ಒಟ್ಟು 19658 ಕಡೆಗಳಲ್ಲಿ , 137 ದಾಸರು , 8696 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಂಚೆ ನೋಡಣು ಬನ್ನಿ ಜನಗಳೆ ಹಂಚಿನಾಳಿನವ ಹನುಮನ ವಾಂಛಿತಾರ್ಥಗಳೀವ ಭಾವಿ ವಿರಂಚಿದೇವ ಪದಾರ್ಹನಾ ಪ ಅಂದು ಕಪಿಕುಲದಿಂದ ದುಸ್ತರ ಸಿಂಧು ದಾಟಿದ ಧೀರನ ವಂದಿಸುತ ಭೂನಂದನೆಯು ಕ್ಷೇಮೆಂದು ರಾಮಗೆ ಪೇಳ್ದನ 1 ಧಾರುಣಿಯೊಳವತರಿಸಿ ಕುಂತಿ ಕುಮಾರನೆನಿಸಿದ ಧೀರನ ಕೌರವಾಂತಕನೆನಿಸಿ ಕೃಷ್ಣನ ಭೂರಿ ಕರುಣವ ಪಡೆದನ 2 ವಾದಿಗಳ ನಿರ್ವಾದ ಗೈಸಿದ ಬಾದರಾಯಣನ ಶಿಷ್ಯನ ಭೇದಮತವನು ಸ್ಥಾಪಿಸಿದ ಗುರು ಮೋದ ತೀರ್ಥ ಯತೀಂದ್ರನಾ 3 ಪಾಲಕಿಯ ಉತ್ಸವದಿ ಮೆರೆಯುತ ವಾಲಗವ ಕೈಕೊಳುವನ ಕಾಲಕಾಲಗಳಲ್ಲಿ ಭಜಕರ ಮ್ಯಾಳವನು ಪಾಲಿಸುವನಾ 4 ಶೇಷಭೂಷಣ ವಾಸವಾದಿಸು ರೇಶ ಭಕುತರ ಪೋಷನ ಶ್ರೀಶ ಕಾರ್ಪರವಾಸ ಸಿರಿನರ ಕೇಸರಿಗೆ ಪ್ರಿಯ ದಾಸನ5
--------------
ಕಾರ್ಪರ ನರಹರಿದಾಸರು
ಮುಚ್ಚದಿರೆಲೊ ಮುರಾರಿ ಕಣ್ಣ ಪ ಮಂಗಳಕರ ಮಕರಂದ ಸೂಸುತಲಿರೆ ಕಂಗೊಳಿಸುವರೂ ಕಯ್ಯೂರಿ ಕೃಷ್ಣ 1 ಮುತ್ತಿನ ಹಾರಾ ಪದಕ ಮುದ್ರಿಕೆಯು ಒತ್ತುತಲಿಹವೊ ಬೆರಳೂರಿ 2 ಸುಲಭರರಸ ಕೇಳು ಶ್ರೀದವಿಠಲನ ಶೌರಿ 3
--------------
ಶ್ರೀದವಿಠಲರು
ಮುಚ್ಚ್ಯಾಕೆ ಮರೆಯಾಕ್ಹೆಚ್ಚೀತನೆ ಅಚ್ಯುತ ಸಕಲಕ್ಕೆ ಅಧಿಕಿಹ್ಯನೆ ಪ ಬಚ್ಚಿಟ್ಟುಕೊಂಡು ವೇದ ಕುಚ್ಛಿತ ದೈತ್ಯರೊಯ್ಯೆ ಇಚ್ಛೆಗಾರ ಪಿತ ತಂದು ನಿಶ್ಚಯಗೈದ ಸೃಷ್ಟಿ ಅ.ಪ ಸವೆಯದ ವರವನ್ನು ಹಿರಣ್ಯಕಶ್ಯಪನಿಗೆ ಶಿವ ತಾನುಕೊಟ್ಟ ವೈಕುಂಠನ ಉದರ ಸೀಳಿ ಜವದಿ ತ್ರಿಭುವನವ ದಯದಿ ಸಲಹಿದ ಸಿರಿ ಧವ ನರಸಿಂಗನೆನಿಸಿ 1 ಕೇಳಿದ ವರವನ್ನು ದುರುಳರಾವಣನಿಗೆ ಪಾಲಿಸಿ ವರ ಶಂಭು ಹರಿಯನ್ನು ಅರ್ಚಿಸೆ ಕೀಳುದೈತ್ಯನ ಕುಲಮೂಲ ತರಿದು ಸುರರ ಪಾಲಿಸಿದನು ದಿವ್ಯ ಮೇಲುರೂಪವ ತಾಳಿ 2 ದುರುಳಗೊಲಿದು ಶಿವ ಉರಿಹಸ್ತ ಕರುಣಿಸಿ ಮರುಗುತ ಹರಿಯೆಂದು ಕರವೆತ್ತಿಕೂಗಲು ಭರದಿ ಒದಗಿಬಂದು ಮೆರೆವೀ ಅಸುರನನ್ನು ಉರಿಹಸ್ತ ಹರನಿಗೆ ವರವಿತ್ತ ಶ್ರೀರಾಮ 3
--------------
ರಾಮದಾಸರು
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಟ್ಟಬೇಡ ಮುಟ್ಟಬೇಡ ಮುರಹರನ ದಾಸರನು ಪ ಕಟ್ಟು ಮಾಡಿದ ಯಮನು ತನ್ನ ದೂತರಿಗೆಅ ತಿರುಮಣಿ ತಿರುಚೂರ್ಣ ಶೃಂಗಾರ ಧರಿಸುವರಸಿರಿತುಳಸಿ ವನಮಾಲೆಯಿಂದೊಪ್ಪುವವರತಿರುಮಂತ್ರ ತೀರ್ಥಪ್ರಸಾದಕೊಳಗಾದವರತಿರುಪತಿ ಯಾತ್ರೆಯನು ಮಾಡುವ ಮಹಾತ್ಮರ 1 ಬಡವರಾಗಲಿ ಭಾಗ್ಯವಂತರಾಗಲಿ ಅವರುಕಡು ಕರ್ಮಿ ಘೋರಪಾತಕರಾಗಲಿನಡೆನುಡಿಗೆ ಮಾಧವನ ಬಿಡದೆ ಕೊಂಡಾಡುವರಗೊಡವೆ ಬೇಡೆಂದು ಯಮಧರ್ಮ ಸಾರಿದನು 2 ವಾಸುದೇವನ ವಾಸರವನಾಚರಿಸುವವರಬೇಸರಿಸದೆ ಹರಿಪ್ರಸಂಗ ಮಾಳ್ಪವರಶೇಷಶಯನ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸರಾದವರ3
--------------
ಕನಕದಾಸ
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮುಡಿದಿಹ ಕುಸುಮವ ಸಡಗರದಲಿ ನೀಡೆ ಮಡದಿ ತುಳಸಿ ಎನಗೆ ಕಡುದಯದಿಂದ ಪ. ಕಂಕಣ ಕಡಗವು ವಂಕಿ ಬಳೆಯನಿಟ್ಟು ಪಂಕಜಕರದಿಂದ ಶಂಕಿಸದಲೆ ಎನಗೆ 1 ಕುಸುಮ ಭವ ಶ್ರೀ ರಮೇಶನ ತೋರಿ 2 ತುಷ್ಟಳಾಗಿ ನೀಡೆ ಅಷ್ಟು ವಿಧದ ಕುಸುಮಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠಲನ ಸತಿ3
--------------
ಅಂಬಾಬಾಯಿ
ಮುತ್ತಿನ ಆರತಿಯ ತಂದೆತ್ತೀರೆ ಲಕ್ಷ್ಮಿಗೆ ಮುತ್ತೈದೆಯರು ಜಯ ಪ ರತ್ನಮಂಟಪದೊಳು ವರ ಮಹ- ಲಕ್ಷ್ಮಿಯ ಕುಳ್ಳಿರಿಸಿ ಮುತ್ತಿನ್ಹಾರಗಳ್ಹಾಕಿ ಮುತ್ತೈದೆಯರು ಜಯ 1 ಮಿತ್ರೆ ಮಹಲಕ್ಷುಮಿಯ ಬಹು ಸಿಸ್ತಿಲಿ ಶೃಂಗರಿಸಿ ಉತ್ತಮಾಂಗನೆಗೀಗ ಮುತ್ತೈದೆಯರು ಜಯ2 ಕರ್ತೃ ಶ್ರೀಹರಿ ಎನ್ನುತ ಕಮಲನಾಭ ವಿಠ್ಠಲನರಸಿಗೀಗ ಎತ್ತಿ ಚಾಮರ ಬೀಸಿ ಮುತ್ತೈದೆಯರು ಜಯ3
--------------
ನಿಡಗುರುಕಿ ಜೀವೂಬಾಯಿ
ಮುತ್ತಿನಾರತೀ ತಂದೆತ್ತಿಪಾಡುವೆ ಚಿತ್ತಜಾತ ಜನಕ ರಂಗನಾಥದೇವಗೆ ಪ. ಭೂಮಿಪಾಲಗೆ ಶ್ರೀ ಭಾಮೆಯರಸಗೆ ದಾತ ಮನೋ ಮೋಹನಾಂಗಗೆ 1 ಕಾಳೀಮಡುವನು ಕಲಕಿ ಬಂದಗೆ ಬಾಲನಾಗಿ ಗೋವುಗಳನು ಕಾಯ್ದ ಗೊಲ್ಲಗೆ 2 ಮುರವಿರೋಧಿಗೆ ಕರುಣವಾರ್ಧಿಗೆ ತರಳ ಧ್ರುವನಿಗೊಲಿದು ಬಂದ ವರದರಾಜಗೆ 3 ಶರಣರಕ್ಷಣೆ ಸರಸಿಜಾಕ್ಷಗೆ ಪರಮ ಪಾವನ ಶೇಷಶೈಲ ಶಿಖರ ಧಾಮಗೆ 4
--------------
ನಂಜನಗೂಡು ತಿರುಮಲಾಂಬಾ
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುತ್ತೂರೇಶ ಶ್ರೀ ಮರ್ಕಟಾ ತುಲಸÀದಲಾಯತಾಕ್ಷ ಶ್ರೀರಾಮದೂತಾ ಪ ಎತ್ತ ಚಲಿಸದಂತೆನ್ನ ಮನವ ತವ ಪಾದ ಸರೋಜದೊಳಿಟ್ಟು ಪತ್ತು ತಲೆಯನರಿಯಡಿದಾವರೆಯನು ನಿತ್ಯ ಭಜಿಸುವಂದದಿ ಮಾಡಯ್ಯ 1 ಆಂಜನೇಯಾ ಭೀಕರ ರೂಪಾ ದಾನವ ಘಾತಕರಾ ಸತಿ ಮೇದಿನಿ ಸುತೆಯಳ ಮಂಜುಮಾಡಿ ಖಲ ರಾವಣನೊಯ್ಯಲು ಅಂಜದಿರೆಂದವನಿಪ- ನಿಗಭಯವಿತ್ತು ಮಂಜುಂ ಕಾರ್ಯವ ನೆರೆದಪೆನೆಂದೀ 2 ಭಾರತೀಯ ಪವÀನತನಯ ಘನತರ ಕಾರ್ಯಕರ್ತಾ ಶ್ರೀರಾಮದೂತಾ ಘೋರತರದ ಅಪರಾರ್ಣವನು ಹಾರಿ ದಾಂಟಿ ಲಘು ದಶಮುಖಪುರವನು ವೀರರಾಘವನಂಘ್ರಿಗೆ ಎರಗಿದಿ ನೀ 3 ದಾನವನಾಶಾ ಜಾನಕೀತ್ರಾತ ದಶರಥಸುತ ಭಜಕಾ ಆನಂದತೀರ್ಥ ದಾನವ ಕೋಟಿಯ ನಡೆದು ಜವದಿ ನೀ ಮೌನಿ ಹರಿಗೆ ಸಹಾಯಾಗ್ರಣಿಯಾಗಿ ಹೀನ ರಕ್ಕಸ ದಶ- ಶಿರವನರಿಸಿ ನೀ ನರಸಿಂಹವಿಠಲನ ದಾಸನೆನಿಸಿದೀ 4
--------------
ನರಸಿಂಹವಿಠಲರು
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ ಸದಯ ಹೃದಯರಾದ ಸಂಗದೊಳಗೆ ನೀನು ಬೆರೆದು ಪ --ಕರ್ತನಾದ ದೇವ ಸದ್ಪಿಲಾಸನಾ ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ ಭಕುತಿಯಿಂದ ಕ--------ಭಕ್ತ ಜನರಕೂಡಿ 1 ಯೋಗಿಜನರ ಹೃದಯದೊಳು ನಿಖರವಾಗಿಇರುವ ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ ಸಾಗರಾನಸುತಿಯರಾಳ್ವ ಸಾರ್ವಭೌಮನ ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ 2 ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ ಶಿಷ್ಟ ಜನರ ಪಾದ----------ಯಾಗೋ ನೀ ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ 3
--------------
ಹೆನ್ನೆರಂಗದಾಸರು
ಮುಂದೆ ಗಾಣದೆ ದಾರಿ ಮುದಿಗೆ ಬಿದ್ದು | ಹಿಂದು ನೋಡದೆಬಂದದ್ದು ಬರಲೆಂದು ತಾಳದೊ ಕಂದಗಳ ಪ್ಯಾಡುತಲಿದಿನ ಸುಖವೆಂದೆಂದಿಗೂ ಬೇಕೆಂದು ಬೆಂದ ಭವದಂದದಿಗೆ ನಾ ಕುಂದದೆ ನೊಂದೆ ನಿನಗೆ ವಂದಿಸದೆ 1 ದೇವ ಕಾಯಯ್ಯ ಆವ ದೈವಕ ಬಾಹದೆ | ದಯಾಭಾವಿಸಲ್ಯಾಕ ಭಾವಜಾನಯ್ಯ | ಕಾಮನ ಕಾಟಿಗೆ ಕಂಗೆಡಿಸುವದುರ್ಭಾವಗಳನು ಪರಿಹರಿಸೈ | ಹಾವಿನ ಹಗಿಹಗಳಲಿವಿಹರಿಸುತಿಹ ಜೀವದ ಜೀವನದೊಡೆಯ 2 ಕರ ವಿಡಿದಿಂದುದ್ಫಸದಿಹದು ಬಾಹಳರದು 3
--------------
ರುಕ್ಮಾಂಗದರು
ಮುದ್ದು ಕೃಷ್ಣ ಮುನಿ ಶರಣ ಉದ್ಧರಿಸು ನೀ ಉಡುಪಿ ರನ್ನ ಪ. ಮುದ್ದೆ ಬೆಣ್ಣೆ ಕೊಡುವೆ ಚೆನ್ನ ಮಧ್ವಮುನಿಯ ಮನ ಪ್ರಸನ್ನ ಅ.ಪ. ಲೀಲೆಯಿಂದ ಕೊಳಲನೂದಿ ಕಾಳಿಮಡುವ ಕಲಕಿ ನಿಂದ ಲೀಲೆ ಕೇಳೆ ಮನಕಾನಂದ 1 ನಿನ್ನ ಮಹಿಮೆ ಅಧಿಕವಾಗಿ ಎನ್ನ ಮನಕೆ ಹರುಷವಾಗಿ ಪನ್ನಗೇಂದ್ರಶಯನ ಸ್ವಾಮಿ ನಿನ್ನ ರೂಪ ತೋರೊ ಪ್ರೇಮಿ 2 ಪೊರೆ ಗೋಪಾಲಕೃಷ್ಣವಿಠ್ಠಲ ನಿರುತ ನಿನ್ನ ಚರಣ ಕಮಲ ಮೊರೆಯ ಹೊಕ್ಕೆ ಮರೆಯದೆನ್ನ ಕರುಣೆಯಿಂದ ಕಾಯೊ ಘನ್ನ 3
--------------
ಅಂಬಾಬಾಯಿ