ಒಟ್ಟು 688 ಕಡೆಗಳಲ್ಲಿ , 96 ದಾಸರು , 563 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ಕೃಷ್ಣನ ತಂಗಿಯರೆಂಬೊ ಗರವಿಲೆಇಷ್ಟು ನುಡಿದಾರೆ ಇವರುನಮ್ಮನೆಗೆ ಬಂದಿನ್ನೆಷ್ಟುನುಡಿದಾರೆ ಪ.ಕೃಷ್ಣನ ಮನದಿ ನೆನಸಿಮುಯ್ಯದ ಸುದ್ದಿ ಅಷ್ಟು ಲೋಕಕ್ಕ ಮೆರೆಸಿಅಷ್ಟದಿಕ್ಕಿನ ಶ್ರೇಷ್ಠರಾಯರ ಕರೆಸಿಇಟ್ಟಮುದ್ರಿಕೆತೆಗಿಸಿಧಿಟ್ಟೆಯರು ಮುಯ್ಯವಿರಸಿನ್ನೆಷ್ಟು ನುಡಿದಾರೆ ಇವರು 1ಹರಿಯ ತಂಗಿಯರೆಂದು ದ್ರೌಪತಿಭದ್ರ ಗರವಿಲೆ ಮುಯ್ಯ ತಂದುರಾತ್ರಿಲೆ ತಮ್ಮ ಕರೆಯ ಬರಲಿಲ್ಲವೆಂದುಭರದಿ ಕೋಪಿಸಿ ಬಂದುಸರಿಯವರುನಗತಾರೆಇನ್ನೆಷ್ಟು ನುಡಿದಾರೆ ಇವರು 2ಬೇಗನೆ ಮುಯ್ಯಾ ತಂದುರಂಗನ ಯಾವಾಗ ನೋಡೆವೆಂದುಸೋಗುಮಾಡುತಬಾಗಿಲೊಳುನಿಂದುಬೀಗವ ತೆಗೆಸಿರೆಂದು ಕೂಗಾಡಿದರಿನ್ನೆಷ್ಟು ನುಡಿದಾರೆ ಇವರು 3ಸುಳ್ಳು ಮುಯ್ಯವ ತಂದುಹರಿಯಲ್ಲೆ ಸ್ನೇಹ ಬಳ್ಳಿಯ ಸುತ್ತಿಕೊಂಡುಜನರೊಳು ಬಹಳ ಒಳ್ಳೆಯವರೆನಿಸಿಕೊಂಡುತಳ್ಳಿಮಾತಾಡಿಕೊಂಡುತಳಮಳತಾವೆಗೊಂಡುಇನ್ನೆಷ್ಟು ನುಡಿದಾರೆ ಇವರು 4ರಮ್ಮಿ ಅರಸನ ಎದುರುದ್ರೌಪತಿ ಭದ್ರೆ ಹೆಮ್ಮಿಲೆ ದೂರಿದರುಎಲ್ಲರು ನಗಲು ಜಮ್ಮನೆ ನಾಚಿಹರುನಮ್ಮನ ಕರೆಯದೆ ಒಳಗೆಗುಮ್ಮನಂತೆ ಅಡಗಿದೆರಿನ್ನೆಷ್ಟು ನುಡಿದಾರೆ ಇವರು 5
--------------
ಗಲಗಲಿಅವ್ವನವರು
ಕೊಟ್ಟಸಾಲ ಕೊಡದೆ ಭಂಡಾಟ ಮಾಡುತಿಹನೆ |ಎಷ್ಟು ಕೇಳಿದರೆನಗೆ ಓಯೆನ್ನದಿಹನೆ ಪಭರದಿ ಕೇಳಲು ಜಲದಿ ಕಣ್ಣ ಬಿಡುತಿಹನೆ |ತರುಬಿ ಕೇಳಲು ಕಲ್ಲು ಹೊತ್ತು ನಿಂತಿಹನೆ ||ಮರಳಿ ಕೇಳಲು ಊರ ಅಡವಿ ಸೇರುವನೆ |ಇರುಳು ಹಗಲೆಲ್ಲ ಕಾಣಿಸಿಕೊಳ್ಳದಿಹನೆ 1ಕಂಡು ನಿಲ್ಲಿಸಲೊಂದು ಕಾಲಲಿ ನಿಲುವನೆ |ಕೊಂಡ ಸಾಲಕೆ ಕೊಡಲಿ ಪಿಡಿದು ನಿಲ್ಲುವನೆ ||ಉಂಡರಾಣಿಯೆಂದು ಉಪವಾಸವಿರುವನೆ |ಬಂಡನಂದದಿ ಠಕ್ಕುಟೌಳಿ ನಡಿಸುವನೆ 2ಕೆಟ್ಟ ಬಯಲುಲಜ್ಜೆಹೇವ ತೊರೆಯುವನೆ |ಕೊಟ್ಟು ಪೋಗೆನ್ನಲು ಕಲಿಯು ಆಗುವನೆ ||ಸೃಷ್ಟಿಗೊಡೆಯ ಶ್ರೀರಂಗಪಟ್ಟಣದಪುರಂದರ |ವಿಠಲೇಶನು ನಮ್ಮ ಪಶ್ಚಿಮರಂಗನಾಥನು 3
--------------
ಪುರಂದರದಾಸರು
ಕೋಲೆಂದು ಪಾಡಿರೆಕೋಮಲೆಯರೆಲ್ಲಗೋಪಾಲರಾಯನಮಡದಿಯರುಕೋಲಪ.ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
--------------
ಗಲಗಲಿಅವ್ವನವರು
ಗುರುವಿನ ಮರೆಯಾದಿರಮ್ಮ ಪಅಂಕಿತವನೆ ಇತ್ತಸಿರಿ ಗುರುವಿನ ನೀನುಮನದೊಳು ನೆನೆಯಬÉೀಕಮ್ಮ ತಂಗಿ ಅ.ಪಗುರುವಿನ ಮರೆತರೆ ನಿನಗೆ ಥರಥರ ನರಕಥರಥರನರಕವ ಅನುಭವಿಸಬೇಕಮ್ಮ ತಂಗೀ 1ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನುಗುರುವಿನದ್ವಾರಾ ನೀ ತಿಳಿ ಮಂಗಳಾಂಗಿ 2ಗುರುವೆ ತಂದೆಯು ಬಂಧು ಬಳಗಾವೆಂದು ಅಕ್ಕರೆಯಿಂದ ನೀ ನೆನೆಯಬೇಕಮ್ಮಾ 3ಗುರುವಿನ ಸೇವೆಯ ಮಾಡುತ್ತ ಗುರುಗಳಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5
--------------
ತಂದೆ ಮುದ್ದುಮೋಹನ ವಿಠಲರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು
ಚಿಂತೆ ಯಾತಕೋ | ಮನವೇ |ಶಾಂತನಾಗಿರೋ ದಿನವೇ ಶಾಂತನಾಗಿರೋಕಂತುಪಿತನ ಧ್ಯಾನಮಾಡುಮುಂತೆಸುಖವ ತೋರಿ ಕೊಡುವ ಪವಿಕ್ರಮದ ರಥದಿ ಭಕ್ತ- |ನಕ್ಕರೆಯ ಸಲಿಸಲೆಂದು |ಚಕ್ರವಿನುತನಾಗಿ ಕುಳಿತು |ಶಕ್ರಸುತನಕಾಯ್ದುದರಿತು 1ಬಾಲನು ಪ್ರಹ್ಲಾದ ತನ್ನ |ಪಾಲಿಸೆಂದು ಹರಿಯ ಧ್ಯಾನ |ಲೀಲೆಯಿಂದ ಮಾಡುತಿರಲು |ಶ್ರೀಲಲಾಮ ಕಾಯ್ದ ಕೇಳು 2ಇಂದ್ರಸುತನ ಸುತಭಿಮನ್ಯು |ಅಂದು ಚಕ್ರಬಿಂಬವನ್ನು |ಬಂದು ಮುರಿದು ಕಾದುತಿರೆಗೊೀವಿಂದ ಮುನಿದರಳಿದ ಬೇರೆ 3
--------------
ಗೋವಿಂದದಾಸ
ಚಿತ್ತೈಸಿದ ವ್ಯಾಸರಾಯ |ಚಿತ್ತಜನಯ್ಯನ ಬಳಿಗೆ ಪ.ಮುತ್ತಿ ಮುತ್ತೈದೆಯರೆಲ್ಲಎತ್ತೆ ರತುನದಾರತಿಯ ಅಪಹೇಮಪಿಡಿಗಳುಳ್ಳಂತಹ |ಚಾಮರಂಗಳನು ಪಿಡಿದು ||ಕಾಮಿನಿ ಮಣಿಯರು ಕೆಲವರು |ಸ್ವಾಮಿಯೆಂದು ಬೀಸುತಿರೆ 1ಹಾಟಕದ ಬೆತ್ತನೂರು |ಸಾಟಿಯಿಲ್ಲದಲೆ ಪಿಡಿದು ||ನೀಟಾದ ಓಲಗದವರ |ಕೂಟಗಳ ಮಧ್ಯದಲಿ 2ಸಾಧುವಿಪ್ರಜನಂಗಳು |ವೇಧಘೋಷ ಮಾಡುತಿರೆ ||ಮೋದದಿಂದ ಗೋವಿಂದನ |ಸಾಧನ ಮಾರ್ಗವ ಪಿಡಿದು 3ಭೇರಿ ತುತ್ತೂರಿ ಮೃದಂಗ |ಮೌರಿ ಚಾರುವೇದ್ಯಂಗಳು ||ಬಾರಿಬಾರಿಗೆ ಹೊಡೆಯೆ |ನಾರದರು ತಾ ಕೂಡಿಯೆ | 4ಅರವಿಂದಾಸನನಯ್ಯ |ಪುರಂದರವಿಠಲನು||ಸಿರಿಸಹಿತದಿ ಬಂದು |ಕರಪಿಡಿದೆತ್ತಿದ್ದು ಕಂಡೆ 5
--------------
ಪುರಂದರದಾಸರು
ಚೂರ್ಣಿಕೆಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾಕಾಳಿಯ ದಮನಾ ಭುವನತ್ರಯಾಕ್ರಮಣಪದ್ಮಾಲಯಾ ರಮಣ 1ಧನದಮಾತಿರಲಿ ಗೋಧನದ ಮಾತಿರಲಿಭೂಧನದಮಾತಿರಲಿ ಶೌರೀಧನವೆಲ್ಲವೂ ಕರ್ಮವನು ಬೆನ್ಹಿಡಿದುಬಹದೆನುತಾಡುವರೊ ಮುರಾರಿತನುವು ನಿನ್ನಯ ಸೇವೆಯನು ಮಾಡುತಿರಲಿಕಂಸಾರಿಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿಈ ಕೃಪೆಯಭೂರೀ ದುರ್ಜನವಿದಾರೀಸುಜನೋಪಕಾರೀ ಗಿರಿನಾಥ ಧಾರೀಪಾಪಹಾರಿದಿತಿಜಾರಿನಿರ್ವಿಕಾರಿ ಉದಾರಿ2ನಾಕದೊಳಗಿರಲಿ ಭೂಲೋಕದೊಳಗಿರಲಿಅಧೋಲೋಕದೊಳಗಿರಲಿ ನಾನೂಶ್ರೀಕಾಂತ ನಿನಗೆ ಬೇಕಾದವನೆನುತ್ತಸಾಕಬೇಕೆನ್ನ ನೀನೂ ಭಕ್ತಜನಕಾಮಧೇನುಹೇಳಬೇಕಾದುದಿನ್ನೇನು 3ಬಿದ್ದಿರುವೆನೈ ರಜೋಗುಣದಿಒದ್ಯಾಡುತಿಹೆನೊ ಸಂಕಟದಿಇದ್ದು ಫಲವೇನೊ ಈ ಭವದಿಉದ್ಧರಿಸು ಕೃಪಾಜಲಧಿ 4ಬದ್ಧನಾನಯ್ಯ ಈ ಜಗದಿಶುದ್ಧಬುದ್ಧಿಯ ನೀಯೊ ಮುದದಿಕೃದ್ಧನಾಗದಿರೆನ್ನ ದುಷ್ಕøತದಿಎದ್ದು ಬಾರೆನ್ನಡಿಗೆ ದಯದಿಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ 5
--------------
ತಂದೆ ಮುದ್ದುಮೋಹನ ವಿಠಲರು
ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |ಇಂಗಿತಜÕರು ಕೇಳ್ವುದು ಉದಾಶನವ ಮಾಡದಲೆ ಪಧಾತ ಚೈತ್ರಕೆ ಆರ್ಯಮಾಯೆಂಬಾತ ವೈಶಾಖಕೆ ಸುಜೇಷ್ಠಕೆ |ನಾಥನೆನಿಸುವಮಿತ್ರಆಷಾಢಕ್ಕೆ ಬಹ ವರುಣ ||ಖ್ಯಾತನಾಗಿಹ ಶ್ರಾವಣಕೆಪುರುಹೂತಭಾದ್ರಪದಕೆ ವಿವಸ್ವಾನೆ |ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ 1ಹರಿದಿನಪ ಕಾರ್ತೀಕ ಮಾಸದಿ |ಇರುತಿಹನು ಮಾರ್ಗಶಿರದಿಸವಿತೃ|ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ||ಸುರನದಿಯೆ ಮೊದಲಾಗಿಹ ಐ |ವರಿಗೆ ಸಮಪರ್ಜನ್ಯ ಫಾಲ್ಗುಣ |ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ 2ಮಾಡುತಿಹ ಧನ್ಯರಿಗೆ ಪಾಪಗ |ಳೋಡಿ ಸುತ ದಯದಿಂದ ಯೇನೇನೆ |ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ||ಮಾಡುವನು ಸಂರಕ್ಷಣೆಯ ಒಡ | ನಾಡುವನುಬಿಡನೊಂದರೆಕ್ಷಣ |ಈಡುಇಲ್ಲದ ಮಹಿಮಶ್ರೀ ಪ್ರಾಣೇಶ ವಿಠಲನು 3
--------------
ಪ್ರಾಣೇಶದಾಸರು
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆ ಪ.ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-ರ್ತಾಂಡಮಂಡಲಗ ಶುಂಡಾಲವರದ ಅ.ಪ.ಕ್ಷೇಮದಿ ಶ್ರೀಹರಿನಾಮವ ವರ್ಣಿಸೆನೇಮಾನುಷ್ಠಾನದೊಳಿರಲುನಾ ಮಾಡಿದ ನಾನಾವಿಧ ಪಾಪವತಾಮಸಗೊಳಿಸುವ ಕಾಮಕ್ರೋಧಗಳಿಂ 1ಶಿಷ್ಟಾಚಾರದೊಳಿಷ್ಟನಾಗಿಪರಮೇಷ್ಠಿಜನಕ ಜಯ ಜಯವೆನಲುಭ್ರಷ್ಟಾಲೋಚನೆ ಪುಟ್ಟಿಸಿ ಪಾಪದಬಟ್ಟಿಯ ಹೊದ್ದಿಪ ದುಷ್ಟಸಂಗದಿಂ 2ನಾರಾಯಣ ನರಹರಿಯೆನ್ನುವ ವ್ಯಾ-ಪಾರವ ನಾ ಮಾಡುತ್ತಿರಲುಆರೋಹಣಾವರೋಹಣ ನಾದವಿ-ಕಾರಗೊಳಿಪ ಶಾರೀರಪ್ರಕೃತಿಯಿಂ 3ಆರ್ಕಾರಣ ರಿಪುಗಳಿಗೈ ಸರ್ವ ದೇ-ವರ್ಕಳ ಮಸ್ತಕಮಣಿ ನೀನೈತರ್ಕಾಗಮ್ಯ ಲಕ್ಷ್ಮೀನಾರಾಯಣಅರ್ಕಾಮಿತಪ್ರಭ ಕಾರ್ಕಳಪುರವರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.ಹೃಯಾಂಗಣದಿ ಸದನವ ಮಾಡುತವಿಧವಿಧ ನವರಸದುದಯದ ತನಕ 1ಭೃಂಗಕುಂತಳೆ ಕೃಪಾಪಾಂಗೆಬ್ರಹ್ಮಾಣಿಕು-ರಂಗನಯನೆ ಶ್ರೀರಂಗಭಕ್ತಳೆ 2ಭೂರಿಶಾಸ್ತ್ರವಿಚಾರವ ಪಾಲಿಸೆಧೀರ ಲಕ್ಷ್ಮೀನಾರಾಯಣನ ಸೊಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಬುತ್ತಿ ನಿಂಬೆಲೆಯಾಗಿನೂಟ ಪರಲೋಕ ಸುಖಸಾರವೆಂಬೋದೆ ನಿಜ ಭಕುತಿನ್ಯಾಯವಿಲ್ಲದೆ ನಿನ್ನಕಾಯಪೋಷಣೆಂಬೋದುದಣಿಸಿ ತನ್ನ ದೇಹ ಧನವ ಕೂಡಿಸುವುದುಹರಿಯರ್ಪಣವಿಲ್ಲದವಕರ್ಮಮಾಡಲುಪರಪೀಡಕನಾಗಿ ಇದ್ದವನ ಜನ್ಮಆಸೆ ಅರ್ಥದಲ್ಲಿಟ್ಟು ಹರಿಯ ಸೇವಿಸುವಂಥಹಲವು ಸಾಧನಗಳ ಮಾಡುತಲಿದ್ದರೇನುಎಷ್ಟು ಸಾಧನಗಳು ಕೂಡಿದ್ದರೇನಿನ್ನುಗುಣತ್ರಯಕನುಸಾರ ಮಾಡಿದ ಕರ್ಮಗ-ಗುರುಉಪದೇಶವೆಂಬುದೆ ಮಹಾದುರ್ಲಭ
--------------
ಗೋಪಾಲದಾಸರು
ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ
ನಿದ್ರೆಯ ಬಿಟ್ಟೇಳಿದಧಿಮಥಿಸುವೇಳಿ ಬಲಭದ್ರ ಬಾಲಕೃಷ್ಣರುಲುಹು ಕೇಳಬರುತಿದೆ ಗಡಾ ಪ.ಗೊಲ್ಲರೆಳೆಯರ ಕೂಡಿ ಗೋಪಿಯ ಕುಮಾರರೀಗೆಚೆಲ್ಲಿಯಾಡಿ ಸೂರೆ ಮಾಡುತಾರೆ ಮೊಸರಚೆಲ್ಲೆಗಂಗಳೆಯರೊಳು ಸರಸವಾಡುತಲಿಹರೆಮೆಲ್ಲಗೆ ಸಪ್ಪಳಿಲ್ಲದೆ ಮನೆಯ ಪೊಗುವರಮ್ಮ 1ಕೇರಿ ಕೇರಿಯೊಳು ಹುಯ್ಯಲಿಡುತ ಬಂದರದಕೊಚೀರುತೈದಾರೆ ಬೆನ್ನಟ್ಟಿ ನಾರಿಯರಕೊಆರಿಗೆ ವಶವಾಗರು ದೂರುತಾರೆ ಬಾಲೆಯರುಧೀರ ಚೋರರಲ್ಲುದಾರ ಗೋರಸ ಉಣ್ಣುತಾರವ್ವ 2ಪೊಸಬೆಣ್ಣೆಯ ಕಂಡರೆ ಬಿಡರು ನಮ್ಮ ದೇವರಮೀಸಲಂಜಿಕೆಯಿಲ್ಲದುರುಳಮಕ್ಕಳಿಗೆಶಿಶುಗಳಟ್ಟುಳಿಯಾಗದ ಮುನ್ನೆಚ್ಚರವಮ್ಮಪ್ರಸನ್ನವೆಂಕಟಕೃಷ್ಣ ಬರುವ ನೋಡಿರಮ್ಮ 3
--------------
ಪ್ರಸನ್ನವೆಂಕಟದಾಸರು