ಒಟ್ಟು 3655 ಕಡೆಗಳಲ್ಲಿ , 116 ದಾಸರು , 2523 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ ಪ ಅಂಜನಾದೇವಿಯೊಳ್ ಜನಿಸಿಕೊಂಡಿರುವಿ ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ ಸಂಜೀವನವ ತಂದು ಕಪಿಗಳನುಳಿಸಿದಿ ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ 1 ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ ಪಂಥದಿ ಮಗದಾಧಿಪತಿಯ ಸಂಹರಿಸಿ ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ2 ಪಾಜಕ ಕ್ಷೇತ್ರದೊಳ್ ನೀನವತರಿಸಿ ರಾಜತಾಸನದಿ ಶ್ರೀಕೃಷ್ಣನನಿರಿಸಿ ರಾಜೇಶ ಹಯಮುಖ ಕಿಂಕರನೆನಿಸೀ ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ 3
ಕಾಯೋ ಬಾರೋ ಹರಿ ಈಯ್ಯೋ ವರ ಥೋರೀ ಜಾರಚೋರಖರ ಅರಿನಾಶಕಾರಿ ಪ ವಾಯುದೇವಪಿತ ತೋಯಜಾಕ್ಷಿ ಸೀತಾ ಪ್ರಿಯ ನೀನು ತ್ರಾತ ರಾಯ ಜಗನ್ನಾಥ 1 ಕಾಮನಯ್ಯ ನೀನು ಮಾಮನೋಹರನು ವಾಮನಾದಿ ನೀನು ರಾಮನಾಮಕನು 2 ಕರಿರಾಜನನ್ನು ತ್ವರಿತಾದಿ ಕಾಯ್ದಿ ಶ್ರೀವತ್ಸಾಂಕಿತ ಹರಿ ವೆಂಕಟೇಶ3
ಕಾಯೋ ಶ್ರೀಹರಿ ಪ ಕೈ ಮುಗಿವೆ ಮುರಾರಿ ಕರುಣದಿ ಅ.ಪ. ನೊಂದೆನೋ ಈ ಭವ ಬಂಧನದೊಳಗೆ ಶಿಲುಕಿ ಮುಂದಿದಕೇನೋ ದಾರಿ 1 ತುಂಬಿದ ಭಕ್ತ ಕು- ಟುಂಬಿ ನಾಚಿಕೆಯ ಕೊಂಬುವದೇನಿದ ಕುಸುರೊ2 ಎಷ್ಟು ನಿನಗೆ ಮೊರೆ- ಯಿಟ್ಟರೂ ಶ್ರೀದ- ವಿಠ್ಠಲ ಮನಸಿಗೆ ತಾರಿ 3
ಕಾಯೋ ಸಿದ್ದೇಶಾ ಪ ಭಕ್ತಿಯ ಗುಣಂಗಳಿಲ್ಲಾ ವಿರಕ್ತಿಯ ಅಂಕುರವಿಲ್ಲಾ 1 ಸಾಧು ಜನಸಂಗ ಮಾಡೀ ನಿಜ ಬೋಧಾಮೃತ ಸವಿಯಲಿಲ್ಲಾ ವಾದ ಗುಣ ಹಿಂಗಲಿಲ್ಲಾ ಕಾಮ, ಕ್ರೋಧ ಸುಳಿಯಲಿ ಬಿದ್ದೆ2 ಪಂಥ ಪರಮಾರ್ಥದೋರೋ ಶ್ರೀ ಕಾಂತ ಗುರು ಮಹಿಪತಿ ಸುಖವ ನೀಡಬೇಕು ಸಿದ್ದೇಶಾ 3
ಕಾಯೌ ಶ್ರೀ ರಮಾದೇವಿಯೆ ಸದಾ ತೋಯಜಾಂಬಕಿಯೇ ಭಯವ ಬಿಡಿಸಿ ಭರದಿಂದ 1 ಕ್ಷೀರಾಂಬೋನಿಧಿ ತನಯೇ ತಾಯೇ ಮಾರನಯ್ಯನರಸಿ ಕರುಣಾವೆರಸಿ ನಲವಿಂದ 2 ಶಿ ್ರೀ ಶೇಷಾದ್ರೀಶ ಮನೋಲ್ಲಸಿತೆ ಕಾಂತೇ ವಾಸವಾದಿ ವಿನುತೇ ಮಹಿತೇ ವರದಾತೇ ತಾಯೆ 3
ಕಾರಣವು ತಿಳಿಯದೊ ಕರುಣ ನಿಧಿಯೇ ಪ ಪರಿ ಮೌನವಾಗಿಪ್ಪ ಅ.ಪ. ಅನ್ಯರಿಗೆ ತಲೆವಾಗಿ ಬಾಯ್ತೆರೆದು ಬೇಡುವಂಥಾ ಸಮಯ ಬಂದೊದಗಿರಲಾಗಿ ನೋಡುವುದುಚಿತವೇ ಅನಿಮಿತ್ತ ಬಂಧೊಈ ವಿಧದ ದುಷ್ಕರ್ಮ ತಂದೊದಗಿಸುವುದಕೆ ಅನ್ಯ ಜೀವರೇ ಕಾಯಾ ಹೇ ಜೀಯಾ 1 ತಾಪ ಸಾರ ಉದ್ದಂಡ ಪಾಂಡವ ಪ್ರೀಯಾ ಹೇ ಜೀಯಾ 2 ಭಂಗ ಪಾದ ಅದುಮದ ಭೃಂಗನೆನಿಸುವೊ ಧವಳ ಗಂಗೆಯ ದಾಸಾ ತಂದೆವರದಗೋಪಾಲವಿಠಲನ ದಾಸಾ3
ಕಾರು ಯಾರಮನೆಗುಂಟು ಖೋಡಿ ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ ಕಾಯಜನಯ್ಯನ ದಿವ್ಯ ಚರಿತಗಳನ್ನು ಬಾಯಿಂದ ಪೊಗಳುತ ಕೈಯಿಂದ ಬರೆದು ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1 ನಳಿನನಾಭನ ವಿಮಲ ಸುಲಲಿತ ಮಹಿಮೆಗಳ ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2 ಭೂಮಿಯೊಳಧಿಕ ಶ್ರೀರಾಮನ ದಾತೃತ್ವ ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನ ಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನ ಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ 2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
ಕಾಲ ತಪ್ಪಿದರು ಸಾವಕಾಲ ತಪ್ಪದೋ ಯಾವ ಜೀವ ಜಂತುಗಳಿಗೂ ಕಾಯವಿಡಿದು ಬಂದ ಬಳಿಕ ಪ ಜನಿಸಿ ತಂದೆತಾಯ ಕರ ದೊಳಿರಲಿ ಸ್ತನವನುಂಡು ಭರದಿನಿದ್ರೆ ಗೈಯುರ್ತಿಲಿ ನೆರೆದಬಾಲರೊಡನೆ ಆಡಿ ಚರಿಸುತಿರಲಿ ಬಾಲಕತ್ವ ತೆರಳಿ ಜವ್ವನವು ಬಂದು ರಮಣಿಯನ್ನೆ ವರಿಸಿ ಇರಲಿ 1 ಕರಿ ಹತ್ತಿ ಮೆರೆಯುತಿರಲಿ ದೊರೆಗಳೊಡನೆ ಚರಿಸುತಿರಲಿ ಮೇರು ಗಿರಿಯ ಶಿರದೊಳಿರಲಿ ಶರಧಿ ಮಧ್ಯ ಪುರದೊಳಂಲರಣ್ಯದೊಳಗೆ ತಿರುಗುತಿರಲಿ ಅತಳ ಸುತಳ ವಿತಳವನ್ನೆ ಪೊಕ್ಕುಇರಲಿ 2 ಕಾಯವಿದುವೆ ತನ್ನ ಪೆತ್ತ ತಾಯಿತಂದೆಗಳಿಗೋ ಜಾಯೆ ಸುತರ ಗೃಧ್ರ ಭಲ್ಲುಕಾದಿಗಳಿಗೋ ಪುಲಿಗೋ ವಾಯಸಾದಿ ಕ್ರಿಮಿಗೋ ಕೀಟಕಾದಿಗಳಿಗೋ ಲಕ್ಷ್ಮೀರಮಣನೊಬ್ಬ ಬಲ್ಲನಿದನು 3
ಕಾಲ ವ್ಯರ್ಥ ಪ ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ ಸುರರು ಬಲ್ಲರೈ ಚದುರ ತತ್ವೇಶಗಣ ಬಲ್ಲರಯ್ಯಾ ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ1 ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ ಅಂಧತಮಸಿನ ಭೋಗದಿಂದಾಹುದೊ ಸಿಂಧು ಚಿನ್ಮಯ ಕಾಯ ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ 2 ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು ಭಾಗ್ಯಪಾಲಿಸು ಭಕ್ತಿಯೋಗವಿತ್ತು ರೋಗದಲಿ ಬಲು ನೊಂದೆ ಭಯವನ್ನು ಹೀರುವುದು ನಾಗತಲ್ಪ ಜಯೇಶವಿಠಲನೆ ಉದ್ಧರಿಸು 3
ಕಾಲ - ನಾಮಕಾ | ತ್ರಿಸಂಧ್ಯಾಕಾಲ - ಚಾಲಕಾ ಪ ಕಾಲ ಕರ್ಮಗಳಿ | ಗಾಲಯ ರೂಪನೆಬಾಲನ ಬಿನ್ನಪ | ಪಾಲಿಸಬೇಕೈ ಅ.ಪ. ಭವ | ಭಂಗದೊಳಗೆ ಮಹಮಂಗನ ತೆರನಹೆ | ಶೃಂಗಾರ ಮೂರ್ತೇ 1 ಕಾಯಾ - ನಿ ಹಿತಾ | ನಾಡಿಗಳಲಿಧೇಯಾ - ವಿಹಿತಾ ||ಆಯಾ ನಾಡಿಗತ | ಧೇಯ ತೀರ್ಥ ಧ್ಯಾನೊಪಾಯ ತಿಳಿಸಿ ಕಾಯೊ | ವಾಯು ಬೃಹತಿ ಪ್ರಿಯ 2 ಸ್ನಾನಾ ಪಾವನಾ | ತವ ಮಹಿಮಾಧ್ಯಾನೋಪಾಸನಾ ||ತ್ರಾಣವೀಯೊ ನಿತ್ರಾಣನೆನಗೆ ಜಗತ್ರಾಣ ಪ್ರಾಣ ಗುರು ಗೋವಿಂದ ವಿಠಲ 3
ಕಾಲ ಕಾಯೋನೀ ಬಹುಮುಖಾ ಪರಿ ಹರಿಯೇ ಪ ನಾನಲ್ಲ ಪುರುಷೋತ್ತಮ ಬೆಳೆದೆ ನಾ ಪರಮಾತ್ಮ ಪರಿ 1 ಕೆಲವು ದಿವಸಾಯಿತು ಸಂಶಯವೆಂಬುದು ತಿಳಿದು ಜನಕನೇ ಹಿಂಸೆಯೊಳಗೆ ಬಿದ್ದು ಈ ಪರಿಯಿಂದ 2 ನಾನು ಭಗವಂತಾ ನಾಡಿಯೊಳಗಾದಂಥಾ ಮಂದರಧರ ಶ್ರೀ ಮಧುಸೂದನ ಗೋವಿಂದ `ಹೆನ್ನೆವಿಠ್ಠಲ’ ರಾಮಾ 3
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1 ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2 ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9