ಒಟ್ಟು 28225 ಕಡೆಗಳಲ್ಲಿ , 136 ದಾಸರು , 9942 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಭಂಗ ಪ. ಥಳ ಥಳಿಸುತ ಗೆಳತಿಯರು ಸಹಿತಾಗಿಚಳತೆಂಬೊ ದಿವ್ಯ ಆಭರಣಚಳತೆಂಬೊ ದಿವ್ಯಾಭರಣ ಭೂಷಿತರಾಗಿಕುಳಿತ ನಾರಿಯರು ಕಡೆಯಿಲ್ಲ1 ಕುಂತಲ ಕದುಪಿನ ಕಾಂತೆಯರು ಹರುಷದಿಕಂತುನಯ್ಯನ ಮುಖನೋಡಿಕಂತುನಯ್ಯನ ಮುಖನೋಡಿಮೈಮರೆದು ನಿಂತ ನಾರಿಯರು ಕಡೆಯಿಲ್ಲ 2 ಅಂದುಗಿ ಅರಳೆಲೆ ಬಿಂದಲಿ ಭಾಪುರಿಅಂದವಾಗಿದ್ದ ಅಸಲಿಅಂದವಾಗಿದ್ದ ಅಸಲಿ ಕಟ್ಟಿದಕಂದರಿನ್ನೆಷ್ಟು ಕಡೆಯಿಲ್ಲ3 ಕಾಲಲಂದುಗೆ ಗೆಜ್ಜೆ ತೋಳಲಿ ತಾಯತಲಾವಳಿಗೆ ಮುತ್ತು ಅಲುಗುತಲಾವಳಿಗೆ ಮುತ್ತು ಅಲುಗುತಸುಳಿದಾಡೊ ಬಾಲರಿನ್ನೆಷ್ಟು ಕಡೆಯಿಲ್ಲ 4 ಹಸಿರು ಪಚ್ಚದ ಕಂಭ ಕುಸುರಾದ ಗಿಳಿಬೋದುಗೆಎಸಕೊ ಮಾಣಿಕದ ಜಗುಲಿಯ ಎಸಕೊ ಮಾಣಿಕದ ಜಗುಲಿ ಸಿಂಹಾಸನದಿ ವಸುದೇವ ತನಯ ಕುಳಿತಾನೆ 5 ಬಿಸÀಜನೇತ್ರಿಯರ ಮುಂದೆ ಕುಶಲದ ಮಾತ್ಹೇಳುತವಸುದೇವ ತಾನು ಕುಳಿತಾನವಸುದೇವ ತಾನು ಕುಳಿತಾನ ದೇವಕಿಯಸೊಸೆಯರ ಕಂಡು ಹರುಷಾಗಿ 6 ಚಲುವ ರಾಮೇಶನ ಬಲದ ಭಾಗದಿಬಂದು ಹಲವು ಮಾತುಗಳು ಕಿವಿಯೊಳುಹಲವು ಮಾತುಗಳು ಕಿವಿಯೊಳುಹೇಳುತ ಬಲರಾಮ ತಾನೆ ಕುಳಿತಾನೆ7
--------------
ಗಲಗಲಿಅವ್ವನವರು
ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ ಪ ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ1 ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ 2 ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ 3
--------------
ಕನಕದಾಸ
ಭವ ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ಪ ನಂದನಂದನಾ ಆನಂದಾ | ನಾಗನಾ | ಬಂಧಾ | ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ | ಮಂದನು ನಾನು | ಇಂದೀಗ ನೀನು | ಬಂದು ಸುರಧೇನು | ಪೊಂದು | ಇನ್ನೇನು | ಮುಂದಣ ಇಹಸುಖ | ಒಂದು ವಲ್ಲೆನು ಸಖ | ಕಂದ ನಂದದಿ ನೋಡು | ಕುಂದದ ವರವ ಕೊಡು | ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ | ಲೇಂದು ವದನ ಪೊರಿಯೋದೆ ಲೋಕದ ತಂದೆ 1 ಮಂದರಧರ ಮಾಧವಾ | ಮಹದಾದಿ ದೇವಾ | ಬೋವಾ | ಇಚ್ಛೈಸಿದರೆ ಕಾವಾ | ವಾಸುದೇವ | ನಿಂದು ಕರೆವೆನು ಒಂದೆ ಮನಸನು | ತಂದು ವೇಗಾನು | ಸಂಧಿಸೆಂಬೆನು | ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ | ಪತಿ | ಬಂಧು | ಅತಿ ದಯಾಸಿಂಧು || 2 ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ | ಮಾಲಾ ಕೌಸ್ತುಭಾ ಭರಣಾ | ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ | ನೀಲಲೋಹಿತ ಪಾಲಿಪನೆ ಪ್ರೀತ | ಮೂಲೋಕದ ದಾತಾ | ಲಾಲೀಸಿ ಮಾತಾ | ಪಾಲ ಸಾಗರಶಾಯಿ ಪತಿತ ನರನ ಕಾಯಿ | ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ ವಾಲಗ ವೆಂಕಟ | ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ 3
--------------
ವಿಜಯದಾಸ
ಭವ ಶರಧಿ ತಾರಕನೇ - ನಾಕರವಾ ಮುಗಿವೆ - ಎನ್ನ ಕರುಣದಲ್ಲಿ ನೋಡೋ ಪ ಎರಡು ಭಾಗದಿ ಶ್ರೀ ಧರಣೇರಿಂದೊಪ್ಪುತತ್ವರಿತದಿ ದಯಮಾಡು ಉರಗಾಗಿರಿ ವೆಂಕಟ ಅ.ಪ. ತೇರಿನೊಳಿಪ್ಪ ಶೃಂಗಾರ ಪುರುಷನೆ ಬಂ-ಗಾರ ಮಾಣಿಕದಲಂಕಾರವ ಧರಿಸಿದಮಾರಮಣನೆ ವನಜಾರಿವದನ ಬಲು-ಶೂರ ಸಮರಧೀರ ನಾರಾಯಣ ಕಂಸಾರೇ ||ನರ ಕಂಠೀರವ ಕಮಲನಾಭನಾರದ ಮುನಿ ಪ್ರಿಯ ಚಾರು-ಚರಿತ ಪನ್ನಗಾರಿಗಮನ ಮದ-ನಾರಿಯ ಸಲಹಿದ ಧೀರ ಮುರಾರಿ 1 ನಿಂದರೆ ಬಪ್ಪುದು ಸಿಂಧುಶಯನ ದಯ-ದಿಂದ ಎನ್ನನು ನೋಡು-ಕಣ್ದೆರೆದೀಕ್ಷಿಸಿ |ಕಂದಗೊಲಿದು ಕಂಬದಿಂದ ಬಂದಸುರನಕೊಂದು ಕರುಳಹಾರ ಕಂಧರದಿ ತಾಳಿದೇ ||ಮಂದಮತಿವನೆಂದಲೇ ಗೋ-ವಿಂದ ಗೋವಳ ವೃಂದದೊಡನೆ ಕಾ-ಳಿಂದಿಯ ಧುಮುಕಿ-ಫಣೀಂದ್ರನ ಶಿರದಲಿಧಿಂ ಧಿಮಿ ಧಿಮಿಕೆಂದು ಕುಣಿದ ಹರಿ 2 ಜಲದೊಳ ಪೊಕ್ಕು ಆ ಇಳೆಯ ತಸ್ಕರನು ದುಂ-ಬಲಗೊಂಡು ಮಡುಹಿ ನಂಬಿದ ಪ್ರಹ್ಲಾದ ಹಂ-ಬಲಿಸೆ ಧರ್ಮದಿ ಕಾಯ್ದೆ ಸಲೆ ಕ್ಷತ್ರಿಯಕುಲವನಳಿದೆ-ನಿನ್ನೊಳು ನೀನೇ ಕಾಯ್ದೆ ||ಮಲೆತ ಮಾವನ ಕೊಂದೆ ಸಲೆಖಳ ತ್ರಿಪುರನ ಗೆದ್ದು ಕಲಿಯ ಸಂಹರಿಸಿದೆಸುಲಭ ಮೂರುತಿ ಮೋಹನವಿಠ್ಠಲಚೆಲುವ ತಿರುವೇಂಗಳ 3
--------------
ಮೋಹನದಾಸರು
ಭವ ಶರಧಿಯ ದಾಟಿ | ಸ್ಥಿರ ಭಾಗ್ಯವುಣ್ಣೀ ಪ ಸಾರ ಮುಖದೊಳಗಾನಂದವಾಗಿ ತೋರುವದೂ 1 ಗುರು ಪದ ಭಕ್ತಿ ತನ್ನೊಳು ತಾನೆ ಪುಟ್ಟುವದೂ 2 ಭವ ರೋಗ ಗುಣವಾಗಿ ಸುಖವು ಹೊಂದುವದೂ | ಲೋಕಾತ್ಮಕ ಶ್ರೀನಿವಾಸ ಸದಾನಂದವಹುದೂ 3
--------------
ಸದಾನಂದರು
ಭವಗಳನು ಖಂಡಿಸೆಂದು ಬಂದು ಬೇಡಿದೆ ಪ ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ ಪರಮ ನೀನೆಯಾಗಿಯಾ ನಿಜದರುಹ ತೋರಿಸೈ 1 ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ 2 ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ 3 ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ 4 ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ5
--------------
ಚನ್ನಪಟ್ಟಣದ ಅಹೋಬಲದಾಸರು
ಭವತಿ ಭಿಕ್ಷಾಂ ದೇಹಿ ಪರಬ್ರಹ್ಮಭವದೂರ ಮಾಂಪಾಹಿಭುವನ ಪಾವನ ಪರಮಾನಂದ ವರಗುಣಾಸುವಿಮಲ ಶಾಂತಿ ಸದ್ಭಕ್ತಿ ಜೀವನ್ಮುಕ್ತಿ ಪ ನಿತ್ಯ ನಿರ್ಮಲ ಜ್ಞಾನ ವಿಚಾರ ಪ್ರ-ವೃತ್ತಿ ವಿವೇಕದಾನಸತ್ಯ ಸದ್ವಿನಿಯ ಸಶ್ರವಣ ಮಾನಸಯೋಗಚಿತ್ತ ನಿಧಿಧ್ಯಾಸ ಜಪತಪವ್ರತ ಪೂಜಾ 1 ದೋಷರಹಿತ ಭಾಷ ದುರಿತಗುಣನಾಶ ಪರಮ ಸಂತೋಷಕ್ಲೇಶ ವಿದೂರ ವಿಶೇಷ ವಿರಾಗವಿಶ್ವಾಸ ವಿಹಿತ ಸದ್ಧರ್ಮ ವಿಚಾರ 2 ಪಾವನ ಪರಿಪೂರ್ಣ ಹೃದಯ ಸದಾದೇವ ನಾಮಸ್ಮರಣಭಾವ ಭರಿತ ಧ್ಯಾನ ಧಾರಣಯೋಗ ಸ-ದ್ಭಾವ ಬ್ರಹ್ಮ ಆದಿಕೇಶವ ದಾಸತೆ 3
--------------
ಕನಕದಾಸ
ಭವತ್ಕರುಣಿ | ಗುರುಹಿರಿಯರ ಅನುಸರಣಿ ಪ ಜ್ಞಾನ ಭಕುತಿ ಕಲೆ ತಾನರಹಿಸುವ | ಸ್ವಾನುಭವದ ಸುಖಭರಣಿ 1 ಮಂಗಳ ಘನಸುಖ ಇಂಗಿತ ದೋರುವಾ | ಕಂಗಳ ಸಿರಿಸುಖ ಕರಣಿ 2 ತಂದೆ ಮಹಿಪತಿ ನಂದನು ಸಾರಿದಾ | ತರಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವಭಯಹರ ಶ್ರೀ ಮುಕ್ಕುಂದ ಭವರೋಗಕ್ವೈದ್ಯ ಶ್ರೀ ಗೋವಿಂದ ಪ ಧ್ರುವ ದ್ರುಪದತನುಜಾತೆಯೊರೆದ ಹರಿ ಶಿವನುತ ಸಚ್ಚಿತ್ತಾನಂದ ಅ.ಪ ಪಂಕಜಾನಪಿತ ಗೋವಿಂದ ಕಿಂಕರಾಶ್ರಿತ ಗೋವಿಂದ ಶಂಖಧಾರಣ ಸಿರಿಗೋವಿಂದ ಶಂಖಾಸುರನ ಹರ ಗೋವಿಂದ ಮಂಕು ದನುಜಕುಲ ಬಿಂಕ ಮುರಿದ ಅಕ ಳಂಕಮಹಿಮ ಮಹ ಗೋವಿಂದ1 ಸ್ಮರಿಪ ನೆರೆವಾಸ ಗೋವಿಂದ ದುರುಳರ ಕುಲನಾಶ ಗೋವಿಂದ ದುರಿತ ನಿವಾರಣ ಗೋವಿಂದ ಶರಣಜನರಪ್ರಾಣ ಗೋವಿಂದ ತರಳನೋದ್ಧಾರಣ ಕರಿರಾಜವರದನ ತರುಣೆಯ ರಕ್ಷಣ ಗೋವಿಂದ 2 ಜಗದಾಧಾರನೆ ಗೋವಿಂದ ಸುಗಣಗುಣಾಂತರಂಗ ಗೋವಿಂದ ರಘುಕುಲಪಾವನ ಗೋವಿಂದ ಖಗಪತಿವಾಹನ ಗೋವಿಂದ ನಿಗಮಕೆ ಸಿಲುಕದ ಅಗಾಧ ಮಹಿಮ ಜಗತ್ರಯ ಮೋಹನ ಗೋವಿಂದ 3 ನೀಲಮೇಘಶ್ಯಾಮ ಗೋವಿಂದ ಕಾಲಕಾಲಹರ ಗೋವಿಂದ ಪಾಲಸಾಗರಶಾಯಿ ಗೋವಿಂದ ಲೋಲ ವಿಶ್ವರೂಪ ಗೋವಿಂದ ಪಾಲಭಜಕ ಭವ ಜಾಲಹರಣ ಸರ್ವ ಮೂಲಮಂತ್ರ ಹರಿ ಗೋವಿಂದ 4 ಭೂಮಿಜಾತೆಪತಿ ಗೋವಿಂದ ಕಾಮಜನಕ ಶ್ರೀಶ ಗೋವಿಂದ ಕೋಮಲಾಂಗ ರಂಗ ಗೋವಿಂದ ಸ್ವಾಮಿ ಪುಣ್ಯನಾಮ ಗೋವಿಂದ ಶಾಮವರ್ಣನುತ ಪ್ರೇಮಮಂದಿರ ಶ್ರೀ ರಾಮ ದಾಮೋದರ ಗೋವಿಂದ 5
--------------
ರಾಮದಾಸರು
ಭವಭಯಹಾರ ನಮ್ಮ ಭು'ರಂಗಸ್ವಾ'ು ಗುರುವ ಭಜಿಸಿ ಪೂಜಿಪಬನ್ನಿ ಪಭಾಗವತೋತ್ತಮರು ಭಾಗ್ಯದಣ್ಣಯ್ಯಸುತರುಭೋಗತ್ಯಾಗವಮಾಡಿದ ಭಗವತ್ಸ್ವರೂಪರು 1ಸಾಧ್ವೀಗುರ್ರಮ್ಮಾಂಬಾ ಗರ್ಭೋದ್ಭವರಾಗಿಸದ್ವಿವೇಕವಕೊಟ್ಟು ಸರ್ವರ ಪೊರೆಯುವಾ 2ಸದ್ಗುರು ತುಲಸೀರಾಮರ ಸನ್ನಿಧಿಯೊಳ್ ಪ್ರತ್ಠಿಸಿಸದ್ವಿಲಾಸದೊಳು ಸಂಚರಿಸುತಲಿರ್ಪಾ 3ಸಾರತತ್ವಾ'ಚಾರ ಸರಸದಿ ಸದಾಚಾರಸೂರಿಜನಪರಿವಾರ ಸತ್ಯಾನಂದಾಧೀರಾ 4ಸರಳಕ'ತ್ವಧಾರಾ ಸಕಲಶಾಸ್ತ್ರಾ'ಚಾರ ಸರಿಕಾಣದಾುಹದೀ ಸರ್ವಪತಿತೋದ್ದಾರಾ 5ವರಗುರು ತುಲಸೀರಾಮಾ ಚರಿತಾ ಸ'ಸ್ತರಿಸಿಸಿರಿಚನ್ನಪುರಿಯಲ್ಲೀ ವರಕೀರ್ತಿ ಸ್ಥಿರದಿ ವ'ಸಿ 6'ರಾಜಿಸುತಲಿರ್ಪಾ ವರಗುರುನಿಜವೆಂದೂಪುರದಿ ಸರ್ವಜನರೂ ಪರಿಪರಿಪೊಗಳುವರೂ 7ರಾಮನುಪಾಸನೆಯಾ ಪ್ರೇಮದಿಮಾಡಿದಾರಾಮತುಲಸೀಗುರು ಸ್ವಾ'ುಯಂದದಿಬಂದಿಹಾ 8ಪಾಮರನಾದ ರಾಮಕೃಷ್ಣ ದಾಸೋದ್ಧಾರಾುೀ ಮ'ಯಲ್ಲಿ ಪ್ರಖ್ಯಾತಯಶೋಸಾರ* 9
--------------
ಮಳಿಗೆ ರಂಗಸ್ವಾಮಿದಾಸರು
ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ಮøತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ 1 ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ 2 ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ3 ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ 4 ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ 5
--------------
ವ್ಯಾಸರಾಯರು
ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ ನೀನೇ ಸ್ವರೂಪಾವಬೋಧ ನೀಡಿದಿ ತಾತಾ ಜ್ಞಾನಾಸಿಯಿಂದ ಕಡಿದೈ ಸಂಸಾರಪಾಶವ ನಾನಾತ್ಮವಳಿದು ಕಳೆದೈ ಅಜ್ಞಾನದೋಷವಾ ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ ಆವಾಗ ಬೋಧವಾಯ್ತು ನಾನರಿತೆ ಸತ್ಯವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಭಳಿರೆ ಮೆಚ್ಚಿದೆ ರಮಣಿ ಒಳಿತು ನಿನ್ನಯ ವಾಣಿ ಬಲುಹು ತೋರಿದೆ ತರುಣಿ ಒಲಿದೆ ರಾಣಿ ಬಳಬಳನೆ ಕಣ್ಣೀರನಿಳಿಸುತಳುತೆ ಕೋರಿದುದ ತಂದೀಯಲಾರದಿಹ ಪುರುಷರಂ ದೂರುವುದೆ ನಾರಿಯರ ಧರ್ಮವೇನು ಉಡುಪುತೊಡುವೆಂದೆನುತ ಸಡಗರದಿ ಹಿಗ್ಗುತ ಬಡಿವಾರ ತೋರುವುದೆ ನಡತೆಯೇನು ಸಜ್ಜೇಸುಖಶಯೈ ಯಿದನೆ ನಂಬಿ ಲಜ್ಜೆಯಲಿಕರ್ತವ್ಯವÀನೆ ಮರೆದು ದೌರ್ಜನ್ಯಕೀಡಾಗಬಹುದೆ ಸಾಧ್ವಿ ಸಜ್ಜನೆಯೆನಿಸು ಶೇಷಗಿರೀಶನೆಣಿಸು
--------------
ನಂಜನಗೂಡು ತಿರುಮಲಾಂಬಾ
ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯ ಇಳೆಯೊಳು ನಿನಗೆಣೆÂ ಕಾಣೆ ನಾ ಯತಿವರ್ಯ ಪ ಜಗದೊಳು ದುರ್ವಾದಿ ಮತವ ಖಂಡಿಸಿದ ನಿಗಮಾರ್ಥವನು ಜಗದಿ ಸಾರಿದಾ ಕುಜನೇಭ ಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ 1 ಭಾವೀ ಸಮೀರ ಶ್ರೀವಾದಿರಾಜರ ಜನ್ಮೋ- ತ್ಸವ ಕಾಲವರಿತಾಗ ಸುಮಪುರಕೆ ನೀನು ತವಕದಿಂದಲಿ ಪೋಗಿ ಬಾಲಕನ ರಕ್ಷಿಸಿ ಅವನನೆ ಯತಿರಾಜ ಪಟ್ಟದೊಳಿರಿಸಿದಿರಿ 2 ಗುರು ಮಧ್ವರಂತೆ ನೀ ಸರ್ವಶಾಸ್ತ್ರವ ಮಾಡಿ ಧರಣಿಯೊಳು ರಾಜೇಶ ಹಯಮುಖನ ಚರಣ ಸ್ಮರಿಸಿ ನೂರಿಪ್ಪತ್ತು ವತ್ಸರದ ಕಾಲದಲಿ ಇರುವಿರೆನುತಲಿ ಅವರ ಹರಸಿದಿರಿ ದೊರೆಯೆ 3
--------------
ವಿಶ್ವೇಂದ್ರತೀರ್ಥ
ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾಕರುಣದಿ ಪಿಡಿಕೈಯ್ಯಾ | ಮುರಹರ ಕುವರಯ್ಯಾ ಪ ನಗಧರ ಮೊಮ್ಮಗ ಮಗನೀ ಯೆನ್ನನುಖಗವರ ವಹ ಪ್ರಿಯ ಪಾಲಿಸೊ ಜೀಯಾ ಅ.ಪ. ಜ್ಞಾನ ಸದ್ಭಕ್ತಿ ವಿರಕ್ತಿಯ ಮೂರ್ತೀ | ಸಾರುವೆ ತವಕೀರ್ತೀಗಾನ ಲೋಲನ ಸೇವಿಸೆ ಜಾಗರ್ತೀ | ಮಾಡುವೆ ಶರಣಾರ್ತೀ |ಘನ್ನ ಮಹಿಮ ಕಾರುಣ್ಯ ಮೂರುತೀಎನ್ನವ ಗುಣ ಮರೆದು ಸಲಹೊ ವಿಶ್ವಂಭರ 1 ಜಲಧಿ ವಿಹಾರನೆಸುಲಭದಿ ಸಾಧನ ಪಾಲಿಸೋ ಜೀಯ 2 ಅರುಹಲೇತಕೊ ಎನದುರಿತ ಸಮೂಹ | ನೀನಲ್ಲವೆ ದುರಿತಹರತುರು ತನ್ನ ಕರುವನೆ ಮರೆವುದೆ ಆಹಾ | ಪಾಲಿಸು ತವನೇಹಾಸಿರಿಪತಿ ಗುರುಗೋವಿಂದ ವಿಠಲನಚರಣಾಂಬುಜದೊಳು ನಿಲಿಸೆಲೊ ಮನವಾ 3
--------------
ಗುರುಗೋವಿಂದವಿಠಲರು