ಒಟ್ಟು 19658 ಕಡೆಗಳಲ್ಲಿ , 137 ದಾಸರು , 8696 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಂಗಳ ಜಯಮಂಗಳ ಶುಭಮಂಗಳ ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ ವಿದುರವಂದಿತ ವಿಶ್ವಪಾಲಗ ಮಂಗಳ ಬುಧಜನ ಸಹಕಾರಗ ಮಂಗಳ ಯದುಕುಲೋತ್ತಮ ಶ್ರೀಧರಗ ಮಂಗಳ ಮದನಮೋಹನ ಮೂರುತಿಗೆ ಮಂಗಳ 1 ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ ಮಸ್ತಕಲಿಹ್ಯ ಮಣಿಮುಗಟಗ ಮಂಗಳ ಕೌಸ್ತುಭಧರ ಭೂಷಣಗ ಮಂಗಳ ಹಸ್ತಿಗೊಲಿದು ಸುವಸ್ತುಗ ಮಂಗಳ 2 ಭಾಸ್ಕರಕೋಟಿ ಪ್ರಕಾಶಗ ಮಂಗಳ ಭಾಸುವ ಭಾವಭೋಕ್ತಗ ಮಂಗಳ ವಾಸವಾಗಿ ಹ್ಯ ಸದೋದಿತಗ ಮಂಗಳ ದಾಸ ಮಹಿಪತಿ ಸ್ವಾಮಿಗ ಮಂಗಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಂ ಮಂಗಳಂ ಪ ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ. ವೈರಿ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ 1 ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ 2 ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಭವತು ತೇ ರಮಾಪತೆ ಪ. ಮಧುವೈರಿ ಮಾರಜನಕ ದಿವ್ಯಸಾರ ಸುಂದರದೇಹವಾರಿಜದಳನೇತ್ರ ಕಾರುಣ್ಯಗುಣನಿಧೆ 1 ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ2 ವೇದವಿಬುಧವಂದ್ಯ ಗೋಪಾಲವಿಠಲಸಾಧುಸಜ್ಜನಪಾಲ ಶ್ರೀದೇವಿಲೋಲ 3
--------------
ಗೋಪಾಲದಾಸರು
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ. ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ ಶೀಲ ಸುಂದರ ವನಮಾಲ ನೀಲಕುಂತಲ ನಿರ್ಜಿತಾಳಿ ಕುಲಾನನ ಕಪೋಲ ಗೋಪಾಲ 1 ಶರಣಾಗತ ರಕ್ಷಕರಣ ಧುರೀಮ ಮ- ದ್ಫರಣ ತ್ರಿಲೋಕೀ ಧಾರಣ ಕರುಣಾಮೃತ ಹರ ತರುಣಾರ್ಕ ಕೋಟಿಭಾ ಭರಣ ರಮಾಧೃತ ಚರಣಾರವಿಂದ 2 ನಿತ್ಯ ಪದ್ಮ ಸರೋವರ ಪದ್ಮ ನಿರಂತರ ಸಂಚಾರ ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ ಪದ್ಮ ಪತ್ರ ನೇತ್ರ ಪದ್ಮಜ ಜನಕ 3 ಇಂದಿರಾವರ ಪೂರ್ಣೇಂದು ನಿಭಾನನ ವಂದನೀಯ ವಾಸುದೇವ ಮಂದಿರೆ ಮಮ ನಿತ್ಯಾನಂದದಾಯಿ ನಿಜ ಬಂಧುತಯಾಸ್ಥಿತ ಮಂದಹಸಿತೆ 4 ದಾಸೀಕೃತ ಕಂಜಜೇಶಾಹೀಶ ವಿ- ವೇಶಾಮರೇಶ ರಮೇಶಾ ಶೇಷ ಭೂಧರ ನಿಜ ವಾಸ ದಯಾರಸ ಮಾಶುಪ್ರವರ್ಷಯ ಹೇ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಮಣಿಮಲ ಲಂಘಿತಾಂಗಳ ಕಪಿಸಾಂಗ ವಂದಿತ ಭೂಷಿತಾಂಗ ಮಾರುತಿಗೆ ಪ ವ್ಯಾಳ್ಯದಂದದಿ ಪುಚ್ಛಮ್ಯಾಲೆ ತೂಗುತಲೆಂಕಿಲೆಂಕಿರಾಮಗ ಸೀತಾಲಂಕನಿತ್ತವಗೆ 1 ಹೂಂಕರಿಸುತ ಬಾಲ ಬೆಂಕಿಯಿಂದಲ್ಲೆ ಸುಟ್ಟಏಳುಚಿರಿಪ ಸಣ್ಣ ಬಾಲ ಹನುಮನಿಗೆ 2 ದಾಶರಥಿಯ ಮುಂದೆ ವಾಸಮಾಡುತ ಕೆಂಪುರುಷ ಬಾಡದಿ ಸಮ ಘೋಷನಿತ್ತವಗೆಇಂದಿರೇಶನರ್ಚಿಪಗೆ ದ್ರೌಪದೀಶ ವಂದಿತಗೆ 3
--------------
ಇಂದಿರೇಶರು
ಮಂಗಳಂ ಮಧುಕೈಟ ಭಾರಿಗೇ - ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ 1 ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ2 ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ 3 ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ 4 ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ ಬಂಗಾರದೊಡಲ ಮುಖ್ಯ ಪದಂಗಳನೆಲ್ಲ ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ 1 ರಂಗು ಮಾಣಿಕದಾಭರಣಂಗಳನಿಟ್ಟು ಡಿಂಗರೀಕರಂತರಂಗದಿ ನಲಿಯುವ ದೇವಿಗೆ 2 ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ 3
--------------
ರಂಗೇಶವಿಠಲದಾಸರು
ಮಂಗಳ ಮಹಿಮ ಶುಭಾಂಗಗ ಮಂಗಳ ಅಂಗಜ ಜನಕ ಶ್ರೀರಂಗಗ ಮಂಗಳ ಪ ಸಿರಿದೇವಿ ಮುಖಪದ್ಮ ಭಂಗಗ ಮಂಗಳ ಸುರ ಮುನಿಜನ ರಂಗ ಸಂಗಗ ಮಂಗಳ ಶರಣಾಗತರ ಭವಭಂಗಗ ಮಂಗಳ ದುರಿತಾಳಿವ್ಯಾಳ ವಿಹಂಗಗ ಮಂಗಳ 1 ಯಾದವ ಕುಲಾಂಬುದಿ ಚಂದ್ರಗ ಮಂಗಳ ಕೈಟಭಾರಿ ಮಹೀಂದ್ರಗ ಮಂಗಳ ವಿಧಿಭವ ವಂದ್ಯ ನಾದುಪೇಂದ್ರಗ ಮಂಗಳ ಸದಮಲಸದ್ಗುಣಸಾಂದ್ರಗ ಮಂಗಳ 2 ನಾರದಗಾಯನ ಪ್ರೇಮಿಗೆ ಮಂಗಳ ಸುರಸಾದಾಸಾಸಿರ ನಾಮಿಗೆ ಮಂಗಳ ಗುರುವರ ಮಹಿಪತಿಸ್ವಾಮಿಗೆ ಮಂಗಳ ಕರುಣಾಳು ಜಗದಂತ್ರಯಾಮಿಗೆ ಮಂಗಳ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ. ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1 ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2 ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3
--------------
ಇಂದಿರೇಶರು
ಮಂಗಳ ಮೂರುತಿ ಅದಿಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣು ಮಧುಸೂದನ ಧ್ರುವ ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ ಸಾಮಗಾಯನ ಪ್ರಿಯಾನಂದೋಬ್ರಹ್ಮ ದಾಮೋದರ ಸಂಕರುಷಣಾದೆ ಪುರುಷೋತ್ತಮ ವಾಸುದೇವ ನಮ್ಮ 1 ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ ಪ್ರದ್ಯುಮ್ನ ಅನಿರುದ್ಧಾನಂದ ಗುಣ ಅಚ್ಯುತ ಜನಾರ್ದನ ಸಿದ್ಧ ಸಿದ್ಧಕ ಪ್ರಿಯಾನಂದ ಘನ 2 ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ ಹೃದಯದಲಿ ಕೊಂಡಾಡುದನುದಿನ ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ ಸದೋದಿತಾದನು ಭಾನುಕೋಟಿಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಮೂರ್ಜಗದೊಡೆಯನಿಗೇ | ಶುಭಮಂಗಳ ಸ್ಪ್ಟಷ್ಟ್ಯಾದಿ ಕರ್ತನಿಗೇ ಪ ಮಂಗಳ ರವಿಕುಲ ತಿಲಕನಿಗೇ | ಶುಭಮಂಗಳ ಹನುಮನ ಒಡೆಯನಿಗೇ ||ಮಂಗಳ ಭೀಮನ ಸಲಹಿದಗೇ | ಶುಭಮಂಗಳ ಮಧ್ವ ಹೃದಾಂಬುಜ ರವಿಗೇ 1 ಮಂಗಳ ದಶಗ್ರೀವ ಛೇದಕಗೇ | ಶುಭಮಂಗಳ ಕೌರವ ಹಂತಕಗೇಮಂಗಳ ವ್ಯಾಸರ ಸೇವಕನೆನೆ | ನಮ್ಮಮಂಗಳ ದಶಮತಿ ಪೋಷಕಗೇ 2 ಮಂಗಳ ಸೀತೆಯ ತೋಷಕಗೇ | ಶುಭಮಂಗಳ ರುಕ್ಮಿಣಿ ಅರಸನಿಗೇಮಂಗಳ ಮಧ್ವರ ಪೊರೆದವಗೇ | ಶುಭಮಂಗಳ ಗುರು ಗೋವಿಂದ ವಿಠಲಗೇ 3
--------------
ಗುರುಗೋವಿಂದವಿಠಲರು
ಮಂಗಳಂ ರಘುರಾಮಗೇ ಜಯಮಂಗಳಂ ಗುಣಧಾಮಗೆ ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ. ರಾಮಗೇ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೇ ಕಾಮಿತಾರ್ಥಪ್ರದಾತಗೆ ವರ ರಮಣೀಯಕರೂಪಗೆ 1 ಶ್ರೀಶಗೆ ಜಗಧೀಶಗೆ ಭಯನಾಶಗೇ ಸರ್ವೇಶಗೆ ರಾಸಮನೋಲ್ಲಾಸ ಲಕ್ಷ್ಮೀಶ ಕೇಶವಮೂರ್ತಿಗೆ 2 ಮಾರುತಾತ್ಮಜ ಸೇವೆಗೇ ನತಪಾರಿಜಾತ ಸಮಾನಗೆ ವಾರಿಜಾಯತನೇತ್ರಗೇ ಶ್ರೀ ಶೇಷಶೈಲನಿವಾಸಗೆ 3
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ರಾಮಕೃಷ್ಣಾರ್ಯ ದಿವ್ಯಮಂಗಳ'ಗ್ರಹ ಸದ್ಗುರುವರ್ಯ ಪವಾದಿ ಜನರ ಮನೋಬಾಧೆಯ ಬಿಡಿಸುತಬೋಧೆಯ ಬಲಿಸಿ ಬ್ರಹ್ಮಾನಂದದಹಾದಿಯ ತೋರಿಸಿಯಾದರಿಸಿಯೆ ಕಾಯ್ವಬೋಧ'ಗ್ರಹ ನಿನ್ನ ಪಾದಪದ್ಮಗಳಿಗೆ 1ಭೂರಿ ಜನ್ಮಗಳೆತ್ತಿ ಸೇರಲು ತಡಿಯನುದಾರಿಗಾಣದೆ ಭವ ವಾರಿಧಿಯಹಾರೈಸಿದವರಿಗೆ ತೋರಿ ಜ್ಞಾನದ ನಾವೆಯೇರಿಸಿ ತಡಿಗೈದಿಸಿದ ಮೂರ್ತಿಗೆ 2ಕರುಣದಿಂ ಧರಣಿಯೊಳವತರಿಸಿಯೆ ಭಕ್ತಪರಿಪಾಲನಾರ್ಥದಿ ಯುಗಯುಗಕೂನರಹರಿ ರಾಮ ಶ್ರೀಕೃಷ್ಣ ರಾಮಕೃಷ್ಣಾರ್ಯತಿರುಪತಿ ವೆಂಕಟರಮಣನಿಗೆ3ಓಂ ಲೀಲಾಮಾನುಷ 'ಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ ಮಂಗಳಂ ಶ್ರೀ ಗುರುವರ್ಯರಿಗೆ ಪ. ರಂಗನಾಥನ ಪದ ಸರೋಜಕೆ ಭೃಂಗರೆನಿಸಿ ಮೆರೆಯುವರಿಗೆ ಅ.ಪ. ತಂದೆ ಮುದ್ದುಮೋಹನರೆಂ ತೆಂದು ಮೆರೆಯುತ ಮಂದಮತಿಯ ಬಿಡಿಸಿ ಎನ್ನ ತಂದೆಯಂತೆ ಪೊರೆಯುವರಿಗೆ 1 ನಾಗಶಯನ ಹರಿಯ ಭಜಿಪ ಭೋಗಿವರರಿಗೆ ಭಾಗವತರ ಸಂಘದೊಳಗೆ ಯೋಗಿಯಾಗಿ ಚರಿಸುವರಿಗೆ 2 ಪರಮಪ್ರಿಯರಾಗಿ ಹರಿಗೆ ಪರಮಪ್ರಿಯರೆಂದು ಕರೆಸಿಕೊಳುತ ನರಹರಿಯ ಚರಣ ಮನದಿ ಸ್ಮರಿಸುವರಿಗೆ 3 ಕರ್ಮಗಳನೆ ಕಡಿದು ಜ್ಞಾನ ಧರ್ಮಮಾರ್ಗದಿ ಧರ್ಮತತ್ವ ಬೋಧಿಸಿ ಅ- ಧರ್ಮಗಳನೆ ಬಿಡಿಸುವರಿಗೆ4 ಗೋಪಾಲಕೃಷ್ಣವಿಠ್ಠಲನ ರೂಪ ತೋರುತ ಪಾಪಗಳನೆ ತರಿದು ಭವ ಕೂಪದಿಂದ ಪೊರೆಯುವರಿಗೆ 5
--------------
ಅಂಬಾಬಾಯಿ