದೇವಸಾರ್ವಭೌಮನೀ ನೋರ್ವ ವ್ಯಾಪ್ತನಿರ್ಲಿಪ್ತ 2 ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ ದಣಿಸಲಾಗದೋ ದೀನರಕ್ಷಕ 3 ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು ಸಕಲಲೋಕೋದ್ಧ್ದಾರ ಧೀರ 4 ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ ವಲ್ಲಭಾ ಶ್ರೀ ವೆಂಕಟೇಶ ನೀ- ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5
--------------
ಉರಗಾದ್ರಿವಾಸವಿಠಲದಾಸರು
ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ. ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು ಹರಿಯೇ ಎನ್ನಯ ದೊರೆಯೇ ಅ.ಪ. ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು ಮಲ್ಲನ ಕೊಂದನು ಕೃಷ್ಣ ರಜಕನ ಕೊಂದನು ರಕ್ತಾಲಂಕೃತನಾಗಿ ಕುಬಜಿಯಿಂದ ಗಂಧವಾ ಕೊಂಡನು ಡೊಂಕನು ತಿದ್ದಿದನು 1 ಚಾಣಿಕರ ಮುಷ್ಟಿಕರ ಕೂಡಾ ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು ರಂಗಮಂಟಪಕೆ ಬಂದು ನಾನಾಭರರಣ ಭೂಷಿತನಾಗಿ ರಾಜ ಬೀದಿಯೊಳು ಸಾಗಿ 2 ಮಧುರಾಪುರದ ನಾರಿಯರು ಬಲು ಚೆಲುವಿಯರು ನಿನ್ನನೆ ಮರುಳು ಮಾಡುವೋರು ಯಮ್ಮನಗಲಿಸುವೋರು ಇವರು 3 ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು ವೊಂದು ನಿಮಿಷವಾದರು ಕಾಲಹ್ಯಾಗ ಕಳಿಯೋಣ ಘನ ಮಹಿಮನ ಅಧರಾಮೃತ ಪರವಶವಾದೆವು 4 ಮಲ್ಲಯುದ್ಧವ ಮಾಡಿ ಮಾವ ಕಂಸನ ಕೊಂದು ಉಗ್ರಸೇನರಿಗೆ ಅನುಗ್ರಹವ ಮಾಡಿ ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು ಕಾಳಿಮರ್ಧನಕೃಷ್ಣ ನಿನಗಿಂದು 5
--------------
ಕಳಸದ ಸುಂದರಮ್ಮ
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ. ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1 ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2 ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3 ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5
--------------
ಗುರುಗೋವಿಂದವಿಠಲರು
ಮನ ಒಲಿದೆನ್ನನು | ಪಾಲಿಸು ಜನನಿ ಪ. ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ ವಿದ್ಯಾವಿದಾತೆ ಬುದ್ಧಿಪ್ರದಾತೆ || ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ 1 ಗಾನವಿಲೋಲೆ | ವಿನಮಿತಪಾಲೆ || ಜ್ಞಾನಪ್ರದಾಯಿನಿ | ಘನಗುಣಶೀಲೆ 2 ಆಡುವ ನುಡಿ ಕೈ | ಗೂಡುವ ತೆರದಲಿ || ಮಾಡೌ ಬೇಡುವೆ | ನಡಿಗಳಿಗೆರಗಿ 3 ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ || ಬೊಮ್ಮನ ರಾಣಿ | ನಿತ್ಯಕಲ್ಯಾಣಿ4
--------------
ವೆಂಕಟ್‍ರಾವ್
ಮನವೆ ಮಾಧವನೊಳು ಮಮತೆಯಿರಲಿ ತನು ಮನ ಧನಗಳು ತನವಾ ನೀಡಿದ ಮ್ಯಾಲೆ ಅನುದಿನ ಪೊರೆವ ಪ ಕಾಮ ಜನಕನು ಪ್ರೇಮದಿ ನೆನದರೆ ಮಾಮನೋಹರ ತನ್ನ ಧಾಮವ ಕೊಡುವ1 ಸಂತತ ನಿನ್ನನು ಚಿಂತಿಸುವಂ- ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ 2 ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ ನಿಜಪದವನೆ ಕೊಡುವಾ ವಿಜಯವಿಠ್ಠಲನಾ 3
--------------
ವಿಜಯದಾಸ
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು
ಮನೆಗೆ ಬಾರೋ ಕೃಷ್ಣ ಬೇಗನೆ ಪ ವನಿತೆಯರಕೋ ಓಡಿ ಬರುತಿಹರು ಅ.ಪ. ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ 1 ಘಾಸಿ ಮಾಡಿ 2 ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ವೀರನಾರಾಯಣಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ 3
--------------
ವೀರನಾರಾಯಣ
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ನೆರೆನಂಬಿದವ ಧನ್ಯನೊ ಪ ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ ಪುರದ ಕೋಟೆಯೊಳಿರಲು ಬಂದಿಹ ಅ.ಪ ಬಹುಭರದಿವಾರಿಧಿ ಲಂಘಿಸಿ ಹರಿಭಟನೆಂದು ತಿಳಿಸಿ ತ್ವರದಿ ರಾಮನಿಗರ್ಪಿಸಿ ಧೀರನೆ ಸುರವಿನುತ ತವ ಪರಿಮಳವಿರಚಿಸಿದ ಗುರುವರರ ನೋಡಿದೆ 1 ಗೋವಿಂದನಂಘ್ರಿಯ ಭಜಿಸಿ ಮನದಿ ಭಾವಿಸಿ ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ ಸಮರ್ಥ ತವಪದ ಕೊಂದಿಸುವೆ ಮನ ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2 ಪುಟ್ಟಿಯತಿರೂಪವನೆಧರಿಸಿ ಕ್ಷಿತಿಯೊಳಗಖಿಲ ದುರ್ಮತಗಳೆಂಬುವ ಮೇಘತತಿಗೆ ಮಾರುತನೆನಿಸಿ ಪ್ರತಿಪಾದ್ಯನೆಂದು ತಿಳಿಸಿ ಸುಖ ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ ಅತುಳ ಮಹಿಮನೆನುತಿಸುವೆನು ಸತತ ಪಾಲಿಸೋ 3 ತನುಮರೆಯಲು ಧುರದಿ ಜೀವನವಿತ್ತಕಾರಣದಿ ವನಜನಾಭನು ದಯದಿ ತನ್ಮೂರ್ತಿ ಸಹಿತದಿ ತಟಿತ್ಕೋಟಿ ಸೇವಕಜನರ ಸಲಹುವಿ ಕೊಳುತಲಿ ಮೆರೆವದೇವನೆ 4 ಶಿರದಿ ಮುಕುಟ ಮಂಡಿತ ಮೂರ್ತಿ ದರುಶನವನೆ ಕೊಳ್ಳುತ ವಿಸ್ತರ ಮಂಟಪದಿರಾಜಿತ ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ ಕರುಣವ ಪಡೆದ ಧೀರನೆ 5
--------------
ಕಾರ್ಪರ ನರಹರಿದಾಸರು
ಮರೆತು ಬಿಡುವರೇ ಸ್ವಾಮಿ ಪ ಕರಪಿಡಿದೆನ್ನನು ಕಾಯೊ ಮಾರುತಿಅ.ಪ. ಸೀತೆಗೋಸುಗ ಪೋಗೀ ಶಿರಧಿಯದಾಟಿ ನೀ ಮೋದ ಪಾತಕಿ ರಾವಣನಾ ಪುರದ ದಹಿಸಿ ಬಂದು ಚೂಡಾಮಣಿಯ ತಂದು ಶ್ರೀ ರಾಮರಿ ಗರ್ಪಿಸಿದೇ 1 ಪರಮಾತ್ಮಾ ಶ್ರೀ ಕೃಷ್ಣಗರ್ಪಣೆ ಮಾಡಿದೆ 2 ಮಧ್ವರಾಯರೆಂಬೊ ಪೆಸರಿನಿಂದಾ ಅದ್ವೈತವಾದಿಗಳ ಖಂಡಿಸಿ ಮೆರೆದೇ ಅದ್ಭುತ ಮಹಿಮ ವೇಂಕಟವಿಠಲನ ಪಾದ ಪದ್ಮಂಗಳ ನಿರುತ ಸೇವಿಸುತಿರಾ 3
--------------
ರಾಧಾಬಾಯಿ
ಮರೆಯದೆ ಸಲಹೆನ್ನನು ಯಾದವಗಿರಿ- ದೊರೆ ಮಂಗರಾಯ ನೀನು ಸರ್ವಜೀವೋತ್ತಮನೆ ನಿನ್ನನು ಮರೆಯಹೊಕ್ಕೆನು ಮಾರುತಾತ್ಮಜ ಕರೆದು ಭಕÀುತರಿಗ್ವರವ ನೀಡುವೊ ಭಾರತೀಶ ಪ ಸೀತಾವಲ್ಲಭ ರಾಮರ ಪಾದಾಂಬುಜ ದೂತನೆಂದೆನಿಸಿದೆಯೊ ಮಾತೆಗಿಟ್ಟ ಮುದ್ರಿಕೆಯನು ಘಾತಕ ರಾವಣನ ಪುರಕೆ ಕಾರ್ತೀಕದುತ್ಸವ ಮಾಡಿ ಮಂಗ- ಳಾರ್ತಿ ಬೆಳಗಿದೆ ಬಾಲದಿಂದ 1 ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ ಮುಖ್ಯ ಪ್ರಮುಖರನು ಸಕಲ ಅನುಜರ ಸಹಿತ ದುರ್ಯೋಧನನ ಪ್ರಾಣವ ಸೆಳೆದÀು ಬ್ಯಾಗನೆ ನಕುಲ ಧರ್ಮಜನಾ ಸಾದೇವ ದ್ರೌಪದಿಗೆ ಸುಖ ಸಂತೋಷ ನೀಡಿದೆ 2 ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ ಶುದ್ಧಶಾಸ್ತ್ರವ ಬೋಧಿಸಿ ಗೆದÀ್ದು ಮಾಯಾವಾದಿಗಳ ವಾದಪ್ರ- ಸಿದ್ಧನೆನಿಸಿದೆ ಮಧ್ವಮುನಿ ಮುದ್ದು ಭೀಮೇಶಕೃಷ್ಣನ ಪ್ರ- ಸಿದ್ಧಿ ಮಾಡಿದೆ ಪರಮ ಗುರುವೆ 3
--------------
ಹರಪನಹಳ್ಳಿಭೀಮವ್ವ
ಮರೆಯಲಾರೆ ನಿನ್ನ ತೊರೆಯಲಾರೆ ಮರೆತು ತೊರೆದು ಜೀವಿಸಲಾರೆ ಕೃಷ್ಣಮುರಾರೆ ಪ ಹರಿಚರಣಂಗಳೆ ಶರಣೆನದಿದ್ದರೆ ನಾನಪರಾಧಿ ರಂಗ ಕರುಣವ ಬೀರದೆ ಮರೆ ನೀನಾದರೆ ನೀನಪರಾಧಿ 1 ಭಕ್ತಿ ವಿರಕ್ತಿಯ ಮಾರ್ಗವ ಬಿಟ್ಟರೆ ನಾನಪರಾಧಿ ರಂಗ ಯುಕ್ತಿಯೊಳೆನ್ನನು ಕತ್ತಲೆಯೊಳಗಿಡೆ ನೀನಪರಾಧಿ 2 ನೀನೇ ಗತಿಮತಿಯೆನಗೆನದಿದ್ದರೆ ನಾನಪರಾಧಿ ಎನ್ನಪರಾಧವ ಮನ್ನಿಸದಿದ್ದರೆ ನೀನಪರಾಧಿ 3 ಅಪರಾಧಗಳಿನ್ನಿಬ್ಬರಿಗೇತಕೋ ಕಮಲಾಂಗ ಸುಪಥವ ತೋರುವ ಜಾಣ್ಮೆಯು ನಿನ್ನದು ಮಾಂಗಿರಿರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರೆಯುವೆ ಏತಕೋ ಗರುಡಗಮನ ಯೆನ್ನಾ ದುರಿತವನಾರ್ಜಿಸಿ ಕೊರಗುವೆನ್ನನು ನೀ ಪ ಹದಿನೆಂಟು ಸಾಸಿರ ಉದರದೊಳುದಿಸುತೇ ಹೃದಯದಿ ನಿನ್ನ ನಾಮಾ ಒದಗಲಿಲ್ಲವೋ 1 ಧರೆಯೊಳು ನರಜನ್ಮ ಹಿರಿದೆಂದು ಪೇಳ್ವರು ತ್ವರಿತದಿ ನಿನ್ನ ನಾಮಸ್ಮರಣೆಯನೀಯದೆ 2 ಸೋಮಶೇಖರನುತ ಕಾಮಜನಕ ಹರಿ ಪ್ರೇಮದಿ ಪಾಲಿಸೆನ್ನ ರಾವiದಾಸಾರ್ಚಿತಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್