ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಾರಿಜನ ಹೃದಯೇಶ್ವರಿ ಸರ್ವವಿದ್ಯಕಾಧಾರಿ ಪ ವಾಣಿವಿರಂಚಿ ರಾಣಿ ಪಂಕಜ ಪಾಣಿ ಕಾಳಾಹಿವೇಣಿ ನಿನ್ನಯ ವೀಣೆಯಿಂದಲಿ ವೇಣುಗಾನವ ಮಾಣದೆ ಪಾಡುತ ಕುಣಿಕುಣಿಯುತ ಬಾರೆ 1 ಮಂದಯಾನೆ ಪೂರ್ಣೆಂದುವದನೆ ಕುಂದುರಹಿತೆ ಬಂದು ರಕ್ಷಿಸೆ ಮಂದಮತಿಯನಿಂದು ಬೇಗನೆ ಕಂದ ನಾನೆಂದ ನೀ ಛಂದದಿ ಅರಿಯುತ 2 ಸಾರಸಾಕ್ಷಿ ಮಯೂರವಾಹನೆ ಶಾರದಾಂಬೆ ಕಲಕೀರವಾಣಿಯೆ ಸಾರಿ ಬೇಡುವೆ ತೋರು ಕರುಣದಿ ಧೀರನಾ ಗಂಭೀರನಾ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ವಾರಿಜನಯನ ಮುರಾರಿ ಕಂಸಾರಿ ಪ ಆಗಮ ಸನ್ನುತನೆ ನಾ ಭವಸಾಗರದೊಳು ಸಿಲ್ಕಿದೆನು ಧಾಮ ರೀತಿಕಾಣೆ ರಾಮ 1 ದುರಿತವಿದೂರ ಗೋಪಾಲ ಪುರುಷ ಗೋವಿಂದ 2 ಇಂದು ಕಾಪಾಡೋ ನೀನೆಂದು ಪತಿ ಸಲಹಯ್ಯ 3
--------------
ಹೆನ್ನೆರಂಗದಾಸರು
ವಾರಿಜನಯನಗೆ ಜಯ ಮಂಗಳ ಶುಭ ಮಂಗಳಾ ಪ ನೀರಧಿಶಯನಗೆ ಜಯ ಮಂಗಳ ಶುಭ ಮಂಗಳಂ ಅ.ಪ ಭವ ಭಯ ಹರನಿಗೆ ಪವನಜನಮಿತಗೆ ಭುವನಸುಂದರನಿಗೆ ಜಯಮಂಗಳಂ ಕುವಲಯಶ್ಯಾಮಗೆ ನವಮಣಿಮಾಲಗೆ ದಿವಿಜಸಂಸೇವ್ಯಗೆ ಶುಭಮಂಗಳಂ1 ಕರುಣಾಜಲಧಿಗೆ ಶರಣರ ಪೊರೆವಗೆ ನರಹರಿರೂಪಗೆ ಜಯ ಮಂಗಳಂ ಪುರುಷೋತ್ತಮನಿಗೆ ದುರಿತಸಂಹಾರಗೆ ಶುಭ ಮಂಗಳಂ 2 ಗಂಗೆಯ ಜನಕಗೆ ಮಂಗಳರೂಪಗೆ ಸಂಗರಧೀರಗೆ ಶುಭಮಂಗಳಂ ತುಂಗವಿಕ್ರಮನಿಗೆ ಇಂಗಿತವರಿವಗೆ ಮಾಂಗಿರಿಯರಸಗೆ ಜಯ ಮಂಗಳಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ- ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ. ಶ್ರೀರಮಣಿಯ ಕೂಡಿ ನೀನು ದಯ ದೋರಲನ್ಯರಿಗೆಂದರಂಜೆ ನಾನು ದಾರಿದ್ರ್ಯ ಭಯ ದೋಷಗಳನು ದೂರ ಹಾರಿಸಿ ಪೊರೆವ ಸಕಲ ಸುರಧೇನು1 ನಿನ್ನಂಥ ದಾತರಿನ್ನಿಲ್ಲ ಪರ- ಮೋನ್ನತ ಪದವ ಧ್ರುವನಿಗಿತ್ತಿಯಲ್ಲ ಮುನ್ನ ಕುಚೇಲನ ಸೊಲ್ಲ ಕೇಳಿ ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ 2 ಇಂದಿರಾವರ ವೆಂಕಟೇಶ ನೀ ಬಂದುದರಿಂದಾದುದೆನಗೆ ಸಂತೋಷ ಹೊಂದಿದೆ ನಿನ್ನನು ಶ್ರೀಶ ಪೂ- ರ್ಣೇಂದು ವದನ ಕರುಣಾರಸ ಭೂಷಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಧಿ ನಿಚ್ಚನೆ ಪ ನೀರೊಳು ಪೊಕ್ಕಹನೇ ರಂಗೈಯ್ಯ ಭಾರವ ಪೊತ್ತಿಹನೇ ಪೋರಾಚೆÉಗೆ ಇದು ದಾರ ಕಲಿಸಿದರೆನೆ ನೀರಜಭವರು ನಿರ್ಜರರು ನಗುತಿಹರು 1 ಕಂದ ಮೂಲವ ಗೆಲುವಾ ರಂಗೈಯ್ಯ ಬಂದ ಕಂಭವ ನೋಡಿದಾ ಕಂದ ಇಂಥ ಬುದ್ಧಿ ಎಂದು ಕಲಿತಿಯೇನೇ ಮೇದಿನಿ ಪ್ರಲ್ಹಾದ ನಗುತಿಹರು 2 ತಿರುಕನಂತೆ ಬೇಡುವಾ ರಂಗೈಯ್ಯ ಕರದಿ ಕೊಡಲಿವಿಡಿವಾ ಹರಕುತನವು ತಂದೆ ಯಾಕೋ ನಿನಗೆ ಎನೆ ಸುರಗಂಗೆ ವರ ಜಮದಗ್ನಿ ನಗುತಿಹರು 3 ಜಟವ ಬೆಳೆಸಿ ಕಟ್ಟಿಹಾ ರಂಗಯ್ಯ ಹಟದಿ ಮಾತುಳನಳ್ದೀಹಾ ಹಟಮಾರಿತನ ನಿನಗ್ಯಾರು ಕಲಿಸಿದರೆನೆ ದಿಟ ಪವಮಾನಾರ್ಜುನರು ನಗುತಿಹರು 4 ಅರಿವೆ ತಾನುಡಲು ವಲ್ಲ ರಂಗೈಯ್ಯ ತುರಗವೇರಲು ಬಲ್ಲಾ ನರಸಿಂಹವಿಠ್ಠಲ ಸರಿಯಲ್ಲವಿದು ಎನೆ ಸುರರು ಗಹಗಹಿಸಿ ನಗುತಿಹರು 5
--------------
ನರಸಿಂಹವಿಠಲರು
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ವಾರಿಧಿ ಈರೇಳು ಲೋಕನಾಯಿಕೆ ಪ ದೂರ ನೋಡದಲೆ ಅಪ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಮಾಧವ ಪ್ರಿಯಳೆ 1 ಮಾಯಾ ಕೃತಿ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ ಸೋಮಾರ್ಕ ಕೋಟಿ ಮಿಗೆ ಕಾಂತೆ ತಾಮರಸಾಂಬಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸಿ ಉತ್ತಮರೊಡನೆ ಪರಿ ಣಾಮವನೀಯುತ 2 ಅನೇಕಾಭರಣ ಭೂಷಿತೆ ಧರಣಿಜಾತೆ ಜ್ಞಾನಿಗಳ ಮನೋಪ್ರೀತೆ ಆನಂದಲೀಲೆ ವಿಖ್ಯಾತೆ ಆದಿದೇವತೆ ಕಾಣೆನೆ ದಾನಿ ಇಂದಿರಾದೇವಿ ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
--------------
ವಿಜಯದಾಸ
ವಾರಿಧಿನಿಲಯನೆಂಥಾತ ತೀರದ ಮಹಿಮಗಾರನೀತ ಪ ಸಾರಿ ನಂಬಿ ಭಜಿಸಿ ಸತತ ಘೋರ ದುರ್ಭವಳಿರೋ ನಿರುತಅ.ಪ ದೇವದೇವ ದಿವ್ಯಚರಿತ ದೇವಿದೇವಕಿ ಗರ್ಭಸಂಜಾತ ಗೋವುಗಳನು ಕಾಯಿದಾತ ಗೋವಳರೊಡನೆ ಆಡಿದಾತ ಮಾವನಮರ್ದಿಸಿ ಭುವಿಗೀತ ಕೇವಲಸೌಖ್ಯ ನೀಡಿದಾತ 1 ಗೋವರ್ಧನಗಿರಿ ಎತ್ತಿದಾತ ಗೋವಳರನ್ನು ಸಲಹಿದಾತ ಮಾಯಾಪೂತನಿಯಸುವನೀತ ಮಾಯದಿಂದ ಹೀರಿದಾತ ತಾಯಿ ಯಶೋದಾದೇವಿಗೀತ ವಿಶ್ವ ತೋರಿದಾತ 2 ಅಸಮಾಯದಾಟವಾಡುತ ಶಿಶುವಾಗಿ ತೋರಿದಾತ ಕುಶಲಗೋಪಿಕಾಸ್ತ್ರೀಯರನೀತ ವಸನ ಕಳೆದು ನಿಲಿಸಿದಾತ ವಸುಧೆ ಭಾರವನಿಳುಹಿದಾತ ನೊಸಲಗಣ್ಣನ ಸಲಹಿದಾತ 3 ಬಾಲೆಗೋಪಿಯರಿಗೊಲಿದಾತ ಪಾಲಮೊಸರು ಬೆಣ್ಣೆ ಮೆಲಿದಾತ ಕೊಳಲನೂದುತ ನಲಿದಾಡಿದಾತ ಬಾಲನಾಗಿ ಲೀಲೆ ತೋರಿದಾತ ಕಾಳರಕ್ಕಸರ ಕುಲಭೀತ ಕಾಳಿಯನ್ನು ಮೆಟ್ಟಿ ಸೀಳಿದಾತ 4 ಹಿಡಿ ಅವಲಕ್ಕಿಗೆ ಒಲಿದಾತ ಮಾನವ ಕಾಯ್ದಾತ ದೃಢ ಭಕ್ತರೋಳ್ವಾಸವಾದಾತ ಇಡೀ ಭುವನಗಳ್ಹೊತ್ತಾಳುವಾತ ಅಜ ಸುರಾದಿವಂದಿತ ಒಡೆಯ ಶ್ರೀ ರಾಮಯ್ಯ ಮಮದಾತ 5
--------------
ರಾಮದಾಸರು
ವಾರುಧಿಶಯನ ಪಾರಮಹಿಮ ವೋ ನಾರಾಯಣಪ ದಾರಿಗಾಣೆ ಧವಳನಯನಾ ಮೀರಿಬರುವ ದುರಿತಗಳನು ದೂರಿದ ಮಾರಿದೆ ಯಾರದು ಕೇಳವೋ 1 ಪರಮಪದ ನಿವಾಸನ್ಯಾರೊ ಸುರಮುನೀಂದ್ರ ಸುಖವ ಬೀಳೊ ಬರದೆ ಬರದೆ ಬಿರುದೆ ವರದ2 ವಾಸನೆ ನಾನಿನದಾಸನು ಪೋಷಿಸೋ 3
--------------
ಚನ್ನಪಟ್ಟಣದ ಅಹೋಬಲದಾಸರು
ವಾಸಿಷ್ಠ ಕೃಷ್ಣ ವಿಠಲ | ನೀ ಸಲಹೊ ಇವನಾ ಪ ಮೇಶ ಮಧ್ವೇಶ ನಿನ್ನಡಿಯ | ದಾಸ್ಯವನುಆಶಿಸುವ ಭಕ್ತಗೆ ಪ | ರಾಶರಾತ್ಮಜ ಒಲಿದೂ ಅ.ಪ. ವೇದವ್ಯಾಸನೆ ನಿನ್ನ ಆದರದಿ ಧಾನಿಸುತಮೋದದಲಿ ಶ್ರುತತತ್ವ | ಪಾದಾರ್ಪಣೆನ್ನೇ |ನೀದಯದಿ ಮರೆಯಾಗಿ | ತೋರ್ದೆ ಗುರು ಬಿಂಬವನುವೇದಾಂತ ವೇದ್ಯ ಹರಿ | ಹೃದಯ ಗಹ್ವರದೀ 1 ಕ್ಲೇಶಗಳ ದಹಿಸಿ ಸ | ರ್ವೇಶ ಸದ್ಭೋದಗಳಲೇಸಾಗಿ ಅರುಹುತಲಿ | ಶ್ರೀತ ಕೈ ಪಿಡಿಯೋ |ತೋಷ ಕ್ಲೇಶಂಗಳು ರ | ಮೇಶ ನಿನ್ನಿಂದೆಂಬಭಾಸುರದ ಜ್ಞಾನ ಪ್ರ | ಕಾಶ ಕೊಡು ಇವಗೆ 2 ಮೋದ ಅದ್ವೈತ ಪಾದ ನಂಬಿಹನೋ 3 ಪರಿ ಲೀಲೆಗಳ ತೋರಿ ಇವನಲ್ಲೀಪರಿಹರಿಸೊ ಭವಬಂಧ | ಮರುತಾಂತರಾತ್ಮಕನೆಎರಗಿ ತವ ಪದದಲ್ಲಿ | ಮೊರೆಯ ಬಿದ್ದವಗೇ 4 ಸಾವಧಾನದಿ ಧ್ಯಾನ | ಭಾವ ವೃದ್ಧಿಯಗೈಸಿದೇವ ತವ ರೂಪವನು | ಆವ ಹೃದ್ಗುಹಡೀಓವಿ ಕಾಂಬುವ ಹದನ | ನೀವೊಲಿದು ಪಾಲಿಪುದುಗೋವುಗಳ ಪಾಲ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುಕೀಶಯನ ವಿಠಲ ನೀನಿವಳ ಕಾಪಾಡಬೇಕೋ ಹರಿಯೇ ಪ ಭಾಸುರಾಂಗನೆ ದೇವ ಸರ್ವೇಶ ಸರ್ವವಿಧದಲಿ ಕಾಯೊ ಹರಿಯೇ ಅ.ಪ. ಜಗದೀಶ ಜಗಜನ್ಮಾದಿಕಾರಣನೆ ಶ್ರೀಹರಿಯೆಹಗರಣಗಳಾ ಕಳೆದು ಮಿಗೆ ಭಕುತಿ ಸುಜ್ಞಾನವಿತ್ತು |ಬಗೆಬಗೆಯ ಮಹಿಮೆಗಳ ನೀತೋರಿ ನಿನವ್ಯಾಪ್ತಿಮಿಗಿಲಾಗಿ ತಿಳಿಸುತ್ತ ಸಲಹ ಬೇಕಿವಳಾ 1 ಮಧ್ವಮತ ದೀಕ್ಷೆಯನು ಉದ್ಧರಿಸಿ ಇವಳಲ್ಲಿಸದ್ಧರ್ಮ ಪದ್ಧತಿಯ ಶ್ರದ್ಧೆಗಳ ನಿತ್ತೂ |ಮಧ್ವೇಶ ಶ್ರೀಹರಿಯೆ | ಸರ್ವೋತ್ತುಮನೆಂಬಶುದ್ದ ಬುದ್ಧಿಯನಿತ್ತು ಸಲಹ ಬೇಕಿವಳಾ 2 ಚಾರು ಮೂರುತಿಯ |ಬಾರಿಬಾರಿಗೆ ಹೃದಯ ವಾರಿಜದಿ ಕಾಂಬಂಥಚಾರು ಮಾರ್ಗವ ತೋರಿ ಕಾಪಾಡೊ ಹರಿಯೇ 3 ಲೌಕೀಕ ಮಾರ್ಗಗಳು ವೈದೀಕ ವಾಗ್ವಪರಿನೀ ಕರುಣಿಸಿ ಕಾಯೊ ಕಮಲಾಯ ತಾಕ್ಷ |ನೀ ಕಾಯದಿರಲಿನ್ನು ಕಾಯ್ವರ್ಯಾರಿಹರಯ್ಯಮಾಕಾಂತ ಸಲಹಯ್ಯ ಗೋಕುಲಾನಂದ 4 ಕಂದರ್ಪ ಜನಕ ಮನ ಮಂದಿರದಿ ನೀತೋರಿನಂದವನೇ ನೀನಿತ್ತು ಇಂದಿರೇಶನೆ ಕಾಯೊತಂದೆ ಎನ ಬಿನ್ನಪವ ಛಂದದಲಿ ಮನ್ನೀಪುದುನಂದ ನಂದನ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುದೇವ ಪ ವಾಸುದೇವ ಅ.ಪ ವಾಸುದೇವ 1 ವಾಸುದೇವ 2 ಮುರಹರ ಶರಣು ಹೊಕ್ಕೆನೊ ಕಾಯೊ ಶ್ರೀಕೃಷ್ಣ ವಾಸುದೇವಶರಣೆಂಬ ಜನರಿಗೆ ಕರುಣಿಪ ಶ್ರೀಕೃಷ್ಣ ವಾಸುದೇವ3 ವಾಸುದೇವ 4 ಶೇಷಶಯನ ನೀ ಪೋಷಿಸೊ ಶ್ರೀಕೃಷ್ಣ ವಾಸುದೇವಭಾಸುರಾಂಗನೆ ಭಕ್ತವತ್ಸಲ ಶ್ರೀಕೃಷ್ಣ ವಾಸುದೇವ5
--------------
ವ್ಯಾಸರಾಯರು
ವಾಸುದೇವ ಬಲ್ಲಭಾಸುರಾಂಗ ಶ್ರೀವಾಸುಕಿಶಯನನಸಾಸಿರ ನಾಮವ ಲೇಸಾಗಿ ಪಠಿಸದೆ ಪ ಮುರ ಮುಷ್ಟಿಕ ವೈರಿಯನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ 1 ಕಾಯವು ಸ್ಥಿರವಲ್ಲ ಎನ್ನೊಳುಮಾಯೆ ತುಂಬಿತಲ್ಲಪ್ರಾಯಮದದಿ ಪರಸ್ತ್ರೀಯರ ಕೊಂಡಾಡಿಕಾಯಜಜನಕನ ಗಾಯನ ಮಾಡದೆ2 ಕಂಗಳಿಂದಲಿ ನೋಡೋ ದೇವ ನಿ -ನ್ನಂಗಸಂಗವ ನೀಡೋಮಂಗಳಮಹಿಮ ಶ್ರೀರಂಗವಿಠಲ ಮುಂ-ದಂಗಬಾರದಂತೆ ನೀ ದಯಮಾಡೋ 3
--------------
ಶ್ರೀಪಾದರಾಜರು