ಒಟ್ಟು 11458 ಕಡೆಗಳಲ್ಲಿ , 137 ದಾಸರು , 6242 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತನ ಪಾಡುವೆನನವರತ |ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪಆವಾತನ ಕೀರ್ತಿಯನುಪರೀಕ್ಷಿತ ಕೇಳೆ |ಪಾವನನಾದನು ಮೂಜಗವರಿಯೆ ||ಭಾವಶುದ್ಧಿಯಲಿ ಶುಕನಾರನು ಪೊಗಳುವ |ಆವಗಂ ಪ್ರಹ್ಲಾದನಾದವನ ನೆನೆವನಯ್ಯ 1ಶಿಲೆಯ ಬಾಲೆಯ ಮಾಡಿದ ಪಾದವಾರದು |ನಳಿನ ಸಂಭವನನು ಪೆತ್ತವನಾರು ||ಕಲಿಯುಗದ ಮನುಜರಿಗೆ ಆರನಾಮವುಗತಿ |ಇಳೆಯ ಭಾರವನಿಳುಹಿ ಸಲಹಿದರಾರಯ್ಯ 2ದ್ರುಪದನ ಸುತೆಯ ಮಾನರಕ್ಷಕನಾರು |ನೃಪಧರ್ಮನಿಗೆ ಸಂರಕ್ಷಕನಾರು |ಕೃಪೆಯಿಂದ ವಿದುರನ ಮನೆಯಲುಂಡವನಾರು |ಆಪತ್ಕಾಲದಿ ಗಜವ ಸಲಹಿದರಾರಯ್ಯ 3ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |ರಥವ ಪಿಡಿದು ನಡೆಸಿದವನಾರೊ ||ಪೃಥಿವಿಯೆಲ್ಲವಬಲಿ ಆರಿಗೊಪ್ಪಿಸಿದನು |ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ 4ಸಾಗರನ ಮಗಳಿಗೆ ಆರ ನಾಮವೆಗತಿ |ಯೋಗದಿ ನಾರದನಾರ ಭಜಿಪನಯ್ಯ ||ರಾಗರಹಿತ ಹನುಮಂತನೊಡೆಯನಾರು |ಭಾಗವತರ ಪ್ರಿಯ ಪುರಂದರವಿಠಲ 5
--------------
ಪುರಂದರದಾಸರು
ಆದದ್ದೆಲ್ಲ ಒಳತೇ ಆಯಿತು ನಮ್ಮ |ಶ್ರೀಧರನ ಸೇವೆಯ ಮಾಡಲು | ----- ಪಸಾಧನ ಸಂಪತ್ತಾಯಿತು ---------- ಅ.ಪದಂಡಿಗೆ ಬೆತ್ತ ಹಿಡಿಯುವುದಕ್ಕೆ |ಮಂಡೆತಗ್ಗಿಸಿ ನಾಚುತಲಿದ್ದೆ ||ಹೆಂಡತಿ ಸಂತತಿ ಸಾವಿರವಾಗಲಿ |ದಂಡಿಗೆ ಬೆತ್ತ ಹಿಡಿಸಿದಳಯ್ಯ 1ಗೋಪಾಳ ಬುಟ್ಟಿ ಹಿಡಿಯುವುದಕ್ಕೆ |ಭೂಪತಿಯಂತೆ ನಾಚುತಲಿದ್ದೆ ||ಆ ಪತ್ನಿಯು ತಾ ಪ್ರೀತಿಯಿಂದಲಿ |ಗೋಪಾಳ ಬುಟ್ಟಿಯ ಹಿಡಿಸಿದಳಯ್ಯ 2ತುಳಸಿಮಾಲೆಯ ಹಾಕುವುದಕ್ಕೆ |ಅಲಸಿಕೊಂಡು ನಡೆಯುತಲಿದ್ದೆ ||ಜಲಜಾಕ್ಷಿಯು ಶ್ರೀ ಪುರಂದರವಿಠಲ |ತುಳಸಿ | ಮಾಲೆಯ ಹಾಕಿಸಿದಳು 3
--------------
ಪುರಂದರದಾಸರು
ಆರ ಬಾಲಕನೆ ಜಾರನಿವನಾರ ಬಾಲಕನೆ ಪ.ಗುಂಡಿಗೆ ಬೆಣ್ಣೆ ಕದ್ದುಂಡಸಿಯರ ಕುಚಪುಂಡರೀಕವಿಡಿದು ಭಂಡು ಮಾಡುತಲಿಹ 1ನಿದ್ದೆಯ ಕಾಲಕೆ ಸದ್ದಿಲ್ಲದೆ ಬಂದುಗದ್ದಮುಂಡ್ಯಾಡಪ್ಪಿ ಮುದ್ದು ನೀಡುವ ನೋಡೆ2ಅರ್ತಿಲಿ ಬಾಲನ್ನೆತ್ತಿಕೊಂಡರೇನಮ್ಮಅತ್ತೆ ಮಾವನ ಮುಂದೆ ಬತ್ತಲೆ ಮಾಡುವ 3ಬಲು ಮೋಹ ಬರುತಿರೆ ಎಳೆಯನ ಕಾಣುತಅಳುಕದೆಮ್ಮುಡಿಯೇರಿ ಕಳೆವಕಂಚುಕಇವ4ಹುಸಿಯೇ ಅಳಲು ಅವಚಿ ರಂಬಿಸಿದ ಮೇಲೆಪ್ರಸನ್ವೆಂಕಟ ಕೃಷ್ಣ ನಸುನಗು ನಗುತಾನೆ 5
--------------
ಪ್ರಸನ್ನವೆಂಕಟದಾಸರು
ಆರ ಹಾರೈಸಿದರೇನುಂಟು - ಉರಿನೀರ ಕಡೆದರಲ್ಲೇನುಂಟು ? ಪ.ಅಂತರವರಿಯದ ಅಧಮನ ಬಾಗಿಲನಿಂತು ಕಾಯ್ದರಲ್ಲೇನುಂಟುಎಂತಾದರಲ್ಲಿಯ ತುಪ್ಪ ಸಾಧಿಸಿ ಯಮನಂತೆ ಕೊಲುವರಲ್ಲೇನುಂಟು ? 1ಕೊಟ್ಟೆ - ಕೊಟ್ಟೆನೆಂದು ಕೊಡದುಪಚಾರದಭ್ರಷ್ಟನ ಸೇರಿದರೇನುಂಟುಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕನಿಷ್ಟನ ಸೇರಿದರೇನುಂಟು ? 2ಪಿಸುಣನ ಕುದುರೆಯ ಮುಂದೋಡಲು ಬಲುಬಿಸಿಲಿನ ಹಣ್ಣಲ್ಲದೇನುಂಟುವಸುಧೆಯೊಳಗೆ ಪುರಂದರವಿಠಲನ ಭಜಿಸಲು ಮುಕ್ತಿಸಾಧನವುಂಟು 3
--------------
ಪುರಂದರದಾಸರು
ಆರ ಹಾರೈಸಿದರೇನುಂಟು - ಉರಿನೀರ ಕಡೆದರಲ್ಲೇನುಂಟು ? ಪ.ಅಂತರವರಿಯದ ಅಧಮನ ಬಾಗಿಲನಿಂತು ಕಾಯ್ದರಲ್ಲೇನುಂಟುಎಂತಾದರಲ್ಲಿಯ ತುಪ್ಪ ಸಾಧಿಸಿ ಯಮನಂತೆ ಕೊಲುವರಲ್ಲೇನುಂಟು ? 1ಕೊಟ್ಟೆ - ಕೊಟ್ಟೆನೆಂದು ಕೊಡದುಪಚಾರದಭ್ರಷ್ಟನ ಸೇರಿದರೇನುಂಟುಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕನಿಷ್ಟನ ಸೇರಿದರೇನುಂಟು ? 2ಪಿಸುಣನ ಕುದುರೆಯ ಮುಂದೋಡಲು ಬಲುಬಿಸಿಲಿನ ಹಣ್ಣಲ್ಲದೇನುಂಟುವಸುಧೆಯೊಳಗೆ ಪುರಂದರವಿಠಲನ ಭಜಿಸಲು ಮುಕ್ತಿಸಾಧನವುಂಟು 3
--------------
ಪುರಂದರದಾಸರು
ಆರತಿಯ ಬೆಳಗಿರೆ ಪಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆಬಿರುದಿನ ಶಂಖವ ಪಿಡಿದ ವಿಠಲಗೆ ||ಸರಸಿಜ ಸಂಭವಸನ್ನುತ ವಿಠಲಗೆನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ 1ದಶರಥರಾಯನ ಉದರದಿ ವಿಠಲಶಿಶುವಾಗಿ ಜನಿಸಿದ ಶ್ರೀರಾಮ ವಿಠಲಪಶುಪತಿ ಗೋಪಿಯ ಕಂದನೆ ವಿಠಲಅಸುರೆ ಪೂತನಿಯ ಕೊಂದ ವಿಠಲಗೆ 2ಕಂಡಿರ ಬೊಬ್ಬುರ ವೆÉಂಕಟವಿಠಲನಅಂಡಜವಾಹನ ಅಹುದೋ ನೀ ವಿಠಲ ||ಪಾಂಡುರಂಗ ಕ್ಷೇತ್ರ ಪಾವನ ವಿಠಲಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಆರಿಗೂ ಕೊಟ್ಟು ನಾನ್ಹುಟ್ಟಿಲ್ಲ ಸ್ವಾಮಿಹಾರೈಸಲೆಂತೀಯ್ವಿ ಭಕ್ತಜನ ಪ್ರೇಮಿ ಪವಸನಕಾಣದೆ ಪೋಗಿ ದೆಸೆ ಬತ್ತಲೆ ಬಂದುಬಸವಳಿದು ಬಾಯಾರಿ ದೆಸೆಗೆಟ್ಟು ಬೇಡುವರಕುಶಲಂಗಳರಿಯದೆ ಹಾಸ್ಯಗೈಯುತ ನಕ್ಕೆವಸನನಾಂ ಬಯಸಲೆಂತೊಸೆದು ನೀಂ ಕೊಡುವಿ1ಧನವಂತನಾಗಿ ನಾ ಧನವಿಲ್ಲದವರಿಗೆಶುನಕನಂದದಿ ಕೂಗುತಣಕವಾಡಿದೆನುಕನಸು ಮನಸಿನಲಿ ವಿನುತಧರ್ಮವನರಿಯೆರಿಣಕಳೆದು ಹರಿಯೆನೆ ನಿನಗೆ ಕರುಣೆಂತು 2ಮೂರುದಿನವಾಯಿತು ಘೋರಬಡುವೆನು ತುಸು ಆಹಾರ ಹಾಣದೆ ಕೃಪೆ ದಾರಿಗೆ ಬರದೆನುತಭೋರಿಟ್ಟು ಕೂಗ್ವುದ ಸಾರಿ ಕೇಳುತ ನಾನುದೂರ್ಹೋದೆ ಎನ್ನ ತಪ್ಪು ಕ್ಷಮಿಸು ಶ್ರೀರಾಮ 3
--------------
ರಾಮದಾಸರು
ಆರಿತ್ತರಭವನೇ ಈ ಮನವನೆನಗೆವಾರಿಜೋದ್ಭವಪಿತನೆ ನೀನಲ್ಲದೆ ಬೇರೆ ಪಪರಮಪಾವನ ನಿನ್ನಪರಮಪರತರ ಚರಿತೆಸ್ಥಿರವೆಂದು ನೆರೆನಂಬಿ ಅರಿವ ಬುದ್ಧಿಯನುಮೆರೆವ ನಿಮ್ಮಯ ಬಿರುದ ಹರುಷದಿಂ ಸ್ಮರಿಸ್ಮರಿಸಿಹಿರಿ ಹಿರಿ ಹಿಗ್ಗುತ ಬರೆವ ಈಕರವ1ನಿನ್ನ ದಾಸರಪಾದಭಿನ್ನವಿಲ್ಲದೆ ನೋಡಿಉನ್ನತ ಸುಖಪಡೆವ ಧನ್ಯದ್ವಯನಯನಮುನ್ನ ನಾ ಮಾಡಿದ ಪುಣ್ಯಫಲವೆಂದರಿದುನಿನ್ನ ಚರಣಕೆ ನಮಿಪ ಮಹಪುಣ್ಯಶಿರವ 2ಗಾಢಮಹಿಮನೆ ನಿಮ್ಮ ಈಡಿಲ್ಲದ ಲೀಲೆರೂಢಿಯೊಳಧಿಕೆಂದು ಆಡ್ಯಾಡಿ ಕುಣಿದುಕಾಡಿ ಬೇಡುವ ಮಹಗಾಢ ನಿಮ್ಮಡಿಭಕ್ತಿನೀಡಿದವರೆನಗಾರುನೋಡುಶ್ರೀರಾಮ3
--------------
ರಾಮದಾಸರು
ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪದುರುಳಕೌರವನಂದು ದ್ರುಪದಜೆಯ ಸೀರೆಯನುಕರದಿಂದ ಸೆಳೆಯುತಿರೆ ಪತಿಗಳೆಲ್ಲ ||ಗರಹೊಯ್ದರಂತಿದ್ದರಲ್ಲದೇ ನರಹರಿಯೆಕರುಣದಿಂ ನೀನಲ್ಲದಾರು ಕಾಯ್ದವರು 1ಅಂದು ನೆಗಳಿನ ಬಾಧೆಯಿಂದ ಗಜರಾಜನನುತಂದೆ ನೀ ವೈಕುಂಠದಿಂದ ಬಂದು ||ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2ಅಜಮಿಳನು ಕುಲಗೆಟ್ಟು ಕಾಲದೂತರು ಬರಲುನಿಜಸುತನ ಕರೆಯಲವನತಿ ವೇಗದಿ ||ತ್ರಿಜಗದೊಡೆಯನೆಪುರಂದರವಿಠಲ ಕರುಣದಲಿನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3
--------------
ಪುರಂದರದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆ ಭಜಿಸುವ ಪುರಂದರವಿಠಲನಒಲುಮೆಯುಳ್ಳ ಹರಿದಾಸರಿಗೆ 3
--------------
ಪುರಂದರದಾಸರು
ಆರು ಒಲಿದರೇನು ನಮಗಿನ್ನಾರು ಮುನಿದರೇನುಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆಪ.ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನುಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನುಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನುಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನುಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನುವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನುಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನುಮಾಣದೆಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ3
--------------
ಪುರಂದರದಾಸರು
ಆರು ಬದುಕಿದರಯ್ಯಹರಿನಿನ್ನ ನಂಬಿತೋರೋ ಈ ಜಗದೋಳಗೆ ಒಬ್ಬರನು ಕಾಣೆ ಪಕಲಹಬಾರದ ಹಾಗೆ ಕರ್ಣನನು ನೀ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆ ||ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆಮೊಲೆಯನುಣಿಸಲು ಬಂದ ಪೂತನಿಯ ಕೊಂದೆ 1ಕರಪತ್ರದಿಂದ ತಾಮ್ರಧ್ವಜನ ತಂದೆಯನುಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ||ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ಬೆರೆದೆ 2ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆಗರುಡವಾಹನ ನಿನ್ನ ಚರಿಯವರಿಯೆ ||ದೊರೆಪುರಂದರವಿಠಲ ನಿನ್ನನ್ನು ನಂಬಿದರೆತಿರುಪೆಯಾ ಹುಟ್ಟಲೊಲ್ಲದು ಕೇಳೊ ಹರಿಯೆ 3
--------------
ಪುರಂದರದಾಸರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಆರು ಹಿತವರು ಮನವೆ ಮೂರು ಮಂದಿಗಳೊಳಗೆನಾರಿಯೋ ಧಾರಿಣೀಯೊಧನದಬಲು ಸಿರಿಯೊ ?ಪ.ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದುತನ್ನ ಮನೆಯಲ್ಲಿ ಯಜಮಾನಿಯೆನಿಸಿಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯುಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ 1ಮುನ್ನ ಶತಕೋಟಿ ರಾಯರುಗಳಾಳಿದ ನೆಲನತನ್ನದೆಂದು ಶಿಲೆಯ ಶಾಸನವ ಬರೆಸಿಬಿನ್ನಾಣದಿ ಮನೆಗಟ್ಟಿ ಕೋಟೆ - ಕೊತ್ತಳಿವಿಕ್ಕಿಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು 2ಉದ್ಯೋಗ - ವ್ಯವಹಾರ ನೃಪಸೇವೆ ಮೊದಲಾಗಿಕ್ಷುದ್ರತನ ಕಳವು ಪರದ್ರೋಹದಿಂದಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯಸದ್ಯದಲಿ ಆರುಂಬವರು ಹೇಳು ಮನುಜಾ 3ಶೋಕಗೈದಳುವವರುಸತಿ - ಸುತರು ಭಾಂದವರುಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳುಸಾಕಾರವಾಗಿ ಸಂಗಡ ಬಾಹುವಲ್ಲದೇ ? 4ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡಸ್ವಸ್ಥದಲಿ ನೆನೆಕಾಣೊ ಪರಮಾತ್ಮನಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ 5
--------------
ಪುರಂದರದಾಸರು
ಆರೇ ರಂಗನ ಆರೇ ಕೃಷ್ಣನಆರೇ ರಂಗನ ಕರೆಯಬಂದವರು ಪಗೋಪಾಲಕೃಷ್ಣನ ಪಾಪವಿನಾಶನ |ಈ ಪರಿಯಿಂದಲಿ ಕರೆಯ ಬಂದವರು 1ವೇಣುವಿನೋದನ ಪ್ರಾಣಪ್ರಿಯನ |ಜಾಣೆಯರಸನ ಕರೆಯ ಬಂದವರು 2ಕರಿರಾಜವರದನ ಪರಮಪುರಷನ |ಪುರಂದರವಿಠಲನ ಕರೆಯ ಬಂದವರು 3
--------------
ಪುರಂದರದಾಸರು