ಒಟ್ಟು 966 ಕಡೆಗಳಲ್ಲಿ , 93 ದಾಸರು , 835 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರು ದೇವತೆಗಳ ದೇವ ಮಹದೇವ ದೇವ ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ ಮೂರನೆ ತತ್ವದ ಒಡೆಯನು ನೀನಯ್ಯ ಕಾರುಣಿಕ ಜನರಿಗಾರ್ಹ ಭಾವಕೆ ಮಾರಮಣನಾ ನೆನೆದು ಮೈಮರೆದು ನೀ ತಾರಕಾ ಉಪದೇಶಿ ಕಾಸಿ ವಾಸಿ 1 ಗಂಗೆಯ ಧರಿಸಿ ನೀ ಭಂಗಬಡುವ ಜನರ ಪೂತನ ಮಾಡಿದ್ಯೊ ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ 2 ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು ವಾಸುದೇವವಿಠಲಗಲ್ಲದವರ ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ 3
--------------
ವ್ಯಾಸತತ್ವಜ್ಞದಾಸರು
ರೋಗಹರನೇ ಕೃಪಾಸಾಗರ ಶ್ರೀ ಗುರು ರಾಘವೇಂದ್ರ ಪರಿಪಾಲಿಸೊ ಪ ಸಂತತ ದುರ್ವಾದಿ ಧ್ವಾಂತ ದಿವಾಕರ ಸಂತವಿನುತ ಮಾತ ಲಾಲಿಸೊ 1 ಪಾವನಗಾತ್ರ ಸುದೇವವರನೆ ತವ ಸೇವಕ ಜನರೊಳಗಾಡಿಸೊ 2 ಘನ್ನ ಮಹಿಮ ಜಗನ್ನಾಥವಿಠಲ ಪ್ರಿಯ ನಿನ್ನಾರಾಧನೆ ಮಾಡಿಸೊ 3
--------------
ಜಗನ್ನಾಥದಾಸರು
ಲಕ್ಷ್ಮೀದೇವಿ ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ ಅಂಜಿಸಿದರೆ ಲೋಕ ಅಂಜದಿರುವುದೆ ಪ ಕುಂಜರಗಮನೆ ನಾವಂಜನದೇವಿ ಸಂಜಾತನಾದ ಪ್ರಭಂಜನನಣುಗರು ಪಾದ ಕಂಜಕ್ಕೆ ವಿಮುಖ ಸಂಜಿಲಿ ಚಲಿಸುವ ಪುಂಜರು ಕಡಿಮೆ 1 ನಿನ್ನನೆ ನಂಬಿ ನಾವಿನ್ನು ಸಂಸೃತಿಯ ಬನ್ನವೆ ಕಳಕೊಂಡು ಚನ್ನಾಗಿ ಜಗದಿ ಧನ್ಯರಾದೇವೆಂದು ಮನ್ನಾದಿ ಬಯಸೆ ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ2 ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು ಕರವಶ ಮಾಡಿಪ್ಪೆ ಪರವೇನೆ ನಿನಗೆ ಪರಮೇಷ್ಠಿ ಮೊದಲಾದಮರರ ನೀ ಪೊರೆವೆ ಸಿರಿ ವಾಸುದೇವವಿಠಲನ್ನ ತೋರಮ್ಮ 3
--------------
ವ್ಯಾಸತತ್ವಜ್ಞದಾಸರು
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ಲಕ್ಷ್ಮೀಪ್ರಿಯ ಕೃಷ್ಣ ಲಕ್ಷ್ಮೀಪ್ರಿಯ ಕೃಷ್ಣ ಲಕ್ಷ್ಮೀಪ್ರಿಯ ಸತ್ಯಭಾಮಾಪ್ರಿಯ ಪ ಗೋವಿಂದ ಮುನಿವಂದ್ಯ ದೇವ ಕೇಶವ ಯೋಗಿ ಭಾವಾಗೋಚರ ಸರ್ವರೂಪ ಶ್ರೀಕೃಷ್ಣ 1 ಪರಮ ಪಾವನ ನಿತ್ಯವರದ ದಾಮೋದರ ಪದ್ಮನಾಭ 2 ನಾರಾಯಣಾಧೋಕ್ಷಜಾನಂತ ಪರಿಪೂರ್ಣ ಶ್ರೀ ರಾಘವೋಪೇಂದ್ರ ಸಂಕರ್ಷಣಾಖ್ಯ 3 ಮಾಧವ ಶ್ರೀ ವಿಷ್ಣೊ ದನುಜಮರ್ದನ ದಿವ್ಯ ರೂಪ ನರಸಿಂಹ 4 ವಾಮನ ಶ್ರೀಧರ ಹೃಷೀಕೇಶ ಶ್ರೀ ಹರೆ ಕಾಮಿತ ಫಲದ ಜನಾರ್ದನ ರಾಮ 5 ವಾಸುದೇವಾಚ್ಯುತ ವಸುದೇವ ನಂದನ ವಾಸುಕಿಶಯನ ತ್ರಿವಿಕ್ರಮ ಭೀಮ 6 ಮಧುಸೂದನಾನಂದಘನ ಪುರುಷೋತ್ತಮಬುಧವಂದ್ಯ ತಿರುಪತಿ ವೆಂಕಟರಮಣಾ 7
--------------
ತಿಮ್ಮಪ್ಪದಾಸರು
ಲಕ್ಷ್ಮೀರಮಣನೆ ರಕ್ಷಿಸೆನ್ನನು ಅಧೋಕ್ಷಜ ಹರಿ ಪ ಮಂದ ಬಿಡಿಸಿ ಸಲಹೋ ದೇವ ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ ಮಂದರಧರ ಗೋವಿಂದ ಮುಕುಂದ1 ಗರುಡಗಮನ ವಾಸುದೇವ ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ ಪರಮಪುರುಷ ಹರಿ ಶರಧಿಶಯನ2 ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ ಸಾಸಿರನಾಮದ ಒಡೆಯನೆ ವೆಂಕಟ 3 ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ ಶರಧಿ ಪಾರುಗಾಣಿಸೋ ಪರಿಸರ ನೊಡೆಯನÉ ಉರಗಶಯನ 4 ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ ಶೌರಿ ಶಂಕರಾನುತ ಪಂಕಜಲೋಚನ ವೆಂಕಟರಮಣ 5 ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ ಸಟೆಯಲ್ಲವೊ ನಾರದ ಮುನಿ ಸೇವಿತ 6 ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ 7
--------------
ನಿಡಗುರುಕಿ ಜೀವೂಬಾಯಿ
ಲಂಬೋದರನ ಸಹೋದರನೆ ಪ ಶಂಭುಜಕರುಣಾಸಾಗರನೆ ಅ.ಪ ಶೂರಪದ್ಮನ ಎದೆ ಸೀಳಿದನೆ ಮಾರನ ಪೋಲುವ ಸುಂದರನೆ ಧೀರ ಹಿರಣ್ಯಕನಾರಾಧನೆಗೆ ಮೆಚ್ಚಿ ಸೂರೆಯ ಮುಕ್ತಿಯನಿತ್ತವನೆ 1 ವರವಜ್ರ ಶಕ್ತ್ಯಾಯುಧ ಧರನೆ ಸುರಮುನಿ ನಮಿತ ಸರ್ವೇಶ್ವರನೆ ಸುರುಚಿರ ರತ್ನಾಭರಣ ವಿಭೂಷಣನೆ ಶರಣ ರಕ್ಷ ಕುಮಾರಕನೆ2 ದಾಸ ಜನರ ಮನತೋಷಕನೆ ವಾಸುದೇವನ ಸಖ ಷಟ್ಶಿರನೆ ದೋಷವಿನಾಶನೆ ನಾಶರಹಿತ ಪಾವಂಜೇಶನೆ ಕಾರ್ತಿಕೇಯನೆ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1 ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2 ನವನೀತ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3 ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4 ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5
--------------
ಕನಕದಾಸ
ಲಾಲಿ ರಂಗನ ರಾಣಿ ಪರಮಕಲ್ಯಾಣಿ ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ. ಕ್ಷೀರಸಾಗರದಲಿ ಜನಿಸಿ ತಾ ಬಂದು ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು ಘೋರ ಪಾತಕಿಗಳನು ಪೊರೆವೆನೆಂತೆಂದು ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು 1 ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ ಮುದ್ದು ಶ್ರೀರಂಗನ ರಾಣಿ ಹರುಷದಲಿ ದಂತದ ಉಯ್ಯಾಲೆಮಂಟಪದಲ್ಲಿ ಕಂತುಪಿತನರಸಿಯಾಡಿದಳೆ ಉಯ್ಯಾಲೆ 2 ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು ಹಾರಪದಕಗಳು ಪೀತಾಂಬ್ರವನೆ ಉಟ್ಟು ಕುಂದಣದ ಒಡ್ಯಾಣವನ್ನು ಅಳವಟ್ಟು ಇಂದಿರಾದೇವಿ ಆಡಿದಳೆ ಉಯ್ಯಾಲೆ 3 ರತ್ನದಾ ಕಿರೀಟವನ್ನು ತಾ ಧರಿಸಿ ಕಮಲ ಸರಗಳಳವಡಿಸಿ ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ ಚ್ಚುತನರಾಣಿ ಆಡಿದಳೆ ಉಯ್ಯಾಲೆ 4 ದೋಸೆ ವಡೆ ನೈವೇದ್ಯ ಮೀಸಲನು ಸವಿದು ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು ಲೇಸಾದ ಕರ್ಪೂರ ವೀಳ್ಯವನು ಸವಿದು ವಾಸುದೇವನರಾಣಿ ಆಡಿದಳೆ ಉಯ್ಯಾಲೆ 5 ವರರಂಗವಂಶದವರು ವರದಿಂದ ಪಾಡೆ ಕರುಣಾಕಟಾಕ್ಷದಿಂ ದೇವಿ ತಾ ನೋಡೆ ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ ವಜ್ರದಭಯಹಸ್ತಗಳಿಂದ ವರಗಳನು ನೀಡೆ 6 ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ ಸಪ್ತದಿನದುಯ್ಯಾಲೆಯನು ತಾ ರಚಿಸಿ ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು ಅರ್ಥಿಯಿಂ ತೆರಳಿದಳು ತನ್ನರಮನೆಗೆ 7
--------------
ಯದುಗಿರಿಯಮ್ಮ
ಲಾಲಿ ರಘುಕುಲತಿಲಕ ಲಾವಣ್ಯ ಗುಣಧಾಮ ಪ. ವಿನುತ ಲಾಲಿ ಸುಜನರ ಪಾಲ ಅ.ಪ. ಅಸುರ ಕುಲ ಬಾಧಿಸಲು ವಸುದೇವ ಸುತ ರಕ್ಷ ಹಸನಾಗಿ ಪ್ರಾರ್ಥಿಸಲು ನಿನ್ನ ದೇವತೆಗಳಾಗ ವಸುಧೆ ಭಾರವ ಇಳುಹೆ ಶಿಶುವಾಗಿ ದಶರಥಗೆ ದಶ ದಿಗ್ವಲಯ ಬೆಳಗೆ ದಶಮ ಬಲರಾಮ 1 ಶಿವನ ಧನುವನು ಮುರಿಯೆ ಅವನಿಜೆಯು ಹಾರವನು ಜವದಿ ಹಾಕಲು ಪರಶುರಾಮನ ಗರ್ವ ತವಕದಲಿ ಮುರಿದಯೋಧ್ಯೆಯ ಪಾವನ ಮಾಡೆಂ ದವನಿ ಜಾಲವು ಕೂಗೆ ಸವಿಗಾನದಿಂದ 2 ಮಾತೆ ವಾಕ್ಯವ ಕೇಳಿ ಸೀತೆ ಸಹಿತಲೆ ವನಕೆ ಆತ ಲಕ್ಷ್ಮಣನೊಡನೆನೀತನೀ ತೆರಳೆ ದೂತ ರಾವಣನ ಹತವಾತಸುತ ದೂತ ಸಹ ಖ್ಯಾತಿಲಯೋಧ್ಯೆಗೆ ಬಂದ ಶ್ರೀನಾಥ ಶ್ರೀ ಶ್ರೀನಿವಾಸಾ ಲಾಲಿ 3
--------------
ಸರಸ್ವತಿ ಬಾಯಿ
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಪ ಶ್ರೀಲತಾಂಗಿಯೊಡನೆ ಮೆರೆವದೊರೆಯೆ ಲಾಲಿ ಅ.ಪ ನಂದಲಾಲಿ ಗೋವಿಂದ ಲಾಲಿ ಕಂದನಾಗಿ ಲೋಕ ತಂದೆ ಲಾಲಿ 1 ಬಾಲಲಾಲಿ ತುಲಸಿಮಾಲ ಲಾಲಿ ಕಾಲಕಾಲವಂದ್ಯ ಗೋಪೀಲೀಲ ಲಾಲಿ 2 ವಾಸುದೇವ ಲಾಲಿ ದೇವಕೀತನಯ ಸದ್ಭಾವಲಾಲಿ 3 ರಂಗಲಾಲಿ ಮಂಗಳಾಂಗಲಾಲಿ ಗಂಗಾತಾತ ಲೋಕೋತ್ತುಂಗ ಲಾಲಿ4 ರಾಮಲಾಲೀ ಭಕ್ತಪ್ರೇಮ ಲಾಲಿ ಶ್ಯಾಮಸುಂದರಾಂಗ ನಮ್ಮ ಸ್ವಾಮಿ ಲಾಲಿ 5 ಸತ್ಯ ಲಾಲಿ ಮೌನಿಸ್ತುತ್ಯ ಲಾಲಿ ನಿತ್ಯ ನಿಗಮವೇದ್ಯ ಅನ್ಯುಕ್ತಲಾಲಿ6 ರಾಜಲಾಲಿ ರತ್ನತೇಜ ಲಾಲಿ ರಾಜರಾಜಪೂಜ್ಯ ಜಾಜಿಶ್ರೀಶ ಲಾಲಿ 7
--------------
ಶಾಮಶರ್ಮರು
ಲಾಲಿ ಶ್ರೀ ಕೃಷ್ಣ ಬಾಲ ಲಾಲಿ ನಂದ ಯಶೋದೆ ಲೀಲ ವೇಣುಗೋಪಾಲ ಪ. ವಸುದೇವ ಸುತನಾಗಿ ಬಂದು ಎಸೆವೊ ಗೋಕುಲದಲಿ ನಿಂದು ಅಸುರಕುಲ ಸಂಹಾರಕೆಂದು ನಸುನಗುತ ಗೋಪಿಯರ ವಶವಾಗ್ವೆನೆಂದು 1 ಪುಟ್ಟಿದಾ ಶಿಶುವನ್ನೆ ನೋಡಿ ನಕ್ಷತ್ರ ರೋಹಿಣಿ ಎಂದು ತಿಳಿದು ಅಷ್ಟಜನ ಸಹಿತ ಗೋಕುಲದಿ ಸಂತುಷ್ಟಿಯೊಳು ನಾಮಕರಣವ ಮಾಡಿ ನಲಿದೂ 2 ವೇದ ಘೋಷಗಳಾಗುತಿರಲೂ ಆದಿ ಮೂರುತಿಗೆ ಮೋಹದಲಿ ಕೃಷ್ಣನೆಂದ್ಹೆಸರನಿಡಲೂ ಸಾದರದಿ ಗೋಪ ದಕ್ಷಿಣೆ ತಾಂಬೂಲ ಅಗಾಧದಲಿ ಬ್ರಾಹ್ಮಣರಿಗೆ ಕೊಟ್ಟು ನಲಿದೂ 3 ಚತುರ ವೇದದ ನಾಲ್ಕು ಸರಪಣಿಯ ಹೂಡಿ ಚತುರ ದಿಕ್ಕನೆ ನಾಲ್ಕು ಚೌಕ ತೊಟ್ಟಿಲನೆ ಕಟ್ಟಿ ಚತುರ್ಮುಖನಯ್ಯನ ತೊಟ್ಟಿಲೊಳಗಿಟ್ಟು ಅತಿಶಯದಿ ನಾರಿಯರು ತೂಗಿದರು ಹರಿಯಾ ಲಾಲಿ4 ಮಚ್ಛಕೂರ್ಮನೆ ವರಹ ಲಾಲಿ ತುಚ್ಛ ದೈತ್ಯನ ಕೊಂದ ನರಹರಿಯೆ ಲಾಲಿ ಅಚ್ಚವಾಮನ ಭಾರ್ಗವ ಕೃಷ್ಣ ಲಾಲಿ ಸಚ್ಚ ಬೌದ್ಯಕ ಶ್ರೀ ಶ್ರೀನಿವಾಸನೆ ಲಾಲಿ 5
--------------
ಸರಸ್ವತಿ ಬಾಯಿ
ಲಿಂಗಾಭಟ್ಟರಗ್ರಹಾರದಲ್ಲಿ ಗುರುದರ್ಶನಕಾವೇರಿ ತೀರದಲಿ ಕಂಡೆ ಗುರುವರರಆವಜನ್ಮಾಂತರದಲಾಯ್ತೊ ಭವಪಾರ ಪಶ್ರೀರಂಗಪಟ್ಟಣದ ಸನ್ನಿಧಿಯೊಳಿರುತಿರುವಆರ್ಯ ಲಿಂಗಾಭಟ್ಟರಗ್ರಹಾರದಲಿಮಾರಹರನಾಲಯದ ಮುಂದೆಸೆವ ಮಠದಲ್ಲಿಸೇರಿದ್ದರದ ಕಾಣೆ ಸ್ನಾನಕವರೈತರಲು 1ಏಕಾದಶಿಯ ದಿವಸ ದಿನನಸ್ತಮಯದಲ್ಲಿಆ ಕಮಲ 'ುತ್ರನಿಂಗಭಿನ'ುಸಿ ಬಳಿಕಪ್ರಾಕಾರದಲಿ ಶಿವನ ಪ್ರಾದಕ್ಷಿಣಂಗೆಯ್ಯುತಾ ಕಾಲದಲಿ ನನ್ನ ಕರೆದು ಮನಿನ್ನಿದವರ 2ನಾರಾಯಣಾಯೆನುತ ನಾಮಗಳನ'ುತವನುಚೀರಿ ಹೊಗಳುತ ತಾವು ಚರಣಗಳನಿಡುತಸೇರಿ ಸನ್ನಿಧಿಯಲ್ಲಿ ಸದ್ವಿಪ್ರರಿಬ್ಬರಿರೆ'ುೀರಿಯವರನು ನನ್ನ ಮಂದಲಿಸಿದವರನ್ನು 3ಅಪರಿ'ುತ ಜನ್ಮಗಳಲಾರ್ಜಿಸಿದ ಕರ್ಮಗಳಸುಪ'ತ್ರ ದೆಮ್ಮಡಿಗೆ ಸೇರಿಸೆಂದೆನುತತಪನ'ಗ್ರಹರದನು ತಾವೆ ಸೆಳೆದೆವೆನುತ್ತಸುಪಥನನು ಮಾಡಿ ಸಲೆ ಸನ್ಮಂತ್ರ'ತ್ತರನು 4ಇರು ಜಪಿಸುತೀ ಮನವನಿಚ್ಛೆ ಬಂದಂತೆಂದುಯೆರಗಿಸಿದರೀಶನಡಿಗೆಣಿಸಿ ನೂರೆಂಟಾತಿರುಪತಿಯ ವೆಂಕಟನ ತನು ರೂಪರಾದಿಂಥಉರು ದಯಾನಿಧಿಯಾದ ವಾಸುದೇವಾರ್ಯರನು 5
--------------
ತಿಮ್ಮಪ್ಪದಾಸರು
ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದು ಕೈಗೂಡಿ ಧ್ರುವ ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ 1 ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಡ ನೆಲೆಗೊಂಡಾಯಿತು ಧನ್ಯ 2 ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ