ಒಟ್ಟು 648 ಕಡೆಗಳಲ್ಲಿ , 80 ದಾಸರು , 484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆಗತಿಸಿರಿವಿರಿಂಚಿ ಶಿವರಿಗೆನರ -|ಹರಿಯೆಗತಿಸುರಪತಿ ಸುರರಿಗೆಪರುಕುಮಣಿದೇವಿಯ ಶಿಶುಪಾಲಗೀವೆನೆಂದು |ರುಕುಮ ಸಂಭ್ರಮಿಸಲು ಕೃಷ್ಣ ಬಂದು ||ಸಕಲ ರಾಯರುಗಳು ಸನ್ನದ್ಧರಾಗಿರೆ |ರುಕುಮಿಣಿದೇವಿಯ ವರಿಸಿ ಆಳಿದನಾಗಿ 1ಹಯ್ಯಾಸನೆಂಬವ ವೇದವ ಕದ್ದೊಯ್ಯೆ |ಹಯಗ್ರೀವನಾಗಿ ಹರಿಯವನ |ಕಾಯವ ಖಂಡಿಸಿ ಅಜಗೆ ವೇದವನಿತ್ತು |ಕಾಯ್ದ ಕರುಣಿ ಕಮಲಾಕ್ಷನೆ ದೈವವೆಂದು 2ಭಸುಮಾಸುರನಿಗೊಂದಸಮದ ವರವಿತ್ತು |ತ್ರಿಸೂಲಧರನು ಓಡಿ ಬಳಲುತಿರೆ |ಬಿಸಜಸಂಭವನಯ್ಯ ಭಸುಮಾಸುರನನು |ಭಸುಮವ ಮಾಡಿ ಭಕ್ತನ ಪಾಲಿಸಿದನಾಗಿ 3ಸುರಪನ ರಾಜ್ಯವ ಬಲಿಯಾಕ್ರಮಿಸಲು |ಹರಿಯೆ ದಾನವ ಬೇಡಿ ನೀನವನ ||ಧರೆಯಈರಡಿ ಮಾಡಿ ಪಾತಾಳಕೆ ಮೆಟ್ಟ |ಸುರಪಗೆ ರಾಜ್ಯವನಿತ್ತು ಸಲಹಿದನಾಗಿ 4ಸುರ - ಭೂಸುರರನು ಅಸುರ ಬಾಧಿಸುತಿರೆ |ಹರಿಯವತರಿಸಿ ನೀನಸುರರನು ||ಶಿರಗಳ ಚಂಡಾಡಿ ಸುರರ ಭೂಸುರರನುಪೊರೆಯುತ್ತಲಿಪ್ಪ ನಮ್ಮ ಪುರಂದರವಿಠಲ 5
--------------
ಪುರಂದರದಾಸರು
ಹರಿಯೆನ್ನಬಾರದೆಜಿಹ್ವೆವಾರಂವಾರಪ.ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
--------------
ಪ್ರಸನ್ನವೆಂಕಟದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು