ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನಿ ಮನಿಗೆಲ್ಲಾ | ಸಂತರು ಲಕ್ಷ ಕೊಬ್ಬರಿಹರಲ್ಲಾ ಪ ಹಲವು ಗಿಡದಿ ಸಂಜೀವಿನಿ ಸಸಿಯಂತೆ | ಕೆಲವು ವಿರಕ್ತರಲಿ ರಸಕ್ರಿಯನಂತೆ 1 ಮೃಗತತಿಯಲಿ ಕೃಷ್ಣಾಮೃಗ ದೋರುವಂತೆ ಮುಗುದೆಯರಲಿ ಪತಿವೃತೆ ನಲಿವಂತೆ 2 ಗುರು ಮಹಿಪತಿಸುತ ಪ್ರಭು ಪದ ಕಂಡು ವಿರಳಾಗತಲಿಹನು ಸವಿ | ಸುಖನುಂಡು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜ ಮೃಗವೇಷ | ವಿಠಲ ಪೊರೆ ಇವಳಾ ಪ ಅನಘ ಅನಿಲಾಂತಸ್ಥ | ಗುಣಪೂರ್ಣ ಹರಿಯೇ ಅ.ಪ. ಗುರುಮಹಿಮೆ ಅರಿಯದಲೆ | ಚಿರಕಾಲ ಬಾಳಿಹಳೊಮರುತಾಂತರಾತ್ಮಹರಿ | ವರಭೋಗಿ ಶಯನಾತರತಮದ ಸುಜ್ಞಾನ | ಎರಡು ಮೂರ್ಭೇದಗಳಅರುಹಿ ನೀ ಪೊರೆ ಇವಳ | ಸರ್ವ ಸುಲುಭಾಖ್ಯ 1 ಬದಿಗ ನೀನಾಗಿದ್ದು | ಮುದುಡ ಜೀವಿಯ ಮನಕೆವದಗಿ ಬಾರದಲೇವೆ | ಅಜ್ಞಾನ ಮುಸುಕೀಸದಮಲಾಂತಃ ಕರಣ | ದುದಯವನೆ ಕಳಕೊಂಡುವಿಧವಿಧದಿ ಪರಿತಪಿಸಿ | ನೊಂದಿಹಳ ಪೊರೆಯೋ 2 ಸರ್ವ ಬಗೆಯಲಿ ವಂದ್ಯ | ಸರ್ವಂತರಾತ್ಮಕನೆನಿರ್ವಿಕಾರನೆ ನಿನ್ನ | ನಾಮ ಸುಧೆಯಾಸರ್ವದಾ ಉಣಿಸಿ ಪೊರೆ | ಇವಳ ಎನೆ ಬಿನ್ನವಿಪೆಸರ್ವಸುಂದರ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮನುಜದನುಜ ರಿವರೆವೆ ನೋಡಿ | ದನುಜನು ದೈತ್ಯರೊಳೆನ ಬ್ಯಾಡಿ ಪ ಹರಿ ನೆನೆಯುತ ಹರಿಕಥೆಗಳ ಕೇಳುತ | ಹರಿ ಭಕುತಿಗೆ ಬೆರೆದವ ಮನುಜಾ | ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ | ಬರಿದೆವೆ ದಿನಗಳೆವವ ದನುಜಾ 1 ಪರರ ಸದ್ಗುಣ ವಾಲಿಸಿಕೊಳುತಲಿ | ಸಕ | ಲರಿಗೆ ಮನ್ನಿಸುವವನೇ ಮನುಜಾ | ಗರುವ ಹಿಡಿದು ತನ್ನ ಹೊಗಳುತ ಅನ್ಯರ | ಬರಿದೆ ನಿಂದಿಸುವವನೆ ದನುಜಾ 2 ಪಥ | ಸರ್ಕನೆ ತಿಳಿದವ-ನೆವೆ ಮನುಜಾ | ಮೂರ್ಖತನ ಹಿಡಿದು ಸಾಧು ಸಂತರಲಿಕು | ತರ್ಕವ ಮಾಡುವವನೆ ದನುಜಾ 3 ಹುಟ್ಟಿದರಲಿ ಸಂತುಷ್ಟದಿ ಕವಳವ | ನಿಷ್ಠೆಗೆ ತಾರದವನೆ ಮನುಜಾ | ನೃಪರ ನಂಬಿ ಲಾಭಾ ಲಾಭ ಕೊಡುವ | ಸೃಷ್ಟೀಶನನು ಮರೆತವ ದನುಜಾ 4 ತಂದೆ ಮಹಿಪತಿ ಭೋಧವ ಮನದಲಿ | ತಂದು ಹರುಷವ ಪಡುವವ ಮನುಜಾ | ದಂದುಗ ಚಿತ್ತದಿ ಹೇಳಿದ ಮಾತಿಗೆ | ಸಂದೇಹ ಬಟ್ಟವನವ ದನುಜಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜಶರೀರವು ವರವೊ ದುರ್ಲಭವೊ ಪ ಭವಸಾಗರವನು ದಾಂಟಲು ನೌಕೆಯಿದೊ ಭವಭಾಧೆಯ ನೀಗಲು ಇದು ಸಾಧನವೊ ಪಾವನಸ್ವರೂಪಜ್ಞಾನವನರಿಯಲು ದೇವನೆ ತಾನೆನಿಸುವನೊ ಆ ನರನು 1 ತಿಳಿ ನೀನೀಗಲೆ ನಾನಾರೆಂಬುದ ಮನುಜಾ ಅಳಿವೀ ದೇಹದೊಳೇ ತಿಳಿಯಲುಬಹುದಿದನಾ ಉಳಿದ ದೇಹಗಳು ಹಲವಾರಿರುತಿರೆ ಫಲವೇನೈ ತಿಳಿವಿರದೇ ತಿಳಿ ಭರದೇ 2 ಪಾಪಿ ಜನ್ಮವು ಎಂದು ಶಪಿಸಲು ಬೇಡಾ ತಾಪನೀಗಲು ಇದೇ ದಾರಿಯೈ ನೋಡಾ ಭವ ಕಡಿಯೇ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮನುಜಾ ಹಿಡಿ ದಾರಿ ದಾರಿ ದಾರಿ ದಾರಿ | ಪ್ರಾಣಿ ಹಿಡಿ ದಾರಿ ದಾರಿ ದಾರಿ ದಾರಿ ಪ ದೃಢಭಾವದಿಂದಾ | ಪಡೆದು ಸದ್ಬೋಧಾ | ಒಡನೆ ಸದ್ಗುರು ಪಾರಾ | ಸಾರಿ ಸಾರಿ ಸಾರಿ ಸಾರಿ 1 ಚಾರು ಭಕುತಿಯಾ | ದಾರಿ ನಿಶ್ಚಯಾ | ಆರು ಅರಿಗಳ ಕೈಯ್ಯಾ | ಮೀರಿ ಮೀರಿ ಮಮೀರಿ ಮೀರಿ 2 ತನುಧನ ಬೆರೆದು | ಋಣವೆಲ್ಲ ಮರೆದು | ಕ್ಷಣದೊಳೆಲ್ಲಡಗುವದು | ತೋರಿ ತೋರಿ ತೋರಿ ತೋರಿ 3 ಸ್ವಾನಂದ ವಿರಹಿತಾ | ದಿನಗಳೆವರೆ ವ್ಯರ್ಥಾ| ಮಾನವಜನ್ಮದಿ ಮತ್ತೆ | ಬಾರಿ ಬಾರಿ ಬಾರಿ ಬಾರಿ 4 ಸಾರಥಿ | ತೋರಿ ತೋರಿ ತೋರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಮನೆ ಮನೆಯು ಹರಿಯ ಆಲಯವಾಗಬೇಕು ಪ ಜನಗಳು ಸದಾಚಾರ ಶೀಲರಾಗಬೇಕು ಅ.ಪ ಭೂತ ಸರ್ಗದಲಿ ಹೊಸ ನೀತಿಗಳ ಕಲ್ಪನೆಯು ಘಾತಕವು ಲೋಕಹಿತಕೆಂದರಿಯದೆ ಜಾತಿ ಬೇಡೆನ್ನುವರ ರೀತಿನೀತಿಗಳು ಆ ಪಾತರ ರಮಣೀಯವೆಂಬುದ ತೋರಬೇಕು 1 ಅಸ್ತವಾಗಲಿ ಜಾತಿ ಮತ ಭೇದವೆಲ್ಲವು ಸ್ವಸ್ಥವಾಗುವುದೆಂದು ಭಾರತವು ಎನ್ನುವರು ಮಸ್ತಕದಿ ಕರವಿಟ್ಟು ಕುಳಿತುಕೊಳ್ಳುವ ತೆರದಿ 2 ಬಹುಮತವು ಎಮ್ಮದೆಂಬುವ ಮದವು ಬೆಳೆಯುತಿರೆ ಸಹನವೇ ಸಾಧುಜನಗಳಿಗೆ ಶರಣ ಇಹಪರಗಳಲ್ಲಿಯೂ ಪ್ರಸನ್ನ ಹರಿ ಸಲಹುವನು ಕುಹಕ ಮಾರ್ಗವು ಬೇಧ ಸಹಜ ಧರ್ಮಗಳಿಂದ 3
--------------
ವಿದ್ಯಾಪ್ರಸನ್ನತೀರ್ಥರು
ಮನೆಗೆ ಬಾರೋ ಕೃಷ್ಣ ಬೇಗನೆ ಪ ವನಿತೆಯರಕೋ ಓಡಿ ಬರುತಿಹರು ಅ.ಪ. ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ 1 ಘಾಸಿ ಮಾಡಿ 2 ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ವೀರನಾರಾಯಣಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ 3
--------------
ವೀರನಾರಾಯಣ
ಮನೆಗೆ ಬಾರೋ ರಂಗ ಮನಸಿಜಯ್ಯನೆ ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ ಮನಗೆ ಬಾರೋ ರಾಮ ಅ.ಪ ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ ಮನ ದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ ಧನವು ನಿನ್ನದು ಎನ್ನ ಘನವು ನಿನ್ನದು ರನ್ನ 2 ದರಹತಿತಾನನ ಸರಸಿಜನಯನ ವರದವಿಠಲ ಪುಲಿಗಿರಿ ವರಸದನ 3
--------------
ವೆಂಕಟವರದಾರ್ಯರು
ಮನೆಗೆ ಬಾರೋ ರಂಗ-ಮನಸಿಜನಯ್ಯನೆ ಕಣ್ಣಿನೊಳಗೂ ನಿನ್ನನೆನಹು ಬಿಡದುಯನ್ನ ಪ ಮನೆಗೆ ಬಾರೋ ರಂಗ-ಮನೆಗೆ ಬಾರೋ ಕೃಷ್ಣ ಮನೆಗೆ ಬಾರೋ ರಾಮ ಅ.ಪ ಮನೆಗೆ ಬಂದರೆನಿನ್ನ ಮಹಿಮೆಯ ಪಾಡುತ ಮನದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಯನ್ನ ತನುವು ನಿನ್ನುದು ಮುನ್ನ ಧನವು ನಿನ್ನದುಯನ್ನ ಘನವು ನಿನ್ನದು ರನ್ನ 2 ದರಹಸಿತಾನನ-ಸರಸಿಜನಯನ ವರದವಿಠಲ ಪುಲಿಗಿರಿವರಸದನ 3
--------------
ಸರಗೂರು ವೆಂಕಟವರದಾರ್ಯರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮನೆಯಲಿ ಸುಖವಾಸಿ ಪ ಕೈಯೊಳರ್ಥವು ಮೊದಲಿಲ್ಲ ಹಾಗಾದರು ಮೈಯೊಳಗೇ ನೇನು ಗುಣ ಕಾಂಬುದಿಲ್ಲ ಧೈರ್ಯಲಕ್ಷ್ಮಿಯ ತುದಿಗಿಲ್ಲ ಪರರ ಕೈಯ ಬೇಡಲು ಕಾಣೆ ಕೊಡುವವರಿಲ್ಲ 1 ಹೊಳೆ ಕೆರೆ ಬಾವಿಯಿದ್ದಲ್ಲಿ ಭಾಗೀರಥಿ ನೆಲೆಸಿ ಕೊಂಡಿಹಳಿಲ್ಲಿ ಮುಳುಗಿ ಮಿಂದರೆ ಭಕ್ತಿಯಲ್ಲಿ ಕಾಶಿ ಯೊಳಗೆ ಗಂಗೆಯ ಮಿಂದ ಫಲ ಬಹುದಿಲ್ಲಿ 2 ಜ್ಞಾನವಿಲ್ಲದೆ ಮೋಕ್ಷವಿಲ್ಲ ಮುಕ್ತಿ ಮಾನಿನಿಯನು ಕೂಡಿ ಸುಖಿಸಲು ಬಲ್ಲ ಜ್ಞಾನಿಗಳಿಗೆ ತೋರ್ಪುದೆಲ್ಲ ಹರಿ ಸೂನು ಕೋಣೆಯ ಲಕ್ಷ್ಮೀರಮಣ ತಾನೆಲ್ಲ 3
--------------
ಕವಿ ಪರಮದೇವದಾಸರು
ಮನೆಯೊಳಗಾಡೋ ನೆನೆವರ ನೋಡೋ ಪ ಮುನಿÀಸಬೇಡವೋ ಎನ್ನ ಮಾನಸವೆಂದೆಂಬ ಅ.ಪ ನಸುನಗೆಯನು ತೋರಿ ನುಸುಳಿ ಪೋಗುವೆಯೇಕೆ ಬಿಸಿಬಿಸಿ ಪಾಲನಿತ್ತು ಬೀಸಿ ಬೀಸಿ ತೂಗುವೆನು 1 ಬಡಮುನಿಗಳು ನಿನ್ನ ಪಿಡಿದೆಳೆಯೆ ಚಿಣ್ಣ ನುಡಿಯಿದು ಸಟೆಯೆನಬೇಡ ಕದ್ದೋಡಬೇಡ 2 ಎನ್ನದೆಂಬುದೆಲ್ಲ ನಿನ್ನದೋ ಮಾಂಗಿರೀಶ ನಿನ್ನ ನಾಮದ ನೆಲೆ ಎನ್ನದೆನ್ನಿಸೋ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನೋದಣಿಯಾ ಕುಲಮಣಿಯಾ ಪ ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ| ಬಳದ ಒಬ್ಬುಳಿಯಂತೆ ದಿನಮಣಿಯಾ| ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ| ಝಳ ಝಳಿಸುವ ರಳ ಕಾವಳಿ ದೋರಣಿಯಾ 1 ಚಲಾಚಲ ಭೂತಾವಳಿಗಳ ಸಲಹುವ ಭ್ರೂಲಲಿತ ಮೃಗಮದಾಂಕಿತದ ಫಣಿಯಾ| ವಿಮಲತರ ಕಮಲದೆಸಳ ಸುಗಂಗಳ| ನಾಸಿಕ ಸಂಪಿಗಿ ನೆನಿಯಾ 2 ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ| ಇಳೆಯೊಳು ಕಾಣೆ ಕುಂಡಲಕ ಎಣಿಯಾ| ಕದಪು ವದನ ಮೋಹನಾರಾಯ| ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು