ಒಟ್ಟು 1360 ಕಡೆಗಳಲ್ಲಿ , 103 ದಾಸರು , 1202 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಪುರುಷ ಯದುಕುಲೇಶ ಶರಧಿ ಮಂದಿರವಾಸ ಶ್ರೀಶ ಪ ಪರಮ ಹರುಷದಿಂದಲೀಗ ಉರುಟನೆಯ ಮಾಡುವೆನು ಅ.ಪ. ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು 1 ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು 2 ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ ಕಂಧರವ ತೋರು ಬೇಗ ಗಂಧವನು ಹಚ್ಚುವೆನು 3 ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ ಕುಸುಮ ಮಾಲೆ ಹಾಕುವೆನು 4 ಚಾರು ಚರಿತ ಕರಿಗಿರೀಶ ಆರತಿಯ ಬೆಳಗುವೆನು ತೋರು ತವ ಮುಖಾರವಿಂದ 5
--------------
ವರಾವಾಣಿರಾಮರಾಯದಾಸರು
ಪರಮಶಿವಶಂಕರಿಯೆ ಪ ಕರುಣಿಸು ಮಂಗಳೆಯೆ ಅ.ಪ. ಪಂಕಜನಾಭಿಯೆ ಪಂಕಜಪಾಣಿಯೆ ಪಂಕಜಲೋಚನೆಯೆ ಪಂಕಜಗಂಧಿಯೆ ಪಂಕಜವದನೆಯೆ ಶಂಕರಸುಂದರಿಯೆ 1 ಗೌರಿಯೆ ಗಿರಿಜೆಯೆ ಕಾತ್ಯಾಯನಿಯೆ ಹೈಮವತೀಶ್ವರಿಯೆ ಪಾರ್ವತಿ ಶಿವೆ ಪರಮೇಶ್ವರಿ ಶಂಕರಿ ಕಾಳಿಯೆ ಶಾಂಭವಿಯೆ 2 ಮಾಧವ ಸೋದರಿಯೆ ಭೂಧರವಾಸೆಯೆ ಶ್ರೀ ಲಲಿತಾಂಬೆಯೆ ರಾಜರಾಜೇಶ್ವರಿಯೆ 3 ನಿತ್ಯ ಕಲ್ಯಾಣಿಯೆ ಭಕ್ತವತ್ಸಲೆ ವಿಜಯೆ ನಿತ್ಯ ಸುಮಂಗಳೆಯೆ 4 ದಾನವ ಭಂಜಿನಿ ಮೌನಿಸುರಂಜಿನಿ ಭಾನುಮಂಡಲ ರುಚಿರೆ ಮಾನಿನಿ ಪಾಲಯಮಾಂ 5
--------------
ಬೇಟೆರಾಯ ದೀಕ್ಷಿತರು
ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ ಧರ್ಮಪಥವನು ತೋರಿ ಉದಾರಿ ಪ ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ ನಿರಯಾ ಪಾತ್ರರ ಸಲಹಿದಿನೀ 1 ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ ವನಜನಾಭನ ಸ್ತಪಿಸಿದ ನೀ 2 ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ ಚರಿಪ ಜ್ಞಾನಿಯೆ ನಮಿಸುವೆನು 3
--------------
ಶಾಮಸುಂದರ ವಿಠಲ
ಪವನಜ ದೇವ ಸದಾ | ಜಿವೇಶ ಗುರು ಪ್ರೇಮಾಪಕ ಪ ಅಮಿತ ಮಹಿಮ ತವ ಪಾದಕೆ | ನಮಿತೆ ಸುಮತಿಯ ಪ್ರೇರಿಸು ಬೇಗ 1 ಸದನ ಗುರು ಭಾರತೀಕಾಂತ ನೀ ದೂರಗೈಯದಲೆ ದೇವ 2 ನಿರುತದಿ ಶ್ರೀವರಶಾಮಸುಂದರ | ಧ್ಯಾನವ ನೀಡುವದೈ ಈಗ 3
--------------
ಶಾಮಸುಂದರ ವಿಠಲ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಪವಮಾನದೇವ ಪರಿಪಾಲಿಸೋ ತವ ಪಾದವಾ ನೆರೆನಂಬಿದೆ ನಾ ಮೂರು ಕೋಟಿರೂಪ ಮೂರು ನೇತ್ರ ನಮಿತ ಮೂರುವತಾರಿ ಭಾರತಿ ಕಾಂತ 1 ಕೃಷ್ಣಾಚಾರ್ಯರ ನಿಷ್ಟೆಗೊಲಿದು ಜ್ಞಾನವ ಕೊಟ್ಟು ಸಲಹಿದ ಶ್ರೇಷ್ಠ ಮೂರುತಿಯೆ 2 ಅಂಧಕೀವನ ಮಂದಿರಾಂಜನೇಯ ನಂದ ಜಾತ ಶಾಮಸುಂದರಾಂಘ್ರಿಪ್ರಿಯ 3
--------------
ಶಾಮಸುಂದರ ವಿಠಲ
ಪವಮಾನಸದಾ ಸಲಹೈ | ಪ್ರೇಮಾಂಬುಧಿಯೆ ದಾತ ಪ ಹರಿಕುಲೇಶ ಸಿರಿವರನ | ಚರಣಧ್ಯಾನಗೈಯದಲೆ ಕೊನೆಗೆ ತೋರೋ ಎನಗೆ 1 ನಾನೆಂಬೋ ಗರ್ವದಲಿ | ಶ್ರೀನಾಥನ ಪದ ಪೊಂದದೆ ಹೀನತನದಿ ಕಾಲಕಳೆದೆ | ಮಾಣದೆ ನೋಡಿಂದಿನಾ ದಿನದಿ 2 ಶ್ರೀ ಶಾಮಸುಂದರನ ದಾಸಾಗ್ರಣಿ | ಪವಿಸಮಾಂಗ ಶ್ವಾಸದೊಡೆಯೆ ಕೊರವಿಯ | ಪೋಷಿಸು ಗುರು ನಾವಂದಿಪೆ 3
--------------
ಶಾಮಸುಂದರ ವಿಠಲ
ಪಶುಪತಿ ಬಂದ ಆನಂದದಿಂದ ಪ ಶಶಿಧರ ಶಂಕರ ಸುರಗಂಗಾಧರ ಅಸಮ ಸುಶೋಭಿತ ಜಟಾಜೂಟಧರ ಅ.ಪ ಕರÀದಿ ಧರಿಸಿದ ಡಮರುಗ ತ್ರಿಶೂಲ | ಸುಂದರವಾದ ವರಸಾರಂಗ ಸರಸಿಜಭವ ಕಪಾಲ | ಕೊರಳಲಿ ನೋಡೆ ಧರಿಸಿದ ಬಹುಪರಿ ರುಂಡಮಾಲಾ | ಕಿಡಿಗಣ್ಣಿನ ಫಾಲಾ ಗರಳಕಂಠ ಕರಿವರ ಚರ್ಮಾಂಬರ ಸ್ಮರ ಮದಪರಿಹರ 1 ರಜತಾಚಲ ಮಂದಿರವಾಸ | ಮಹೇಶ ಶಿವಕೃತ್ತಿವಾಸ ಭುಜಗಭೂಷಣ ಶೋಭಿತ ವರವೇಷ | ಭಕ್ತರ ಪೋಷ ಗಜಮುಖ ಜನಕ ಭೂತ ಗಣೇಶ ಪಾಪೌಘ ವಿನಾಶ ಕುಜನಾವಳಿ ಮದಗಜ ಮೃಗರಾಜನು ಸುಜನಜಾಲ ಪಂಕಜಹಿತ ದಿನಮಣಿ 2 ಸುರವರನಮಿತಚರಣನು ಬಂದ | ಶೋಭಿತವಾದ ಪರಿಪರಿ ಚಿತ್ರ ಭೂಷಣನು ಬಂದ | ಕೋರಿದವರ ಕರೆದೀವ ಕರುಣಾಭರಣನು ಬಂದ | ತಾನೊಲವಿಂದ ಚರಣ ಶರಣರಘ ಪರಿಹರಗೈಸುವ ಪುರಹರ ಶಂಕರ 3
--------------
ವರಾವಾಣಿರಾಮರಾಯದಾಸರು
ಪಾಂಡುನಂದನರಂತೆ ತೋರುತಿಹರು ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು ಪ ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ ಸುಜನ ಗಣದಿ | ವೃಜಿನ ವರ್ಜಿತರಾಗಿ ಗಜವರದನಂಘ್ರಿಯುಗ ಭಜನ ತತ್ಪರರಾಗಿ 1 ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ ವರ ಸುಗೀತಾರ್ಥ ತತ್ವಜ್ಞರಾಗಿ ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ 2 ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ ವಸುಧಿ ಸುರರಿಗೆ ಸನ್ಮೋದಗೊಳಿಸಿ ವಸುದೇವಸುತ ಶಾಮಸುಂದರನ ವಶಗೊಳಿಸಿ ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ 3
--------------
ಶಾಮಸುಂದರ ವಿಠಲ
ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ಪ. ಸುರರು ನಿರುತ ನಿನ್ನನು ಬಿಡರು ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ ಪೂರ್ಣಸುಖವನ್ನೆ ಕೊಟ್ಟು ಅನುದಿನ ಸೇರಿಸೊ ವೈಕುಂಠ 1 ಇಂದು ನಾ ಮಾಡ್ದ ಪುಣ್ಯ ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ ನಂದನ ಕಂದ ರಂಗ ಬಂಧುವೇ ಪಾಂಡುರಂಗ ಕಮಠ ವರಹ ವೇಷಧಾರಕನೆ ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2 ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ ಪಾಡಲಿ ಹಗಲಿರುಳು ಕೊಡದಿರು ವಿಠ್ಠಲಯ್ಯ ಬಲವಂತÀ ರಕ್ಷಿಸೆನ್ನ ವಸಂತ ಶ್ರೀದ ಕೈಯ ಮುಗಿವೆ ಸರ್ವದಾ 3
--------------
ಅಂಬಾಬಾಯಿ
ಪಾದ ಎಂಥ ಸುಂದರ ಪಾದಎಂಥೆಂಥವರಿಗದರ ಅಂತ ತಿಳಿಯದಂಥಾ ಅ.ಪಸರ್ವದಾ ಸಿರಿದೇ'ಯು ತೊಡೆಯಮೇಲೆಇಟ್ಟು ಮೆತ್ತಗೆ ಒತ್ತುತಾ ದಿಟ್ಟಿಸಿ ನೋಡುತಾದ್ಟೃತಾಕೀತೆಂದು ಗಟ್ಟಿ ಹಣೆಯ ಹಚ್ಚಿಬಚ್ಚಿಟ್ಟುಕೊಂಡಂಥಾ 1ಹುಡಗರ ಕೂಡಿಕೊಂಡು ಗಡಿಗೆಯ ಒಡೆದುಕುಡಿದು ಕೆನೆಪಾಲ್ ಮೊಸರು 'ಡಿತುಂಬ ಬೆಣ್ಣೆಯ'ಡಕೊಂಡು ಓಡುತ 'ಡಿಯಬಂದರೆ ದೊಡ್ಡಗಿಡವೇರಿ ಅಡಗು' 2ಚಲುವ ಗಂಗೆಯ ಪಡೆದ ಪಾವನಪಾದಶಿಲೆಯು ಸತಿಯ ಮಾಡಿತು ಪ್ರಲಯಕಾಲದ ಆಲ-ದೆಲೆ ಮೇಲೆ ಮಲಗುತ ಬಲಪಾದಾಂಗುಟಚೀಪುವ ಭೂಪತಿ'ಠ್ಠಲ 3
--------------
ಭೂಪತಿ ವಿಠಲರು
ಪಾದ ನೋಡಿದೆ ಪ ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ. ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ 1 ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ 2 ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ 3 ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ 4 ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನವೀರನಾರಾಯಣನ ಚಂದಿರೆ5
--------------
ವೀರನಾರಾಯಣ
ಪಾದ ಲಂಬೋದರಅಂಬರಾಧಿಪ ಮನದ್ಹಂಬಲವ ನೀಡೆಂದು ಪ ನಾಕನಾಥನುತ ಪಿನಾಕಿಸುತ | ಕಾಕುಮತಿಯ ಕಳೆದು ಕಾಯೊಖುವಾಹನೇಕದಂತ 1 ಭದ್ರಮೂರುತಿಯೆ ಕರುಣಾಬ್ಧಿತ್ವರಿತದ್ಧರಿಸು ಎಂದು ನಮಿಪೆ ಅದ್ರಿಜೆ ಕುಮಾರ ನಿರುತ 2 ಸಿಂಧೂರ ವದನನೆ ಸುರವೃಂದ ವಂದಿತವಂದಿಸಿ ಬೇಡುವೆ ಶಾಮಸುಂದರನ ಪ್ರೀತಿ ಪಾತ್ರ 3
--------------
ಶಾಮಸುಂದರ ವಿಠಲ
ಪಾದ ವಂದಿಸುವ ಎನ್ನ ಮಂದಿರದಲ್ಲಿ ನಿಲ್ಲೆ ಕೇಳುವದೆನ ಸೊಲ್ಲೆ ಪ ಭವ ಸಿಂಧೂವಿನೊಳು ಬಹು ನೊಂದು ನಿನ್ನ ಬೇಡಿಕೊಂಬೆ ಪಾಲಿಸು ಜಗದಂಬೆ1 ಇಂದಿರೇಶನರಾಣಿ ಮಂದಭಾಗ್ಯನ ಕರುಣ - ದಿಂದಲಿ ಎನ್ನ ನೋಡೆ ನೀ ನಲಿದಾಡೆ 2 ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ ಕಂದನು ನಾನಮ್ಮ ಶಿರಿಯೆ ನೀ ಸುಖ ಸುರಿಯೆ 3 ಎಂದಿಗು ಎನ್ನನು ಪೊಂದಿದ ಈ ಭವ ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ 4 ದಾತ ಗುರುಜಗನ್ನಾಥ ವಿಠಲನ ಪ್ರೀತಿಯಿಂದ ಎನಗೆ ತೋರೆ, ನೀ ಎನ್ನ ಮನೆಗೆ ಬಾರೆ 5
--------------
ಗುರುಜಗನ್ನಾಥದಾಸರು