ಒಟ್ಟು 2782 ಕಡೆಗಳಲ್ಲಿ , 117 ದಾಸರು , 2136 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯಾ ದೊಡ್ಡವನೈ ಬಲು ಪರೋಪಕಾರಿ | ಪರಿ | ಪರಗತಿಯ ಸಾಧಕರಾಗುವ ಸಹಕಾರಿ | ಬೋಧ ಸುಧೆಯ ಉದಾರಿ | ಯುಕ್ತಿಯ ದೋರುವ ದಾರಿ 1 ಹಲವು ಶಾಸ್ತ್ರದ ಮಾತುಗಳ ಕೇಳಿ ಮುಂಗಾಣದೆ | ತೊಳಲುವ ಮನ ಸಂಶಯವಾ ವಂದು ಮಾತಿನಿಂದೆ | ಕಳೆದನು ದೃಢ ನೆಲೆಗೊಳಿಸಿ ಸ್ವಾನುಭವದಿಂದೆ | ಭವ ತಮ ಮೂಲದಿಂದಲೇ | ಬೆಳಗವ ದೋರುವ ತಂದೇ2 ಮೂಢ ಪಾಮರ ಮಂದಧಿಯನಾನೆಂದರಿಯೆನು | ನೋಡಿ ಕರುಣ ಕಟಾಕ್ಷದಲಿ ಮುಂದಕ ಕರೆದನು | ನೀಡಿ ಅಭಯ ಹಸ್ತವನು ರೂಢಿಯೊಳು ನಂದನೆನಿಸಿದನು | ಮಹಿಪತಿ ತ್ಯಾಜವಿತ್ತನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವೇ ಗುರುವೇ ಗುರು ಗುರುವೇ ಮಹಾಗುರು ಗುರುವೇ ಶ್ರೀ ಗುರುವೇ ಪ ನಿರಂಜನ ನಿಷ್ಕಲಂಕ ಗುರುವೇಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ 1 ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ 2 ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ 3
--------------
ಚಿದಾನಂದ ಅವಧೂತರು
ಗುರುಸಂತತಿಗೆ ನಮೊ ನಮೊ ಶ್ರೀ ಹರಿಶರಣರಿಗೆ ನಮೋ ನಮೋ ಪ ಧರಣೀಸುರರಿಗೆ ನಮೋ ನಮೋ ಅ.ಪ ವಿಜಯರಾಮದಾಸಗುರುವೆ ನಮೋ ನಮ ಭಜಕಜನರಸುರತರುವೆ ನಮೋ ವೃಜಿನ ಕಳೆವ ಭಾಗ್ಯನಿಧಿದಾಸ ನಮೋ ವಂದೇ ಸುಪ್ರೇಮದಾಸ ನಮೋ 1 ತಿರುಮಲಾಖ್ಯದಾಸರಿಗೆ ನಮೋ ನಮ ಗುರುಗೋಪಾಲರಾಯರಿಗೆ ನಮೋ ವರ ಭಾಗಣ ವಿಜಯರಾಯರಿಗೆ ನಮೋ ಪುರಂದರಾಖ್ಯ ಸುರಮುನಿಗೆ ನಮೋ 2 ವ್ಯಾಸಾಭಿಧಮೌನೀಶನಮೋ | ಹರಿ ದಾಸಶ್ರೀಪಾದರಾಯರಿಗೆ ನಮೋ ಭೂಸುರ ಪ್ರಿಯಹನುಮತೇ ನಮೋ ಸೀತೇಶ ಶ್ರೀಗುರುರಾಮ ವಿಠಲ ನಮೋ 3
--------------
ಗುರುರಾಮವಿಠಲ
ಗುರ್ವಂತರ್ಗತ ಗೋಪಾಲ ಪಾಹಿ ಸರ್ವಪಾಲಕ ಶಿರಿಲೋಲ ಪ ಶರ್ವಸುರಗಂಧರ್ವ ಮುನಿಕುಲ Àಸರ್ವಸೇವಿತ ಗರ್ವರಹಿತನೆ ಅ.ಪ ರಾಮಾಕೃಷ್ಣ ವ್ಯಾಸರೂಪದಿಂದಾ ಮಾಮನೋಹರ ಮಾಡೆಕೃಪಾ ಶ್ರೀಮಧ್ವ ಮೊದಲಾದ ಆ ಮಹಾಮುನಿಗಳ ಸ್ತೋಮಸಂತತ ಮಹಾಪ್ರೇಮಮನದಲಿದ್ದು ಭೂಮಿತಳದೊಳಗಖಿಳಜನರಿಗೆ ಕಾಮಿತಾರ್ಥವ ಸಲಿಸಿ ತಾ ನಿ ಸ್ಸೀಮ ಮಹಿಮೆಯ ತೋರಿ ಇವರಿಗೆ ಆ ಮಹತ್ತರ ಕೀರ್ತಿಕೊಡುತಿಹ 1 ಆವಾವಜನುಮಗಳಲ್ಲಿ ಜಗಕೆ ಜೀವನಪ್ರದನಾಗಿ ಇಲ್ಲೀ ಶ್ರೀವರ ಸರ್ವೇಶ ಜೀವೇಶ ಸುರವಂದ್ಯ ದೇವ ನಿನ್ನಯ ಪಾದಸೇವಾವ ಸಲಿಸೆಂದೆ ಕೋವಿದರ ಕುಲಮಣಿಗಳೊಳಗೆ ಭಾವಿಪುದು ಸನ್ಮನವನಿತ್ತು ಗೋವಿದಾಂಪತೆ ಙÁ್ಞನಗಮ್ಯನೆ ಪಾವನಾತ್ಮಕ ಪರಮ ಪಾಲಿಸೋ 2 ದಾತ ಶ್ರೀ ಗುರುಜಗನ್ನಾಥವಿಠಲ ನೀ ಧಾತನಾಂಡಕೆ ಮುಖ್ಯನಾಥಾ ಧಾತಪ್ರಮುಖಸುರವ್ರಾತಸನ್ನುತಪಾದ ಪಾಥೋಜಯುಗಳ ಸಂಭೂತ ರಜೋದಿಂದ ಧೂತಪಾಪನ ಮಾಡುವದು ಅ ದ್ಭೂತ ಙÁ್ಞನ ವಿರಕುತಿ ಸಂಪ ದ್ಪ್ರಾತ ಪಾಲಿಸೊ ಹೇ ಮಹದ್ಭುತ ದಾತ ಎಂಬೆನೊ ನಮೋ ನಮೋ 3
--------------
ಗುರುಜಗನ್ನಾಥದಾಸರು
ಗುಹ ಕಂದರ್ಪಾನ್ವಿತ ಮುನಿವಂದ್ಯ ಪ ಸದಾನತ ಬಂಧು ಶರಜ ನಿತ್ಯಾನಂದ ಅ ಮುಕ್ಕಿ ತಾರಕನನು ಕೊಂದ 1 ಸತಿ ದುರುಳ ಪದ್ಮನು ಪಡೆವೆರಸಿ ಯುದ್ಧಕೆ ಬರೆ | ಶಿರವ ಕತ್ತರಿಸಿದ ಸ್ಕಂದ 2 ನಾಸ ಪಾವಂಜೆಯೊಳ್ನಿಂದ 3
--------------
ಬೆಳ್ಳೆ ದಾಸಪ್ಪಯ್ಯ
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂ ಪ. ಪಾಕಹ ಮದನದಿವಾಕರಪ್ರಮುಖ ದಿ- ವೌಕಸಕೃತ ಜಯಜಯಘೋಷಂ ಅ.ಪ. ಕರ್ಪೂರಕ್ಷೀರಗೌರಾಂಗಂ ಕಲ್ಯಾಣನಿಧಿಂ ನಿಸ್ಸಂಗಂ ದರ್ಪಕದರ್ಪಹರಂ ತಮುದಾರಂ ಸರ್ಪಫಣಾಮಣಿಹಾರಂ ಘೋರಂ 1 ಲಕ್ಷ್ಮೀನಾರಾಯಣಸಖಂ ಸುರಾ- ಧ್ಯಕ್ಷಂ ಶಿವಂ ವಿಗತಶೋಕಂ ದಕ್ಷಾಧ್ವರವಿಧ್ವಂಸನಚತುರಂ ಮೋಕ್ಷಜ್ಞಾನದಂ ಸಮ್ಮೋಹಭಿದಂ2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂಪ. ಪಾಕಹ ಮದನದಿವಾಕರಪ್ರಮುಖ ದಿ- ವೌಕಸಕೃತ ಜಯಜಯಘೋಷಂಅ.ಪ. ಕರ್ಪೂರಕ್ಷೀರಗೌರಾಂಗಂ ಕಲ್ಯಾಣನಿಧಿಂ ನಿಸ್ಸಂಗಂ ದರ್ಪಕದರ್ಪಹರಂ ತಮುದಾರಂ ಸರ್ಪಫಣಾಮಣಿಹಾರಂ ಘೋರಂ1 ಲಕ್ಷ್ಮೀನಾರಾಯಣಸಖಂ ಸುರಾ- ಧ್ಯಕ್ಷಂ ಶಿವಂ ವಿಗತಶೋಕಂ ದಕ್ಷಾಧ್ವರವಿಧ್ವಂಸನಚತುರಂ ಮೋಕ್ಷಜ್ಞಾನದಂ ಸಮ್ಮೋಹಭಿದಂ2
--------------
ತುಪಾಕಿ ವೆಂಕಟರಮಣಾಚಾರ್ಯ
ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ | ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪ ಮಾತ್ರ ನುಡಿಸುವ ಬುದ್ಧಿ ಪೇಳಿ | ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ ಸ್ತೋತ್ರ ಮಾಡಿದರೆ ಯೇನಾಹದೋ1 ಚಿತ್ರಿಕ ಬಲು ವಿವೇಕ ಉಳ್ಳವನೆಂದು ಪಾತ್ರರ ಮುಂದೆ ಕೊಂಡಾಡಿದಂತೆ | ಧಾತ್ರಿಯೊಳಗೆ ನಮ್ಮ ಪುರಂದರದಾಸರ ಸ್ತೋತ್ರ ಮಾಡಿರಯ್ಯ ಸಚಲರಾಗೀ 2 ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ | ನೇತ್ರದಿಂದಲಿ ಹರಿಯ ಸರಿದರುಶನಾ | ರಾತ್ರಿಂಚರೆಯೆಂದು ಪೆಸರುಳ್ಳವು ಕುಮುದ ಮಿತ್ರಗೆ ಸರಿಯೇನು ಉಳದಾದವು 3 ಸ್ತೋತ್ರಾಭರಣವಾದ ದಾಸರ ಶವನಕ್ಕೆ ಅ ನ್ಯತ್ರ ನುಡಿವದು ಧಿಕ್ಕರಿಪದು | ನಿತ್ರಾಣವಾದ ಮನುಜ ಹಿರಿಯರ ವಿತ್ತದಿಂದ ಯಾತ್ರಿ ಮಾಡಿ ಪುಣ್ಯ ಘಳಿಸಿದಂತೆ 4 ಸ್ತೋತ್ರ ಮಿಟಮ್ಯಾಲೆ ಪಂಗ್ತಿ ಹಾಕಿ ಕೊಡಲು ಮಾತ್ರೆಗಳ ನೋಡಿ ಬರದಂತೆ ವೋ | ಶತ್ರು ಸಂಹಾರ ನಮ್ಮ ವಿಜಯವಿಠ್ಠಲನಂಘ್ರಿ ಶತ ಪತ್ರ ಬಲ್ಲವರಿಗೆ ಯಿದೆ ವಿಸ್ತಾರ ನಿರ್ಮಾಣ 5
--------------
ವಿಜಯದಾಸ
ಗೋಪಾಲಕೃಷ್ಣ ಪಾಲಿಸೋ - ತವ ಭವ್ಯವೆನಿಪಶ್ರೀಪಾದಾ ತೋರಿಸೋ ಪ ಭವ ಕೂಪಾರ ಹರಿಸಿಕೈಪಿಡಿದೆನ್ನನು ಕಾಪಾಡುವುದು ಹರೆ ಅ.ಪ. ಸಾರ ಮುರ ವೈರಿ | ನಿಜ ಜನ ಭವಹಾರಿ1 ಭವ ನಾಕೇಶ ವಿನುತ ಶ್ರೀಕರ ಪದ ಪಲ್ಲವನವ | ಲೋಕನ ಕೊಡು ಕರಿವರದ | ಧೃವ ವರದ | ಜಿತ ಖಲ ಕುಲ ಸರ್ವಮದ ||2 ವೇದಾಂತ ವೇದ್ಯಾ - ವೇದ ವೇದ್ಯಾ ವೇದಾತ್ಮಿಕಾರಾಧ್ಯಾ |ಆದಿ ಹರಿಯೇ ಗುರು ಗೋವಿಂದ ವಿಠಲಮೋದ ಪ್ರಮೋದ ಸಂ | ಮೋದವ ನೀಯೋಗೋವಿಂದ | ಮುಕುಂದ | ಮುನಿ ವಂದ್ಯ |ಧೃತ ವ್ರಜಗಿರಿ ಆನಂದ 3
--------------
ಗುರುಗೋವಿಂದವಿಠಲರು
ಗೋಪಾಲದಾಸರು ಕರದಾಗ ಬಾರದೇ ವೈದುಗ ಬಂದು ಬೋಧಿಸಿ ಮಾರ್ಗವ ತೋರಿಸಿ ಹೃದಯದಿ ಪಾದನಿಲ್ಲಿಸಿ ಮಂದನ ಪೋಷಿಸಿ ಭಂಗವ ಬಿಡಿಸುತಾ ಮಂಗಳ ಮೂರುತಿ ನಿನ್ನ ಮಹಿಮೆಗೆಣೆಗಾಣೆ ಧವಳ ಗುಣವಂತ ತಂದೆವರದಗೋಪಾಲವಿಠಲರೇಯನ ದಾಸನೆಂದೆನಿಸದೆಯನ್ನ 1 ವೈರಿ ಬನ್ನ ಭವ ಬನ್ನ ಪಡುತಿರೆ ಕಣ್ಣು ಕಾಣದೆ ಕರುಣವ ಬೀರುತ ಪಾಣಿಯ ಪಿಡಿದು ವೀಣಾವನಿತ್ತು ಗಾನವ ಪೇಳಿ ಗುಣವಂತನೆಂದೆನಿಸಿದೇ ಎನ್ನ ಅಣ್ಣಾ ಅಣ್ಣಾ ಭಾಗಣ್ಣ ಗಜಮುಖ ರೂಪದಿ ಬಂದು ಪಾಲಿಸಿದೈನಿನ್ನಾ ಕರುಣಾರಸಕೆಣೆಯುಂಟೆ ಯೆಣೆಯುಂಟೆ ನಿನ್ನ ದೇನಿಪರೊಳಗಿಟ್ಟುಶಿರಿಯರಮಣ ತಂದೆವರದಗೋಪಾಲನ ತೋರೋ 2 ನೂರಾರು ಸಾವಿರ ನಾರಿಯರೊಡಗೂಡಿ ಬೆಡಗು ಮಾಡೆ ನಾರಿಯಾಗಿ ನಿನ್ನಡಿಗಳ ಪೂಜಿಸಿ ಗರುಡನಂತೆ ನನ್ನ ಹೆಗಲೀನ ಕೂಡಿಸಿಕೊಂಡುತಿರುಗುವೆ ನೀತಿ ಕಪಿಯಂತೆ ನಿನ್ನ ಕಪ್ಪಾದಿ ವಲಿಸುವೆ ಕಮತವ ಮಾಡಿಸಿ ಮರ್ಮವ ಘಾಡಿಸಿ ಶರ್ಮವ ಗೂಡಿಸಿ ಚರ್ಮವ ತೊಡಿಸಿ ಕರ್ಮವ ಕೆಡಿಸಿಮೃಡನೊಡೆಯ ವಂದಿತ ತಂದೆವರದಗೋಪಾಲವಿಠಲನಡಿಗಳ ಧೇನಿಸುವಂತೆ ಮಾಡೋ 3 ಅಂಬರ ಭೋಜನೆ ಕಂಬುಕಂಧರನಿಂದ ಡಿಂಗರಪಾಲಿಪ ಡಿಂಬದಿ ಪೊಳೆಯುವಅಂಬಾರಮಣಸುತ ಭೀಮಾಂತರ್ಯಾಮಿ ತಂದೆವರದಗೋಪಾಲ ವಿಠಲನ ನಿಜ ಕೊಂಡಾ 4 ನಿಗಮ ನಿಧಿ ಕೃಷ್ಣಾಂತರ್ಯಾಮಿ ಲಕುಮಿ ಅರಸತಂದೆವರದಗೋಪಾಲವಿಠಲನ ವಾರಿಜದಲ್ಲಿ ತೋರೋ 5 ಜತೆ :ಆವಾಗ ಬಂದು ನೀ ಕಾವದಿರೇ ಸೇವಕನಾಗಲ್ಯಾಕೋ ಭಾವಜಪಿತ ತಂದೆವರದಗೋಪಾಲವಿಠಲರೇಯನ ದೂತ
--------------
ತಂದೆವರದಗೋಪಾಲವಿಠಲರು
ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಪಿ ಜನಪಾಲ ಪಾವನ ತರಲೀಲ ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ ಶೌರಿ ಪ ವಂದಿತ ಸುರಮುನಿ ವೃಂದ ಭಕುತಜನ ಬಂಧುವಾಗಿರುವ ಗೋವಿಂದ ಗೋಪಾಲದೇವ ಮಂದಹಾಸ ಬಲಿ ಬಂಧನ ಮುರಹರ ಸಿಂಧು ಶಯನ ಗೋಪಿಕಂದ ಮುಕುಂದ 1 ಕಂಸಾರಿ ಕರುಣಾಭ್ದಿ ಶೃಂಗಾರಿ ಸುಜನ ಮನೋರಥ ಸುರತರು ಹಾರ ಹೀರ ಗಂಭೀರ ವೈಯಾರ 2 ಅಂಬುಜ ಭವನುತ ಶಂಬರಾರಿಯಪಿತ ಜಂಭಾರಿ ನಮಿತ ಹೇರಂಬ ಜನಕಪ್ರೀತ ಕಂದರ ಕಮಳಾಂಬಕ ರಮಣ 3 ರಾಗಿ ಜನರ ಭವರೋಗ ಹರಣಹರಿ ನಗಧರ ಸಗರ ವಂಶೋದ್ಧಾರ ಖಗವರ ಗಮನ ಸುಗುಣ ಗಂಭೀರ 4 ದುರಿತ ಸಂಹಾರಿ ಕರದಿ ಚಕ್ರಧಾರಿ ಸುರರ ಸಿರಿ ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ. ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1 ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2 ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3 ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4 ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗೋಪೀಶ ವಿಠ್ಠಲನೆ | ನೀ ಪಾಲಿಸಿವಳಾ ಪ ನೀ ಪೊರೆಯದೇ ಇನ್ನು | ಕಾಪಾಡು ನರಹರಿಯೆಗೋಪಗೋಪಿಯರೊಡೆಯ | ಗೋಪಾಲ ಕೃಷ್ಣಾ ಅ.ಪ. ಹೇ ದಯಾಂಬುಧಿ ಹರಿಯೆ | ಭೇದ ಪಂಚಕ ಜ್ಞಾನಮೋದದಲಿ ಕರುಣಿಸುತ | ಸಾಧನವ ಗೈಸೀಶ್ರೀಧರಾ ದುರ್ಗೇಶ | ಕಾದುಕೋ ಈ ಶಿಶುವಸಾಧುವಂದಿತ ಹರಿಯೆ | ಸಾಧ್ಯ ನೀನಲ್ಲೇ 1 ಭೋಗಿ ಭಾಗವತ ಪ್ರೀಯಾ 2 ಹರಿಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆನಿರತ ಪಾಲಿಸುತಿವಳ | ಪೊರೆಯಬೇಕೊ |ಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಕರುಣಿಸೆನೆ ಬಿನ್ನಪವ | ನಿರತ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಗೋವಿಂದ ಗೋಪಾಲ ಗೋಪಿಕಾವಲ್ಲಭÉೂೀವರ್ಧನೋದ್ಧಾರಕಪ. ಶೌರಿ ಹರಿವಾರಿಜೋದ್ಭವವಂದ್ಯ ವಂದಿತ ಚರಿತ್ರಪುರಮರ್ದನಮಿತ್ರ ಪರಮಪವಿತ್ರ 1 ಗರುಡತುರಗಗಮನ ಕಲ್ಯಾಣಗುಣಗಣನಿರುಪಮಲಾವಣ್ಯನಿರ್ಮಲಶರಣ್ಯ ಪರಮಮುನಿವರೇಣ್ಯಭಕ್ತಲೋಕಕಾರುಣ್ಯ 2 ಇನಶಶಿಲೋಚನ ಇಂದುನಿಭಾನನಎನುತ ಕುಂಡಲನಾದನಕನಕಮಯವಾಸನ ಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ 3
--------------
ವಾದಿರಾಜ