ಒಟ್ಟು 677 ಕಡೆಗಳಲ್ಲಿ , 74 ದಾಸರು , 470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು
ಸ್ಮರಿಸುವೆ ನಾ ನಿಮ್ಮ ಚರಣಕಮಲಗುರುವಿಜಯರಾಯಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯದಿವಿಜರ ವೇಷದಿಂದವನಿಯೊಳುದಿಸಿದ್ಯೊ ವಿಜಯರಾಯಭಾಗವತಧರ್ಮವಹಿಸಿ ತ್ರಿರಾವರ್ತಿ ವಿಜಯರಾಯಕಂಚಿಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ ವಿಜಯರಾಯಮರಿಯಾದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯಮಹಿಯಲ್ಲಿ ತಿರುಗಿ ಸರ್ವಕ್ಷೇತ್ರದಿ ವಿಜಯರಾಯಗುರೂಪದೇಶಕನಾಗಿ ವ್ಯಾಸಕಾಶಿಯಲ್ಲಿದ್ಯೊ ವಿಜಯರಾಯಸ್ವಚ್ಛವಾಗಿ ಗಂಗಾತೀರ ವಾಸಮಾಡಿ ವಿಜಯರಾಯತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ ವಿಜಯರಾಯಮಧ್ವಮತದಸಾರಕವನದಿ ರಚಿಸಿದ್ಯೊ ವಿಜಯರಾಯಶುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯಸದಾಚಾರಸಂಪತ್ತು ಮಧುಕರವೃತ್ತಿಯು ವಿಜಯರಾಯಭಕ್ತರ ಅಪಮ್ಯತ್ಯುಬಿಡಿಸಿ ಆಯುನಿತ್ತೆ ವಿಜಯರಾಯನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ ವಿಜಯರಾಯಭಕ್ತಜನರಿಗೆ ತತ್ವೋಪದೇಶವ ಮಾಡಿ ವಿಜಯರಾಯಎಲ್ಲರಲಿ ಸಿರಿನಲ್ಲನ ಅಂಶವ ವಿಜಯರಾಯಬಲ್ಲಿದನೀನೊಂದುರೂಪದಿ ಎನ್ನಲ್ಲಿ ವಿಜಯರಾಯನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ ನಾವು ವಿಜಯರಾಯಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ ವಿಜಯರಾಯಈಗ ಈ ಯುಗದಿ ಸಾಧನವೆಂಬುದು ಕಾಣೆ ವಿಜಯರಾಯಗುರುನಿನ್ನ ಕರುಣಕವಚತೊಟ್ಟ ಭಕುತರ್ಗೆ ವಿಜಯರಾಯ
--------------
ಗೋಪಾಲದಾಸರು
ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷಆನಂದತೀರ್ಥಗುರು ಚಿಂತಾಮಣಿ ಪ.ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾವೇತ್ತøಜನಕಾ ಸಂತತಕಿಂಪುರುಷವರುಷದಿ ಉಣಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು 1ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು 2ಹಂತ ಭಾಷ್ಯಧ್ವಾಂತದಿ ವೇದಾಂತವಡಗೆಪೋಕಮಣಿಮಂತನ ಮುರಿದನು ಮೂವತ್ತೆರಡು ಲಕ್ಷಣದಿಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು 3
--------------
ಪ್ರಸನ್ನವೆಂಕಟದಾಸರು
ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದತೀರ್ಥರೆ ನಮ್ಮ ಗತಿಗೋತ್ರರು ಪ.ತಾಯಿ ತಂದೆ ಹಸುಳೆಗಳಿಗೆ ರಸಾಯನುಣಿಸಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದುಗಾಯಗೊಂಡ ಕಪಿಗಣವಪ್ರಿಯದಿಂದ ಪೊರೆದ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ 1ಬಂಧು ಬಳಗದಂತೆ ಆಪದ್ಬಾಂಧವನಾಗಿ ಪಾರ್ಥರಿಗೆಬಂದ ಬಂದ ದುರಿತಗಳ ಪರಿಹರಿಸಿಅಂಧಕಜಾತರ ಕೊಂದುಅಂದೆ ಕೃಷ್ಣಾರ್ಪಣವೆಂದಾ ಯದುಕುಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ 2ಗತಿಗೋತ್ರರಂತೆ ಸಾಧುತತಿಗಳಿಗೆ ಸುಜ್ಞಾನವಿತ್ತುಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳಗತಿಗೆಡಿಸಿ ವೈಷ್ಣವರಿಗೆ ಸದ್ಗತಿಯ ತೋರಿದ ಪ್ರಸನ್ವೆಂಕಟಪತಿವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ3
--------------
ಪ್ರಸನ್ನವೆಂಕಟದಾಸರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
--------------
ಪ್ರಸನ್ನವೆಂಕಟದಾಸರು