ಒಟ್ಟು 36720 ಕಡೆಗಳಲ್ಲಿ , 136 ದಾಸರು , 10408 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೃಗುವಂಶಸಂಭೂತ ಜಗತ್ರಯ ವಿಖ್ಯಾತ ಅಘದೂರ ಪರಶುಧರ ಧೈರ್ಯಸಾರ ಪರಿಹಾರ ಭಕ್ತಜನಮಂದಾರ ಭೂಭುಜತರುಕುಠಾರ ಅನುಸಾರ ರುಚಿಕನಂದನ ಬಾಲ ಶೌಚ ಸತ್ಯಸುಶೀಲ ದ್ವಿಜಸಂಘ ಪರಿಪಾಲ ದಾನಶೀಲ ಸಹಸ್ರಭುಜ ವಿದಾರ ಅಹಿತಜನ ಮದಹರ ವಿಹಿತಪಥ ಸಂಚಾರ ಪಾಹಿಸುಕರ ಕೃಪಾರ್ಣವ ಭಾರ್ಗವ ಸುಪ್ರಭಾವ ಕೋಪಜಿತ ಭೂಪಾಲ ದೇವದೇವ ತಾಪಹರ ಶೇಷಾದ್ರಿ ನಿಲಯ ಸದಯ ಶ್ರೀಪರಂಧಾಮ ಸತ್ಕೀರ್ತಿ ಕಾಮ
--------------
ನಂಜನಗೂಡು ತಿರುಮಲಾಂಬಾ
ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಪ ಸತ್ಯ ನುಡಿವನೆ ಅಪಕಾರಿ ಪರರ ವಿತ್ತಪಹರಿಸುವನೆ ಬಲು ಉದಾರಿ ಹತ್ಯ ಮಾಡುವನೆ ಉಪಕಾರಿ ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ 1 ಪರನಾರಿ ಸಹೋದರ ಹೀನ ಕಂಡಾ ಉ ತ್ತರಗಳನಾಡುವನೆ ಆವಾಗ ಮೌನ ತರತಮ್ಮ ಪೇಳುವನೆ ಕೋಣ ತನ್ನ ಹರಣವೊಪ್ಪಿಸಿಕೊಂಬುವನೆ ಪ್ರವೀಣಾ 2 ಭ್ರಷ್ಟನೆನೆಸುವನೆ ಧನ್ಯ ಪರರ ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ ಕಷ್ಟ ಬೇಡುವನೆ ರಾಜನ್ಯ ವಿಜಯ ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ 3
--------------
ವಿಜಯದಾಸ
ಭೋ ಶುಭಕಾಯ ಕೇಶವರಾಯ ದಾಸರ ಪ್ರಿಯ ಶೇಷಶಯ್ಯ ಪ ಹೇಸಿಕೆ ಮಾಯ ಮೋಸದ ಬಲೆಯ ನಾಶನಗೊಳಿಸಿ ಪೋಷಿಸೆನ್ನಯ್ಯ ಅ.ಪ ನಶಿಪ ಸಂಸಾರ ವಿಷಯದ ಘೋರ ಪುಸಿಯೆಂದೆನಿಸಿ ನಿಜಧ್ಯಾಸವ ಕರುಣಿಸೊ 1 ಅಜ್ಞಾನವಳಿಕಿಸಿ ಸೂಜ್ಞರಸಂಗದಿ ಮಗ್ನನೆನಿಸಿ ನಿರ್ವಿಘ್ನದಿ ರಕ್ಷಿಸೊ 2 ಸಾವ ಹುಟ್ಟುವ ಮಹನೋವ ಗೆಲಿಸಿ ಜಗ ಜೀವ ಶ್ರೀರಾಮ ತವಸೇವಕನೆನಿಸೊ3
--------------
ರಾಮದಾಸರು
ಭೋಕ್ತಸದ್ಗೈಸೋ ಅವಧೂತ ಧ್ರುವ ಅನುಭವ ಬೀರೋ ನಿಧಾನ ಅನುದಿನ ಕಾಯೋ ಕರುಣ 1 ಅತಿಹರುಷದಲಿಡೋ ತಂದೆ ಸುಖದಾಯಕ ನೀನೆಂದೆ 2 ಅರುಹು ಕುರುಹು ಆಗುವ ಮನೆಮೂರ್ತಿದೋರೋ ಶ್ರೀಗುರುವರಮೂರ್ತಿ ನಿಮ್ಮ ಕೀರ್ತಿ 3 ಹಿಡಿಯಲವನಿವನೆಂದು ಸುಗುಣ ನೋಡದಿರೆನ್ನವಗುಣ ಮಾಡಲಿಕ್ಕೆನ್ನ ಪುನೀತನ ಒಡಯನಹುದೋ ನೀ ಪೂರ್ಣ 4 ಬಾಲಕ ನಿಜ ನಿಮ್ಮಿಂದ ಮಹಿಪತಿಯ ಪಾಲಿಸಬೇಕು ಸುದಯಾ ಸಲಹೊ ಸದ್ಗುರು ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಭೋಗೀಂದ್ರ ಭೂಷಣಾ ಪ ಶ್ರೀ ವಾಸುದೇವನ ಮಿತ್ರಾ ದಿನೇಶ ತೇಜ ಪವಿತ್ರಾ ಸರ್ವೇಶ ಮಂಜುಳಗಾತ್ರಾ ಗುಹೇಶ ಸುಚರಿತ್ರಾ1 ಖಳ ತಾರಕಾಸುರ ಮಥನಾ ಬಲು ಧೀರ ಪದ್ಮನ ದಮನಾ ಸುವಿಚಾರಿ ವಲ್ಲಿಯ ರಮಣಾ ಮಯೂರ ವಾಹನಾ 2 ಅರಿ ಭಂಜ ರಕ್ಷಕ ವಾಸಾ ರಂಜನಾನತ ಪೋಷಾ ಧನಂಜಯ ಭಾಸಾ 3
--------------
ಬೆಳ್ಳೆ ದಾಸಪ್ಪಯ್ಯ
ಭೋಜನ ಮಾಡೈಯ ಶ್ರೀರಾಮಚಂದ್ರ ಪ ರಾಜೀವಾನಯನ ಸ್ವರಾಜಾನುಜ ಮಹಾ ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು ಹಪ್ಪಳ ಸಂಡಿಗೆ ಶಾಖಗಳೂ ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1 ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು- ಚ್ಚೋರೆಯು ಅತಿರಸ ಹೊಯಗಡಬೂ ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2 ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ ಬೆಂಡು ಸೋಮಾಶಿಬತ್ತಾಸು ಫೇಡಾ ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ- ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3 ಪನಸು ಜಂಬೂ ಕದಳಿನಾರಂಗ ಎಳನೀರು ಪಾನಕ ತಕ್ರಬೆಣ್ಣೆಯು ಮೊಸರೂ ಸ್ವಾದೋದಕ ಮೊದಲಾಗಿ ಶ್ರೀ ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4 ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ ವಿತ್ತಸಮೇತವಾದಿದನು ಕೈಕೊಂಡು ನೀ 5 ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6 ನವ್ಯ ಸುಗಂಧ ಪುನರ್ಧೂಪವರ್ಪಿಸಿ ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7 ಅವ್ಯಯಾನಂತ ಜಗದ ಬದುಕು ನೀನೆಂದು ಸೇವ್ಯಸೇವಕನಾಗಿರುವೆ ಎಂದು ಭವ್ಯಚರಿತ್ರರು ಪೊಗಳುವರೈ ನಿನ್ನ ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8
--------------
ಗುರುರಾಮವಿಠಲ
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ ವಿಮಲಚರಣಕಮಲ್ಹಿಡಿ ದೃಢದಿ ಪ ಸುಮನಸರಗೂಡಿ ನೀ ಸುಮಶರ ಪಿತನಂ ಸಮಯ ತಿಳಿದು ಭಜಿಸನುದಿನದಿ ಅ.ಪ ಸಾರವಿಲ್ಲದ ಸಂಸಾರ ಇದು ಮೇರೆನಿಲ್ಲದ ಸಾಗರ ಆರಿಗೆ ನಿಲುಕದೆ ಮೂರುಲೋಕವದ್ದಿ ಮೀರಿಬಡಿಸುವುದು ಬಲುಘೋರ 1 ಹೆಂಡರು ಮಕ್ಕಳೆಂದು ನಂಬಿದಿ ನಿನ್ನ ಹಿಂಡಿನುಂಗುವುದು ಅರಿಯದ್ಹೋದಿ ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ ದಂಡನೆಗೆಳಪುದು ಅಂತ್ಯದಿ 2 ಕಾಕುಜನರ ಸಂಗ್ಹಿಡಿದಿದ್ದಿ ನೀ ಲೋಕನೆಚ್ಚಿ ನೂಕುನುಗ್ಗಾದಿ ಲೋಕಗೆಲಿದು ಭವನೂಕಿ ನಲಿಯುವರ ಸಾಕಾರಗಳಿಸದೆ ಕೆಟ್ಟ್ಹೋದಿ 3 ಧರೆಯ ಭೋಗವನು ಸ್ಥಿರ ತಿಳಿದಿ ನೀ ಹರಿದು ಹೋಗುವದಕೊಲಿತಿದ್ದಿ ಮರೆಮೋಸದಿ ಬಿದ್ದರು ಮೈಯಮರೆದು ಸ್ಥಿರಸುಖ ಪಡೆಯದೆ ದಿನಗಳೆದಿ 4 ಭೂಮಿಸುಖಾರಿಗೆ ನಿಜವಲ್ಲ ಇದು ಕಾಮಿಸಬೇಡೆಲೊ ಶೂಲ ಕಾಮಿತಗಳನಿತ್ತು ಕ್ಷೇಮದಿ ಸಲಹುವ ಸ್ವಾಮಿ ಶ್ರೀರಾಮನ ತಿಳಿಮಿಗಿಲ 5
--------------
ರಾಮದಾಸರು
ಭ್ರಮೆಯ ಪುಟ್ಟಿಸಬೇಡ ಭಾವಿ ಭಾರತೀಶಾ ಪ ದಾತ ಭವದಿ ಪ್ರಖ್ಯಾತ ಅ.ಪ. ಕೃತ ಪ್ರತೀಕದಿ ನಿಂದು ನಾಮರೂಪವ ಧರಿಸಿ ನಿರುತತ್ವದ್ದಾಸರಿಂದ ಪೂಜೆಯಾ ಗೊಂಬೀಮನ ಪಾಶದಿಂ ಬಿಗಿದೆನ್ನ ಮನಶೆಳೆಯುತಿಹರೈ ಕೃತಿರಮಣನ ಪ್ರೀಯನಿನ್ನ ಕೃತ್ಯಗಳಿಗೆ ನಮೋ ನಮೋ ಎಂಬೆನಲ್ಲದೆ 1 ಪಾದ ಕುಸುಮ ಶರವೈರಿ ಪದ ಪಿತನೆ 2 ಜ್ಞಾನವಿಲ್ಲದೆ ಮಧ್ಯಜ್ಞಾನ ಶರಧಿಯೊಳು ಮುಳುಗಿ ದೂರಾದೆನೋ ರಾಯಾನಿನ್ನ ವಿಷಯ ವಿರಕ್ತಿ ಅನ್ಯ ವಿಷಯ ಸುಭಕ್ತಿಯಿಂದ ನಿಜಭಕ್ತಿಗಾಣೆನೋಭಕುತಿರಮಣನೇ ನಿನ್ನ ಯುಕುತಿಗಳಿಗಭಿವಂದಿಪೆ ತಂದೆವರದಗೋಪಾಲವಿಠಲನ ತೋರಿಸೋ ಜೀಯಾ 3
--------------
ತಂದೆವರದಗೋಪಾಲವಿಠಲರು
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ ನರರ ಸಂದಣಿಯಲಿ ವಿರತಿ ಮಾತಾಡಿಸಿ ಮಾರನಾಟದಿ ಮನವೆರಗುವಂದದಿ ಮಾಡಿ 1 ಕಾಷಾಯ ದಂಡಿ ವೇಷವ ಧರಿಸಿ ಮುನ್ನ ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2 ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ ಕಾಳಿಮರ್ಧನ ದೇವ ಮಲಿನ ಮನವನಿತ್ತು 3 ಕರವಶವನೆ ಮಾಡಿ ಸರಸದಿಂದ ಕಲೆಹಾಕಿ ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4 ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5 ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ ಮಾಧವ 6 ಪತಿತಾಗ್ರಣಿಯು ನಾನು ಪತಿತ ಪಾವನ ನೀನು ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7 ದ್ವಿಜ ಅಜಮಿಳ ನಿಜನಾಮದಿಂದಲಿ ಸುಜನನೆಂದೆನಿಸಿದ್ದು ನಿಜತೋರದಲೆನ್ನ 8 ಹೀನರೊಳೆನ್ನೆಂಥ ಹೀನ ಜನರ ಕಾಣೆ ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
--------------
ಪ್ರದ್ಯುಮ್ನತೀರ್ಥರು
ಮ'ಪತಿ ಸುತ ಕೃಷ್ಣರಾಯ ಕೃಪೆಯಮಾಡೊ ಮಹರಾಯಾಸ'ಸಲಾರೆ ತಾಪತ್ರಯ ಕರುಣದಿ ಪಿಡಿಕೈಯ್ಯಾ ಪನಿನ್ನ ಕರುಳ ಬಳ್ಳಿಯಲಿ ಜನಿಸಿ ನಿನ್ನ ಮರತೆನೆಂದುನೀನು ಮರೆಯಬೇಡಾ ತಾತಾ ಶಿರದಲಿ ಇಡು ವರದಹಸ್ತಾ1ನಿಮ್ಮ ಕೀರ್ತನೆ ಕೇಳುವಾಗ ಮೈ ಮರೆತರು ಸತ್ಯಪೂರ್ಣರುಚಕ್ರಧರನ ನಕ್ರಹರನ ತಂದು ತೋರಿದ ಮಹಾಮ'ಮನೆ 2ಜ್ಞಾನ ಭಕ್ತಿ ವೈರಾಗ್ಯ ತ್ರಿವೇಣಿ ನಿಮ್ಮ ವಾಣಿಶ್ರೀನಿಧಿ ಭೂಪತಿ'ಠ್ಠಲನ ಒಲಿಸಿದ ಹರಿದಾಸ ಸುಮಣಿ 3
--------------
ಭೂಪತಿ ವಿಠಲರು
ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ. ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ ತುಪ್ಪಾಕಜ್ಜಾಯ ಕೊಡುವೆನೂ 1 ಅಂದಿಗೆ ಕಿರುಗೆÉಜ್ಜೆ ಅಲಗೊತ್ತು ಕೈಯೊಳಗಿದ್ದು ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ ಅಂದವಾದ ಒಂದು ಮುದ್ದು ತಾರಯ್ಯ 2 ಓಡಿಓಡಿ ಬಾರೋ ವಸುದೇವನಂದನಾ ಕಂದ ನೋಡಿ ನೋಡಿ ನಗುತ ಬಾರೊ ರಂಗಯ್ಯ ಕೋಡಗಲ್ಲವಾಸ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯಮಕ್ಕಳಿಲ್ಲದವರಿಗೆ ಗತಿಯಿಲ್ಲವೇ ಪ ಸತ್ಯ ಶೌಚಾಚಾರ ಶಮೆದಮೆಗಳಳವಟ್ಟುನಿತ್ಯ ಕಾಲದಿ ಹರಿಯ ಮನದಿ ನೆನೆದುಅತ್ಯಂತ ಸಂತುಷ್ಟನಾದರಿಂದಲ್ಲದಲೆಹೆತ್ತವರಿಂದ ಗತಿಯು ಎಂಬುದು ನಗೆಯಲ್ಲವೇ 1 ಅಣುಮಹತ್ತಿಲಿ ಶುಚಿಯು ಅಶುಚಿಯಾಗಿಪ್ಪಂಥಎಣಿಕೆ ಎಲ್ಲವನು ತಾಯೆನಿಸಿ ತಿಳಿದುತ್ರಿಣಯನಾಗಿಹೆನೆಂದು ತಾನೆ ತಾನಾಗದಲೆಕ್ಷಣಿಕ ಸುತರಿಂ ಗತಿಯು ಎಂಬುದು ನಗೆಯಲ್ಲವೆ 2 ಸ್ನಾನ ಜಪತಪ ತಿಲೋದಕ ಶ್ರಾದ್ಧ ತರ್ಪಣದಕ್ಷೀಣ ಕರ್ಮಗಳಿಂದ ಮುಕುತಿಯಹುದೇಮಾನನಿಧಿ ಚಿದಾನಂದ ಗುರುಪಾದ ಪದ್ಮವನುನ್ಯೂನವಿಲ್ಲದೆ ನಂಬಿ ಸುಖಿಯಾದರಲ್ಲವೆ3
--------------
ಚಿದಾನಂದ ಅವಧೂತರು