ಒಟ್ಟು 4323 ಕಡೆಗಳಲ್ಲಿ , 125 ದಾಸರು , 2943 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ ಸುಮನಸರ ಜನನಿ ನಿನ್ನಮಲಪದ ತೋರೆ ಪ. ಲೋಕಸುಂದರಿ ಎನ್ನ ಶೋಕಗಳ ತರಿದು ಅವ ಏಕಮನಸು ನೀಡೆ ಶ್ರೀ ಕಳತ್ರನ ಪದದಿ ನೀ ಕರುಣಿಸಿದನೆ ನನಗನೇಕ ಜನ್ಮದಲಿ 1 ಪತಿ ಎಂದೆಂದಿಗೆ ತೊಲಗದಂದದಲಿ ನೀಡೆ ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ ನಂದಕಂದನ ತೋರಿ ಕುಂದು ಪರಿಹರಿಸೆ 2 ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ಕಾಪಾಡೆ ಸತತದಲಿ ಕಾರುಣ್ಯಶಾಲಿ ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ ರೂಪ ರೂಪಾಂತರದ ವ್ಯಾಪಾರ ತಿಳಿಸೆ 3
--------------
ಅಂಬಾಬಾಯಿ
ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ಕರ ಪ ಸೂರಿನಿವಾಸ ಭೋಗಾಪುರ ಮಂದಿರ ಮಾಮುದ್ಧರ ಅ.ಪ ಶ್ರೀರಘುವರನಾಜ್ಞೆಯಿಂದಲಿ ವಾರಿಧಿಯಕ್ಷಣದಲಿ ಹಾರಿ ಭೂಮಿಸುತೆ ಗೆರಗುತಲಿ ಮುದ್ರಿಕೆಯ ಕೊಡುತಲಿ ಶ್ರೀರಾಮಗೊಂದಿಸಿದಿ ಕ್ಷೇಮದಲಿ ಇಹಳೆಂದು ಪೇಳಿ 1 ಇಂದು ಕುಲದಿ ಪಾಂಡು ನೃಪತಿಯ ಎನಿಸಿದೆಯೊ ತನಯ ಬಂಥ ಕೌರವ ವೃಂದ ಮಥಿಸಿದೆಯಾರಣದೊಳಗೆ ವಿಜಯ ನಂದಸುತನ ನೊಲಿಮೆ ಪಡದಿಯಾ ಭೀಮಶೈನರಾಯ 2 ಮೇದಿನಿ ಸುರಗೃಹದಿ ಜನಿಸಿದ ವೇದಾರ್ಥ ತಿಳಿಸಿದ ವಾದಿಗಳ ನಿರ್ವಾದಗೈಸಿದ ದಿಗ್ವಲಯ ಚರಿಸಿದ ಭೇದ ಭೋದಕ ಶಾಸ್ತ್ರವಿರಚಿಸಿದ ಶ್ರೀ ಪೂರ್ಣಬೋಧ 3 ಕಾಲಕಾಲಗಳಲ್ಲಿ ದ್ವಿಜಜನ ಬರುತಿಹರು ನಿನ್ನ ಧೂಳಿ ದರುಶನಾಬಿಷೇಚನ ಶೇವಿಪರು ಘನ್ನ ಪಾಲಿಸಬೇಕಯ್ಯ ಭಕುತರನಾ ಪಾಂಚಾಲಿರಮಣ 4 ನೀರಜಾಸನಾದಿ ಸುರಗಣ ವಂದಿತ ಸುಚರಣ ಕಾರ್ಪರ ಶಿರಿನಾರಸಿಂಹನ ಒಲಿಸಿರುವ ನಿನ್ನ ಹರಣ 5
--------------
ಕಾರ್ಪರ ನರಹರಿದಾಸರು
ಕರ ಪಿಡಿಯೊ ಬೇಗಾ ಪ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1 ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2 ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3 ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4 ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5
--------------
ಗುರುಗೋವಿಂದವಿಠಲರು
ಕರದೊಳಿನ ಮಣಿಗೆ ಕನ್ನಡಿಯೇತಕೆ ಪ ಸಿರಿ ರಮಣನಲತಿ ಸಂಶಯವೇತಕೆ ಅ.ಪ ಶರಧಿಯ ಜಲವನ್ನು ಪರಿಪರಿ ದೇಶಕೆ ಬಿರುಗಾಳಿಗಳಿಂದ ದೊರಕಿಸುವನು ಯಾರು ಧರೆಯೊಳು ನವನಾಗರಿಕರೆಂದರಿಯುವ ಪರಿ ತರವೆ ಯೋಚಿಸೆಲೊ 1 ಎಲ್ಲಾ ದೇಶಗಳ ವಿಚಾರ ನೋಟಗಳನ್ನು ಇಲ್ಲೇ ತೋರಿಸುವಂಥ ನಲ್ಲರು ಇರುವರು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು ಬಲ್ಲರೇ ಇವರು ತಲ್ಲಣಿಸುತಿಹರು 2 ಘಾಸಿಯ ಮಾಡದೆ ಪೋಷಿಸುವನು ಯಾರು ಈಶನ ಕರುಣವು ಲೇಶ ತಪ್ಪಿದರೆ ಆ ಶಿಶುವಿನ ಜೀವದಾಶೆ ಎಂತಿಹುದೊ 3 ಎಲ್ಲಾ ನಾರಿಯರು ಗರ್ಭ ಧರಿಸುವರೆ ಎಲ್ಲಾ ಬೀಜಗಳಿಂದ ತರುಗಳು ಬರುವುದೆ ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ ಪರಿ 4 ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ ಭಿನ್ನ ಕಾಲಗಳಲ್ಲಿ ಅನ್ನವನೀಯಲು ಅನ್ಯರಿಗಳವೆ ಪ್ರಸನ್ನನಿಗಲ್ಲದೆ 5
--------------
ವಿದ್ಯಾಪ್ರಸನ್ನತೀರ್ಥರು
ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ. ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು 1 ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು 2 ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು3 ಕರ್ಮ ಶ್ರೀಹರಿಗೆ ಅರ್ಪಿತವೆಂದು 4 ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು 5
--------------
ಗೋಪಾಲದಾಸರು
ಕರಿಗೊರಳಾ ಪಾಲಿಸೋ ಪ ಕರಿವರದನ ದಯ | ನಿರುತ ನಿನ್ನೊಳಗಿದೆಸುರಜೇಷ್ಠಾನುಜ | ಶರಣನ ಕರಪಿಡಿಅ.ಪ. ಪಶುಪತಿ ಎನಿಸಿಹೆ 1 ಆರು ನಿನಗೆ ಸರಿ | ವೈರಾಗ್ಯಾಧಿಪಕೋರುವೆನೋ ತವ | ಕರುಣಾ ರಸವನುಭೂರಿ ದಯದಿ ಮಮ | ಕಾರವ ಹರಿಪುದುಬೇರೊಂದನೊಲ್ಲೆ | ಕಾರುಣ್ಯಾಂಬುಧಿ 2 ದೇವ ದೇವ ಹರಿ | ದಾವಾಗ್ನಿಯ ಭಯತೀವರ ಹರಿಸುತ | ಗೋವ್ಗಳನುಳುಹಿದ |ಭಾವಜ ಪಿತ ಗುರು | ಗೋವಿಂದ ವಿಠಲನಪಾವನ ಪದ ದ್ವಯ | ಭಾವದಿ ತೋರಿಸಿ 3
--------------
ಗುರುಗೋವಿಂದವಿಠಲರು
ಕರಿಸು ಬೇಗಿಲ್ಲಿಗೆ ಹರಿಯೆ ನಿನ್ನವರ ಅರಸಿಕ ದೇಶದಿ ಬಳಲಿಕೊಂಡಿಹನ ಪ. ಸರ್ವಜ್ಞ ನಿನಗರಿಪುವದೇಸು ವಿವರ ಸರ್ವ ಪ್ರಕಾರದಿ ಕಾವೆ ನಿನ್ನವರ ಪೂರ್ವದಂದದಿ ಪರಿಚಾರಕ ಜನರ ಇರ್ವಲ್ಲಿ ತಂದು ಕೂಡಿಸು ದೇವ ಪ್ರವರ 1 ವೇಳೆ ವೇಳೆ ನಿನ್ನ ಪೂಜಾದಿಗಳನು ತಾಳ ಮೃದಂಗಾದಿ ಸನ್ನಹಗಳನು ಮೇಳೈಸಿ ಕೀರ್ತನೆಗೈವ ದಾಸನನು ನಾಳೆ ನಾಡದು ಎಂದು ತಾತ್ಸಾರ ಮಾಡದೆ 2 ಶಕ್ತಿಹೀನ ನಾನೆಂಬುದ ಬಲ್ಲೆ ನೀನು ಭಕ್ತವತ್ಸಲ ನೀನೆಂದರಿತು ನಂಬಿಹೆನು ನಿತ್ಯ ಚಿಂತನೆಯನು ತಪ್ಪಿಸು ಸುರಧೇನು ಶಕ್ತ ವೆಂಕಟರಾಜ ಸಂಶಯವಿನ್ನೇನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣ ಬರುವದೆಂದಿಗೂ ಶ್ರೀರಾಮಚಂದ್ರಾ ಪ ದುರಿತ ಶರಧಿಯೊನೊತ್ತರಿಸಿ ನಿನ್ನಯಾ ದಿವ್ಯ ಚರಣ ಸೇವೆಯೊಳಿರಿಸಿ ಪಾಲಿಸೋ ದೇವ1 ಮೋಸಗೊಳಿಸದಿರೊ ಶ್ರೀಶ ಶ್ರೀನಿವಾಸಾ 2 ಪರಮ ತತ್ವಾಧಿಕಾರಿ ಸುರಮುನಿಸುತಾ ಶೌರಿ ದೊರೆಯ ನಂಬಿದೆನೆಲ್ಲೋ ಕರುಣ 3
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣದಿ ಎನ್ನ ಪೊರಿಯೇ ತೊರಮ್ಮ ಶಿರಿಯೇ ಪ ಚರಣಯುಗಕೆ ನಾ ಶರಣು ಮಾಡಿದೆ ದೇವೀ ಅ.ಪ ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ ಮಾರಾರಿ ಮುಖಸುರ ಸಂತ್ರಾಣಿ ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ ದೂರ ನೋಡದೆ ಪೊರಿಭಾರ ನಿನ್ನದು ತಾಯಿ 1 ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ ಕಷ್ಟ ದಾರಿದ್ರ್ಯ ದುಃಖ ಹಾರಿಣೀ ದುಷ್ಟರ ಸಂಗದಿ ಕೆಟ್ಟಿಹ ಎನ್ನನು ಥಟ್ಟನೆ ಕರುಣಾದೃಷ್ಟಿಲಿ ನೋಡಿ 2 ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ ಸೀತೆ ಸತ್ರಾಜಿತನ ಪುತ್ರಿ ದಾತ ಗುರುಜಗನ್ನಾಥವಿಠಲನ ನೀತ ಸತಿಯೆ ಎನ್ನಮಾತೆ ವಿಖ್ಯಾತೇ 3
--------------
ಗುರುಜಗನ್ನಾಥದಾಸರು
ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ ಕರುಣದಿ ಕಾಯೋ ಎನ್ನ ಪ ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ ಕರ್ಮತಂತ್ರವನುಳಿದು ಕಾಮಿಸಿ ಮ£ವ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು ಹೊಮ್ಮುತಿದೆ ಪರಬೊಮ್ಮ ಮೂರುತಿ 1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು ಮಾನಸಪೂಜಾ ವಿಧಾನವನರಿಯದೆ ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2 ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ ಪುರಹರ ಸನ್ನುತ ಚರಿತಪೂರಿತ ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ವೆಂಕಟವರದಾರ್ಯರು
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ. ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು ಪರ ಬೊಮ್ಮ ಮೂರುತಿ1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು ಮಾನಸ ಪೂಜಾ ವಿಧಾನ ವನರಿಯದೆ ದೀನಜನ ಸುರಧೇನು ಭಕ್ತರ ಮಾನನಿಧಿಯಹ ಶ್ರೀನಿವಾಸನೆ 2 ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ 1 ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ2 ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣದಿ ಭವಾರ್ಣವದಿಂದಾ ದಾಟಿಸುವುದು ಜೀಯಾ ಪ ಯೋನಿ ಮುಖದಿ | ಘಾಶಿಯಾದೆನೋ ವಿಷಯಾಭಿಲಾಷದಿ | ಸೋಸಿದೆನೋ ದು:ಖ ತಾಪವ ಮಾರದೀ | ಮಾಯಾ ಮೋಹದಿ 1 ಧ್ಯಾನ ಮೌನವೆಂಬ ಸಾಧನವನು | ಈ ನಿಯಮ ಯಮ ಯೋಗವನು | ಙÁ್ಞನ ಭಕುತಿ ವೈರಾಗ್ಯವನು | ಏನು ಇಂತರಿಯದ ಮಹಾಪತಿತÀನು 2 ಮುನ್ನ ಮಾಡಿದೆಲ್ಲ ಪರಾಧ ಕ್ಷಮಿಸಿ | ಇನ್ನು ಅಭಯಕರ ಸಿರಸಲಿರಿಸಿ | ಎನ್ನ ಹೃದಯಾಲಂದಃ ಕಾರಹರಿಸಿ | ಸನ್ನುತ ಮಹಿಪತಿ ಎನ್ನ ಭಕ್ತನೆನಿಸಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣದಿಂದ ಪೊರೆವುದೆನ್ನಪರಮಪುರುಷ ಸೂರ್ಯದೇವ ಪಗಾಲಿಯೊಂದೆ ಇರುವ ರಥವುಕಾಲುಕುಂಟನಾದ ಸಾರಥಿಏಳುಕುದುರೆ ಇರಲು ನಡೆವಕಾಲಚಕ್ರ ನಿಯಂತಾರ 1ಲೋಕಕೆಲ್ಲ ಕಣ್ಣೆನಿಸುತಭೀಕರಾಂಧಕಾರವನುನೂಕಿ ಜಗಕೆಬೆಳಕನೀವಸಾಕಾರ ಪರಬ್ರಹ್ಮ 2ಸರ್ವಸ್ಟೃಕರ್ತನಾಗಿಸರ್ವಸ್ಥಿತಿಗೆ ಕಾರಣನಾಗಿಉರ್ಪಿಯೊಳಗೆ ಬೆಳಗುತಿರುವಸರ್ವದೇವ ಚಿತ್ಸ್ವರೂಪ 3
--------------
ಹೊಸಕೆರೆ ಚಿದಂಬರಯ್ಯನವರು