ಒಟ್ಟು 42091 ಕಡೆಗಳಲ್ಲಿ , 138 ದಾಸರು , 11652 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಜೆ ನಿನ್ನೊಗೆತನದ ಸೊಗಸನೇನೆಂಬೆ ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ. ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ ಗಂಗೆ ಶಿರದಲಿ ಬಹು ಭುಜಂಗ ಭೂಷಣನು ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು 1 ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ ಮರುಳುಭೂತಗಳೆಲ್ಲ ಪರಿವಾರವು ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ ಪರಮ ಸೌಂದರಿಯಕಿದು ಸರಿಯೆಂತು 2 ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಗಣಿತ ಶಾಸ್ತ್ರವ | ಓದಿ ಕಾಣಲಿಲ್ಲ ಪ ಆಸನ ಬಲಿದು ಶ್ವಾಸವ ನಿಲಿಸಿ | ನಾಸಿಕಾಗ್ರದಲ್ಲಿ | ಸೂಸಿದ ಮನ ಹಿಡಿ ಭ್ರೂ ಮಧ್ಯದಲಿ | ನೋಡು ಪ್ರಕಾಶಿಪುದು ಅಲ್ಲಿ 1 ಪರ ವಸ್ತುವು ದೀಪಿಸುತಿಹುದದಕೆ | ಪಾಪ ಪುಣ್ಯವೆಲ್ಲೀ ? 2 ಮೂರ್ತಿ ಭವತಾರಕ ದೇವನು | ಭೋಧಿಸಿದನು ಇಲ್ಲೀ 3
--------------
ಭಾವತರಕರು
ಅಗಣಿತ ಬಂಟ ನೆನೆವರಿಗೆ ನಂಟಪ. ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ 1 ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ 2 ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ 3 ಮೋದ 4 ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ 5
--------------
ವಾದಿರಾಜ
ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? 1 ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? 2 ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? 3 ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? 4 ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? 5
--------------
ರುಕ್ಮಾಂಗದರು
ಅಂಗನೆ ನೋಡುವ ಬಾರೆ ಪ ಹೀಂಗಿರಲಾರೆ ನಿನ್ನಾಣೆ ಕಂಗಳು ಪಡೆದ ಫಲವ ರಂಗಕೊಳಲುನೂದುತ ಗೋ-ಪಾಂಗನೆಯರೆಲ್ಲ ನೆರೆದು ಸಂಗಡ ಲೋಲಾಡುತಿಪ್ಪುದ ಅ.ಪ. ಅಧರ ಪಾನವ ತಾ ಸೂರೆಗೊಂಬುದತಾನು ನೆಲೆಸಿದ ವೃಕ್ಷ ಮೂಲಗ-ಳೇನು ಸುಕೃತಮಾಡಿದವೋ ಭೂಲತಾವನದಾ ಪುಣ್ಯಗಳೇನೆಂಬೆನಾನು ಮಾಡಿದ ಪೂರ್ವಸಂಚಿತಏನು ಒದಗಿತೊ ಕೃಷ್ಣರಾಯನವೇಣು ಗೀತಾಮೃತವ ಸವಿವರೆ1 ಹುಲ್ಲೆಯ ಹಿಂಡುಗಳೆಲ್ಲ-ಪುಲ್ಲನಾಭನ ಕೊಳಲ ಧ್ವನಿಯ ಸೊಲ್ಲನಾಲೈಸುತ ವೇಗದಿಚೆಲ್ಲ ಗಂಗಳೇರಂತೆ ಕೃಷ್ಣನಲ್ಲಿ ಚಿತ್ತವೆರಗಿ ಅನ್ಯ-ವಿಲ್ಲದಿಪ್ಪ ಸಡಗರವನ್ನುಪಲ್ಲವಾರುಣ ಪಾಣಿಯಿಂದಮೆಲ್ಲನೆ ಮಧುರಾಗೀತವಕಲ್ಲು ಕರಗುವಂತೆ ಹಾಡಲುಹುಲ್ಲು ಮೇಯುವ ತುರುಗಳೆಲ್ಲತಲ್ಲಣದಿಂದಲಿ ಬಂದುವಲ್ಲಭರಂತೆ ನೋಡಲು 2 ಅರಗಿಳಿ ಹಂಸಗಳೆಲ್ಲ ತರುಗಳ-ಕೊಂಬೆಗಳನೇರಿಪರಮ ಹರುಷದಿ ಕುಳ್ಳಿರ್ದು ಕೊರಳ-ಕಲರವಗಳುಳುಹಿಪರಮ ಪುರುಷನ ಧ್ಯಾನದಿಂದ ಯೋಗಿಗಳ ತೆರದಿ ಮೈಮರೆದುಕರಗಿ ಕಂಬನಿಗಳನೆ ಸುರಿಸುತಸರಸಿಜಾಕ್ಷನ ವೇಣುಗೀತದಸ್ವರಗಳನಾರೈದು ಬಾಹ್ಯವತೊರೆದು ಪರಮಹಂಸರಂತೆನಿರುತ ಕೃಷ್ಣನ ಪಾದಯುಗಳಸರಸಿಜದ ಲೋಲ್ಯಾಡುವ ಸುಖವ 3
--------------
ವ್ಯಾಸರಾಯರು
ಅಂಗನೇರು ಕೂಡಿ ಸ್ವರ ಸಂಗೀತದಿಂದಲೀಗ ಚಾರು ಚರಣಕೆ ಹರುಷದಿಂ ಬೇಗ ಮಂಗಳಾತ್ಮಕನಾದ ಶ್ರೀ ನರಶಿಂಗ ರಾಯನಿಗೆ ಶೃಂಗಾರದಿಂ ಜಯಮಂಗಳವೆಂದು ಪಾಡಿರೆ 1 ನೀನೆ ಗತಿಯೆಂದ ಮಾನಿನಿಯಳ ಮಾನ ಕಾಯ್ದವಗೆ ಸಾನುರಾಗದಿ ಧ್ಯಾನಿಸುತಲಿ ಶ್ರೀನಿವಾಸನಿಗೆ ಬಲು ಛಂದದಿ ಜಯ ಮಂಗಳವೆಂದು ಪಾಡಿರೆÉ 2 ಪೊಂದಿದ ಜನರನು ತ್ವರದಿ ಪೊರೆಯುವ ನಂದಕಂದನಿಗೆ | ವಂದಿಸಿ ಕರುಣದಿ ಸಿಂಧು ಶಯನಗೆ | ಆನಂದದಿಂದಲಿ ಶ್ರೀ ಶಾಮಸುಂದರಗೆ ಘನ ಮೋದದಿಂ ಜಯ ಮಂಗಳವೆಂದು ಪಾಡಿರೆÉ 3
--------------
ಶಾಮಸುಂದರ ವಿಠಲ
ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಅಘಟಿತ ಘಟನಾ ಅದ್ಭುತ ಕಥನಾ ಮಗುವಿನ ನುಡಿ ಕೇಳು ಮದಮುರಮಥನಾ ಪ. ಸಾಲದೆರಡು ಮೂರು ಮೂಲಸಹಿತ ತೋರು ಮೇಲಿನ ಫಲವನ್ನು ಮರೆಯದೆ ಮುಚ್ಚಿಟ್ಟಿರು 1 ಗುಮ್ಮನ ಕಡೆಯಿಂದ ಗೂಬೆಗಳ್ಬರದಂದ ಅಮ್ಮನ ತೊಡೆಯ ಮೇಲಿರಿಸೆನ್ನ ಪೂರ್ಣಾನಂದ 2 ಅಷ್ಟ ನೀನೆನಗಿರೆ ವಪ್ಪದನ್ಯರ ಮೊರೆ ತಪ್ಪಿಸು ಕರಕರೆ ಸರ್ಪಗಿರಿಯ ದೊರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಘಹರ ಧರಣೀಂದ್ರನೆ ಪ ಕುಮುದಾಳಿ ಸುಧಾಕರ ಅಘಹರ ಧರಣೀಂದ್ರನೆ 1 ರಾಮನೆ ಅಘಹರ ಧರಣೀಂದ್ರನೆ 2 ಪ್ರಾಣಾವಳಿ ಕಾಲಹವ್ಯವಾಹ ಅಘಹರ ಧರಣೀಂದ್ರನೆ 3 ಚಾಪವಿಲೋಲ ಅಘಹರ ಧರಣೀಂದ್ರನೆ 4 ಧೇನುಪುರಾಧಿಪ ಅಘಹರ ಧರಣೀಂದ್ರನೆ 5
--------------
ಬೇಟೆರಾಯ ದೀಕ್ಷಿತರು
ಅಂಚಿತ ವಿಕ್ರಮನೆ ಪ ಪೊರೆಯೊಯೆನ್ನ ಅ.ಪ ದುಷ್ಟರೊಳಗೆ ಸೇರಿಕೊಂಡು ಭ್ರಷ್ಟ ಮಾಡುತಿಹರೈ ಶ್ರೇಷ್ಠನು ನಾನೆಂಬಜ್ಞಾನವ ಕೊಟ್ಟು ಕೆಡಿಸುವರೈ 1 ಹಾಸ್ಯಗಾರರಾಟ ನಿಲಿಸು ನೀ ಸಲಹಬೇಕು ಎನ್ನಗುರುವೆ 2 ತಂದೆರಾಮಚಂದ್ರಗಾಗಿ ಮಂದಮತಿ ರಾವಣನ ಮಂದಿ ಎಲ್ಲವನ್ನು ಕೊಂದು ದಂದುಗಾವ ಬಿಡಿಸಿದೆ 3 ಪಾತಕ ದಶಕಂಠನ ಭೂತಗಳ ಪಾಲು ಮಾಡಿಸಿ ಖ್ಯಾತಿಯನ್ನು ಪಡೆದೆ ನೀಂ 4 ಗುರುರಾಮ ವಿಠಲಗೆ ಪರಮಾಪ್ತ ಹನುಮಂತ 5
--------------
ಗುರುರಾಮವಿಠಲ
ಅಚ್ಯುತನ ಧ್ಯಾನದೊಳಿರಿ ಅನುದಿನದಿ ಪ ಗುಚ್ಚರಿಸುವೆ ಕಲಿಯ ತುಚ್ಛ ದುರ್ಗುಣಗಳ ಅ.ಪ ನಿತ್ಯ ಕರ್ಮಕೆ ಕ್ಷುಧೆಯು ತಾ ಬಾಧಿಸುತಿಹುದು 1 ವೊಲಿದಂತೆ ನಡೆದು ನಿಜ ಸುಖದಾಸೆಯಿಲ್ಲ 2 ಸಾರ ವರಿತ ಮಹಾತ್ಮರ ಸಂಸರ್ಗವಿಲ್ಲ 3 ನೀತಿ ಪೇಳ್ವರಿಗೆ ಘಾತಕವೆಣಿಸುವುದು 4 ಪರ ಗತಿಯ ಸಾಧನೆಗಳೀ ಕಾಲದೊಳಿಲ್ಲ 5 ಸಾರ ನರಿಯದವನೆ ಪಿತೃಗಳಿಗೆ ವಿರೋಧ 6 ದ್ಗುರುವನ್ನು ಸೇರಿದಡವನೆ ನಿರ್ದೋಷ 7 ಕೃತ್ಯದಿ ನಡೆಯಲವಗಹುದು ಇಷ್ಟಾರ್ಥ 8 ಶ್ರೀ ಗುರುದೇವ ಸದಾನಂದಮಯನು 9
--------------
ಸದಾನಂದರು
ಅಚ್ಯುತಾನಂದ ಗೋವಿಂದ ಎಚ್ಚರಾಗಿರು ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ. ಪವನ ಮುಷ್ಟಿವೆಷ್ಟವಿಷವ ಶಿವನು ಗೆಲಲು ನಿನ್ನ ನಾಮ ಸ್ತವನಗೈದನೆಂದು ಮಂತ್ರ ಕವಿಗಳೆಂಬೊ ಕವನವೇನೊ 1 ಭರ್ಮಗರ್ಭಾದಿಗಳು ಪೇಳ್ದ ಕರ್ಮಕಾಂಡ ನೋಡೆ ದೇವ ಶರ್ಮ ವರದ ನಿನ್ನ ಸ್ಮರಣೆ ಮರ್ಮವೆಂದು ಒದರುತಿಹುದು 2 ಮೂರಾರು ಪುರಾಣ ಮಹಾ ಭಾರತಾದಿ ಕಾವ್ಯಾದಿಗಳ ಸಾರವರದು ನೋಡೆ ದೀನೋ- ದ್ಧಾರ ನೀನೆ ತೋರಿಕೊಂಬಿ 3 ಇಂಥನಂತಾನಂತ ಮಹಿಮ ವಂತ ನೀನೆ ಶರಣನೆಂದು ಚಿಂತಿಸುವರಾಜನರಿ- ಗಂತರಾಯವೆಂತಾಗುವುದು 4 ಚಂದನ ಮೂರುತಿಯ ನಂಬಿ ಕುಂದಿದನೆಂಬಪಕೀರುತಿಯ ಎಂದೆಂದಿಗು ವಹಿಸದಿರು ತಂದೆ ಲಕ್ಷ್ಮೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಜದಾಕ್ಷಣ ಕಂಜನೇತ್ರನೆ ಸಂಜೀವಿನಿಯಾ ತಂದು ನೀಡಿದಾ ಪ ಪಸುಳನೈಯಾ ವಪುವೆಸೆವ ರಾಯ ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ 1 ಭೀಮಸೇನಾ ಭಕ್ತಕಾಮಪೂರ್ಣಾ ಕಾಮಕೀಚಕಾ ಬಾರ ಪಾಮರರಿದಾ ನಾಕ ನಾನು ಮೆರೆದಾ 2 ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ 3 ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ ವಾಸನ ರಹಿತಾ ಗುಣಗಣಗಡಣಾ ಗರಿಮಾ 4 ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ ವಿಠಲನರಸಿಂಹಾ ಎದೆಯಾರವಿಂದ ನಯನಾ ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ 5
--------------
ನರಸಿಂಹವಿಠಲರು
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ. ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1 ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2 ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3 ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4 ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು