ಒಟ್ಟು 531 ಕಡೆಗಳಲ್ಲಿ , 88 ದಾಸರು , 470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಂಚಿನ ಇದಿರಲಿ ಹಲ್ಲನು ತೆಗೆಯಲುಮಿಂಚುವ ಕನ್ನಡಿಯಾದೀತೆ ? ಪ.ಮಿಂಚಿನ ಬೆಳಕಲಿ ದಾರಿಯ ನಡೆದರೆಮುಂಚುವ ಊರಿಗೆ ಮುಟ್ಟೀತೆ ? ಅಪಬಾಲರ ಭಾಷೆಯ ನಂಬಿ ನಡೆದರೆಶೀಲದ ಕೆಲಸಗಳಾದೀತೆ ?ಜೋಲುವ ಹೋತಿನ ಮೊಲೆಗಳ ಹಿಂಡಲುಹಾಲಿನ ಹನಿಯದು ಹೊರಟೀತೆ ?ಕಾಲುವೆ ಬಚ್ಚಲಕುಣಿ ನೀರಿಗೆ -ಘನಬಾಳೆಯ ತೋಟವು ಆದೀತೆ ?ಮೇಲುಬಣ್ಣಾದಾ ಆಲದ ಹಣ್ಣುನಾಲಿಗೆಸವಿಯನು ಕೊಟ್ಟೀತೆ ? 1ಭಾಷೆಯ ನುಡಿಗಳಿಗಾಸೆ ಮಾಡೆ ಮನದಾಸೆಯ ಕಾರ್ಯಗಳಾದೀತೆ ?ದೋಸೆಯ ಛಿದ್ರದಿ ಆರಿಸೆ ಕಾಳಿನರಾಶಿಯು ಹಸನವು ಆದೀತೆ ?ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆಮಾಸದ ಮನೆ ಬದುಕಾದೀತೆ ?ಕಾಸಾರದೆದುರಿಗೆ ಹರಿಕಥೆ ಹೇಳ್ದರೆಸೋಸಿ ಕೇಳ್ದು ತಲೆದೂಗೀತೆ ? 2ಮಿಥ್ಯಾವಚನಿಯ ಮಾತನು ನಂಬಲುಹೊತ್ತಿಗೆ ಅದು ಬಂದೊದಗೀತೆ ?ಸತ್ತವನೆದುರಿಗೆ ಸುತ್ತಲು ಕುಳಿತುಅತ್ತರೆ ಆ ಹೆಣ ಕೇಳೀತೆ ?ನಿತ್ಯನಪುಂಸಕನೈದಲು ತರುಣಿಗೆಚಿತ್ತ ಸುಖವು ಸೂರಾದೀತೆ ?ಕುತ್ತಿಗೆಗೊಯ್ಕನ ಕಾಲು ಹಿಡಿದರೆಹತ್ಯದೊಳ್ಹೇಸಿಕೆಹುಟ್ಟೀತೆ ?3ಬೋರಗಲ್ಲಿನ ಮುಂದೆ ಬಡತನ ಹೇಳಲುಸಾರಸುಖಕ್ಕನುವಾದೀತೆ ?ಚೋರನು ಚಂದ್ರಗೆ ಕೈಮರೆ ಮಾಡಲುಚೌರ್ಯಕೆ ಕತ್ತಲು ಒದಗೀತೆ ?ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾಹಾರಿಗೆ ಮೀನವು ದೊರಕೀತೆಕಾರಣವಿಲ್ಲದ ಲೌಕಿಕ ಕಥೆಯಿಂಘೋರನರಕ ಭಯ ತಪ್ಪೀತೆ ?4ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲುಹೊಟ್ಟೆಗೆಓದನ ಸಿಕ್ಕಿತೆ ?ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲುಹೊಟ್ಟೆಯಲಿ ಕಳವಳ ಹುಟ್ಟೀತೆ ?ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲುಕೆಟ್ಟ ಮಾತು ಅದು ಬಿಟ್ಟೀತೆ?ದಿಟ್ಟ ಪುರಂದರವಿಠಲರಾಯನಬಿಟ್ಟರೆ ಸದ್ಗತಿಯಾದೀತೆ? 5
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು
ಹೇಳಲಾಗದು ತತ್ವ ಹೇಳಲಾಗದು ಜ್ಞಾನಖೂಳಮೂಳರಾದ ಕುಹಕಿಗಳಿಗೆಪನಾರುತಿಹ ತೊಗಲನು ಕಡಿದನಾಯಿ ಮುಖದ ಮುಂದೆದಾರವಟ್ಟದಲಿ ತುಪ್ಪವ ನೀಡಲು ಅರಿವುದೆಘೋರಸಂಸಾರ ವಿಷಗಟ್ಟಾಗಿ ಹಿಡಿದವಗೆಸಾರಬೋಧೆಯನರಿಯಲು ತಿಳಿಯುವುದೇ1ಗೊಜ್ಜಲ ತೃಣವನು ತಿಂಬ ಗಾರ್ಧಭನ ಮುಂದೆಸಜ್ಜಿಗೆಯ ತಂದಿಡಲಿಕೆ ಅದನರಿವುದೆಲಜ್ಜೆಯಹ ನಾನಾ ಮೋಹ ಪಾಶಲಿಪ್ಪರಿಗೆಸಜ್ಜನ ಶಾಸ್ತ್ರವನೊರೆಯಲದು ತಿಳಿವುದೇ2ದೊಡ್ಡಕ್ಕಚ್ಚನೆ ಕುಡಿವ ಗೊಡ್ಡೆಮ್ಮೆಯ ಮುಂದಕೆಲಡ್ಡುಗೆಯ ತಂದಿಡಲಿಕೆ ಅದನು ತಿಳಿವುದೇದಡ್ಡ ಬುದ್ಧಿಯು ಬಲಿತು ದೊಡ್ಡನಾದವಗೆದೊಡ್ಡ ಚಿದಾನಂದ ಬ್ರಹ್ಮವು ತಿಳಿವುದೇ3
--------------
ಚಿದಾನಂದ ಅವಧೂತರು
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು