ಒಟ್ಟು 1233 ಕಡೆಗಳಲ್ಲಿ , 96 ದಾಸರು , 1036 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ್ಯಾ ಬಾ ಮಂದಗಾಮಿನಿ ಚಂದಿರವದನೆ ಸುಂದರವದನೆ ಬಂದ್ಯಾ ಪ ಬಂದ ಭಕ್ತವೃಂದಭೀಷ್ಟ ನೀಡ್ವೆನೆಂದು ಚಂದ ಕರಗಳಿಂದ ಶೋಭಿಸುತಾ ಬಂದ್ಯಾ 1 ಪದುಮನಿಲಯ ಪದುಮಾನನೆ ಪದುಮಾಯತಾಕ್ಷಿ ಪದುಮನಾಭನ ರಾಣಿ 2 ನರಸಿಂಹವಿಠ್ಠಲನರಸಿ ಪ್ರಸನ್ನಮುಖಿ ಇರಿಸು ಶರಣರಲ್ಲಿ ಕರುಣಾಕಟಾಕ್ಷ 3
--------------
ನರಸಿಂಹವಿಠಲರು
ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಲ್ಲೆನೋ ನಿನ್ನ ಗುಣವ ಸಲ್ಲಿಸೋ ಎನ್ನ ಋಣವ ಪ ಎಲ್ಲ ತೊರೆದು ಭಜಿಸುತಿಹೆನೋ ಒಲ್ಲೆನೊ ಸಣ್ಣ ಫಲವ ಅ.ಪ ನಲ್ಲ ಬ್ರಹ್ಮಚಾರಿ ರೂಪದಿ ಚಿಲ್ಲರೆ ದಾನವನು ಮೋಸದಿ ಸಲ್ಲಿಸೆಂದು ಬಲಿಯ ಶಿರದಲಿ ಪಾದವಿಟ್ಟು ತುಳಿದ 1 ಉಂಡಮನೆಗೆ ಎರಡು ಬಗೆದು ಖಂಡಿಸಿರುವೆ ಪೂತನಿಯನು ಕಂಡ ಜನರ ಮನೆಗಳಲ್ಲಿ ಚಂಡು ಬೆಣ್ಣೆ ಕದ್ದು ತಿಂದ 2 ಸಣ್ಣ ನರ ನಾನಾದರೂ ಪ್ರಸನ್ನವದನ ವಾಸುದೇವ ನಿನ್ನ ಗುಣವ ಪೇಳಿ ನಿನ್ನ ಚರಣ ಕಟ್ಟುವೆನೊ 3
--------------
ವಿದ್ಯಾಪ್ರಸನ್ನತೀರ್ಥರು
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ. ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ 1 ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ 2 ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ3 ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ4 ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ 5 ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು6 ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹÀರಿಯ ಪದದಣಿಯ ಕಟ್ಟಿ ನಡೆಯಿರೊ 7
--------------
ವಾದಿರಾಜ
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ ಬೇಗ ಬಾರೆಂದು ಭಕುತರು ಕರೆಯಲು ಹರಿ ಪ. ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ ಶೇಷಶಯನ ಎನ್ನಪ್ಪನೆ ಬಾ 1 ಮತ್ಸ್ಯನಾಗಿ ಜಲದೊಳಾಡಿದವನೆ ಬಾ ಕಚ್ಛಪವತಾರವ ಮಾಳ್ದನೆ ಬಾ 2 ಧsÀರೆಗಾಗಿ ಜಲದೊಳಗಿಳಿದನೆ ಬಾ ಹಿರಣ್ಯಕನುದರವ ಸೀಳ್ದನೆ ಬಾ 3 ಶಕ್ರನ ಪೊರೆದ ಶ್ರೀ ವಾಮನನೆ ಬಾ ವಕ್ರನೃಪಾಲಕುಲಶಮನನೆ ಬಾ 4 ರಾವಣಾಂತಕ ರಘುರಾಮನೆ ಬಾ ದೇವಕಿ ನಿಜಸುತ ಪ್ರೇಮನೆ ಬಾ 5 ಸತಿಯರ ವ್ರತವ ಕೆಡಿಸಿದನೆ ಬಾ ಚತುರ ಕಲಿಯನೋಡಿಸಿದನೆ ಬಾ 6 ಹಯವದನಾಶ್ರಿತ ಶರಣನೆ ಬಾ ಪ್ರಿಯಸುರ ಸೇವಿತ ಚರಣನೆ ಬಾ 7
--------------
ವಾದಿರಾಜ
ಬಾಗಿಲಲಿ ಬಿದ್ದಿಹÀ ಭಜಕನು ನಾನುಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ಪ . ಯೋಗದ ಪಥಗಳನ್ನು ಏನೊಂದು ಅರಿಯೆನುನೀ ಗತಿಯೆಂದು ಬಂದು ಕೂಗುವೆನು ಹರಿಯೆ 1 ಭೋಗವ ಬಯಸುವೆ ಬಗೆಬಗೆಯಲಿ ರತಿಯರೋಗ ಬಲವಾಯಿತು ತಿದ್ದೆನ್ನ ಮತಿಯ 2 ಆಗÀಮಸಿದ್ಧ ಸುಗುಣಪೂರ್ಣ ಶ್ರೀಲೋಲಬೇಗ ಸಲಹೋ ಮಮಸ್ವಾಮಿ ಹಯವದನ3
--------------
ವಾದಿರಾಜ
ಬಾದರಾಯಣನ ಪಾದವ ನಂಬದೆ ಪ ತುಂಬಿ ತುಳುಕುತಿರೆ ವದನದಿ ಮಂತ್ರವ ಪಠಿಸಿ ಫಲವೇನು ಉದರ ಪೋಷಣೆಗಾಗಿಯೆ ಮಾಡುವ ಕರ್ಮ ನೋಡಿ ನಗುವರು 1 ಕಂಣನು ಮುಚ್ಚಿ ಮೌನದಿ ಕುಳಿತು ಪರ ಹೆಂಣಿನ ರೂಪವ ಮನದೊಳು ನೆನೆದು ಚಿಂಣತನದಿ ಅವಳ ಬೆರೆಯಲು ಯೋಚಿಸಿ ಹೊನ್ನು ಕೂಡಿಸುವ ಪರಿಯದಲ್ಲದೆ 2 ಗುಟ್ಟಲಿ ಪೂಜಿಪ ಗುರುತನು ಅರಿಯದೆ ಪಟ್ಟೆ ನಾಮವ ಹಚ್ಚಿ ಮಡಿಗಳನು ದಿಟ್ಟ ರಂಗೇಶವಿಠಲನ ಮರೆದು 3
--------------
ರಂಗೇಶವಿಠಲದಾಸರು
ಬಾದರಾಯಣರು ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ ಪ ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ ಅ.ಪ. ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ 1 ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಲುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ 2 ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ ಎನ್ನನೇತ್ರಕ್ಕೆ ಪೊಳಿ ಇಂದಿರೇಶನೆ 3
--------------
ಇಂದಿರೇಶರು
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ. ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1 ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2 ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
--------------
ವಾದಿರಾಜ
ಬಾರಯ್ಯ ದಯಮಾಡಿ ತ್ವರಿತದಿ ಬೇಗಬಾರಯ್ಯ ದಯಮಾಡಿ ಪ. ಒದರಲು ಕರಿರಾಜನೊದಗಿ ಬಂದೆ ಅಲ್ಲಿಮದಭಯ ಭಾಗ್ಯವು ಒದಗಿದುಬ್ಬಸದಿಂದ 1 ಸ್ತಂಭದಿ ನರಹರಿ ಎಂಬಭಾವದಿ ಬಂದುಕುಂಭಿನಿಪತಿ ಬಹು ಸಂಭ್ರಮಗೊಳುತಲಿ 2 ನರನು ಅರ್ಚಕನೆತ್ತ ನರಹರಿ ನೀನೆತ್ತಕರುಣದಿ ಬರಬೇಕು ಸಿರಿಹಯವದನ 3
--------------
ವಾದಿರಾಜ
ಬಾರಯ್ಯ ಬಾ ಬಾ ಯದುಕುಲರಾಯ | ಹೇ ಭಾಗವತಪ್ರಿಯ ಪ ಸಾರಸಾಕ್ಷ ಕರುಣಾರಸಪೂರಿತ ಮಾರಜನಕ ಭವತಾರಕ ಮುರಹರ ಅ.ಪ. ಬೃಂದಾರಕ ಬೃಂದ ಸುವಂದಿತ ಚರಣ | ಭುಜಗೇಂದ್ರಶಯನ ವಿಹಗೇಂದ್ರಗಮನ ಮಂದಹಾಸ ಬಲುಸುಂದರವದನಾ | ಶುಭಗಣಪೂರ್ಣ ಮಂದರಧರ ಗೋವಿಂದ ಭಜಕ ಜನ ಮಂದಾರನೆ ಮುಚುಕುಂದವರದ ರಾ ಕೇಂದುಕುಲಜಲಧಿ ಚಂದಮನೆನಿಸುವ ಇಂದಿರೆಯರಸ ಶ್ರೀ ಕರಿಗಿರೀಶನೇ 1
--------------
ವರಾವಾಣಿರಾಮರಾಯದಾಸರು
ಬಾರಯ್ಯ ಭಕ್ತವತ್ಸಲ ಶ್ರೀ ಗುರು ಮುದ್ದುಕೃಷ್ಣ ಮದನಗೋಪಾಲ ಧ್ರುವ ಯಾದವಕುಲತಿಲಕ ಶ್ರೀದೇವದೇವ ಸಾಧುಜನರ ಪಾಲಕ ಉದ್ಧವ ಪ್ರಾಣಪೋಷಕ ಆದಿಕೇಶವ ಸದಮಲ ಸುಖದಾಯಕ 1 ಇಂದೀವರದಳನಯನ ನಂದಕುಮಾರ ಸುಂದರ ಶುಭವದನ ಮಾಧವ ಮಧುಸೂದನ ಮಂದರಧರ ವೃಂದ ಗೋಕುಲೋದ್ಧರಣ 2 ಮುರಹರ ಸಂಕರುಷಣ ಉರಗಶಯನ ತೋರಯ್ಯ ನಿಮ್ಮ ಚರಣ ಬಾರಯ್ಯ ನಾರಾಯಣ ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಯದುಕುಲತಿಲಕ ತೋರಯ್ಯ ನಿನ್ನ ಮುದ್ದು ಮುಖವಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೆಂದಳೈಪ. ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ 1 ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತುದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ2 ಇಂಥ ಹಯವದನನ ಇಂಥ ದೇವರ ನಾ ಕಾಣೆಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ3
--------------
ವಾದಿರಾಜ
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ. ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1 ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2 ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3 ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4 ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5
--------------
ವಾದಿರಾಜ