ಒಟ್ಟು 668 ಕಡೆಗಳಲ್ಲಿ , 91 ದಾಸರು , 560 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಂಬಶ್ರೀವಾಹನ ಕುಂಟೋಜೀಶಾ |ಸುಂದರ ಬಸವೇಶಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಗದೊಳಗಿಹ ಜನರಘನಾಶ |ಸುಗಮದಿ ಕಡಿವನು ಭವದಪಾಶ|ಅಗಣಿತಶಿವಗಣರೊಳು ಮೆರೆವಅವಿನಾಶ1ಗಳಬೆನ್ನವನಿತ್ತು ಪರೇಶ |ಮಾಳ ಹೊಲಗಳ ನಡಿಸುವನೀಶ |ತಿಳಿ ಮನದೊಳು ಬೆಳಗುವ ಜ್ಯೋತಿ ಪ್ರಕಾಶ2ಧರಣಿಗಧಿಕವಾದ ಕೈಲಾಸ |ಪೊರೆವುತ ಕುಂಟೋಜ ನಿವಾಸಾ |ಸ್ಥಿರವಾಗಲು ಶಂಕರಗಾಯಿತು ಉಲ್ಹಾಸ3ಸುಂದರ ಬಸವೇಶ ||
--------------
ಜಕ್ಕಪ್ಪಯ್ಯನವರು
ಹಂಚಿನ ಇದಿರಲಿ ಹಲ್ಲನು ತೆಗೆಯಲುಮಿಂಚುವ ಕನ್ನಡಿಯಾದೀತೆ ? ಪ.ಮಿಂಚಿನ ಬೆಳಕಲಿ ದಾರಿಯ ನಡೆದರೆಮುಂಚುವ ಊರಿಗೆ ಮುಟ್ಟೀತೆ ? ಅಪಬಾಲರ ಭಾಷೆಯ ನಂಬಿ ನಡೆದರೆಶೀಲದ ಕೆಲಸಗಳಾದೀತೆ ?ಜೋಲುವ ಹೋತಿನ ಮೊಲೆಗಳ ಹಿಂಡಲುಹಾಲಿನ ಹನಿಯದು ಹೊರಟೀತೆ ?ಕಾಲುವೆ ಬಚ್ಚಲಕುಣಿ ನೀರಿಗೆ -ಘನಬಾಳೆಯ ತೋಟವು ಆದೀತೆ ?ಮೇಲುಬಣ್ಣಾದಾ ಆಲದ ಹಣ್ಣುನಾಲಿಗೆಸವಿಯನು ಕೊಟ್ಟೀತೆ ? 1ಭಾಷೆಯ ನುಡಿಗಳಿಗಾಸೆ ಮಾಡೆ ಮನದಾಸೆಯ ಕಾರ್ಯಗಳಾದೀತೆ ?ದೋಸೆಯ ಛಿದ್ರದಿ ಆರಿಸೆ ಕಾಳಿನರಾಶಿಯು ಹಸನವು ಆದೀತೆ ?ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆಮಾಸದ ಮನೆ ಬದುಕಾದೀತೆ ?ಕಾಸಾರದೆದುರಿಗೆ ಹರಿಕಥೆ ಹೇಳ್ದರೆಸೋಸಿ ಕೇಳ್ದು ತಲೆದೂಗೀತೆ ? 2ಮಿಥ್ಯಾವಚನಿಯ ಮಾತನು ನಂಬಲುಹೊತ್ತಿಗೆ ಅದು ಬಂದೊದಗೀತೆ ?ಸತ್ತವನೆದುರಿಗೆ ಸುತ್ತಲು ಕುಳಿತುಅತ್ತರೆ ಆ ಹೆಣ ಕೇಳೀತೆ ?ನಿತ್ಯನಪುಂಸಕನೈದಲು ತರುಣಿಗೆಚಿತ್ತ ಸುಖವು ಸೂರಾದೀತೆ ?ಕುತ್ತಿಗೆಗೊಯ್ಕನ ಕಾಲು ಹಿಡಿದರೆಹತ್ಯದೊಳ್ಹೇಸಿಕೆಹುಟ್ಟೀತೆ ?3ಬೋರಗಲ್ಲಿನ ಮುಂದೆ ಬಡತನ ಹೇಳಲುಸಾರಸುಖಕ್ಕನುವಾದೀತೆ ?ಚೋರನು ಚಂದ್ರಗೆ ಕೈಮರೆ ಮಾಡಲುಚೌರ್ಯಕೆ ಕತ್ತಲು ಒದಗೀತೆ ?ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾಹಾರಿಗೆ ಮೀನವು ದೊರಕೀತೆಕಾರಣವಿಲ್ಲದ ಲೌಕಿಕ ಕಥೆಯಿಂಘೋರನರಕ ಭಯ ತಪ್ಪೀತೆ ?4ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲುಹೊಟ್ಟೆಗೆಓದನ ಸಿಕ್ಕಿತೆ ?ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲುಹೊಟ್ಟೆಯಲಿ ಕಳವಳ ಹುಟ್ಟೀತೆ ?ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲುಕೆಟ್ಟ ಮಾತು ಅದು ಬಿಟ್ಟೀತೆ?ದಿಟ್ಟ ಪುರಂದರವಿಠಲರಾಯನಬಿಟ್ಟರೆ ಸದ್ಗತಿಯಾದೀತೆ? 5
--------------
ಪುರಂದರದಾಸರು
ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನುಮಿಂಚುಳ್ಳ ಕಂಚು - ಕನ್ನಡಿಯಲ್ಲದೆ ಪ.ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? 1ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?ಸೂಳೆ ಬಲ್ಲುಳೆ ಮನೆಯ ಬಡತನಗಳ ?ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?ಕೇಳಬಲ್ಲನೆ ಕಿವುಡ ಏಕಾಂತವ ? 2ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?ಗೂಗೆ ಬಲ್ಲುದೆ ಹಗಲ ಹರಿದಾಟವ ? 3ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?ಕಾಣಬಲ್ಲನೆ ಕುರುಡ ಕನ್ನಡಿಯನು ?ದೀನವತ್ಸಲ ನಮ್ಮ ಪುರಂದರವಿಠಲನನುಕಾಣಬಲ್ಲನೆ ಜಾÕನವಿಲ್ಲದವನು ? 4
--------------
ಪುರಂದರದಾಸರು
ಹರಿನೀ ಪಿಡಿದ ಕಲ್ಲವೆ ರತುನಹರಿನಿನ್ನಡಿಗಲ್ಲದವನೆ ಯವನಪ.ಹರಿನೀನೊಲಿದ ಕಪಿರಾಜ ವಿಧಿಯುಹರಿನೀನೊಲಿಯದಿರೆ ಕಪಿಗೆ ವಧೆಯುಹರಿನೀ ಗೆಲಿಸೆ ಪಾರ್ಥನಿಗೆ ಗೆಲುವುಹರಿನಿನ್ನ ಛಲದಿ ಕೌರವರಿಗಳಿವು1ಹರಿನೀ ಮೆಚ್ಚಿದರ್ಭಕರಾರ್ಯರುಹರಿನೀ ಮೆಚ್ಚದಾರ್ಯರೆ ಕಿರಿಯರುಹರಿನಿನ್ನುಚ್ಚರಿಪರು ಮಾನ್ಯರುಹರಿನಿನ್ನೆಚ್ಚರಿಲ್ಲದ ಜನರ್ಹುಚ್ಚರು2ಹರಿನೀ ಕನಕಗಿರಿಗಣುಕಲ್ಲೆನಿಪೆಹರಿನೀ ತೃಣವೆಟ್ಟ ಮಾಡುತಲಿಪ್ಪೆಹರಿನೀ ಘನಕೆ ಘನತರ ಮಹಿಮಹರಿನೀ ಪ್ರಸನ್ವೆಂಕಟಪ ಹೊರೆಯೆಮ್ಮ3
--------------
ಪ್ರಸನ್ನವೆಂಕಟದಾಸರು
ಹೇಮದ ತೊಟ್ಟಿಲ ಭಾಮೆಯರ್ಹೂಡಿಕೋಮಲ ಕಾಂಚನಧಾಮವ ಮಾಡಿಕಾಮಜನಕನೊಳು ಕಾಮಿತ ಬೇಡಿಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1ಚೆನ್ನಿಗರರಸ ಮೋಹನ್ನ ಸುಶೀಲಕನ್ನಡಿ ಕದಪಿನಕಮನೀಯಬಾಲಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2ಕೆಂದಾವರೆಯಂತೆ ಚೆಂದುಳ್ಳಚರಣಚಂದಿರವದನ ಗೋವಿಂದನ ಶರಣಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣಕಂದ ಕಂದರ್ಪನ ಸುಂದರಾಭರಣ ಜೊ ಜೋ 3ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣನ್ಯಾಯ ನೀತಿ ಸದುಪಾಯ ಸಂಪನ್ನಪ್ರೀಯನೆ ಕರ್ಣಾಂತಾಯತನಯನಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ