ಒಟ್ಟು 28225 ಕಡೆಗಳಲ್ಲಿ , 136 ದಾಸರು , 9942 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1 ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2 ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
--------------
ವಿಜಯದಾಸ
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ
ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ. ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು1 ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು 2 ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು3 ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು 4 ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು 5 ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ 6
--------------
ಗಲಗಲಿಅವ್ವನವರು
ಮಂದರಧರ ಗೋವಿಂದ ಜಯ ನಂದನ ಕಂದ ಬಾಲಕುಲದಾಸಾನಂದ ಪ ಬೃಂದಾವನ ಗೋಪೀಜನ ವೃಂದ ಸುಂದರ ಮುರಳೀ ಗೀತಾನಂದ ಅ.ಪ ಶ್ರೀವತ್ಸಾಂಕಿತ ಪಾವನಚರಣ ದೇವ ದೇವಾನತ ದೇವಕಿತರುಣ ಭಾವ ಸಂಭವಪಿತ ರಾಧಾರಮಣ ಭಾವುಕ ಸೇವಿತ ಕರುಣಾಭರಣ1 ಮಂಗಳನಾಮಾ ಯದುಕುಲಸೋಮಾ ಸಂಗರಭೀಮ ಜಗದಭಿರಾಮ ಭೃಂಗಕುಂತಳ ಮಾಲಿಂಗನಿಸ್ಸೀಮ ರಂಗರಥಾಂಗ ಮಾಂಗಿರಿವರಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರಧರ ಗೋವಿಂದ ಮುಕುಂದ ಸ ನಂದವಂದ್ಯನೆ ಲಾಲಿಸೋ ಪ ಕುಂದರದನ ಶರದಿಂದುವದನ ಮುಚು ಕುಂದ ವರದನೆ ಪಾಲಿಸೋ ಅ.ಪ ಸಾರಸಭವನುತ ಸಾರಚರಿತ ಸಂ ಸಾರಪಯೋನಿಧಿ ಪಾರದನೆ ವಾರಿಧಿ ಶಾರೀರ ವಿಹಾರ ವಿಶಾರದನೆ 1 ಪಾಶ ವಿಮೋಚನ ಪಟುಚರಿತ ವಿನುತ ಕೇಶವ ಸದ್ಗುಣ ಗಣಭರಿತ 2 ಧರೆಯೊಳು ಶ್ರೀ ಪುಲಿಗಿರಿಯೊಳು ನೆಲೆಸಿಹ ಶರಣರ ಸಲಹುವ ಶ್ರೀಧರನೆ ಚಕ್ರಧರ ವರನೆ 3
--------------
ವೆಂಕಟವರದಾರ್ಯರು
ಮಂದರಧರ ಗೋವಿಂದಾ | ಇಂದಿರಾನಂದ ನಂದನಕಂದ ಸುಂದರವರದಾ ಪಾಹಿ ಮುಕುಂದಾ ಪ ವಾರಿಜಸೌರಭ ಹಿಮಕರ ಬಿಂಬ1 ಮಾಂಗಿರಿ ರಂಗ ಶುಭಾಂಗ ದೇವೋತ್ತುಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಂದರೋದ್ಧಾರಾನಂದನ ಕಂದ ಬಾ ಬೇಗಾ ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ. ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ. ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ 1 ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ ವೈಜಯಂತಿ ಮಾಲಾ ಶೋಭಾ ಬಾ ಬೇಗಾ ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ2
--------------
ಸರಸ್ವತಿ ಬಾಯಿ
ಮದಲಗಟ್ಟಿ ಪ್ರಾಣನಾಥಾ ಮುದವನಿತ್ತು ಪಾಲಿಸಯ್ಯ ಪ ಮದನಜನಕ ಮಾಧವಾನಬೋಧವಿತ್ತು ಕರುಣಿಸಯ್ಯ ಅ.ಪ. ತಾಪ ಮೂರ್ತಿ ನೀನುದೀಪದಂತೆ ಹೊಳೆದು ಭವದಕೂಪ ದಾಟಿಸಯ್ಯಾ ಭೂಪ 1 ದೇವ ದೇವೋತ್ತಮನೆ ನೀನುಜೀವದಾನ ಮಾಡಿಸಯ್ಯಪಾವಮಾನಿ ಪರಿಕೆಸೆಮ್ಮಾನೋವನದೂರ ಮಾಡಿಸಯ್ಯಾ 2 ಅಂಧ ಬಧಿರ ಮೂರ್ಖ ಜನರುಬಂದು ನಿನ್ನ ವಂದಿಸಲುಛಂದದಿಂದ ಅವರ ದುರಿತವೃಂದವನ್ನು ನಾಶಗೈವೆ 3 ಭೂಸುರೇಂದ್ರ ವ್ಯಾಸರಿಂದಆರು ತುಂಗಾ ಹೃದವ ಬಿಟ್ಟುಭಾವಿಸುವೆ ಇಲ್ಲದೇವಆ ಸಮೀರ ಜಾತ ಶೂರ 4 ಮುದದಿನಾಥ ಜ್ಞಾನ ವಾತಾಕಂದಧೀಮಂಧ ರಾಮ ದೂತಾಹೃದಯ ಸದನದಲ್ಲಿ ತೋರೋತಂದೆಶ್ರೀನರಹರಿಯ ರೂಪ 5
--------------
ತಂದೆ ಶ್ರೀನರಹರಿ
ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ಒಂದೊಂದು ನಿಮಿಷ ಯುಗವಾಗಿ ರಂಗಯ್ಯ ಬಾರೊ ತಂಗಿ ನಾ ಹ್ಯಾಂಗಿರಬೇಕಪ. ಒಂದಿನ ಸುಭದ್ರ ಮಂದಿರದೊಳು ಕುಳಿತುತಂದೆಯ ಭಾಗ್ಯ ಸ್ಮರಿಸುತ ಹಿಗ್ಗುತ ತಂದೆ ಭಾಗ್ಯ ಸ್ಮರಿಸುತ ಹಿಗ್ಗುತ ಇಂದಿರಾಪತಿ ನೆನೆದಾಳ 1 ಹೆಣ್ಣು ಸುಭದ್ರ ತಮ್ಮ ಅಣ್ಣನ ಭಾಗ್ಯವಬಣ್ಣ ಬಣ್ಣದಲೆ ಸ್ಮರಿಸುತಬಣ್ಣ ಬಣ್ಣದಲೆ ಸ್ಮರಿಸುತ ಹಿಗ್ಗುತ ಕಣ್ಣು ಮುಚ್ಚುತಲೆ ತೆರೆಯುತಲೆ2 ತಿಂಗಳಿಗೆ ಸುಭದ್ರಾ ಬಂದೆನ ನಿನ್ನ ನೋಡಲುಒಂದೇ ಮನದಿಂದ ಇರುಯೆಂದಒಂದೆ ಮನದಿಂದ ಇರುಯೆಂದ ಕಳುಹಿದ ಇಂದೆನ್ನ ಮನಸ್ಸು ಕಲಕಿತ 3 ಕೈವಲ್ಯಪತಿಯ ದಯದಿಂದ ಸಲುಹಿದವೈಭವದೊಳಗÀÉ ಮರೆತಾನವೈಭವದೊಳಗÀÉ ಮರೆತಾನ ಮುಯ್ಯವ ಒಯ್ದರೆ ನೋಡಿ ಬರಬೇಕ 4 ಕೃಷ್ಣರಾಯರ ಮನೆಯ ಅಷ್ಟೈಶ್ವರ್ಯವಎಷ್ಟು ವರ್ಣಿಸಲ್ವಶವಲ್ಲಎಷ್ಟು ವರ್ಣಿಸಲ್ವಶವಲ್ಲ ಮುಯ್ಯವ ಒಯ್ದರ ನೋಡಿ ಬರಬೇಕ 5 ಗೊಲ್ಲಾಧೀಶನ ಭಾಗ್ಯ ಚಲುವಿ ಸುಭದ್ರಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತ ಎಲ್ಲರ ಮನಸ್ಸು ಎರಗೀತ6 ಗೋಕುಲೇಶ ರಾಮೇಶ ಯಾಕೆ ಮಥುರೆ ಬಿಟ್ಟವಾಕ್ಕುಪೇಳೆಂದು ವನಿತೆಯರುವಾಕ್ಕುಪೇಳೆಂದು ವನಿತೆಯರು ನುಡಿಯಲುಸಾಕಲ್ಯದಿಂದ ತಿಳಿಸಿದಳು7
--------------
ಗಲಗಲಿಅವ್ವನವರು
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು
ಮಂದಿರ ಕರುಣಾಕರ ಪ ದುರಿತ ಸುರವರ ಮಾಮುದ್ಧರ ಅ.ಪ ಸುತೆಯಾ ಶುಭವಾರ್ತೆಯಾ ಬಿಡಿಸಯ್ಯ ಸಂಸೃತಿ ಭಯ 1 ಕಂಸಾರಿ ಪಡೆದಿಯೊ ಜವ ಶೌರಿ ನೋಳ್ಪ ಸುಖವ2 ಮಹಿಮೆಯ ತಿಳಿವ ಬಗೆಯ ಕೊಡು ಸುಮತಿಯ 3
--------------
ಕಾರ್ಪರ ನರಹರಿದಾಸರು
ಮಂದಿರವೆಲ್ಲೆ ಹೇ ಲಲನೆ ಬಂಧನವೆಲ್ಲೆ ಪ ಅಂದು ಬಯಸಿದೆ ಇಂದು ಬಂದು ಪೇಳಿದಾ 1 ಸೃಷ್ಟಿಗೊಡೆಯಾ ಶಿಷ್ಟವಿಜಯಾ ನಿಷ್ಠೆಯನ್ನೇ ಪೂರೈಸಿ ಕಷ್ಟಹರನೆಂಬ ಬಿರುದನು ಆಂತು ಶ್ರೇಷ್ಠ ದೂತನ ಕಳುಹಿಕೊಟ್ಟನು 2 ಜ್ಞಾನ ಬುದ್ಧಿಯನಿತ್ತು ಶ್ರೀ ಪವಮಾನಪಿತ ನರಸಿಂಹವಿಠಲನು ಕೊಟ್ಟು ಸಲಹುವಾ 3
--------------
ನರಸಿಂಹವಿಠಲರು
ಮದ್ದಾನೆ ಗತಿ ಸಖಿ ಬಾರಮ್ಮಾ|| ಮುದ್ದು ಮೊಗದ ರಂಗನ ತಂದು ತೋರಮ್ಮಾ 1 ಇಂದು ಎನ್ನ ಚಿತ್ತ ಸ್ವಸ್ಥವಾಗದೇ| ಒಂದುಗಳಿಗಿ ಕ್ರಮಣವಾಗಿ ಹೋಗದೇ 2 ಬಿಗಿದವೇನೆ ಮಾಯಿ ಫಣಿಗಳು| ವೇಗದಿಂದ ಬರುತಿದೇ ತಂಗಾಳಿಗಳು 3 ಮಂದರಧರನು ಯಾಕೆ ಬಾರನೇ| ಚಂದ್ರ ಕಿರಣ ಝಳಕ ನಿಲ್ಲಲಾರೆನೇ 4 ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ 5 ಮೊದಲೆನ್ನ ಕೈಯ್ಯಾ ತಾ ಹಿಡುವರೇ| ತದನಂತರದಿ ತಪ್ಪ ನೋಡುವರೇ 6 ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ| ಕರೆತಾರೆ ಮಹಿಪತಿ ಸುತ ಜೀವನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು